Naga Chaitanya: ಈ ಸಿನಿಮಾ ರಿಲೀಸ್ ಆದಾಗ ನಾಗ ಚೈತನ್ಯ ಸಖತ್​ ಬೇಜಾರಾಗಿದ್ರಂತೆ! ಕಾರಣ ನೋಡಿ ಶಾಕ್​ ಆಗ್ತೀರಾ

ನಾಗ ಚೈತನ್ಯ 2009 ರಲ್ಲಿ ‘ಜೋಶ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಚಿತ್ರವು ಉತ್ತಮವಾಗಿಯೇ ಪ್ರಾರಂಭವಾಯಿತು ಮತ್ತು ಅದರ ಮೊದಲ ದಿನದಂದು ಉತ್ತಮ ಪ್ರೇಕ್ಷಕರನ್ನು ಹೊಂದಿತ್ತು, ಆದರೆ ಅದು ಅಂತಿಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುವಲ್ಲಿ ವಿಫಲವಾಯಿತು. ಇತ್ತೀಚಿನ ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಅವರು ಈ ಬಗ್ಗೆ ಮಾತನಾಡಿದ್ದಾರೆ ನೋಡಿ.

 ನಾಗ ಚೈತನ್ಯ

ನಾಗ ಚೈತನ್ಯ

  • Share this:
ತೆಲುಗಿನ ಜನಪ್ರಿಯ ನಟರಾದ ನಾಗ ಚೈತನ್ಯ (Naga Chaitanya) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಈಗಂತೂ ಇವರು ಟಾಲಿವುಡ್ ಸಿನೆಮಾಗಳಲ್ಲಿ ಮಿಂಚಿ, ಈಗ ಬಾಲಿವುಡ್ ಸಿನೆಮಾಗಳಲ್ಲಿಯೂ (Bollywood movies) ಸಹ ಅವರ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಲು ನಟ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಚಿತ್ರದ ಮೂಲಕ ಹಿಂದಿ ಚಲನಚಿತ್ರೋದ್ಯಮದಲ್ಲಿ ಪಾದಾರ್ಪಣೆ ಮಾಡಿರುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಹಲವಾರು ಸೂಪರ್ ಹಿಟ್ ತೆಲುಗು ಚಿತ್ರಗಳಲ್ಲಿ (Telugu Movies) ಕೆಲಸ ಮಾಡಿದ ನಟ ನಾಗ ಚೈತನ್ಯ ಅವರಿಗೆ ಅವರ ಚೊಚ್ಚಲ ತೆಲುಗು ಚಿತ್ರ ಬಿಡುಗಡೆಯಾದಾಗ ನಡೆದ ಕೆಲವು ಸಂಗತಿಗಳು ಮನಸ್ಸಿಗೆ ತುಂಬಾನೇ ಬೇಸರವನ್ನು (Hurt) ತಂದಿತ್ತಂತೆ.

ಜೋಶ್ ಸಿನೆಮಾದ ಬಗ್ಗೆ ಏನಂದ್ರು ನಟ ನಾಗ ಚೈತನ್ಯ
ನಾಗ ಚೈತನ್ಯ 2009 ರಲ್ಲಿ ‘ಜೋಶ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಚಿತ್ರವು ಉತ್ತಮವಾಗಿಯೇ ಪ್ರಾರಂಭವಾಯಿತು ಮತ್ತು ಅದರ ಮೊದಲ ದಿನದಂದು ಉತ್ತಮ ಪ್ರೇಕ್ಷಕರನ್ನು ಹೊಂದಿತ್ತು, ಆದರೆ ಅದು ಅಂತಿಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುವಲ್ಲಿ ವಿಫಲವಾಯಿತು. ಇತ್ತೀಚಿನ ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಅವರು ಈ ಬಗ್ಗೆ ಮಾತನಾಡಿದ್ದಾರೆ ನೋಡಿ.

ಇದನ್ನೂ ಓದಿ: Chiranjeevi: ಬೆಲೆ ಬಾಳುವ ಆಸ್ತಿ ಮಾರಾಟ ಮಾಡಿದ್ರಾ ಚಿರಂಜೀವಿ? 70 ಕೋಟಿಯ ಡೀಲ್?

ತಮ್ಮ ಚೊಚ್ಚಲ ಚಲನಚಿತ್ರದ ಶೋ ಮಧ್ಯದಲ್ಲಿ ಜನರು ಚಿತ್ರಮಂದಿರಗಳಿಂದ ಹೊರ ಬರುವುದನ್ನು ನೋಡಿದ ಒಂದು ಘಟನೆಯನ್ನು ನೆನಪಿಸಿಕೊಂಡರು. ಈ ಘಟನೆಯು ತನ್ನನ್ನು ತೀವ್ರವಾಗಿ ನೋವು ಮಾಡಿತ್ತು ಮತ್ತು ಅವರನ್ನು ತುಂಬಾನೇ ಭಯಭೀತರನ್ನಾಗಿ ಮಾಡಿತು ಎಂದು ನಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಸಿನೆಮಾ ಚಾಯ್ ಗೆ ಸಾಕಷ್ಟು ಪಾಠ ಕಲಿಸಿದ್ಯಂತೆ
"ನನ್ನ ಮೊದಲ ಚಿತ್ರ ಜೋಶ್ ಗಾಗಿ, ನಾನು ಚಿತ್ರಮಂದಿರಕ್ಕೆ ಹೋಗಿದ್ದೆ ಮತ್ತು ಸಹಜವಾಗಿ, ಅದು ಶುರುವಾದಾಗ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಆದರೆ ಅದು ತುಂಬಾ ದಿನಗಳ ಕಾಲ ಹಾಗೆಯೇ ಉತ್ತಮ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಯಿತು. ಚಿತ್ರದ ಮಧ್ಯೆದಲ್ಲಿ ಜನರು ಎದ್ದು ಹೊರ ಬರಲು ಪ್ರಾರಂಭಿಸಿದರು ಮತ್ತು ಅದು ನನ್ನ ಮನಸ್ಸಿಗೆ ತುಂಬಾನೇ ಬೇಸರ ತಂದಿತು. ನಾನು ಜನರನ್ನು ರಂಜಿಸಲು ಬಂದಿದ್ದೇನೆ ಮತ್ತು ಅದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲವಲ್ಲ' ಅಂತ ನನಗೆ ತುಂಬಾನೇ ಬೇಸರವಾಯಿತು. ಆ ಅಹಿತಕರವಾದ ಅನುಭವವು ನನ್ನನ್ನು ತುಂಬಾನೇ ಗಾಯಗೊಳಿಸಿತು, ಆದರೆ ಅದು ನನಗೆ ಸಾಕಷ್ಟು ಪಾಠವನ್ನು ಸಹ ಕಲಿಸಿತು” ಎಂದು ನಟ ಹೇಳಿದರು.

ಆ ಚಿತ್ರದ ನಂತರ, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ನೋಡಲು ಎಂದಿಗೂ ನಾನು ಚಿತ್ರಮಂದಿರಕ್ಕೆ ಹೋಗಿಲ್ಲ. ಏಕೆಂದರೆ ನನ್ನ ತಲೆಯಲ್ಲಿ ಆ ನೆನಪು ಇನ್ನೂ ಹಾಗೆಯೇ ಇದೆ, ಆದರೆ ನಾನು ಅದನ್ನು ಒಂದು ದಿನ ಮರೆಯಲು ಬಯಸುತ್ತೇನೆ" ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಇದನ್ನೂ ಓದಿ: Naga Chaitanya: ಈ ನಟ ಸಿಕ್ಕಾಪಟ್ಟೆ ಪೋಲಿಯಂತೆ; ಹುಡ್ಗಿ ಜೊತೆ ರೊಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದರಂತೆ ನಾಗ ಚೈತನ್ಯ

ನಾಗ ಚೈತನ್ಯ ಅವರು ತಮ್ಮ ಚಿತ್ರ ಬಿಡುಗಡೆಯಾದ ದಿನದಂದು ಚಿತ್ರಮಂದಿರಗಳಿಗೆ ಭೇಟಿ ನೀಡುವುದಿಲ್ಲ. ಏಕೆಂದರೆ ಅವರಿಗೆ 'ತೀವ್ರ ಆತಂಕದ ಸಮಸ್ಯೆಗಳು' ಇವೆ ಎಂದು ಬಹಿರಂಗಪಡಿಸಿದರು. "ಬಹಳಷ್ಟು ಜನರು ಮೊದಲ ದಿನ ಅವರ ಚಿತ್ರವನ್ನು ನೋಡಲು ಹೋಗುತ್ತಾರೆ. ನಾನು ಈ ವಿಷಯದಲ್ಲಿ ತುಂಬಾ ನೊಂದಿದ್ದೇನೆ ಮತ್ತು ಚಿತ್ರ ಬಿಡುಗಡೆಯಾದ ದಿನದಂದು ನನಗೆ ತೀವ್ರ ಆತಂಕದ ಸಮಸ್ಯೆಗಳಿವೆ” ಎಂದು ನಟ ಹೇಳಿದರು.

ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ 
ನಟ ನಾಗ ಚೈತನ್ಯ ಇತ್ತೀಚೆಗೆ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ಇದು ಟಾಮ್ ಹ್ಯಾಂಕ್ಸ್ ಅವರ 1994 ರ ಮೆಚ್ಚುಗೆ ಪಡೆದ ಚಲನಚಿತ್ರ ಫಾರೆಸ್ಟ್ ಗಂಪ್ ನ ಹಿಂದಿ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ನಟ ಅಮೀರ್ ಖಾನ್, ನಟಿ ಕರೀನಾ ಕಪೂರ್ ಖಾನ್ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Published by:Ashwini Prabhu
First published: