• Home
  • »
  • News
  • »
  • entertainment
  • »
  • Aarathi: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?

Aarathi: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?

ಪುಟ್ಟಣ್ಣ ಕಣಗಾಲ್​, ಆರತಿ

ಪುಟ್ಟಣ್ಣ ಕಣಗಾಲ್​, ಆರತಿ

ಕನ್ನಡ ಚಿತ್ರರಂಗ (Kannada Film Industry) ದಲ್ಲೂ ಸಾಕಷ್ಟು ಭಗ್ನ ಪ್ರೇಮಿಗಳು ಸಿಗುತ್ತಾರೆ. ಸಾಕಷ್ಟು ಲವ್​ ಫೇಲ್ಯೂರ್​ (Love Failure) ಕಥೆಗಳು ಸಿಗುತ್ತೆ. ಅಂಥವರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟಿ ಆರತಿ (Actress Aarathi) ಕೂಡ ಒಬ್ಬರು.

  • Share this:

ಪ್ರೀತಿ  (Love) ಮಾಡುವವರಿಗೆಲ್ಲ ಪ್ರೀತಿ ಸಿಗಲ್ಲ. ಪ್ರೀತಿ ಮಾಡಿವವರೆಲ್ಲ ನಮಗೆ ಸಿಗಲ್ಲ. ಈ ಡೈಲಾಗ್ (Dialogue)​ ಕೇಳಿದ್ರೆ ನಿಮ್ಮ ತಲೆಯಲ್ಲಿ ಹಲವಾರಿ ಭಗ್ನ ಪ್ರೇಮಿಗಳ (Broken Lovers) ಮುಖ ಬಂದಿರುತ್ತೆ. ಹೌದು, ಪ್ರಪಂಚದಲ್ಲಿ ಅದೆಷ್ಟೋ ಮಂದಿ ಪ್ರೀತಿಸಿದವರು ಸಿಗದೇ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಪಾಲಿಗೆ ಸಿಕ್ಕಿದ್ದು ಪಂಚಾಮೃತ ಎಂದು ಭಾವಿಸಿ ಅವರ ಜೊತೆಗೆ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗ (Kannada Film Industry) ದಲ್ಲೂ ಸಾಕಷ್ಟು ಭಗ್ನ ಪ್ರೇಮಿಗಳು ಸಿಗುತ್ತಾರೆ. ಸಾಕಷ್ಟು ಲವ್​ ಫೇಲ್ಯೂರ್​ (Love Failure) ಕಥೆಗಳು ಸಿಗುತ್ತೆ. ಅಂಥವರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟಿ ಆರತಿ (Actress Aarathi) ಕೂಡ ಒಬ್ಬರು.


ಎಲ್ಲರಿಗೂ ನಟಿ ಆರತಿ ಎರಡು ಮದುವೆಯಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಆರತಿ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ನಟಿ ಆರತಿ ಮೊದಲು ಪ್ರೀತಿಸಿದ್ದು ಯಾರನ್ನು? ಆಮೇಲೆ ಏನಾಯ್ತು? ಈ ಬಗ್ಗೆ ಜನರಿಗೆ ಗೊತ್ತಿದೆ. ಆರತಿ ಬಗ್ಗೆ ನಿಮಗೆ ಗೊತ್ತಿರದ ಸಂಗಂತಿಗಳನ್ನು ನಾವು ಇಲ್ಲಿ ಹೇಳಿದ್ದೇವೆ ನೋಡಿ.


ಕಲ್ಪನಾ ಎದುರು ಚಾಲೆಂಜ್​  ಮಾಡಿದ್ದ ಪುಟ್ಟಣ್ಣ ಕಣಗಾಲ್​


ಪುಟ್ಟಣ್ಣ ಕಣಗಾಲ್​ ಹಾಗೂ ಕಲ್ಪನಾ ನಡುವೆ ವೈಮನಸ್ಸು ಉಂಟಾದಾಗ, ಪುಟ್ಟಣ್ಣ ಸವಾಲೆಸೆದಿದ್ದರು. ಕಲ್ಪನ ಮುಂದೆ ಮತ್ತೋರ್ವ ನಟಿಯನ್ನು ತಂದು ಸ್ಟಾರ್​ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಕಲ್ಪನಾ ಮುಂದೆ ಆರತಿಗೆ ಸ್ಟಾರ್ ಪಟ್ಟ ತಂದುಕೊಟ್ಟವರು ಇದೇ ಪುಟ್ಟಣ್ಣ ಕಣಗಾಲ್​. ಈ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮದುವೆಯಾಗಿದ್ದರು, ಪುಟ್ಟಣ್ಣ ಕಣಗಾಲ್​ ಹಲವು ನಟಿಯರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು.


ಪುಟ್ಟಣ್ಣ ಕಣಗಾಲ್​


ಆರತಿ ಜೊತೆ ಮದುವೆಯಾದ ಪುಟ್ಟಣ್ಣ ಕಣಗಾಲ್​!


1975ರಲ್ಲಿ ಬಿಳಿ ಹೆಂಡ್ತಿ ಎಂಬ ಸಿನಿಮಾದ ಶೂಟಿಂಗ್​ ವೇಳೆ ಆರತಿ ಹಾಗೂ ಪುಟ್ಟಣ್ಣ ಕಣಗಾಲ್​ ಮದುವೆಯಾಗುತ್ತಾರೆ. ಈ ವಿಚಾರ ಇಡೀ ಕನ್ನಡ ಚಿತ್ರರಂಗಕ್ಕೆ ಶಾಕ್​ ನೀಡಿತ್ತು. ಪುಟ್ಟಣ್ಣ ಕಣಗಾಲ್ ತಮ್ಮ ಆತ್ಮೀಯರಿಗೂ ಈ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಶೂಟಿಂಗ್​ ಸ್ಪಾಟ್​ಗೆ ಮದುವೆಯಾಗಿ ಎಂಟ್ರಿಕೊಟ್ಟಿದ್ದರು. ಈ ವಿಚಾರ ಎಲ್ಲೆಡೆ ಹಬ್ಬಿತ್ತು. ಮದುವೆಯಾದ ಬಳಿಕ ಎಲ್ಲವೂ ಚೆನ್ನಾಗಿತ್ತು. ಇವರಿಗೆ ಯಶಸ್ವಿನಿ ಅಂತ ಮಗಳು ಕೂಡ ಜನಿಸಿದ್ದಳು. ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ, ಪುಟ್ಟಣ್ಣ ಕಣಗಾಲ್​ ಅವರ ಕೋಪದಿಂದ ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು. ಇದೇ ವೇಳೆ ಆರತಿಗೆ ಪರಿಚಯ ಆದವರೇ ಎಂ. ರಘುರಾಮ್​.


ಸಚಿವರಾಗಿದ್ದ ಎಂ.ರಘುಪತಿ -ಆರತಿ ನಡುವೆ ಸ್ನೇಹ!


ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ, ಕಾರ್ಮಿಕ, ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರತಿ ಪರಿಚಯವಾದ ಇವರು ಎಂಎಲ್​ಸಿ ಶಾಸಕರಾಗಿದ್ದರು. ಇವರಿಬ್ಬರ ನಡುವೆ ದಿನದಿಂದ ದಿನಕ್ಕೆ ಒಳ್ಳೆಯ ಭಾಂದವ್ಯ ಬೆಳೆಯುತ್ತಲೇ ಇತ್ತ. ಆರತಿ ಅವರಿಗೆ ಪುಟ್ಟಣ್ಣ ಕಣಗಾಲ್​ ಮೇಲಿನ ಪ್ರೀತಿ ಕಡಿಮೆಯಾಗುತ್ತಾ ಬಂದಿತ್ತು. ಪುಟ್ಟಣ್ಣ ಕಣಗಾಲ್​ ಅವರಿಗೆ ಈ ವಿಚಾರ ಸಹಿಸಿಕೊಳ್ಳಲು ಆಗಲಿಲ್ಲ. ಸಿನಿಮಾಗಳಿಂದಲೂ ದೂರಾಗಿದ್ದರು. ಅಂತಿಮವಾಗಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಪುಟ್ಟಣ್ಣ ಕಣಗಾಲ್​. ಕೊನೆಗೆ ಹಾರ್ಟ್ ಟ್ಯಾಕ್​ ನಿಂದ ಸಾವನ್ನಪ್ಪಿದ್ದರು.


ಎಂ. ರಘುಪತಿ


ಇದನ್ನೂ ಓದಿ: ಅಷ್ಟು ಮುದ್ದಾಗಿದ್ದ ಬೇಬಿ ಶಾಮಿಲಿ ಮೂಲೆಗುಂಪಾಗಿದ್ದೇಕೆ? ಭಾವ ಸೂಪರ್ ಸ್ಟಾರ್ ಅನ್ನೋದೇ ಮುಳುವಾಯ್ತಾ?


ಆರತಿಯನ್ನು ಎಂಎಲ್​ಸಿ ಮಾಡಿಸಿದ್ದ ಎಂ.ರಘುಪತಿ!


ನಂತರ ಆರತಿ, ಎಂ ರಘುರಾಮ್​ ಸಂಬಂಧ ಗಟ್ಟಿಯಾಗಿತ್ತು. ಎಂ. ರಘುಪತಿಯವರು ರಾಮಕೃಷ್ಣ ಹೆಗಡೆ ಅವರಿಗೆ ತೀವ್ರ ಒತ್ತಡ ಕೂಡ ಏರಿದ್ದರಂತೆ. ಆರತಿ ಅವರನ್ನು ಎಂಎಲ್​ಸಿ ಮಾಡಲು ಒತ್ತಾಯ ಮಾಡಿದ್ದರಂತೆ. ವಿವಾದಕ್ಕೆ ಒಳಗಾದ ವ್ಯಕ್ತಿಯನ್ನು ಎಂಎಲ್​ಸಿ ಮಾಡುವುದು ಒಳ್ಳೆಯದಲ್ಲ ಎಂದು ಎಲ್ಲರೂ ಹೇಳಿದ್ದರಂತೆ. ಕೊನೆಗೆ ಎಂ ರಘುರಾಮ್​ ಅವರು ಆರತಿ ಅವರನ್ನು ಎಂಎಲ್​ಸಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಜೆಪಿ ನಗರದಲ್ಲಿ ಬಿಡಿಎ ಕಡೆಯಿಂದ ಆರತಿ ಅವರಿಗೆ ಒಂದು ದೊಡ್ಡ ಬಂಗಲೆಯನ್ನು ನೀಡಿದ್ದರು. ಈ ಸಮಯದಲ್ಲಿ ಎಲ್ಲರೂ ಇಬ್ಬರ ನಡುವೆ ಏನೋ ಸಂಬಂಧ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.


ಮಗಳ ಜೊತೆ ಆರತಿ


ಕೈ ಕೈ ಹಿಡಿದುಕೊಂಡು ಸುದ್ದಿಯಾಗಿದ್ದ ಆರತಿ-ರಘುಪತಿ!


ಇಲ್ಲಿಯವರೆಗೂ ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ ಎಂದುಕೊಂಡಿದ್ದರು. ಆದರೆ, ಒಂದು ಶಾಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಆರತಿ ಹಾಗೂ ಎಂ.ರಘುರಾಮ್​ ಇಬ್ಬರೂ ಕೈ ಕೈ ಹಿಡಿದು ಕಾಣಿಸಿಕೊಳ್ಳುತ್ತಾರೆ. ಅದೇ ಕಾರ್ಯಕ್ರಮಕ್ಕೆ ಬಂದಿದ್ದ ಸಂಜೆವಾಣಿ ಪತ್ರಿಕೆ ಪರ್ತಕರ್ತರು ಈ ಬಗ್ಗೆ ಸುದ್ದಿ ಸಹ ಮಾಡುತ್ತಾರೆ. ಪತ್ರಿಕೆಯಲ್ಲಿ ಇಬ್ಬರು ಮದುವೆಯಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸುತ್ತಾರೆ. ಈ ಬಗ್ಗೆ ಎಂ.ರಘುರಾಮ್​ ಪತ್ರಕರ್ತನ ವಿರುದ್ಧ ಗರಂ ಆಗಿದ್ದರು. ಆದರೆ, ಈ ವಿಚಾರ ಸತ್ಯ ಆಗಿರುವುದರಿಂದ ಪತ್ರಿಕೆ ವಿರುದ್ಧ ಏನೂ ಮಾಡಲು ಸಾಧ್ಯವಾಗುವುದಿಲ್ಲ.


ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ ಪುಟ್ಟಣ್ಣ ಕಣಗಾಲ್​!


ಈ ಸಮಯದಲ್ಲಿ 1985 ಪುಟ್ಟಣ್ಣ ಕಣಗಾಲ್​ ಹಾರ್ಟ್ ಅಟ್ಯಾಕ್​ನಿಂದ ಸಾವನ್ನಪ್ಪಿದ್ದರು. ಇವರ ಸಾವಿಗೆ ಆರತಿನೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಾರೆ. ನಾನಾ ರೀತಿಯ ಆರೋಪಗಳು ಆರತಿ ಮೇಲೆ ಬರುತ್ತೆ. ಆರತಿ ಪತಿ ರಘುಪತಿ ಎಂಬ ಸುದ್ದಿ ಆಗಲೇ ಹರಡಿರುತ್ತೆ. ತನ್ನ ಮಗಳನ್ನು ನೋಡಿಕೊಳ್ಳಲಾಗದ ಸ್ಥಿತಿಗೆ ಬಂದಿರುತ್ತಾರೆ ಆರತಿ. ಕೊಂಕು ಮಾತುಗಳಿಂದ ಆರತಿ ಬೇಸತ್ತಿದ್ದರು. ಇದೇ ಸಂದರ್ಭದಲ್ಲಿ ಎಂ.ರಘುಪತಿ ಹಾಗೂ ಆರತಿ ನಡುವೆ ವೈಮನಸ್ಸು ಉಂಟಾಗಿತ್ತು.


ಇದನ್ನೂ ಓದಿ: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ


ಆರತಿ-ರಘುಪತಿ ನಡುವೆ ಉಂಟಾಗಿತ್ತು ವೈಮನಸ್ಸು!


ಈ ಸಮಯದಲ್ಲಿ ಆರತಿ ಸಿನಿಮಾರಂಗದಿಂದಲೂ ದೂರಾಗಿದ್ದರು. ಕೊನೆಗೆ ಎಂ ರಘುಪತಿ ಅವರಿಂದ ಕೂಡ ನಿಧಾನವಾಗಿ ದೂರಾದರು. ಇತ್ತ ಪುಟ್ಟಣ್ಣ ಕಣಗಾಲ್​ರಂತೆ ಎಂ ರಘುಪತಿ ಖಿನ್ನತೆಗೆ ಒಳಗಾಗುತ್ತಾರೆ. ಆರತಿ ಮೇಲಿದ್ದ ಅಪಾರ ಪ್ರೀತಿ ಹೊಂದಿದ್ದ ರಘುಪತಿ ರಾಜಕೀಯದಿಂದ ನಿಧಾನ ಗತಿಯಲ್ಲಿ ದೂರಾದಾರು. ರಾಜಕೀಯ ಜೀವನವೇ ಅಂತ್ಯಗೊಳ್ಳುತ್ತೆ. ಈ ಬಳಿಕ ಆರತಿ ಹಾರ್ಡ್​ವೇರ್​ ಇಂಜಿನಿಯರ್​ ಆಗಿದ್ದ ಚಂದ್ರಶೇಖರ್​ ಗೌಡ ದೇಸಾಯಿ ಅವರನ್ನು ಮದುವೆಯಾಗುತ್ತಾರೆ.


ಚಂದ್ರಶೇಖರ್​ ಜೊತೆ 3ನೇ ಮದುವೆಯಾದ ಆರತಿ!


3ನೇ ಮದುವೆ ಆಗುವ ಸಮಯದಲ್ಲಿ ಆರತಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಇಲ್ಲೇ ಚಂದ್ರಶೇಖರ್​ ಕೂಡ ಪರಿಚಯವಾಗುತ್ತೆ. ಸ್ನೇಹ, ಪ್ರೀತಿಯಾಗಿ ಇಬ್ಬರು ಮದುವೆಯಾಗುತ್ತಾರೆ. 1987ರಲ್ಲಿ ಆರತಿ ಹಾಗೂ ಅವರ ಪತಿ, ಮಗಳ ಜೊತೆ ವಿದೇಶಕ್ಕೆ ಶಿಫ್ಟ್​ ಆಗುತ್ತಾರೆ. ಇತ್ತ ಎಂ.ರಘುಪತಿ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು.


ಆರತಿ ಮೂರನೇ ಪತಿ ಚಂದ್ರಶೇಖರ್​


ಅತ್ತ ಆರತಿ ಅಲ್ಲಿದ್ದುಕೊಂಡೇ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಅಂತಿಮವಾಗಿ ಸಿನಿಮಾ ಇಂಡ್ರಸ್ಟ್ರಿಯಿಂದ ಕಂಪ್ಲೀಟ್​ ದೂರಾಗಿದ್ದರು ಆರತಿ. ತಾವೂ ದುಡಿದಿದೆಲ್ಲವನ್ನೂ ದಾನ ಮಾಡಿದ್ದರು. ಜೆಪಿ ನಗರದಲ್ಲಿದ್ದ ಬಂಗಲೆ ಮಾರಿ, ಉತ್ತರ ಕರ್ನಾಟಕದಲ್ಲಿ 20 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದರು. ಶಾಲೆ, ಆಸ್ಪತ್ರೆ ಸೇರಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.

Published by:Vasudeva M
First published: