• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Viral News: ಮರಾಠಿ ಕನ್ನಡವನ್ನು ಭೇಟಿಯಾದಾಗ ಏನಾಯ್ತು? ಭಾಷೆ ಅರ್ಥವಾಗದಿದ್ದರೂ ಭಾವನೆ ಅರ್ಥವಾಯ್ತು ನೋಡಿ!

Viral News: ಮರಾಠಿ ಕನ್ನಡವನ್ನು ಭೇಟಿಯಾದಾಗ ಏನಾಯ್ತು? ಭಾಷೆ ಅರ್ಥವಾಗದಿದ್ದರೂ ಭಾವನೆ ಅರ್ಥವಾಯ್ತು ನೋಡಿ!

ಅಯ್ಯೋ ಶ್ರದ್ಧ

ಅಯ್ಯೋ ಶ್ರದ್ಧ

ಅಯ್ಯೋ ಶ್ರದ್ಧಾರವರು ಟಕ್ ವಲಯದಲ್ಲಿ ನಡೆಯುತ್ತಿರುವ ಲೇ-ಆಫ್ ಗಳ ಬಗ್ಗೆ ಹಾಸ್ಯಸ್ಪದವಾಗಿ ಪಟಪಟನೆ ಮಾತಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  • Share this:

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅದನ್ನು ತಮ್ಮ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದು ಅಂತ ಹೇಳಿಕೊಂಡ ಕಾಮಿಡಿಯನ್ ಶ್ರದ್ಧಾ ಜೈನ್ (Jain) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ ಶ್ರದ್ಧಾ ಅವರು ಇತ್ತೀಚೆಗೆ ಯುಕೆ ಹಣಕಾಸು ಸಚಿವ ಜೆರೆಮಿ ಹಂಟ್ ಅವರನ್ನು ಸಹ ಭೇಟಿ ಮಾಡಿ ಅವರೊಡನೆ ಮಸಾಲ ದೋಸೆಯನ್ನು ತಿಂದಿದ್ದರು. ಶ್ರದ್ಧಾ ಅವರ ಕಾಮಿಡಿ ವೀಡಿಯೋ (Comedy Video) ಗಳಿಂದ ತುಂಬಾನೇ ಜನಪ್ರಿಯರಾಗಿದ್ದಾರೆ ಅಂತ ಹೇಳಬಹುದು. ಈ ಹಿಂದೆ ಅವರು ಟೆಕ್ ವಲಯದಲ್ಲಿ ನಡೆಯುತ್ತಿರುವ ಲೇ-ಆಫ್ ಗಳ ಬಗ್ಗೆ ಹಾಸ್ಯಸ್ಪದವಾಗಿ ಪಟಪಟನೆ ಮಾತಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿತ್ತು.


ಈಗ ಮತ್ತೊಮ್ಮೆ ಶ್ರದ್ದಾ ಅವರು ಹೊಸದಾದ ಒಂದು ಸ್ಕಿಟ್ ನೊಂದಿಗೆ ಬಂದಿದ್ದಾರೆ. ನಮ್ಮಲ್ಲಿ ಅನೇಕ ರೀತಿಯ ಭಾಷೆಗಳಿದ್ದು, ಈ ಭಾಷೆಗಳ ಅಡೆತಡೆಗಳು ಸಹ ತುಂಬಾನೇ ಇವೆ. ಆದರೂ ಸಹ ನಮ್ಮ ದೇಶದಲ್ಲಿ ಹೇಗೆ ಜನರು ಎದುರಿಗಿರುವವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಅಂತ ಒಂದು ಮೋಜಿನ ಸ್ಕಿಟ್ ಮಾಡಿ ಅದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ ಈ ಶ್ರದ್ದಾ.


ಶ್ರದ್ದಾ ಹಂಚಿಕೊಂಡಿರುವ ವೀಡಿಯೋದಲ್ಲಿ ಏನಿದೆ?


ಸಾಮಾಜಿಕ ಮಾಧ್ಯಮದಲ್ಲಿ 'ಅಯ್ಯೋ ಶ್ರದ್ಧಾ' ಎಂದು ಪ್ರಸಿದ್ಧರಾಗಿರುವ ಶ್ರದ್ದಾ ಜೈನ್ ಅವರು ಭಾಷೆಯ ಅಡೆತಡೆಗಳ ಹೊರತಾಗಿಯೂ ಭಾರತೀಯರು ಯಾವಾಗಲೂ ಪರಸ್ಪರ ಅರ್ಥಮಾಡಿಕೊಳ್ಳುವ ಮಾರ್ಗವನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬುದನ್ನು ಒತ್ತಿ ಹೇಳುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.


ಕನ್ನಡ ಮಾತನಾಡುವ ಮಹಿಳೆಯೊಬ್ಬರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದರೆ ಏನಾಗಬಹುದು ಎಂದು ಅವರು ಇದರಲ್ಲಿ ತೋರಿಸಿದ್ದಾರೆ ನೋಡಿ.


ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೋವನ್ನು ಹಂಚಿಕೊಂಡ ಅವರು "ಭಾರತೀಯರು ಯಾವಾಗಲೂ ಪರಸ್ಪರ ಅರ್ಥಮಾಡಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ” ಎಂದು ಶೀರ್ಷಿಕೆಯನ್ನು ಸಹ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ರೈಲಿನಲ್ಲಿ ರಾಜಾರೋಷವಾಗಿ ಸಿಗರೇಟ್ ಸೇದಿದ ಮಹಿಳೆ! ಪ್ರಯಾಣಿಕರು ಮಾಡಿದ್ದೇನು ನೋಡಿ


ತನ್ನ ಬ್ಯಾಗ್ ಕಳುವಾಗಿದೆ ಎಂದು ಮರಾಠಿ ಮಾತನಾಡುವ ಪೊಲೀಸರಿಗೆ ದೂರು ನೀಡುವ ಕನ್ನಡ ಮಹಿಳೆಯ ಪಾತ್ರವನ್ನು ಅವರು ನಿರ್ವಹಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.









View this post on Instagram






A post shared by Shraddha (@aiyyoshraddha)





ಏತನ್ಮಧ್ಯೆ, ಮರಾಠಿ ಪೊಲೀಸ್ ಅಧಿಕಾರಿಗೆ ಅವಳು ಏನು ಹೇಳುತ್ತಿದ್ದಾಳೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಕೆಲವು ಇಂಗ್ಲಿಷ್ ಪದಗಳು ಮತ್ತು ಗೂಗಲ್ ಅನುವಾದದ ಸಹಾಯದಿಂದ, ಇವರಿಬ್ಬರು ಅಂತಿಮವಾಗಿ ಪರಸ್ಪರರ ಪದಗಳನ್ನು ಅರ್ಥಮಾಡಿಕೊಳ್ಳುತ್ತಾರೆ.


ಸಿಕ್ಕಾಪಟ್ಟೆ ವೈರಲ್ ಆಗಿದೆ ಅಯ್ಯೋ ಶ್ರದ್ದಾ ವೀಡಿಯೋ..


ಈ ವೀಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಅವಳ ಪ್ರತಿಭೆ ಮತ್ತು ಕಾಮಿಕ್ ಟೈಮಿಂಗ್ ಬಗ್ಗೆ ವಿಸ್ಮಯಗೊಂಡಿದ್ದಾರೆ.


ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಯಾರಾದರೂ ಈ ನಟಿಯ ಮೇಲೆ ಒಂದು ನೆಟ್‌ಫ್ಲಿಕ್ಸ್ ಸಿರೀಸ್ ಮಾಡಿ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು "ವೀಡಿಯೋ ಮಾತ್ರ ತುಂಬಾನೇ ಚೆನ್ನಾಗಿದೆ, ಇಂಗ್ಲಿಷ್ ಭಾಷೆ ಇಲ್ಲಿ ಪೋಷಕ ನಟ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳು ಇಲ್ಲಿ ಹೀರೋಗಳು” ಎಂದು ಕಾಮೆಂಟ್ ಮಾಡಿದ್ದಾರೆ.


ಮೂರನೆಯ ಬಳಕೆದಾರರು "ಓಹ್ ದೇವರೇ.. ಇಂತಹ ಒಳ್ಳೆಯ ಐಡಿಯಾ ಎಲ್ಲಿ ಸಿಕ್ತು ನಿಮಗೆ” ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ನಾಲ್ಕನೆಯವರು "ನೀವು ಸೂಪರ್ ಕಣ್ರೀ.. ಇಷ್ಟವಾದ್ರಿ ನೀವು" ಅಂತ ಹೇಳಿದ್ದಾರೆ.




"ನನಗೆ ಎರಡೂ ಭಾಷೆಗಳು ಅರ್ಥವಾಗದಿದ್ದರೂ, ನೀವು ನಟಿಸುವುದನ್ನು ನೋಡುವುದು ತುಂಬಾ ಮಜಾ ನೀಡಿದೆ" ಎಂದು ಮತ್ತೊಬ್ಬರು ಹೇಳಿದರು.


“ನಿಮ್ಮ ಸ್ಕ್ರಿಪ್ಟ್, ನಟನೆ, ಭಾಷೆ, ಉಚ್ಛಾರಣೆ ಮತ್ತು ಅಭಿವ್ಯಕ್ತಿಗಳು ವೀಡಿಯೋದಲ್ಲಿ ಎದ್ದು ಕಾಣುತ್ತಿವೆ. ಇದು ಏಕ-ಮಹಿಳಾ ಪ್ರದರ್ಶನವಾಗಿದೆ ಮತ್ತು ಇದು ನಿಜವಾಗಿಯೂ ಎರಡು ವಿಭಿನ್ನ ಪಾತ್ರಗಳು ಎಂದು ಜನರು ನಂಬುವಂತೆ ಮಾಡುತ್ತದೆ” ಎಂದು ಇನ್ನೊಬ್ಬರು ಶ್ರದ್ದಾರನ್ನು ಹೊಗಳಿ ಬರೆದಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು