Baby Shamlee: ಅಷ್ಟು ಮುದ್ದಾಗಿದ್ದ ಬೇಬಿ ಶಾಮಿಲಿ ಮೂಲೆಗುಂಪಾಗಿದ್ದೇಕೆ? ಭಾವ ಸೂಪರ್ ಸ್ಟಾರ್ ಅನ್ನೋದೇ ಮುಳುವಾಯ್ತಾ?

ಯಶಸ್ಸನ್ನು ತಲೆಗೆ ತೆಗೆದುಕೊಂಡಿದ್ದ ಬೇಬಿ ಶಾಮಿಲಿ (Baby Shamili) ಕಥೆ ಇದು. ಬೇಬಿ ಶಾಮಿಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುತ್ತಿದ್ದ ಹಾಗೇ ಕಣ್ಣ ಮುಂದೆ ಮುದ್ದಾದ ಮುಖ, ಕಿವಿಗೆ ಇಂಪೆನಿಸುವ ಸೊಗಸಾದ ಡೈಲಾಗ್​ಗಳು ಬರುತ್ತವೆ.

ಶಾಮಿಲಿ

ಶಾಮಿಲಿ

  • Share this:
ಮನುಷ್ಯ (Human) ತಗ್ಗಿ ಬಗ್ಗಿ ನಡೆದರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ. ಬೆಳೆದಾಗ ಮನುಷ್ಯನ ಸ್ವಭಾವ ಗೊತ್ತಾಗುತ್ತೆ, ಹಣ (Money) , ಹೆಸರು ಬಂದಾಗ ಮನುಷ್ಯ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಅತಿ ಮುಖ್ಯವಾಗುತ್ತೆ. ಹಾಗಿಗಿಯೇ ಸ್ಟಾರ್ (Star)​ ಪಟ್ಟ ಬಂದಮೇಲೆ ಚೇಂಜ್​ ಆಗಿ ಬಿಡುತ್ತಾರೆ ಅಂತ ಎಲ್ಲರೂ ಹೇಳಿದ್ದನ್ನು ಕೇಳಿದ್ದೀರ. ಜೊತೆಗೆ ಕೆಲವರು ಬದಲಾಗಿರುವುದನ್ನು ಕೂಡ ನೋಡಿದ್ದೀರ. ಅದರಲ್ಲೂ ಈ ಪ್ರಪಂಚದಲ್ಲಿ ಬದಲಾವಣೆ ಅನ್ನುವ ಪದ ಬಿಟ್ಟು ಮಿಕ್ಕಿದ್ದೆಲ್ಲವೂ ಬದಲಾಗುತ್ತೆ. ಇಲ್ಲಿ ಅಂಥ ವ್ಯಕ್ತಿಯೊಬ್ಬರ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದೇವೆ. ಸಂಪೂರ್ಣವಾಗಿ ಓದಿ. ಯಶಸ್ಸನ್ನು ತಲೆಗೆ ತೆಗೆದುಕೊಂಡಿದ್ದ ಬೇಬಿ ಶಾಮಿಲಿ (Baby Shamili) ಕಥೆ ಇದು. ಬೇಬಿ ಶಾಮಿಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುತ್ತಿದ್ದ ಹಾಗೇ ಕಣ್ಣ ಮುಂದೆ ಮುದ್ದಾದ ಮುಖ, ಕಿವಿಗೆ ಇಂಪೆನಿಸುವ ಸೊಗಸಾದ ಡೈಲಾಗ್​ಗಳು ಬರುತ್ತವೆ.

2 ವರ್ಷಕ್ಕೆ ಸಿನಿಮಾದಲ್ಲಿ ನಟಿಸಿದ್ದ ಬೇಬಿ ಶಾಮಿಲಿ!

ಬೇಬಿ ಶಾಮಿಲಿ ಒಂದೇ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇವರ ಸಿನಿಮಾದಲ್ಲಿ ಈಕೆಯೆ ಹೀರೋ ಇದ್ದಂತೆ. ಈಕೆ ಸಿನಿಮಾದಲ್ಲಿ ನಟಿಸಿದ್ದಾರೆ ಅಂದರೆ ಸಾಕು, ನಟ-ನಟಿಯರ ಬಗ್ಗೆ ಸಿನಿ ಪ್ರೇಕ್ಷಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಈಕೆಯ ಅಭಿನಯ ಕಂಡರೆ, ನಮ್ಮ ಮನೆಯ ಮಗಳು ಎನ್ನುವ ಫೀಲ್​ ಬರುತ್ತಿತ್ತು. ಆ ವಯಸ್ಸಲ್ಲಿ ಅದ್ಭುತ ನಟನೆಯಿಂದ ಎಲ್ಲರ ಮನ ಗೆದ್ದವರು ಬೇಬಿ ಶಾಮಿಲಿ. ಆ ಕಾಲದಲ್ಲೇ ಹೆಚ್ಚಿನ ಇನ್​ಕಮ್​ ಟ್ಯಾಕ್ಸ್​ ಪೇ ಮಾಡುತ್ತಿದ್ದವರಲ್ಲಿ ಬೇಬಿ ಶಾಮಿಲಿ ಕೂಡ ಒಬ್ಬರು ಅಂದ್ರೆ ಆಶ್ಚರ್ಯ ಆಗದೇ ಇರದು. ಸಾಕಷ್ಟು ಸಿನಿಮಾಗಳಲ್ಲಿ ಬೇಬಿ ಶಾಮಿಲಿ ನಟಿಸಿದ್ದರು.

ಹೀರೋಯಿನ್​ ಆಗಿ ಹೆಸರು ಮಾಡಲಿಲ್ಲ ಶಾಮಿಲಿ!

ಇಷ್ಟೆಲ್ಲಾ ಸಿನಿಮಾ ಮಾಡಿ ಹೆಸರು ಮಾಡಿದ್ದ ಬೇಬಿ ಶಾಮಿಲಿ ಹೀರೋಯಿನ್​ ಆಗಿ ಯಾಕೆ ತೆರೆ ಮೇಲೆ ಬರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತ್ರ ನಟನೆ ಮಾಡುತ್ತಿದ್ದ ಬೇಬಿ ಶಾಮಿಲಿ ಹೀರೋಯಿನ್​ ಆಗಿ ಯಾಕೆ ಸಕ್ಸಸ್ ಆಗಲಿಲ್ಲ. ಬೇಬಿ ಶಾಮಿಲಿ ಅವರ ತಂದೆ ಬಾಬು. ಕೇರಳ ಮೂಲದವರು. ಅವರು ಕೂಡ ನಟನೆ ಮಾಡಬೇಕೆಂದು ತಮಿಳುನಾಡಿಗೆ ಬಂದಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹೀಗಾಗಿ ತಮ್ಮ ಆಸೆಯನ್ನು ತನ್ನ ಮಗಳ ಮೂಲಕ ಈಡೇರಿಸಿಕೊಂಡರು. ಬೇಬಿ ಶಾಮಿಲಿ 1987ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಬೇಬಿ ಶಾಮಿಲಿಗೆ ನಟನೆ ತರಬೇತಿ ನೀಡುತ್ತಿದ್ದರಂತೆ. 1989ರಲ್ಲಿ ತೆರೆಗೆ ಬಂದ ರಾಜನದೈ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿದ್ದರು. ಆಗ ಅವರಿಗೆ ಕೇವಲ ಎರಡು ವರ್ಷ.

ಬೇಬಿ ಶಾಮಿಲಿ


ಶಾಮಿಲಿ ಬದುಕು ಬದಲಿಸಿದ ಅಂಜಲಿ ಸಿನಿಮಾ!

ಅದೇ ವರ್ಷ ಮಗಡು ಎಂಬ ಸಿನಿಮಾದಲ್ಲೂ ಬೇಬಿ ಶಾಮಿಲಿ ನಟಿಸಿದ್ದರು. ಆದರೆ ಬೇಬಿ ಶಾಮಿಲಿ ಅವರ ಬದುಕನ್ನೇ ಬದಲಾಯಿಸಿದ ಸಿನಿಮಾ ಅಂದರೆ ಅದು ಅಂಜಲಿ.ಈ ತಮಿಳು ಸಿನಿಮಾ ಅವರ ಬದುಕನ್ನೇ ಬದಲಾಯಿಸಿತು. 3 ವರ್ಷ ವಯಸ್ಸಿಗೆ ಈಕೆ ಮಾಡಿದ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದರು. ತಮಿಳು ರಾಜ್ಯ ಪ್ರಶಸ್ತಿ ಕೂಡ ಬೇಬಿ ಶಾಮಿಲಿ ಪಡೆದುಕೊಂಡರು. ಇದಾದ ಬಳಿಕ ಮಲ್ಲುಟಿ 1990 ಸಿನಿಮಾದಲ್ಲಿ ನಟಿಸಿದರು. ಬಳಿಕ ಕನ್ನಡ ಸಿನಿಮಾಗೆ ಬೇಬಿ ಶಾಮಿಲಿ ಎಂಟ್ರಿ ಕೊಟ್ಟರು. ವಿಷ್ಣುವರ್ಧನ್​ ಅಭಿನಯದ ಮತ್ತೆ ಹಾಡಿತು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಈ ಸಿನಿಮಾದಿಂದ ಬೇಬಿ ಶಾಮಿಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಆದರು.

ಬೇಬಿ ಶಾಮಿಲಿ


ಇದನ್ನೂ ಓದಿ: ಸ್ಟಾರ್​​ ನಟಿಯಾಗಿ ಮೆರೆದಿದ್ದ ಪೂಜಾ ಗಾಂಧಿ ಈಗ ಎಲ್ಲಿದ್ದಾರೆ? ದಪ್ಪ ಆಗಿದ್ದೇ ಮಳೆ ಹುಡುಗಿಗೆ ಮುಳುವಾಯ್ತಾ?

ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡಿದ್ದ ಶಾಮಿಲಿ!

ಕನ್ನಡದಲ್ಲಿ ಹೆಚ್ಚು ಅವಕಾಶಗಳು ಬೇಬಿ ಶಾಮಿಲಿಯನ್ನು ಹುಡುಕಿಕೊಂಡು ಬಂತು. ಇದಾದ ಬಳಿಕ ಭೈರವಿ, ಶ್ವೇತಾಜ್ಞ, ಪೊಲೀಸ್ ಲಾಕಪ್​, ಕಾದಂಬರಿ, ಶಾಂಭವಿ, ಕರುಳಿನ ಕುಡಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ ಬೇಬಿ ಶಾಮಿಲಿ ಸ್ಟಾರ್​ ಪಟ್ಟವನ್ನು ಪಡೆದುಕೊಂಡರು. ಬೇಬಿ ಶಾಮಿಲಿ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರಂತೆ. ಬೇಬಿ ಶಾಮಿಲಿ ಬೆಳೆದು ದೊಡ್ಡವಾಳಾಗುತ್ತಿದ್ದಂತೆ ಅವಕಾಶಗಳು ಕೂಡ ಕಡಿಮೆಯಾಗುತ್ತೆ. ಬೇಬಿ ಶಾಮಿಲಿ ಕೂಡ ತಮ್ಮ ವಿದ್ಯಾಭ್ಯಾಸ ಕಡೆ ಹೆಚ್ಚಿನ ಗಮನ ನೀಡುವುದಕ್ಕೆ ಶುರು ಮಾಡುತ್ತಾರೆ.

ಅಜಿತ್​ ಜೊತೆ ಶಾಮಿಲಿ


2009ರಲ್ಲಿ ಕಮ್​ಬ್ಯಾಕ್ ಮಾಡಿದ್ದ ಬೇಬಿ ಶಾಮಿಲಿ!

ಬಾಲನಟಿಯಾಗಿ ಇಲ್ಲಿಗೆ ಬೇಬಿ ಶಾಮಿಲಿ ಅಧ್ಯಾಯ ಮುಗಿದಿತ್ತು. 2009ರಲ್ಲಿ ಬಿಡುಗಡೆಯಾದ ಓಯ್​ ಎಂಬ ತೆಲುಗು ಸಿನಿಮಾದ ಮೂಲಕ ಹೀರೋಯಿನ್​ ಆಗಿ ಬೇಬಿ ಶಾಮಿಲಿ ಕಮ್​ಬ್ಯಾಕ್​ ಮಾಡಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್​ ನೀಡಲಿಲ್ಲ. ಈ ಸಿನಿಮಾಗಾಗಿ ಫಿಲ್ಮ್​ಫೇರ್​ ಅವಾರ್ಡ್ ಕೂಡ ಪಡೆದುಕೊಂಡಿದ್ದರು ಬೇಬಿ ಶಾಮಿಲಿ. ಇದಾದ ಬಳಿಕ ಹೇಳಿಕೊಳ್ಳುವಂತಹ ಅವಕಾಶಗಳು ಇವರಿಗೆ ಬರಲಿಲ್ಲ. 2016ರಲ್ಲಿ ವಾಲ್ಯೂತೇಟಿ ಪುಲ್ಲಮೇಟಿ ಎಂಬ ಮಲಯಾಳಂ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿದರು. ಇದಾದ ಬಳಿಕ ವೀರ ಶಿವಾಜಿಯಲ್ಲೂ ನಟಿಸಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ಅಮ್ಮಮೆಗರಿಲ್ಲು ಎಂಬ ಸಿನಿಮಾದಲ್ಲಿ ಕೊನೆಯದಾಗಿ ಬೇಬಿ ಶಾಮಿಲಿ ಕಾಣಿಸಿಕೊಂಡಿದ್ದರು.

ಶಾಮಿಲಿ ಅವರ ಅಕ್ಕ ಅಜಿತ್​ ಪತ್ನಿ ಅಂಜಲಿ!

ಕನ್ನಡದಿಂದಲೂ ಹೆಚ್ಚಿನ ಅವಕಾಶವನ್ನು ಬಂದಿತ್ತು. ಆದರೆ, ಸಖತ್​ ಚ್ಯೂಸಿಯಾಗಿದ್ದ ಬೇಬಿ ಶಾಮಿಲಿ ಎಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಎಲ್ಲ ಭಾಷೆಗಳಲ್ಲೂ ಇವರಿಗೆ ಬೇಡಿಕೆಯಿತ್ತು. ಬೇಬಿ ಶಾಮಿಲಿ ಬಾಲನಟಿಯಾಗಿಬ 40 ರಿಂದ 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಹೀರೋಯಿನ್ ಆಗಿ ಕೇವಲ ನಾಲ್ಕು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ. ಆದರೆ, ಯಾವ ಸಿನಿಮಾ ಕೂಡ ಇವರಿಗೆ ಸ್ಟಾರ್​ ಪಟ್ಟವನ್ನು ತಂದುಕೊಡಲಿಲ್ಲ. ಇನ್ನೂ ಇವರ ಅಕ್ಕ ಅಂಜಲಿ ಕೂಡ ಬಾಲನಟಿಯಾಗಿ ಗುರುತಿಸಿಕೊಂಡಿದ್ದರು. ಈ ಅಂಜಲಿ ಬೇರೆ ಯಾರೂ ಅಲ್ಲ ತಲಾ ಅಜಿತ್ ಅವರ ಪತ್ನಿ.

ಶಾಮಿಲಿ, ಅಜಿತ್​, ಅಂಜಲಿ


ಇದನ್ನೂ ಓದಿ: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ

ಅಹಂಕಾರದಿಂದ ಅವಕಾಶ ಕಳೆದುಕೊಂಡ್ರಾ ಶಾಮಿಲಿ!

ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಹೀರೋಯಿನ್​ ಆದ್ಮೇಲೆ ಸ್ಟಾರ್​ ಪಟ್ಟ ಸಿಗಲಿಲ್ಲ. ತನ್ನ ಭಾವ ಸೂಪರ್​ ಸ್ಟಾರ್​ ಅನ್ನುವ ಅಹಂಕಾರ ಕೂಡ ಅವರಿಗಿತ್ತಂತೆ. ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆಗಿನ ಒಡನಾಟ ಸರಿಯಿರಲಿಲ್ಲವಂತೆ. ಈ ಬಗ್ಗೆ ಆಗಲೇ ಸಾಕಷ್ಟು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಅದೇನೇ ಇರಲಿ, ಯಶಸ್ಸು ತಲೆಗೆ ಹತ್ತಿಸಿಕೊಂಡಿದ್ದ ಬೇಬಿ ಶಾಮಿಲಿ ಹೀರೋಯಿನ್ ಆಗಿ ಸ್ಟಾರ್​ ಪಟ್ಟ ಗಳಿಸಿಕೊಳ್ಳುವಲ್ಲಿ ವಿಫಲರಾದರು.
Published by:Vasudeva M
First published: