Meghana Raj: ಚಿರಂಜೀವಿ ಸರ್ಜಾ ಕೊನೆಯದಾಗಿ ಮೇಘನಾ ರಾಜ್​ಗೆ ಹೇಳಿದ್ದೇನು? ಚಿರು ನೆನೆದು ನಟಿ ಕಣ್ಣೀರು!

ಸಂದರ್ಶನದಲ್ಲಿ ಮೇಘನಾ ರಾಜ್​ ಅವರು ಚಿರಂಜೀವಿ ಸರ್ಜಾಗೆ ಪ್ರಜ್ಞೆಗೆ ಬಂದಾಗ ಅವರ ಕೊನೆಯದಾಗಿ ಆಡಿದ ಮಾತುಗಳನ್ನು ಹಂಚಿಕೊಂಡರು. ಪ್ರೇರಣಾ ಮತ್ತು ನಾನು ಹಾಗೂ ಧ್ರುವ ಮನೆಯ ಹೊರಗೆ ಇದ್ದಾಗ ನನ್ನ ಮಾವ ಚಿರು ಕುಸಿದು ಬಿದ್ದಿದ್ದಾನೆ ಎಂದು ಕೂಗಿದ್ರು. ನಾವು ಚಿರುವನ್ನು ಎಂದಿಗೂ ಹಾಗೆ ನೋಡಿರಲಿಲ್ಲ ಎಂದು ಭಾವುಕರಾದ್ರು.

ನಟಿ ಮೇಘನಾ ರಾಜ್​

ನಟಿ ಮೇಘನಾ ರಾಜ್​

  • Share this:
ನಟ ಚಿರಂಜೀವಿ ಸರ್ಜಾ (Chiranjeevi Sarja) ಸಾವನ್ನಪ್ಪಿ ವರ್ಷಗಳೇ ಕಳೆದಿದೆ. ಆದ್ರೆ ಪತ್ನಿ ಮೇಘನಾ ರಾಜ್ (Meghana Raj)​ ಅವರು ಮಾತ್ರ ಇಂದಿಗೂ ಪತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಮೇಘನಾ, ಕೆಲ ದಿನಗಳ ಹಿಂದೆ ಕಲರ್ಸ್ ಕನ್ನಡದಲ್ಲಿ (Colors Kannada) ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ರು. ಹಿಂದೆ ಪ್ರೇಮಿಗಳ ದಿನದ  ವಿಶೇಷ ಸಂಚಿಕೆಯಲ್ಲಿ, ಮೇಘನಾಗೆ ಸಪ್ರೈಸ್​ ಗಿಫ್ಟ್​ಗಳನ್ನು ನೀಡಲಾಗಿತ್ತು. ಈ ವೇಳೆ ಚಿರಂಜೀವಿ ಸರ್ಜಾ ಅವರ ಹಳೆಯ ವೀಡಿಯೋವನ್ನು (Old Video) ಪ್ಲೇ ಮಾಡಿದ್ರು. ಚಿರು ವಿಶೇಷ ಸಂದೇಶದ ವಿಡಿಯೋ ಕೇಳ್ತಿದ್ದಂತೆ ಮೇಘನಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಹಿಂದೆ  ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದ ವೇಳೆ ಚಿರು ಕೊನೆಯ ಮಾತುಗಳನ್ನು ಮೇಘನಾ ರಾಜ್​ ನೆನೆದಿದ್ದಾರೆ. 

ಜೂನ್ 7, 2020ರಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಈ ವೇಳೆ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ರು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೇಘನಾಗೆ ಜೀವನವೇ ಕುಸಿದ ಅನುಭವವಾಗಿದೆ. ಬಳಿಕ ಸ್ವಲ್ಪ ಚೇತರಿಸಿಕೊಂಡ ನಟಿ, ಮಗ ರಾಯನ್​ ರಾಜ್​ ಹುಟ್ಟಿದ ಬಳಿಕ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.






ಭಯಾನಕ ದಿನ ನೆನೆದ ಮೇಘನಾ ರಾಜ್

ಹಿಂದೆ  ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್ ತನ್ನ ಗಂಡನ ಸಾವಿನ ಭಯಾನಕ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಅಂದು ಭಾನುವಾರವಾಗಿತ್ತು ಎಂದಿನಂತೆ ನಾವು ದಿನ ಆರಂಭಿಸಿದ್ದೆವು, ಪ್ರೇರಣಾ ಮತ್ತು ನಾನು ಹಾಗೂ ಧ್ರುವ ಮನೆಯ ಹೊರಗೆ ಇದ್ದಾಗ ನನ್ನ ಮಾವ ಚಿರು ಕುಸಿದು ಬಿದ್ದಿದ್ದಾನೆ ಎಂದು ಕೂಗಿದ್ರು. ನಾವು ಚಿರುವನ್ನು ಎಂದಿಗೂ ಹಾಗೆ ನೋಡಿರಲಿಲ್ಲ. ಅವರು ಪ್ರಜ್ಞೆಯನ್ನು ಕಳೆದುಕೊಂಡರು ಬಳಿಕ ಎಚ್ಚರಗೊಂಡರು ಎಂದು ಮೇಘನಾ ಹೇಳಿದ್ರು.

ಚಿರು ಕೊನೆಯದಾಗಿ ಮೇಘನಾಗೆ ಹೇಳಿದ್ದೇನು?

ಅದೇ ಸಂದರ್ಶನದಲ್ಲಿ ಮೇಘನಾ ರಾಜ್​ ಅವರು ಚಿರಂಜೀವಿ ಸರ್ಜಾಗೆ ಪ್ರಜ್ಞೆಗೆ ಬಂದಾಗ ಅವರ ಕೊನೆಯದಾಗಿ ಆಡಿದ ಮಾತುಗಳನ್ನು ಹಂಚಿಕೊಂಡರು. ನನಗೆ ನೆನಪಿರುವುದೇನೆಂದರೆ, ಅವರು ಮನೆಯಲ್ಲಿದ್ದಾಗ ಕುಸಿತು ಬಿದ್ದರು ಪ್ರಜ್ಞೆ ತಪ್ಪಿತ್ತು ಮತ್ತೆ ಪ್ರಜ್ಞೆ ಮರಳಿದ ಕ್ಷಣ ತಕ್ಷಣ ಅವರು ನನಗೆ ಹೇಳಿದರು, ಟೆನ್ಷನ್​ ಆಗ್ಬೇಡ ನನಗೆ ಏನು ಆಗಿಲ್ಲ ಎಂದು ಹೇಳಿದ್ದರು ಎಂದು ಮೇಘನಾ ರಾಜ್ ಹೇಳಿದ್ರು.



Published by:Pavana HS
First published: