ಚಿತ್ರರಂಗದ ನಟ (Actor) ಮತ್ತು ನಟಿಯರು (Actress) ಶೂಟಿಂಗ್‌ನಿಂದ (Shooting) ಬಿಡುವು ದೊರೆತಾಗ ತಮ್ಮ ಸಹ ನಟ ಅಥವಾ ನಟಿಯ ಬಗ್ಗೆ ತಮಾಷೆ ಮಾಡುತ್ತಾ, ಯಾವುದಾದರೂ ಒಂದು ವಿಷಯದ ಬಗ್ಗೆ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುವುದನ್ನು ನಾವು ಅನೇಕ ಮೇಕಿಂಗ್ ವೀಡಿಯೋಗಳಲ್ಲಿ (Making Video) ನೋಡಿರುತ್ತೇವೆ. ಕೆಲವು ನಟ-ನಟಿಯರಂತೂ ತುಂಬಾನೇ ಒಳ್ಳೆಯ ಸ್ನೇಹಿತರು ಸಹ ಆಗಿರುತ್ತಾರೆ. ಸ್ವಲ್ಪ ಬಿಡುವು ಸಿಕ್ಕರೆ ಸಾಕು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಾ ತಮಾಷೆ ಮಾಡುತ್ತಿರುತ್ತಾರೆ.
ಇಲ್ಲಿಯೂ ಸಹ ಒಬ್ಬ ನಟಿ ಹಿಂದೊಮ್ಮೆ ಒಂದು ಸಂದರ್ಶನದಲ್ಲಿ ಕಾಣಿಸಿಕೊಂಡಾಗ ತಾವು ಒಬ್ಬ ನಟನ ಫೋನ್ ಅನ್ನು ಕದ್ದು, ಅದರಿಂದ ಇನ್ನೊಬ್ಬ ನಟಿಗೆ ಮೆಸೇಜ್ ಮಾಡಿದ್ದ ವಿಷಯವನ್ನು ನಿರೂಪಕಿಯ ಮುಂದೆ ಹೇಗೆ ಒಪ್ಪಿಕೊಳ್ಳಬೇಕಾಯಿತು ನೋಡಿ.
ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ಪ್ರಿಯಾಂಕಾ
ನಟಿ ಪ್ರಿಯಾಂಕಾ ಚೋಪ್ರಾ ಹೆಸರು ಇಡೀ ಜಗತ್ತಿಗೆ ಗೊತ್ತು ಅಂತ ಹೇಳಬಹುದು. ಪ್ರಸ್ತುತ ತನ್ನ ಮುಂಬರುವ ವೆಬ್ ಸಿರೀಸ್ ಸಿಟಾಡೆಲ್ ನ ಪ್ರಚಾರದಲ್ಲಿ ತೊಡಗಿರುವ ಪ್ರಿಯಾಂಕಾ, ವಿವಿಧ ಚಾಟ್ ಶೋಗಳಲ್ಲಿ ಕಾಣಿಸಿಕೊಂಡಾಗ ತಮ್ಮ ಸಿನಿ ಜೀವನದಲ್ಲಿ ನಡೆದ ಎಲ್ಲಾ ರೀತಿಯ ಘಟನೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿ ತಮ್ಮ ಬೋಲ್ಡ್ ಹೇಳಿಕೆಗಳಿಂದ ಅವರು ಹುಬ್ಬೇರಿಸುವಂತೆ ಮಾಡಿರುವುದು ನಮಗೆಲ್ಲಾ ಗೊತ್ತೇ ಇದೆ.
ಪ್ರಿಯಾಂಕಾ ಹಿಂದಿ ಚಲನಚಿತ್ರೋದ್ಯಮದಲ್ಲಿದ್ದಾಗ ಬಾಲಿವುಡ್ ನ ವಿವಾದಾತ್ಮಕ ನಟಿಯರಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಾಲಿವುಡ್ ನ ಜನಪ್ರಿಯ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ಸೇರಿದಂತೆ ಉದ್ಯಮದ ಪ್ರಮುಖ ಪುರುಷರೊಂದಿಗಿನ ಪ್ರೇಮ ಸಂಬಂಧಗಳಿಗಾಗಿ ನಟಿ ಆಗಾಗ್ಗೆ ಸುದ್ದಿಯಾಗುತ್ತಿದ್ದರು. ಅವರು ಡಿಸೆಂಬರ್ 2018 ರಲ್ಲಿ ಅಮೆರಿಕನ್ ಗಾಯಕ ನಿಕ್ ಜೊನಾಸ್ ಅವರನ್ನು ವಿವಾಹವಾದರು.
ನಟನ ಫೋನ್ ಕದ್ದು ಬೇರೊಬ್ಬ ನಟಿಗೆ ಮೆಸೇಜ್ ಕಳುಹಿಸಿದ್ರಂತೆ ದೇಸಿ ಗರ್ಲ್
ಇತ್ತೀಚೆಗೆ, ಸಿಮಿ ಗರೇವಾಲ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ಥ್ರೋಬ್ಯಾಕ್ ವೀಡಿಯೋದಲ್ಲಿ, ನಟಿ ರಾಣಿ ಮುಖರ್ಜಿಗೆ 'ಯಾರದೋ ಫೋನ್ ನಿಂದ ಮೆಸೇಜ್ ಕಳುಹಿಸಿದ್ದೇನೆ' ಎಂದು ಬಹಿರಂಗಪಡಿಸಿದ್ದಾರೆ.
ಸಿಮಿ ಗರೇವಾಲ್ ಪೀಸಿಯನ್ನು 'ಅವರ' ಫೋನ್ ಕದ್ದಿದ್ದೀರಾ ಎಂದು ಕೇಳುವುದರೊಂದಿಗೆ ಕ್ಲಿಪ್ ಪ್ರಾರಂಭವಾಯಿತು. ತನ್ನ ಬಗ್ಗೆ ಮಾಹಿತಿ ಸಿಮಿಗೆ ಹೇಗೆ ಗೊತ್ತಾಯಿತು ಅಂತ ಒಂದು ಕ್ಷಣ ಆಘಾತಕ್ಕೊಳಗಾದ ಪ್ರಿಯಾಂಕಾ ಅವರು "ಈ ಸುದ್ದಿ ನಿಮಗೆ ಹೇಗೆ ಗೊತ್ತಾಯಿತು" ಎಂದು ಸಿಮಿಯನ್ನು ಕೇಳಿದರು.
ಇದನ್ನೂ ಓದಿ: Ponniyin Selvan: ಮಣಿರತ್ನಂ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆ ರಚನೆ; ಹಾಡು ಕೇಳಿದ್ರೆ ನಿಮ್ಮ ದಿಲ್ ಖುಷ್
ವಿವರಗಳನ್ನು ಬಹಿರಂಗಪಡಿಸಿದ ಪ್ರಿಯಾಂಕಾ ಚೋಪ್ರಾ "ಅಭಿಷೇಕ್ ಬಚ್ಚನ್ ಮೊದಲು ನನ್ನ ಫೋನ್ ಕದ್ದಿದ್ದನು. ಆದ್ದರಿಂದ ನಾನು ಅದರ ಸೇಡು ತೀರಿಸಿಕೊಳ್ಳಲು ಬಯಸಿದೆ. ಅವನು ತನ್ನ ಮೊಬೈಲ್ ಅನ್ನು ಗಮನಿಸದೆ ಹಾಗೆಯೇ ಬಿಟ್ಟಿದ್ದನು. ಹಾಗಾಗಿ ನಾನು ಅವನ ಫೋನ್ ತೆಗೆದುಕೊಂಡು ಅದನ್ನು ಬಚ್ಚಿಟ್ಟೆ" ಎಂದು ಸ್ನೇಹಿತನಿಗೆ ಮಾಡಿದ್ದ ಕುಚೇಷ್ಟೆ ಬಗ್ಗೆ ಹೇಳಿದರು. ಆಗ ಇದನ್ನು ಕೇಳಿದ ಸಿಮಿ ಪೀಸಿಯನ್ನು ಸುಳ್ಳುಗಾರ್ತಿ ಅಂತ ಕರೆದರು.
ನಂತರ ಅಷ್ಟಕ್ಕೆ ಸುಮ್ಮನಿರದ ಸಿಮಿ ಪ್ರಿಯಾಂಕಾಗೆ ಅವರು ಯಾರಿಗೆ ಮೆಸೇಜ್ ಕಳುಹಿಸಿದ್ದೀರಿ ಅಂತ ಕೇಳಿಯೇ ಬಿಟ್ಟರು. ಆಗ ಪ್ರಿಯಾಂಕಾ ಅದನ್ನು ಬಹಿರಂಗಪಡಿಸದಿದ್ದರೂ, ರಾಣಿಗೆ ನೀವು ಯಾವ ಸಂದೇಶವನ್ನು ಕಳುಹಿಸಿದ್ದೀರಿ ಎಂದು ಸಿಮಿ ಖುದ್ದಾಗಿ ಕೇಳಿದರು, ಅದು ರಾಣಿ ಮುಖರ್ಜಿ ಎಂದು ನಾವು ಭಾವಿಸುತ್ತೇವೆ ಎಂದು ಸಹ ಸಿಮಿ ಹೇಳಿದರು.
ನಟಿಗೆ ಕಳುಹಿಸಿದ ಮೆಸೇಜ್ ನಲ್ಲಿ ಏನ್ ಬರೆದಿದ್ರು ಪ್ರಿಯಾಂಕಾ
ರಾಣಿಗೆ ಮಾಡಿದ ಮೆಸೇಜ್ ನಲ್ಲಿ ಏನ್ ಬರೆದಿದ್ರಿ ಅಂತ ಸಿಮಿ ಪ್ರಿಯಾಂಕಾಗೆ ನೇರವಾಗಿ ಕೇಳಿದರು. ಅದಕ್ಕೆ ಪೀಸಿ "ನಾನು ಮಾಡಿದ ಮೆಸೇಜ್ ನಲ್ಲಿ ಮಿಸ್ ಯು, ನೀವು ಹೇಗಿದ್ದೀರಿ? ನೀವು ಬಯಸುತ್ತೀರಾ...?" ಅಂತೆಲ್ಲಾ ಕೇಳಿದ್ದೆ” ಎಂದು ನಗುತ್ತಾ ಪ್ರಿಯಾಂಕಾ ಸಂದರ್ಶನದಲ್ಲಿ ಹೇಳಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ