Samantha Ruth Prabhu: ನಾಗ ಚೈತನ್ಯ ನನ್ನ ಜೀವನದ ಶ್ರೇಷ್ಠ ಸಂಗತಿ ಎಂದಿದ್ದ ಸಮಂತಾ, ಅಂದ್ಮೇಲೆ ಬೇರೆಯಾಗಿದ್ದೇಕೆ?

ಸಮಂತಾ ಮತ್ತು ನಾಗ ಚೈತನ್ಯ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಬಗ್ಗೆ ಪ್ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮಿಬ್ಬರ ಮದುವೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರಲ್ಲಿ , ಫ್ಯಾಮಿಲಿ ಮ್ಯಾನ್ 2 ರ ನಟಿ ಸಮಂತಾ ಅವರು ನಾಗ ಚೈತನ್ಯ ತನ್ನ ಜೀವನದ ಶ್ರೇಷ್ಠ ವಿಷಯ ಎಂದು ಹೇಳಿಕೊಂಡಿದ್ದರು.

ನಾಗ ಚೈತನ್ಯ, ಸಮಂತಾ

ನಾಗ ಚೈತನ್ಯ, ಸಮಂತಾ

  • Share this:
 ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ತಾರಾ ದಂಪತಿಗಳಲ್ಲಿ ಒಬ್ಬರಾಗಿದ್ದ, ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ (Naga chaitanya) ನಡುವಿನ ದಾಂಪತ್ಯ ಮುರಿದು ಬಿದ್ದು ಕೆಲವು ತಿಂಗಳುಗಳೇ ಕಳೆದವು. ತಮ್ಮ ವೃತ್ತಿ ಕ್ಷೇತ್ರದಲ್ಲಿ ಒಂದರ ಮೇಲೊಂದು ಯಶಸ್ಸನ್ನು ಪಡೆಯುತ್ತಿರುವ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಡುವಿನ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಲಿಲ್ಲ. 2021 ರ ಅಕ್ಟೋಬರ್ 2 ರಂದು, ತಾವಿಬ್ಬರು ಬೇರೆ ಬೇರೆ ಆಗುತ್ತಿರುವ ಸುದ್ದಿಯನ್ನು ಇಬ್ಬರೂ ಘೋಷಿಸಿದರು. ತಮ್ಮ ಮೆಚ್ಚಿನ ಜೋಡಿ ಪ್ರತ್ಯೇಕವಾಗುತ್ತಿರುವ ಸುದ್ದಿ ಅಭಿಮಾನಿಗಳಿಗೆ, ಸ್ಯಾಮ್ ಮತ್ತು ಚೈ ನಿಕಟ ವರ್ತಿಗಳಿಗೆ ಹಾಗೂ ಚಿತ್ರರಂಗದ ಸದಸ್ಯರಿಗೆ ಅಘಾತ (Shocking) ಮತ್ತು ಬೇಸರವನ್ನು ಉಂಟು ಮಾಡಿತ್ತು. ಬಹಳಷ್ಟು ಮಂದಿ ಅವರಿಬ್ಬರಿಗೆ ಸಾಂತ್ವನದ ಸಂದೇಶಗಳನ್ನು ಕಳುಹಿಸಿದ್ದರು.

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಈಗ ಬೇರೆ ಬೇರೆಯಾಗಿದ್ದರೂ, ಈ ಸುದ್ದಿ ಸುಳ್ಳಾಗಬಾರದೇ, ಅವರಿಬ್ಬರು ಮತ್ತೆ ಒಂದಾಗಬಾರದೆ ಎಂಬೆಲ್ಲಾ ಆಸೆಗಳನ್ನಿಟ್ಟುಕೊಂಡಿರುವವ ಅಭಿಮಾನಿಗಳ (Fans) ಸಂಖ್ಯೆಯೂ ಕಡಿಮೆಯೇನಿಲ್ಲ. ಅಸಲಿಗೆ, ಸ್ಯಾಮ್ ಮತ್ತು ಚೈ ಸಂಬಂಧ ಹಾಗಿತ್ತು. ಅವರಿಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿರಲಿಲ್ಲ.

ಅನ್ಯೋನ್ಯವಾಗಿದ್ದ ಜೋಡಿ

ಸಮಂತಾ ಮತ್ತು ನಾಗ ಚೈತನ್ಯ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಬಗ್ಗೆ ಪ್ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮಿಬ್ಬರ ಮದುವೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರಲ್ಲಿ , ಫ್ಯಾಮಿಲಿ ಮ್ಯಾನ್ 2 ರ ನಟಿ ಸಮಂತಾ ಅವರು ನಾಗ ಚೈತನ್ಯ ತನ್ನ ಜೀವನದ ಶ್ರೇಷ್ಠ ವಿಷಯ ಎಂದು ಹೇಳಿಕೊಂಡಿದ್ದರು.

ಲವ್ಲೀ ಪೋಸ್ಟ್ ಶೇರ್ ಮಾಡಿದ್ದರು ಸಮಂತಾ

ಆ ಪೋಸ್ಟ್‌ನಲ್ಲಿ ಸಮಂತಾ ತನ್ನ ಮತ್ತು ನಾಗ ಚೈತನ್ಯ ಅವರ ಒಂದು ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ ತನ್ನ ಪತಿ ಚೈ ಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತಾ, “ನನ್ನ ಜೀವನದ ಅತ್ಯಂತ ದೊಡ್ಡ ಸಂಗತಿ ಎಂದರೆ, ನಾನು ಪ್ರತಿ ದಿನ ನಿನ್ನಲ್ಲಿಗೆ ಮನೆಗೆ ಹಿಂದಿರುಗುತ್ತೇನೆ. ನಾನು ಹೆಮ್ಮೆ ಪಡುವ ನನ್ನದೇ ಭಾಗಕ್ಕೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಸುಂದರ ಸಂದೇಶವನ್ನು ಬರೆದಿದ್ದರು.

ಸ್ನೇಹಿತರಾಗಿದ್ದವರು ಸಂಗಾತಿಗಳಾದರು

ದೀರ್ಘಕಾಲ ಸ್ನೇಹಿತರಾಗಿದ್ದ, ಬಳಿಕ ಪ್ರೇಮಿಗಳಾಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ , 2017 ರಲ್ಲಿ ಗುರು ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದರು. ಆದರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ, ಅಂದರೆ 2021 ರಲ್ಲಿ ಅವರಿಬ್ಬರು ಬೇರೆಯಾಗುವ ನಿರ್ಧಾರ ಕೈಗೊಂಡರು. ತಮ್ಮ ತಮ್ಮ ಇನ್‍ಸ್ಟಾಗ್ರಾಂ ಖಾತೆಗಳಲ್ಲಿ ತಾವಿಬ್ಬರು ದೂರವಾಗುತ್ತಿರುವುದರ ಸುದ್ದಿಯನ್ನು ಪ್ರಕಟಿಸಿದರು ಹಾಗೂ ಅಧಿಕೃತ ಹೇಳಿಕೆಯನ್ನು ಕೂಡ ಹಂಚಿಕೊಂಡರು.

ವಿಚ್ಚೇದನೆ ಸುದ್ದಿ ಆಘಾತ ನೀಡಿತ್ತು

ಅವರು ಪೋಸ್ಟ್ ಮಾಡಿದ್ದ ಆ ಅಧಿಕೃತ ಹೇಳಿಕೆ ಹೀಗಿತ್ತು; “ನಮ್ಮ ಎಲ್ಲಾ ಹಿತೈಷಿಗಳಿಗೆ. ಸಾಕಷ್ಟು ಚರ್ಚೆ ಮತ್ತು ಆಲೋಚನೆಗಳ ನಂತರ, ನಾನು ಮತ್ತು ಚೈ, ಗಂಡ ಹೆಂಡತಿಯಾಗಿ ದೂರವಾಗಿ , ನಮ್ಮದೇ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದದ್ದು ನಮ್ಮ ಅದೃಷ್ಟ, ಅದು ನಮ್ಮ ಸಂಬಂಧದ ಮೂಲವಾಗಿತ್ತು ಮತ್ತು ಅದು ಎಂದಿಗೂ ಹಾಗೆಯೇ ಇರುತ್ತದೆ ಎಂಬುವುದು ನಮ್ಮ ನಂಬಿಕೆಯಾಗಿದೆ ಎಂದಿದ್ದರು.

ಇದನ್ನೂ ಓದಿ: Samantha Naga Chaitanya Divorce: ನಾವು ಬೇರೆಯಾಗುತ್ತಿದ್ದೇವೆ ವಿಚ್ಛೇದನ ನಿಜ ಎಂದ ಸಮಂತಾ-ನಾಗ ಚೈತನ್ಯ

ಅಷ್ಟು ಮಾತ್ರವಲ್ಲ, ಈ ಜೋಡಿಯು ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರಿಂದ ಗೌಪ್ಯತೆಯನ್ನು ಕೂಡ ಕೋರಿತ್ತು. ಸಮಂತಾ ಮತ್ತು ಚೈತನ್ಯ ತಾವಿಬ್ಬರು ದೂರವಾಗುವುದಕ್ಕೆ ಏನು ಕಾರಣ ಎಂಬುವುದರ ಕುರಿತು ಎಲ್ಲಿಯೂ ತುಟಿ ಬಿಚ್ಚಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪ್ರೇಮ ಸಂಬಂಧ ಮತ್ತು ಗರ್ಭಪಾತದ ಬಗ್ಗೆ ವದಂತಿಗಳು ಹರಡ ತೊಡಗಿದಾಗ, ಸಮಂತಾ ಅವುಗಳಿಗೆ ಪೂರ್ಣ ವಿರಾಮ ಹಾಕಿದ್ದರು. ಸದ್ಯಕ್ಕೆ ಇಬ್ಬರು ಕೂಡ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ವ್ಯಸ್ಥರಾಗಿದ್ದಾರೆ.

ಇದನ್ನೂ ಓದಿ: Samantha Nagachaitanya Divorce: ಹೈದರಾಬಾದಲ್ಲೇ ಬೇರೆ ಮನೆಗೆ ಶಿಫ್ಟ್ ಆಗಲಿರುವ ಸಮಂತಾ- ನಾಗಚೈತನ್ಯ ಮನೆಯಿಂದ ಎಷ್ಟು ದೂರ?
Published by:Divya D
First published: