ಮತ್ತೆ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಿರುವ ಮೋಹಕತಾರೆ ರಮ್ಯಾ (Sandalwood Queen Ramya) ಇನ್ನೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ ಯಾಕೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಮದುವೆ (Marriage) ಬಗ್ಗೆ ಮಾತ್ರ ನಟಿ ರಮ್ಯಾ (Ramya) ಎಲ್ಲೂ ಮಾತಾಡಿಲ್ಲ. ರಮ್ಯಾಗೆ 40 ವರ್ಷವಾಗಿದ್ರೂ ಮದುವೆ ಆಗಿಲ್ಲ ಬ್ಯಾಚುಲರ್ ಆಗಿಯೇ ಬದುಕು ನಡೆಸುತ್ತಿದ್ದಾರೆ. ತಾಯಿ ಜೊತೆ ಇರುವ ರಮ್ಯಾ ತನ್ನ ಮದುವೆ ಬಗ್ಗೆ ಯಾಕೆ ಯೋಚಿಸಿಲ್ಲ , ಮೋಹಕ ತಾರೆ ಒಂಟಿಯಾಗಿರಲು ನಿರ್ಧರಿಸಿ ಬಿಟ್ಟಿದ್ದಾರಾ? ಅಥವಾ ಮದುವೆ ಆಗ್ತಾರಾ ಎನ್ನುವ ಪ್ರಶ್ನೆಗೆ ಅವ್ರೇ ಉತ್ತರ ನೀಡಬೇಕಿದೆ.
ಮದುವೆ ಬಗ್ಗೆ ಮಾತಾಡಲಿಲ್ಲ ರಮ್ಯಾ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಮದುವೆ ಬಗ್ಗೆ ಮಾತಾಡಿಲ್ಲ. ನಿರೂಪಕ ರಮೇಶ್ ಅರವಿಂದ್ ಕೂಡ ಮದುವೆ ಬಗ್ಗೆ ಪ್ರಶ್ನೆ ಮಾಡಿಲ್ಲ. ನನಗೆ ಮಕ್ಕಳಿಲ್ಲ ಆದ್ರೆ ನನ್ನ ಪ್ರೀತಿಯ ನಾಯಿ ಮರಿಗಳೆ ನನ್ನ ಮಕ್ಕಳು. ಅವರನ್ನು ನಾನು ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ನಿಮ್ಮ ಕ್ರಶ್ ಯಾರು?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಭಿಮಾನಿಗಳು ನಟಿ ರಮ್ಯಾ ಬಳಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಫ್ಯಾನ್ ಒಬ್ಬರೂ ನಿಮ್ಮ ಕ್ರಶ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಲು ಯೋಚನೆ ಮಾಡಿದ ರಮ್ಯಾ ಕೊನೆಗೆ ನನ್ನ ಮುದ್ದು ಡಾಗ್ಸ್ ಎಂದು ಹೇಳಿದ್ದಾರೆ.
ರಫೇಲ್ ಜೊತೆ ಹಸೆಮಣೆ ಏರಲಿಲ್ಲ ರಮ್ಯಾ
ಪೋರ್ಚುಗಲ್ ಉದ್ಯಮಿ ರಫೇಲ್ ಜೊತೆ ರಮ್ಯಾ ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ರಮ್ಯಾ ಕೂಡ ರಫೇಲ್ ಜೊತೆ ಅನೇಕ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿತ್ತು. ರಮ್ಯಾ ತಾಯಿ ಕೂಡ ಮಗಳ ಮದುವೆ ಬಗ್ಗೆ ಸುಳಿವು ಕೊಟ್ಟಿದ್ರು ಕೆಲ ದಿನಗಳ ಬಳಿಕ ರಫೇಲ್ ಹಾಗೂ ರಮ್ಯಾ ಮದುವೆ ಸುದ್ದಿ ಮರೆಯಾಗಿ ಹೋಯ್ತು.
ಮೇಡಂ ನಿಮ್ಮ ಮದುವೆ ಯಾವಾಗ?
ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ಸಂವಾದದಲ್ಲಿ ಮಾತಾಡಿದ ನಟಿ ರಮ್ಯಾಗೆ ಮದುವೆ ಪ್ರಶ್ನೆ ಎದುರಾಗಿತ್ತು. ಮೇಡಂ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ರು. ಇದಕ್ಕೆ ಉತ್ತರಿಸಿದ ರಮ್ಯಾ, ಮದುವೆ ಯಾಕೆ ಆಗ್ಬೇಕು ಎಂದು ಹೇಳಿದ್ರು. ನಾನು ಖುಷಿಯಾಗಿರುವುದನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ರಮ್ಯಾ ಈ ಮಾತು ಕೇಳಿದ ಅಭಿಮಾನಿಗಳು ಮೇಡಂ ನೀವೂ ಮದುವೆನೇ ಆಗ್ಬೇಡಿ ಎಂದು ಹೇಳಿದ್ದಾರೆ. ಇದಕ್ಕೆ ರಮ್ಯಾ ನಕ್ಕು ಸುಮ್ಮನಾದ್ರೂ.
ನನ್ನ ಸೋಲ್ ಮೇಟ್ ಸತ್ತು ಹೋಗಿರಬಹುದು
ನಟಿ ಮದುವೆ ಬಗ್ಗೆ ಇತ್ತೀಚೆಗೆ ಮಾಡಿರುವ ಪೋಸ್ಟ್ನಲ್ಲಿ ನನ್ನ ಸೋಲ್ ಮೇಟ್ ಸತ್ತು ಹೋಗಿರಬಹುದು ಎಂದು ಹೇಳಿದ್ದಾರೆ. ಅರೆ ಮದುವೆ ಮಾತಾಡಿದ್ರೆ ಸಾಯುವ ಮಾತಾಡುತ್ತಾರಲ್ಲಾ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Actress Ramya: ಸುಲಭಕ್ಕೆ ಸಿಕ್ಕಿದ್ದಲ್ಲ ಸ್ಯಾಂಡಲ್‌ವುಡ್ ಕ್ವೀನ್ ಪಟ್ಟ! 20 ವರ್ಷಗಳ ರಮ್ಯಾ ಸಿನಿ ಜರ್ನಿ
ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ರಮ್ಯಾ
ನಟಿ ರಮ್ಯಾ ಇದೀಗ 'ಆಪಲ್ ಬಾಕ್ಸ್ ಸ್ಟುಡಿಯೋಸ್' ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ (New Movie) ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ ಜರ್ನಿ ಆರಂಭಿಸಿ 20 ವರ್ಷ ಕಳೆದಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ರಮ್ಯಾ ಈಗಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಮೆರೆಯುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಏರಿದ ರಮ್ಯಾ , ತನ್ನ ಮನದಾಳದ ಮಾತು ಹಂಚಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ