• Home
  • »
  • News
  • »
  • entertainment
  • »
  • Aniruddha Jatkar: ಏನ್ ಮಾಡ್ತಿದ್ದಾರೆ ಹಳೆ ಆರ್ಯವರ್ಧನ್? ಎಲ್ಲಿದ್ದಾರೆ ಅನಿರುದ್ಧ್?

Aniruddha Jatkar: ಏನ್ ಮಾಡ್ತಿದ್ದಾರೆ ಹಳೆ ಆರ್ಯವರ್ಧನ್? ಎಲ್ಲಿದ್ದಾರೆ ಅನಿರುದ್ಧ್?

ಅನಿರುದ್ಧ್

ಅನಿರುದ್ಧ್

ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ್ ಏನು ಮಾಡುತ್ತಿದ್ದಾರೆ? ಧಾರಾವಾಹಿಯಿಂದ ಹೊರಬಂದ ನಂತರ ನಟ ಏನು ಕೆಲಸ ಮಾಡುತ್ತಿದ್ದಾರೆ?

  • News18 Kannada
  • Last Updated :
  • Bangalore, India
  • Share this:

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಆಗಿ ಕನ್ನಡ ಕಿರುತೆರೆ (Smallscreen) ಪ್ರೇಕ್ಷಕರ ಫೇವರೇಟ್ ಆಗಿದ್ದ ಅನಿರುದ್ಧ್ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಧಾರಾವಾಹಿ ಮಾಡಲ್ವಾ? ಹೀಗೆ ಹಲವಾರು ಪ್ರಶ್ನೆಗಳು ಪ್ರೇಕ್ಷಕರ ಮನಸಿನಲ್ಲಿದೆ. ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ತುಂಬಾ ಫೇಮಸ್ ಆಗಿತ್ತು. ಅನು ಸಿರಿಮನೆಯನ್ನು ಪ್ರೀತಿಸಿ ಮದುವೆಯಾಗುವ ಹಿರಿಯ ವಯಸ್ಸಿನ ಉದ್ಯಮಿ ಪಾತ್ರದಲ್ಲಿ ಅನಿರುದ್ಧ್ (Aniruddha Jatkar) ಕಾಣಿಸಿಕೊಂಡಿದ್ದರು. ಸೀರಿಯಲ್ (Serial) ಶುರುವಾಗಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿತ್ತು. ಇದರ ಟೈಟಲ್ ಟ್ರ್ಯಾಕ್ ಅಂತೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಆದರೆ ನಂತರದಲ್ಲಿ ಧಾರಾವಾಹಿಯಲ್ಲಿ ಹೀರೋನೇ (Hero) ವಿಲನ್ ಆಗಿ, ಸ್ವಲ್ಪ ಖಳನಾಯಕ ಶೇಡ್ ಕೂಡಾ ಸಿಕ್ಕಿತ್ತು. ಧಾರಾವಾಹಿ ಸ್ವಲ್ಪ ಅನಿರೀಕ್ಷಿತ ತಿರುವುಗಳನ್ನು ಕಂಡಿತ್ತು.


ಜೊತೆ ಜೊತೆಯಲಿ ಧಾರಾವಾಹಿ ತಂಡ ಹಾಗೂ ಅನಿರುದ್ಧ್ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು ಎಂದು ಹೇಳಲಾಗಿತ್ತು. ನಂತರದಲ್ಲಿ ಇದು ದೊಡ್ಡದಾಗಿ ದೊಡ್ಡ ಗಲಾಟೆಯೇ ಆಯಿತು. ಸೋಷಿಯಲ್ ಮಿಡಿಯಾದಲ್ಲಿ ಈ ಸೀರಿಯಲ್ ಗಲಾಟೆ ಹೈಲೈಟ್ ಆಯಿತು. ಕೊನೆಗೆ ಅನಿರುದ್ಧ್ ಧಾರಾವಾಹಿ ಬಿಟ್ಟು ಹೊರ ಬರಬೇಕಾಯಿತು.
ಸೀರಿಯಲ್​​ನಿಂದ ಹೊರಬಂದು ಏನ್ಮಾಡ್ತಿದ್ದಾರೆ ಅನಿರುದ್ಧ್?


ಧಾರಾವಾಹಿಯಿಂದ ಹೊರಬಂದಿರುವ ಅನಿರುದ್ಧ್ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇರಬಹುದು. ಅನಿರುದ್ಧ್ ಸದ್ಯ ಯಾವುದೇ ಸಿನಿಮಾ, ಧಾರಾವಾಹಿಗಳನ್ನಂತೂ ಮಾಡುತ್ತಿಲ್ಲ. ಆದರೆ ನಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ


ನಟ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದು ಹೊಂಡ ಬಿದ್ದ ರಸ್ತೆಗಳ ಫೋಟೋ, ಕಸದ ರಾಶಿ ತುಂಬಿರೋ ರಸ್ತೆಗಳ ಫೋಟೋಗಳನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡುತ್ತಿರುತ್ತಾರೆ. ತಾವು ಮಾಡಿದ ವರದಿಯ ಪರಿಣಾಮವನ್ನೂ ನಟ ಅಭಿಮಾನಿಗಳೊಂದಿಗೆ ಶೇರ್ ಮಾಡಿ ಬಿಬಿಎಂಪಿಗೆ ಥ್ಯಾಂಕ್ಸ್ ಹೇಳುತ್ತಾರೆ.
ಈಗ ಅನಿರುದ್ಧ್ ಇನ್​​ಸ್ಟಾಗ್ರಾಮ್ ವಾಲ್ ತುಂಬಾ ಇಂಥಾ ಫೋಟೋಗಳೇ ತುಂಬಿವೆ. ಅದೇ ರೀತಿ ಅವರು ಪತ್ನಿ ಜೊತೆಗೆ ಸೆಲ್ಫೀ ವಿಡಿಯೋ ಹಾಗೂ ಫೊಟೋಗಳನ್ನು ಶೇರ್ ಮಾಡುತ್ತಾರೆ. ಧಾರಾವಾಹಿಗೆ ಎಂಟ್ರಿ ಕೊಟ್ಟ ನಂತರ ಅನಿರುದ್ಧ್  ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.


ಇದನ್ನೂ ಓದಿ: Actress Megha Shetty: ಸೀರೆಯಾದ್ರೂ, ಮಾರ್ಡನ್ ಡ್ರೆಸ್ ಆದ್ರೂ ಅನು ಸಿರಿಮನೆ ಸೂಪರ್; ಮೇಘಾ ಶೆಟ್ಟಿಯ ಹೊಸ ಲುಕ್!


ಇತ್ತೀಚೆಗೆ ಸೀರಿಯಲ್ ತಂಡ ನಟನನ್ನು ಭೇಟಿ ಮಾಡಿತ್ತು. ಸೀರಿಯಲ್​ನಲ್ಲಿ ಅಭಿನಯಿಸುವ ಕಲಾವಿದರು ನಟ ಅನಿರುದ್ಧ್ ಅವರನ್ನು ಭೇಟಿ ಮಾಡಿದ್ದು ಅವರು ಹ್ಯಾಪಿ ಫೋಟೋಗೆ ಪೋಸ್ ಕೊಟ್ಟಿದ್ದರು. ಇದನ್ನು ನಟ ಶೇರ್ ಮಾಡಿದ್ದಾರೆ.


Zee Kannada Jote Joteyali serial hero role change Anirudh fan asking support to others fans in social media
ಅನಿರುದ್ಧ್


ಇನ್​​ಸ್ಟಾಗ್ರಾಮ್​ನಲ್ಲಿ ನಟ ಸದ್ಯ 157 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 1800ಕ್ಕೂ ಹೆಚ್ಚು ಪೋಸ್ಟ್​​ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಆದರೆ ನಟ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದು ಇದರಲ್ಲಿ ಹೆಚ್ಚಿನವರು ಫ್ಯಾಮಿಲಿ ಸದಸ್ಯರೇ ಆಗಿದ್ದಾರೆ. ನಟಿ ಮೇಘ ಶೆಟ್ಟಿ ಅವರನ್ನು ಫಾಲೋ ಮಾಡುತ್ತಾರೆ.


ನಟನನ್ನು ಮಿಸ್ ಮಾಡ್ಕೊಳ್ತಿದ್ದಾರೆ ಪ್ರೇಕ್ಷಕರು


ಆರೂರ್ ಜಗದೀಶ್ ಅವರು ಏನೇ ಪ್ರಯತ್ನ ಮಾಡಿದ್ರೂ ಜನ ಮಾತ್ರ ಯಾಕೋ ಧಾರಾವಾಹಿ ನೋಡೋಕೆ ಹಿಂದೇಟು ಹಾಕುತ್ತಿದ್ದಾರೆ. ಸೀರಿಯಲ್ ಸೆಟ್ ನಲ್ಲಿ ಆದ ಕಿರಿಕ್ ನಿಂದ ಧಾರಾವಾಹಿಯಿಂದ ಅನಿರುದ್ಧ್ ಹೊರ ಬರಬೇಕಾಯಿತು. ಸಮಸ್ಯೆಗಳನ್ನು ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು ಎಂದು ಜನ ಹೇಳುತ್ತಿದ್ದಾರೆ. 700 ಎಪಿಸೋಡ್ ಮಾಡಿ ಕೊಟ್ಟ ಅನಿರುದ್ಧ್ ಅವರನ್ನು, 20 ಸಂಚಿಕೆಯಲ್ಲಿ ಆದ ತೊಂದರೆಯಿಂದ ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

Published by:Divya D
First published: