Sara Ali Khan: ರಸ್ತೆಯಲ್ಲಿ ಡ್ಯಾನ್ಸ್​ ಮಾಡಿ ಹಣ ಸಂಪಾದಿಸಿದ್ದರಂತೆ ಸಾರಾ ಅಲಿ ಖಾನ್​..!

Sara Ali Khan Dancing Video: ಸಾರಾ ಅಲಿ ಖಾನ್ ಸದಾ​ ನಗುತ್ತಾ... ತಮ್ಮ ಹಾಸ್ಯ ಭರಿತ ಡೈಲಾಗ್​ಗಳಿಂದ ಸುತ್ತಲಿರುವವರನ್ನು ನಗಿಸುತ್ತಾ ಇರುತ್ತಾರೆ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಹಿಟ್ ಕೊಡುತ್ತಿರುವ ಸಾರಾ ಈಗ ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ಸಾಲದಕ್ಕೆ ನವಾಬ ಸೈಫ್​ ಅವರ ಮಗಳು. ಇಂತಹ ನಟಿ ಒಂದು ಕಾಲದಲ್ಲಿ ರಸ್ತೆ ಮೇಲೆ ನಿಂತು ಡ್ಯಾನ್ಸ್​ ಮಾಡಿ ಸಂಪಾದಿಸಿದ್ದರಂತೆ.

Anitha E | news18-kannada
Updated:May 29, 2020, 11:44 AM IST
Sara Ali Khan: ರಸ್ತೆಯಲ್ಲಿ ಡ್ಯಾನ್ಸ್​ ಮಾಡಿ ಹಣ ಸಂಪಾದಿಸಿದ್ದರಂತೆ ಸಾರಾ ಅಲಿ ಖಾನ್​..!
ಸಾರಾ ಅಲಿ ಖಾನ್​
  • Share this:
ಸಾರಾ ಅಲಿ ಖಾನ್​ ಅವರನ್ನು ನೋಡಿದರೆ ಕರಿಷ್ಮಾ ಹಾಗೂ ಕರೀನಾ ನೆನಪಾಗುತ್ತಾರೆ ಎಂದು ಬಿ-ಟೌನ್​ನಲ್ಲಿ ನಿರ್ದೇಶಕರು ಮಾತನಾಡಿಕೊಳ್ಳುತ್ತಾರೆ. ಅಂದರೆ ಈ ಇಬ್ಬರು ಕಪೂರ್​ ಕುಡಿಗಳಲ್ಲಿರುವ ಅಭಿನಯದ ಗುಣಗಳು ಸಾರಾ ಅವರಲ್ಲಿ ಇದೆ ಎಂದರ್ಥವಂತೆ. 

ಸಾರಾ ಅಲಿ ಖಾನ್ ಸದಾ​ ನಗುತ್ತಾ... ತಮ್ಮ ಹಾಸ್ಯ ಭರಿತ ಡೈಲಾಗ್​ಗಳಿಂದ ಸುತ್ತಲಿರುವವರನ್ನು ನಗಿಸುತ್ತಾ ಇರುತ್ತಾರೆ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಹಿಟ್ ಕೊಡುತ್ತಿರುವ ಸಾರಾ ಈಗ ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ಸಾಲದಕ್ಕೆ ನವಾಬ ಸೈಫ್​ ಅವರ ಮಗಳು. ಇಂತಹ ನಟಿ ಒಂದು ಕಾಲದಲ್ಲಿ ರಸ್ತೆ ಮೇಲೆ ನಿಂತು ಡ್ಯಾನ್ಸ್​ ಮಾಡಿ ಸಂಪಾದಿಸಿದ್ದರಂತೆ.

Sara Ali Khan shared her rares photos with her childhood friends
ಸಾರಾ ಅಲಿ ಖಾನ್


ಹೌದು, ನಟಿ ಸಾರಾ ಅಲಿ ಖಾನ್​ ಸಿನಿಮಾ ಅವಕಾಶವನ್ನೂ ಸಹ ತಮ್ಮ ಪ್ರಯತ್ನದಿಂದ ಪಡೆದುಕೊಂಡಿದ್ದಂತೆ. ಇಂತಹ ಸ್ವಾಭಿಮಾನಿ ನಟಿ ರಸ್ತೆ ಮೇಲೆ ಕುಣಿದು ಹಣ ಸಂಪಾದಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Butta Bomma Song: ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್​ರ ಬುಟ್ಟ ಬೊಮ್ಮ ಹಾಡು...!

ಚಿಕ್ಕವಯಸ್ಸಿನಲ್ಲಿರುವಾಗ ಅಪ್ಪ ಸೈಫ್​ ಹಾಗೂ ಅಮ್ಮ ಅಮೃತಾರೊಂದಿಗೆ ಶಾಪಿಂಗ್​ ಹೋಗಿದ್ದರಂತೆ. ಆಗ ತಮ್ಮ ಹಾಗೂ ಕೆಲಸವರೊಂದಿಗೆ ಅಂಗಡಿಯ ಹೊರಗೆ ನಿಂತಿದ್ದ ಸಾರಾ ಸುಮ್ಮನೆ ಕುಣಿಯೋಕೆ ಆರಂಭಿಸಿದ್ದಾರೆ. ಆಗ ರಸ್ತೆಯಲ್ಲಿ ಓಡಾಡುತ್ತಿದ್ದವರು ಸಾರಾಗೆ ಹಣ ಕೊಟ್ಟು ಹೋಗುತ್ತಿದ್ದರಂತೆ. ದುಡ್ಡು ಸಿಗುತ್ತಿದೆಯಲ್ಲ ಅಂತ ಸಾರಾ ಮತ್ತಷ್ಟು ಜೋಶ್​ನಲ್ಲಿ ಡ್ಯಾನ್ಸ್​ ಮಾಡೋಕೆ ಆರಂಭಿಸಿದ್ದರಂತೆ. ಹೀಗೆಂದು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ಅಪ್ಪ-ಅಮ್ಮ ಬಂದ ನಂತರ ಜೊತೆಯಲ್ಲಿದ್ದ ಕೆಲಸದವರು ಮಗಳು ಡ್ಯಾನ್ಸ್​ ಮಾಡಿದ್ದು ಇಷ್ಟವಾಗಿ ಖುಷಿಯಿಂದ ಜನರು ಅವಳಿಗೆ ಹಣ ನೀಡಿದ್ದಾರೆ ಎಂದರಂತೆ. ಅದಕ್ಕೆ ಅಮೃತಾ ಖುಷಿಯಿಂದ ಅಲ್ಲ ಬಿಕಾರಿ ಎಂದು ನಕ್ಕು ಸುಮ್ಮನಾಗಿದ್ದರಂತೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಟಿ-ಸಿರೀಸ್​ನ ಹನುಮಾನ್​ ಚಾಲೀಸಾ ವಿಡಿಯೋ..!

ಸಾರಾ ತಮ್ಮ ಇಬ್ರಾಹಿಂ ಜೊತೆಗೆ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದ ಹಳೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸಾರಾ ಅಲಿ ಖಾನ್​ ಸಹ ಲಾಕ್​ಡೌನ್​ನಲ್ಲಿ ಸಹೋದರನೊಂದಿಗೆ ಹಾಗೂ ಅಮ್ಮನೊಂದಿಗಿನ ಕ್ರೇಜಿ ವಿಡಿಯೋಗಳನ್ನಯ ಹಂಚಿಕೊಳ್ಳುತ್ತಿದ್ದಾರೆ.
First published: May 29, 2020, 7:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading