ಬಾಲಿವುಡ್​ ಸ್ಪೈಡರ್​ ಮ್ಯಾನ್​: ರಣವೀರ್​ ಸಿಂಗ್​ ಸ್ಪೈಡಿ ಆಗಿದ್ದು ಯಾವಾಗ ಗೊತ್ತಾ?

news18
Updated:June 27, 2018, 8:33 AM IST
ಬಾಲಿವುಡ್​ ಸ್ಪೈಡರ್​ ಮ್ಯಾನ್​: ರಣವೀರ್​ ಸಿಂಗ್​ ಸ್ಪೈಡಿ ಆಗಿದ್ದು ಯಾವಾಗ ಗೊತ್ತಾ?
news18
Updated: June 27, 2018, 8:33 AM IST
ನ್ಯೂಸ್​ 18 ಕನ್ನಡ 

ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವುದರ ಜೊತೆ ಜೊತೆಗೆ ಸದಾ ಎಲ್ಲರನ್ನೂ ನಗಿಸುತ್ತಾ ಇರುವ ಬಿ-ಟೌನ್​ ನಟ ರಣವೀರ್​ ಸಿಂಗ್​ ಬಾಲಿವುಡ್​ನ ಸ್ಪೈಡರ್​ ಮ್ಯಾನ್​ ಅಂತೆ. ಹೌದು ರಣವೀರ್​ ಈಗಾಗಲೇ ಸ್ಪೈಡರ್​ ಮ್ಯಾನ್​ ಆಗಿದ್ದರಂತೆ. ಹೀಗೆಂದು ಹೇಳಿಕೊಂಡಿರುವುದು ಖುದ್ದು ರಣವೀರ್​ ಸಿಂಗ್​.

ರಣವೀರ್​ ಬಾಲ್ಯದಿಂದಲೂ ಮಾರ್ವೆಲ್​ ಹಾಗೂ ಡಿಸ್ನಿ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರಂತೆ. ಅದರ ಸೂಪರ್​ ಹೀರೊಗಳನ್ನು ಕಂಡರೆ ಅವರಿಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಅವರು ಶಾಲಾ ದಿನಗಳಲ್ಲಿ ಒಮ್ಮೆ ಸ್ಪೈಡರ್​ ಮ್ಯಾನ್​ ಪಾತ್ರವನ್ನೂ ಮಾಡಿದ್ದರೆಂದು ಅವರೇ ಹೇಳಿಕೊಂಡಿದ್ದಾರೆ.

'ಸ್ಪೈಡರ್​ಮ್ಯಾನ್ ವೇಶದಲ್ಲಿ ತರಲೆ ಮಾಡುವ ಮಕ್ಕಳನ್ನು ನೋಡಲು ತುಂಬಾ ಮಜಾ ಬರುತ್ತದೆ. ಹೀಗಾಗಿ ನಾನ ಉಶಾಲಾ ದಿನಗಳಲ್ಲಿ ಸಿಕ್ಕಾಪಟ್ಟೆ ತುಂಟನಾಗಿದ್ದೆ. ಅದಕ್ಕೆ ನನಗೆ ಆ ಪಾತ್ರವನ್ನು ನೀಡಿದ್ದರು' ಎಂದಿದ್ದಾರೆ ರಣವೀರ್​ ಸಿಂಗ್​.

'ಪದ್ಮಾವತ್​' ಸಿನಿಮಾದ ಯಶಸ್ಸಿನ ನಂತರ ಜೋಯಾ ಅಖ್ತರ್​ ಅವರ 'ಗಲಿ ಭಾಯಿ', ಹಾಗೂ ಕಬೀರ್​ ಖಾನ್​ ಅವರ '83' ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...