Video: ಕಿರಿಕಿರಿ ಮಾಡೀರಾ ಹುಷಾರ್​...! ಹೇಗೆ ಜಾಡಿಸ್ತಾರೆ ಗೊತ್ತಾ Rashmika Mandanna

ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಸಣ್ಣ ಪುಟ್ಟ ವಿಚಾರಗಳೂ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಈಗ ರಶ್ಮಿಕಾರ ಹಂಚಿಕೊಂಡಿರುವ ಈ ಲೆಟೆಸ್ಟ್​ ವಿಡಿಯೋಗಿಂತ ಹೆಚ್ಚಾಗಿ, ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಈಗ ಹೆಚ್ಚು ಸದ್ದು ಮಾಡುತ್ತಿದೆ.

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (National crush Rashmika Mandanna) ಈಗ ತಮ್ಮ ಸಿನಿಮಾಗಳ ಚಿತ್ರೀರಕಣಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಬಾಲಿವುಡ್​ ಚಿತ್ರಗಳು, ಮತ್ತೊಂದು ಕಡೆ ಟಾಲಿವುಡ್​ ಸಿನಿಮಾಗಳು. ಎರಡನ್ನೂ ಬ್ಯಾಲೆನ್ಸ್​ ಮಾಡುತ್ತಾ, ಹೈದರಾಬಾದ್​, ಮುಂಬೈ ಅಂತ ಓಡಾಡಿಕೊಂಡು ಇದ್ದಾರೆ. ಇದರ ನಡುವೆ ತಮ್ಮ ನಿತ್ಯದ ವರ್ಕೌಟ್​ (Fitness Video), ಮುದ್ದಿನ ಸಾಕು ನಾಯಿ ಔರಾ ಜತೆ ಸಮಯ ಕಳೆಯೋದನ್ನ ಮಾತ್ರ ಮರೆಯೋದಿಲ್ಲ ಕಿರಿಕ್​ ಬೆಡಗಿ.  ಇನ್ನು ಯಾರು ಎಷ್ಟೇ ಟ್ರೋಲ್​ ಮಾಡಿದರೂ ಈಗ ತಲೆ ಕೆಡಿಸಿಕೊಳ್ಳದ ಈ ನಟಿ ಆಗಾಗ ಟ್ರೋಲ್​ ಮಾಡುವವರಿಗೆ ಸರಿಯಾಗಿ ಪ್ರತಿಕ್ರಿಯೆ ಸಹ ಕೊಡುತ್ತಿರುತ್ತಾರೆ. ಈಗಲೂ ಸಹ ಅದನ್ನೇ ಮಾಡಿದ್ದಾರೆ ಕೊಡಗಿನ ಬೆಡಗಿ.

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಟಿಯಲ್ಲಿ ಒಬ್ಬರು. ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಸಣ್ಣ ಪುಟ್ಟ ವಿಚಾರಗಳೂ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಈಗ ರಶ್ಮಿಕಾರ ಹಂಚಿಕೊಂಡಿರುವ ಈ ಲೆಟೆಸ್ಟ್​ ವಿಡಿಯೋಗಿಂತ ಹೆಚ್ಚಾಗಿ, ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಈಗ ಹೆಚ್ಚು ಸದ್ದು ಮಾಡುತ್ತಿದೆ.




ರಶ್ಮಿಕಾ ಮಂದಣ್ಣ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಲೆಟೆಸ್ಟ್​​ ವಿಡಿಯೋದಲ್ಲಿ ಅವರು ಸಖತ್ತಾಗಿ ವರ್ಕೌಟ್ ಮಾಡುತ್ತಿದ್ದಾರೆ. ಕಿಕ್​ ಪ್ರಾಕ್ಟೀಸ್​ ಮಾಡುತ್ತಿರುವ ರಶ್ಮಿಕಾ, ಅದಕ್ಕೆ ತುಂಬಾ ಕ್ರೇಜಿ ಕ್ಯಾಪ್ಷನ್​ ಕೊಟ್ಟಿದ್ದಾರೆ. ನನಗೆ ತುಂಬಾ ಕಿರಿಕಿರಿಯಾಗಿದ್ದಾಗ ಇದನ್ನೇ ಮಾಡೋದು ಅಂತ ಬರೆದುಕೊಂಡಿದ್ದಾರೆ.

ಇನ್ನು, ರಶ್ಮಿಕಾ ಮಂದಣ್ಣ ತುಂಬಾ ಸಮಯದ ನಂತರ ತಮ್ಮ ವರ್ಕೌಟ್​ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಅವರ ಸ್ನೇಹಿತರು ತುಂಬಾ ತಮಾಷೆಯಾಗಿ ಕಮೆಂಟ್​ ಮಾಡುತ್ತಿದ್ದಾರೆ. ಹೌದು, ಈ ವಿಡಿಯೋ ನೋಡಿದ ನಂತರ ನಿಮ್ಮ ಸಿನಿಮಾದ ನಿರ್ದೇಶಕರು ರೀ-ಟೇಕ್ ಹೇಳೋದೇ ಇಲ್ಲ ಒಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Rashmika Mandannaರ ಈ ಮುದ್ದಾದ ಫೋಟೋ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ..!

ಇನ್ನು ರಶ್ಮಿಕಾ ಮಂದಣ್ಣ ಅವರ ಸಿನಿಮಾ ವಿಷಯಕ್ಕೆ ಬಂದರೆ, ಸಾಲು ಸಾಲು ಚಿತ್ರಗಳು ಇವರ ಕೈಯಲ್ಲಿವೆ. ಅವರು ಸದ್ಯ ತೆಲುಗು ಚಿತ್ರ ಆಡವಾಳ್ಳು ಮೀಕು ಜೋಹಾರುಲು ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್​ ಅವರ ಜತೆಗಿನ ಪುಷ್ಪ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಹೆಸರಿನ ಒಂದು ಹಾಡು ಸಹ ರಿಲೀಸ್​ ಆಗಿದೆ. ಈ ಸಿನಿಮಾ ಭಾಗಗಳಲ್ಲಿ ರಿಲೀಸ್​ ಆಗಲಿದೆ.

ಅಲ್ಲು ಅರ್ಜುನ್​ ಜೊತೆ ಇದೇ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅವರು, ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಪಾತ್ರದ ಪೋಸ್ಟರ್​ ರಿಲೀಸ್​ ಆದಾಗ ಅದನ್ನು ಕೆಲವರು ಟ್ರೋಲ್​ ಮಾಡಿದ್ದರು.

ಇದನ್ನೂ ಓದಿ: Rashmika Mandanna: ಅಮಿತಾಭ್​ ಬಚ್ಚನ್​ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ..!

ರಶ್ಮಿಕಾ ಮಂದಣ್ಣ ಅವರು ತಮ್ಮ ಬಾಲಿವುಡ್​ನಲ್ಲು 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಮಿಷನ್​ ಮಜ್ನು ಹಾಗೂ ಮತ್ತೊಂದು ಗುಡ್​ ಬೈ. ಮಿಷನ್​ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಅವರು ನಾಯಕನಾಗಿದ್ದಾರೆ. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರದ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಅಮಿತಾಭ್​ ಬಚ್ಚನ್​ ಅವರ ಜೊತೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅದರ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ.
Published by:Anitha E
First published: