ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಸದ್ಯ ಬಾಲಿವುಡ್ನ (Bollywood) ಬ್ಯುಸಿಯೆಸ್ಟ್ ನಟಿಗಳಲ್ಲಿ ಒಬ್ಬರು. ತಮ್ಮ ಮನಮೋಹಕ ಅಭಿನಯ ಮತ್ತು ತಮ್ಮ ಹಾಟ್ ಲುಕ್ಕಿನಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. 2009ರಲ್ಲಿ 'ಅಲ್ಲಾದ್ದೀನ್' (Aladdin) ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಜಾಕ್ವೆಲಿನ್ ಅಂದಿನಿಂದ, ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ 13 ವರ್ಷಗಳ ಸುದೀರ್ಘ ಬಾಲಿವುಡ್ ಪಯಣದಲ್ಲಿ, ಜಾಕ್ವೆಲಿನ್ ಸಿನಿಮಾ ಜತೆಗೆ ತಮ್ಮ ಲವ್ ಅಫೇರ್ಗಳ ವಿಷಯವಾಗಿಯೂ ಸದಾ ಸುದ್ದಿಯಲ್ಲಿದ್ದಾಳೆ. ಲವ್, ಅಫೇರ್, ಗಾಸಿಪ್ಗಳು ಜಾಕ್ವೆಲಿನ್ ಸುತ್ತಾ ಸುತ್ತುತ್ತಿರುತ್ತವೆ. ನಿರ್ದೇಶಕ ಸಾಜಿದ್ ಖಾನ್ ಅವರೊಂದಿಗಿನ (Relationship) ಸಂಬಂಧ, ಸುಕೇಶ್ ಚಂದ್ರಶೇಖರ್ (Sukesh Chandrasekhar) ಅವರೊಂದಿಗಿನ ಕೆಲವು ಫೋಟೋಗಳು ಇತ್ತೀಚೆಗೆ ಭಾರಿ ವೈರಲ್ ಆಗಿದ್ದವು. ಇಷ್ಟೇ ಅಲ್ಲದೇ ಇತರ ಸಹ-ನಟರೊಂದಿಗೆ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ತಳುಕು ಹಾಕಿಕೊಂಡಿತ್ತು.
ಬಾಲಿವಡ್ನಲ್ಲಿ ಲವ್, ಅಫೇರ್, ಬ್ರೇಕಪ್ ಎಲ್ಲಾ ಕಾಮನ್ ಆಗಿಬಿಟ್ಟಿದೆ. ಅದರ ಬಗ್ಗೆ ಕೆಲವು ನಟ-ನಟಿಯರು ಮುಚ್ಚು ಮರೆ ಮಾಡದೇ ಓಪನ್ ಆಗಿ ವ್ಯಕ್ತಪಡಿಸುತ್ತಾರೆ. ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಬಾಲಿವುಡ್ಗೆ ಬರುವ ಮೊದಲಿನ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.
ಹಳೆಯ ಲವ್ ಸ್ಟೋರಿ ಬಗ್ಗೆ ಶ್ರೀಲಂಕಾ ಬ್ಯೂಟಿ ಮಾತು
ಜಾಕ್ವೆಲಿನ್ ಫರ್ನಾಂಡೀಸ್ ಸುತ್ತಾ ಹಲವು ಗಾಸಿಪ್ಗಳು ಸುತ್ತಾಡುತ್ತಲೇ ಇರುತ್ತವೆ. ಮೊನ್ನೆ ತಾನೇ ರಾಜಕಾರಣಿಯ ಬಂಧು ಎಂದು ಹೇಳಿಕೊಂಡು ನೂರಾರು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜತೆ ಜಾಕಲಿನ್ ಫರ್ನಾಂಡಿಸ್ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುವುದಕ್ಕೆ ಸಾಕ್ಷಿಯಾಗಿ ಫೋಟೋವೊಂದು ಸಖತ್ ವೈರಲ್ ಆಗಿತ್ತು.ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡೀಸ್ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡಿತ್ತು.
ಇದನ್ನೂ ಓದಿ: Jacqueline Fernandez: ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಜಾಕಲಿನ್ ಔಟ್.. ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..!
ಲವ್ವಿ-ಡವ್ವಿ
ಇದೀಗ ಜಾಕ್ವೆಲಿನ್ ಮತ್ತೊಂದು ಗಾಸಿಪ್ಗೆ ಗುರಿಯಾಗಿದ್ದಾರೆ. ಶ್ರೀಲಂಕಾ ಮೂಲದ ಬ್ಯೂಟಿ ಬಾಲಿವುಡ್ಗೆ ಬರುವ ಮುನ್ನ ಬಹ್ರೇನ್ ರಾಜಕುಮಾರನೊಂದಿಗೆ ಲವ್ವಿ-ಡವ್ವಿ ನಡೆಸುತ್ತಿದ್ದರು ಎಂಬುದರ ಬಗ್ಗೆ ಗುಸುಗುಸು ಕೇಳಿಸಿತ್ತು. ಇದರ ಬಗ್ಗೆ ಜಾಕ್ವೆಲಿನ್ ಸ್ಪಷ್ಟಪಡಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ಗೆ ಕಾಲಿಡುವ ಮೊದಲು ಬಹ್ರೇನ್ ರಾಜಕುಮಾರ ಶೇಖ್ ಹಸನ್ ಬಿನ್ ರಶೀದ್ ಅಲ್ ಖಲೀಫಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ. 2 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2011ರಲ್ಲಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ ನಡೆದ ಸಂದರ್ಶನದಲ್ಲಿ, ಜಾಕ್ವೆಲಿನ್ಗೆ ಪ್ರಿನ್ಸ್ನೊಂದಿಗಿನ ಸಂಬಂಧದ ಬಗ್ಗೆ ಕೇಳಲಾಗಿತ್ತು.
ನಮ್ಮ ದಾರಿಯಲ್ಲಿ ಕೆಲಸ
ಅದಕ್ಕೆ ಉತ್ತರಿಸಿದ ಜಾಕ್ವೆಲಿನ್ ನಾವು ಚಿಕ್ಕವರಿದ್ದಾಗ ಇಬ್ಬರೂ ಲವ್ ಮಾಡುತ್ತಿದ್ದೆವು, ಈಗ ನಾವಿಬ್ಬರು ನಮ್ಮ-ನಮ್ಮ ದಾರಿಯಲ್ಲಿ ಕೆಲಸ ಮಾಡಿಕೊಂಡು ಖುಷಿಯಾಗಿದ್ದೇವೆ. ಈಗ ಶೇಖ್ ಹಸನ್ಗೆ ಮದುವೆಯಾಗಿದೆ ಎಂದು ಓಪನ್ ಆಗಿ ತಮ್ಮ ಹಿಂದಿನ ಸಂಬಂಧದ ಬಗ್ಗೆ ಜಾಕ್ವೆಲಿನ್ ಮನಬಿಚ್ಚಿ ಮಾತನಾಡಿದ್ದರು.
ಜಾಕ್ವೆಲಿನ್ ಫರ್ನಾಂಡೀಸ್ ಅಲ್ಲಾವುದ್ದೀನ್, ಹೌಸ್ ಫುಲ್, ಹೌಸ್ ಫುಲ್-2, ರೇಸ್-2, ಕಿಕ್, ಸಾಹೋ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Jacqueline Fernandez: ಅಯ್ಯೋ.. ಇದ್ದಕಿದ್ದ ಹಾಗೇ ಏನಾಯ್ತು ಈ ನಟಿಗೆ? ನೆಮ್ಮದಿಗಾಗಿ ಜಾಕಲಿನ್ ಏನ್ ಮಾಡ್ತಿದ್ದಾರೆ ನೋಡಿ..!
ಸದ್ಯ ಬಾಲಿವುಡ್ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಜಾಕ್ವೆಲಿನ್ ಅಕ್ಷಯ್ ಕುಮಾರ್ಗೆ ನಾಯಕಿಯಾಗಿ ಬಚ್ಚನ್ ಪಾಂಡೆ ಮತ್ತು ರಾಮ್ ಸೇತು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಅಟ್ಯಾಕ್ ಚಿತ್ರದಲ್ಲಿ ಜಾನ್ ಅಬ್ರಹಾಂ ಮತ್ತು ಸರ್ಕಸ್ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದಲ್ಲಿ ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್ ಕಾಣಿಸಿಕೊಳ್ಳಲ್ಲಿದ್ದಾರೆ. 2022ರಲ್ಲಿ ಜಾಕ್ವೆಲಿನ್ ಆಭಿನಯದ ಹಲವು ಚಿತ್ರಗಳು ತೆರೆಗೆ ಬರಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ