ರಣಬೀರ್​ಗೆ ದುಬಾರಿ ಉಡುಗೊರೆ ಕೊಟ್ಟು ರಿಷಿ ಕಪೂರ್​ರಿಂದ ಬೈಗುಳ ತಿಂದ ಸಂಜಯ್​ ದತ್!​

news18
Updated:June 23, 2018, 5:56 PM IST
ರಣಬೀರ್​ಗೆ ದುಬಾರಿ ಉಡುಗೊರೆ ಕೊಟ್ಟು ರಿಷಿ ಕಪೂರ್​ರಿಂದ ಬೈಗುಳ ತಿಂದ ಸಂಜಯ್​ ದತ್!​
news18
Updated: June 23, 2018, 5:56 PM IST
ನ್ಯೂಸ್​ 18 ಕನ್ನಡ 

ಒಬ್ಬ ಮಗನಿಗೆ ಒಳ್ಳೆಯ ಸ್ನೇಹಿತೆ ಎಂದರೆ ತಾಯಿ ಹಾಗೂ ಒಳ್ಳೆಯ ಮಾರ್ಗದರ್ಶಿ ಎಂದರೆ ತಂದೆ ಎನ್ನಲಾಗುತ್ತದೆ. ಇದು ನಟ ರಣಬೀರ್ ವಿಷಯದಲ್ಲಿ ಸತ್ಯವಾಗಿದೆ. ಹೌದು ಮಗ ರಣಬೀರ್​ರ ಬಾಲ್ಯದಿಂದ ಹಿಡಿದು ಸಿನಿ ಜೀವನ ಪಯಣದಲ್ಲೂ ರಿಷಿ ಕಪೂರ್​ ಪಾತ್ರ ಬಹಳ ಪ್ರಮುಖವಾದದ್ದು. ಸದ್ಯ ರಣಬೀರ್ 'ಸಂಜು' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ವರದಿಗಳ ಪ್ರಕಾರ ರಣಬೀರ್​ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಸಂಜಯ್​ ದತ್​ ಜತೆ ಹಿಂದಿನಿಂದ ತಮಗಿದ್ದ ಒಡನಾಟದ ಕುರಿತು ಮೆಲುಕು ಹಾಕಿದ್ದಾರೆ. 1993ರಲ್ಲಿ ಮೊದಲ ಬಾರಿಗೆ ರಣಬೀರ್​, ಸಂಜಯ್​ ಅವರನ್ನು ಕಾಶ್ಮೀರದಲ್ಲಿ ನೋಡಿದ್ದರಂತೆ. ಅದರೂ ಸಹ ಅಪ್ಪ ರಿಷಿ ಜತೆ 'ಸಾಹಿಬಾನ್'​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರಂತೆ. ಉದ್ದ ಕೂದಲಿನ ನೀಳಕಾಯದ  ಸಂಜಯ್​  ಪಠಾನಿ ವೇಷದಲ್ಲಿ, ಒಂದು ಕಿವಿಗೆ ಒಲೆ ಇಟ್ಟುಕೊಂಡು ಕಾಣಿಸಿಕೊಂಡಿದ್ದರು ಎಂದು ವಿವರಿಸಿದ್ದಾರೆ.

'ನಾವು ಚಿಕ್ಕವರಿರುವಾಗ ಮನೆಯಲ್ಲಿ ನಾನು ಸಂಜಯ್​ ಅವರ ಪೋಸ್ಟರ್​ ಇಟ್ಟುಕೊಂಡಿದ್ದರೆ, ನನ್ನ ತಂಗಿ ರಿಧಿಮಾ ಸಲ್ಮಾನ್​ ಖಾನ್​ ಪೋಸ್ಟರ್​ ಅನ್ನು ಇಟ್ಟುಕೊಂಡಿರುತ್ತಿದ್ದಳು. ಆಗಿನಿಂದಲೂ ಸಂಜಯ್​ ಸರ್​ ನನಗೆ ಮಾದರಿಯಾಗಿದ್ದರು. ಅಲ್ಲದೆ ಅವರು ನನ್ನ ಕುಟುಂಬಕ್ಕೂ ಬಹಳ ಹತ್ತಿರವಾಗಿದ್ದರು. ನನ್ನನ್ನು ಚಿಕ್ಕ ತಮ್ಮನಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ದುಬಾರಿ ಬೆಲೆಯ ಉಡುಗೊರೆ ನೀಡಿ ಹಾಳು ಮಾಡುತ್ತಿದ್ದರು. ನನ್ನ ಹುಟ್ಟು ಹಬ್ಬಕ್ಕೆ ಹಾರ್ಲೆ ಡೇವಿಡ್​ಸನ್​ ಬೈಕ್​ ನೀಡಿದ್ದರು' ಎಂದು ಹಳೇ ನೆನಪುಗಳು ಮೆಲುಕು ಹಾಕಿದ್ದಾರೆ ರಣಬೀರ್​.

'ಸಂಜಯ್​ ಅವರು ಕೊಡುತ್ತಿದ್ದ ದುಬಾರಿ ಉಡುಗೊರೆಗಳನ್ನು ನಾನು ಅಪ್ಪನಿಂದ ಮುಚ್ಚಿಡುತ್ತಿದೆ. ಆದರೆ ಹಾರ್ಲೆ ಕೊಟ್ಟಾಗ ಅದನ್ನುಮುಚ್ಚಿಡಲು ಸಾಧ್ಯವಾಗಲಿಲ್ಲ. ಆಗ ಅಪ್ಪ ಸಂಜಯ್​ಗೆ ಕರೆ ಮಾಡಿ ನನ್ನ ಮಗನಿಗೆ ದುಬಾರಿ ಉಡುಗೊರೆ ಕೊಟ್ಟು ನಿನ್ನಂತೆಯೇ ಮಾಡಬೇಡ ಎಂದು ಬೈದಿದ್ದರು. ಆದರೆ ಇಂದಿಗೂ ಅವರು ಕೊಟ್ಟಿದ್ದ ಬೈಕ್​ ನನಗೆ ಅತ್ಯಮೂಲ್ಯವಾದದ್ದು ' ಎಂದು ನೆನಪಿಸಿಕೊಂಡಿದ್ದಾರೆ ರಣಬೀರ್​.

 

 
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ