Mira Rajput: ವಿವಾದಾತ್ಮಕ ಕಾಮೆಂಟ್ ಹರಿಬಿಟ್ಟ ಮೀರಾ ರಜಪೂತ್​: ಪತ್ನಿಯನ್ನು ಸಮರ್ಥಿಸಿಕೊಂಡ ಶಾಹಿದ್ ಕಪೂರ್

ಮೀರಾ ರಜಪೂತ್‌ ಬಾಲಿವುಡ್‌ನಲ್ಲಿ ತಮ್ಮದೇ ವೈಯಕ್ತಿಕ ಕೌಶಲ್ಯದಿಂದ ಗುರುತಿಸಿಕೊಂಡು, ಪ್ರಸಿದ್ಧಿ ಪಡೆದಿದ್ದಾರೆ. ಮೀರಾ ಅವರು ಈಗ ಮಾತೃತ್ವ ರಜೆಯಲ್ಲಿ ಇರುವುದರಿಂದ ತಮ್ಮ ಅನುಭವಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ತಾಯಿಯಾಗಿ ಹೇಗೆ ಕರ್ತವ್ಯಗಳನ್ನು ನಿರ್ವಹಿಸುವುದು ಎಂಬುದರ ವಿಷಯದ ಕುರಿತು ಕಂಠದಾನವನ್ನು ಸಹ ನೀಡಿದ್ದಾರೆ.

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್

  • Share this:
ಬಾಲಿವುಡ್‌ ಅಂಗಳದಲ್ಲಿ ಶಾಹಿದ್ ಕಪೂರ್ (Shahid Kapoor) ಮತ್ತು ಪತ್ನಿ ಮೀರಾ ರಜಪೂತ್ ಅತ್ಯಂತ ಸ್ಟೈಲಿಶ್ ಜೋಡಿಗಳಲ್ಲಿ ಒಬ್ಬರು ಎಂದು ಬಣ್ಣಿಸಬಹುದು. ಇವರಿಬ್ಬರೂ ತಮ್ಮ- ತಮ್ಮ ಇನ್ಸ್ಟಾಗ್ರಾಮ್ ನಲ್ಲಿ (Instagram) ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಜಾಲತಾಣದಲ್ಲಿ ಸಕ್ರೀಯವಾಗಿದ್ದು, ಆಗಾಗ ಪರಸ್ಪರ ತಮ್ಮ ಸಂತಸದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮೀರಾ ರಜಪೂತ್‌ (Mira Rajput) ಬಾಲಿವುಡ್‌ನಲ್ಲಿ ತಮ್ಮದೇ ವೈಯಕ್ತಿಕ ಕೌಶಲ್ಯದಿಂದ ಗುರುತಿಸಿಕೊಂಡು, ಪ್ರಸಿದ್ಧಿ ಪಡೆದಿದ್ದಾರೆ. ಮೀರಾ ಅವರು ಈಗ ಮಾತೃತ್ವ ರಜೆಯಲ್ಲಿ ಇರುವುದರಿಂದ ತಮ್ಮ ಅನುಭವಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ತಾಯಿಯಾಗಿ ಹೇಗೆ ಕರ್ತವ್ಯಗಳನ್ನು ನಿರ್ವಹಿಸುವುದು ಎಂಬುದರ ವಿಷಯದ ಕುರಿತು ಕಂಠದಾನವನ್ನು ಸಹ ನೀಡಿದ್ದಾರೆ.

ವಿವಾದಾತ್ಮಕ ಕಾಮೆಂಟ್ ಮಾಡಿ ಟ್ರೋಲ್‌ಗೆ ಒಳಗಾದ ಮೀರಾ
ಇದೆಲ್ಲದರ ಹೊರತಾಗಿಯೂ ಮೀರಾ ಅವರು ನೀಡಿದ ವಿವಾದಾತ್ಮಕ 'ಪಪ್ಪಿʼ (ನಾಯಿಮರಿ) ಎಂದು ಕಾಮೆಂಟ್ ಮಾಡಿದಾಗ ಭಾರೀ ಗಾತ್ರದಲ್ಲಿ ಒಮ್ಮೆ ಟ್ರೋಲ್‌ಗೆ ಒಳಗಾಗಿದ್ದರು, ಇದರ ನಂತರ ಅವರು ತಮ್ಮ ಕೆಲಸಗಳಲ್ಲಿ ತೀವ್ರ ಹಿನ್ನಡೆಯನ್ನು ಎದುರಿಸಿದರು. ಇದರಿಂದ ಕೋಪಗೊಂಡ ಪತಿ ಶಾಹೀದ್‌ ತನ್ನ ಪತ್ನಿ ಮೀರಾಗೆ ಬೆಂಬಲವಾಗಿ ನಿಂತು ಟ್ರೋಲರ್‌ಗಳ ಜೊತೆ ಜಗಳವಾಡಿದರು. ಇದರಿಂದ ಅವರಿಬ್ಬರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಿದೆ ಎಂಬುದು ತಿಳಿದು ಬರುತ್ತದೆ. ಜುಲೈ 7, 2015 ರಂದು ಮದುವೆಯಾದ ಶಾಹಿದ್ ಮತ್ತು ಮೀರಾ ತಮ್ಮ 7 ವರ್ಷಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಮಾತೃತ್ವದ ಬಗ್ಗೆ ಈಕೆಯ ಅನುಭವ ಹೀಗಿತ್ತು
2017 ರಲ್ಲಿ, ಮೀರಾ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಚರ್ಚಾಕೂಟವೊದರಲ್ಲಿ ಮಾತನಾಡುತ್ತಾ, ಮಾತೃತ್ವ, ಮತ್ತು ಗೃಹಿಣಿಯಾಗಿರುವುದರ ಬಗ್ಗೆ ತಮ್ಮ ಕೆಲವು ಅನುಭವಗಳನ್ನು ವ್ಯಕ್ತಪಡಿಸಿದ್ದರು. “ನಾನು ತಾಯಿಯಾಗಿದ್ದೇನೆ, ಇಂತಹ ಸಮಯದಲ್ಲಿ ನಾನು ಕೆಲಸ ಮಾಡಲು ಬಯಸುವುದಿಲ್ಲ. ಏಕೆಂದರೆ ಈಗ ಮಗುವಿಗಿಂತ ಮುಖ್ಯವಾದ ಸಂಗತಿ ನನಗೆ ಮತ್ತೊಂದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್ ಕುಟುಂಬದ ಹಿನ್ನೆಲೆ ಗೊತ್ತಾ? ಯಾರಿಗೂ ಗೊತ್ತಿಲ್ಲದ ಕಹಿ ಸತ್ಯಗಳು ಇಲ್ಲಿವೆ

“ಆದರೆ ನಾನು ಮನೆಯಲ್ಲಿರುವುದನ್ನು ಪ್ರೀತಿಸುತ್ತೇನೆ, ನನ್ನ ಮಗುವಿಗೆ ತಾಯಿಯಾಗಿದ್ದೇನೆ, ನನಗೆ ಬೇರೆ ಯಾವ ದಾರಿಯೂ ಈಗ ಇಲ್ಲ. ನನ್ನ ಮಗುವಿನೊಂದಿಗೆ ದಿನಕ್ಕೆ ಒಂದು ಗಂಟೆ ಆಟವಾಡಿ ಮತ್ತೆ ಕೆಲಸಕ್ಕೆ ಹೋಗುವುದಕ್ಕೆ ನನ್ನ ಮನಸ್ಸು ಸುತಾರಾಂ ಒಪ್ಪುವುದಿಲ್ಲ. ಕೆಲಸಕ್ಕೆ ಹೋಗಬೇಕು ಎಂದು ಬಯಸಿದ್ದರೆ ನಾವು ಏಕೆ ಅವಳನ್ನು ಪಡೆಯಬೇಕಿತ್ತು? ಅವಳೇನು ಪಪ್ಪಿ(ನಾಯಿಮರಿ) ಆಗಿರುವಳೇ? ಅವಳು ಸರಿಯಾಗಿ ಬೆಳೆಯಬೇಕೆಂಬುದು ನಮ್ಮ ಆಶಯವಾಗಿದೆ” ಎಂದು ಹೇಳಿದರು. ಈ ಕಾಮೆಂಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಈ ಮಾತು ಎಲ್ಲೆಡೆ ಟ್ರೋಲ್‌ ಆಯಿತು. ಮೀರಾ ಅವರ ಈ ಹೇಳಿಕೆ ಕುರಿತು ಅನೇಕ ತಾಯಂದಿರು ಕೆಲಸ ಮಾಡುತ್ತಾ ತಮ್ಮ ತಾಯ್ತನ ನಿರ್ವಹಿಸುತ್ತಿರುವವರು ಇದು ಸರಿಯಾದ ಯೋಚನೆ ಖಂಡಿತವಲ್ಲ ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

ಈಕೆ ನೀಡಿದ ಹೇಳಿಕೆಗೆ ನಟ ಶಾಹಿದ್ ಹೇಳಿದ್ದೇನು ನೋಡಿ 
ಆದರೆ, ಶಾಹಿದ್ ಪಪ್ಪಿ ಹೇಳಿಕೆ ನೀಡಿದ ತನ್ನ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಲ್ಲದೆ, “ಇದನ್ನು ಮೀರಾ ಹೇಳಿದ್ದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಅವಳು ತನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳಿಕೊಂಡಿದ್ದಾಳೆ ಎಂದು ನಾನು ಭಾವಿಸುತ್ತೇನೆ. ನಾನು ಮಿರಾ ಗರ್ಭಿಣಿಯಾಗಿರುವಾಗ 5 ತಿಂಗಳು ರಜೆ ತೆಗೆದುಕೊಂಡಿದ್ದೇನೆ ಏಕೆಂದರೆ ನನ್ನ ಹೆಂಡತಿ ಮತ್ತು ನನ್ನ ಮಗುವಿನೊಂದಿಗೆ ಇರುವುದು ನನಗೆ ಮುಖ್ಯ ಎಂದು ನಾನು ಕೂಡ ಭಾವಿಸಿದ್ದೆ. ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕಾಗಿರುವುದು ಮುಖ್ಯ, ತಮ್ಮ ಆಯ್ಕೆಯನ್ನು ತಾವೇ ಮಾಡಿಕೊಳ್ಳುವ ಆಯ್ಕೆ ಅವರಿಗೆ ಇರಬೇಕಾದುದು ಅವಶ್ಯ" ಎಂದು ಅವರು ಹೇಳಿದರು.

ಇದನ್ನೂ ಓದಿ:  Rakul Preet Singh: ಡೈಲಿ ಪೇಮೆಂಟ್​ಗೆ ಇಳಿದುಬಿಟ್ಟ ರಾಕುಲ್​! ಯಾವ ನಟಿಗೂ ಈ ಸ್ಥಿತಿ ಬೇಡ ಎಂದ ಫ್ಯಾನ್ಸ್​

ಪುರುಷರು ಮಹಿಳೆಯರನ್ನು ಗೌರವಿಸಬೇಕು. ಪುರುಷ ಮತ್ತು ಮಹಿಳೆಯರೂ ಒಬ್ಬರಿಗೊಬ್ಬರು ಬೆಂಬಲ ನೀಡಿ ಒಬ್ಬರ ಅಭಿಪ್ರಾಯಕ್ಕೆ ಮತ್ತೊಬ್ಬರು ಬೆಲೆ ಕೊಟ್ಟಾಗಲೇ ಸುಂದರ ದಾಂಪತ್ಯ ನಮ್ಮದಾಗುವುದು ಎಂಬ ಸಂದೇಶವನ್ನು ನೀಡುತ್ತಾ ಟ್ರೋಲಿಗರ ಮಾತಿಗೆ ತಿರುಗೇಟು ನೀಡಿದ್ದಾರೆ. ಇದರ ಮಧ್ಯೆ ಮೀರಾ ಮತ್ತು ಶಾಹೀದ್‌ ವಾಯುವಿಹಾರಕ್ಕೆ ಸ್ವಿಜರ್‌ಲ್ಯಾಂಡಿಗೆ ತೆರಳಿದ್ದು, ತಮ್ಮ ಸುಂದರ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Published by:Ashwini Prabhu
First published: