• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Anupam Kher: ನಾನು ಕಿರಣ್‌ಳನ್ನು ಭೇಟಿಯಾಗಿದ್ದಾಗ ಆಕೆ ದೊಡ್ಡ ಸ್ಟಾರ್ ಆಗಿದ್ದಳು; ಪತ್ನಿ ಬಗ್ಗೆ ನಟ ಅನುಪಮ್‌ ಖೇರ್‌ ಮಾತು

Anupam Kher: ನಾನು ಕಿರಣ್‌ಳನ್ನು ಭೇಟಿಯಾಗಿದ್ದಾಗ ಆಕೆ ದೊಡ್ಡ ಸ್ಟಾರ್ ಆಗಿದ್ದಳು; ಪತ್ನಿ ಬಗ್ಗೆ ನಟ ಅನುಪಮ್‌ ಖೇರ್‌ ಮಾತು

ಅನುಪಮ್​ ಖೇರ್​ ಮತ್ತು ಕಿರಣ್​ ಖೇರ್​

ಅನುಪಮ್​ ಖೇರ್​ ಮತ್ತು ಕಿರಣ್​ ಖೇರ್​

ಅನುಪಮ್ ಖೇರ್, ಇತ್ತೀಚಿನ ಸಂದರ್ಶನವೊಂದರಲ್ಲಿ, ತಾನು ಮತ್ತು ಪತ್ನಿ ಕಿರಣ್ ಖೇರ್ ಹೇಗೆ ಭೇಟಿಯಾದರು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

  • Share this:

ಬಾಲಿವುಡ್‌ನಲ್ಲಿ (Bollywood) ನಟ ಅನುಪಮ್ ಖೇರ್ (Anupam Kher) ತಮ್ಮ ಸರಳವಾದ ನಟನೆಯಿಂದ ಮತ್ತು ತಮ್ಮ ನೇರವಾದ ಮಾತುಗಳಿಂದ ತುಂಬಾನೇ ಜನಪ್ರಿಯವಾದವರು. ತಮ್ಮ ನಟನೆಯಿಂದ ಮತ್ತು ವ್ಯಕ್ತಿತ್ವದಿಂದ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ಈ ನಟನ ಬದುಕು ತುಂಬಾನೇ ಆಸಕ್ತಿದಾಯಕವಾಗಿದೆ. ಇವರ ಅಭಿಮಾನಿಗಳಿಗೆ ನಟ ಅನುಪಮ್ ಅವರ ಮದುವೆ ಹೇಗೆ ಆಯಿತು ಮತ್ತು ಪತ್ನಿ ಕಿರಣ್ ಅವರನ್ನು ಎಲ್ಲಿ ಭೇಟಿಯಾದರು ಅಂತೆಲ್ಲಾ ತಿಳಿದುಕೊಳ್ಳಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ?


ನಟ ಅನುಪಮ್ ಖೇರ್ ಮತ್ತು ಪತ್ನಿ ಕಿರಣ್ ಖೇರ್ ಇಬ್ಬರು ಮದುವೆಯಾಗುವುದಕ್ಕೂ ಮುಂಚೆಯಿಂದಲೇ ಪರಿಚಿತರು ಅಂತ ಅನೇಕರಿಗೆ ತಿಳಿದಿದೆ. ಆದರೆ ಅಭಿಮಾನಿಗಳಿಗೆ ಇವರಿಬ್ಬರ ಬಗ್ಗೆ ತಿಳಿಯದೆ ಇರುವ ವಿಚಾರಗಳು ಸಹ ಸಾಕಷ್ಟಿವೆ.


1985 ರಲ್ಲಿ ಮದುವೆಯಾದ್ರಂತೆ ಅನುಪಮ್ ಖೇರ್ ಮತ್ತು ಕಿರಣ್ ಖೇರ್


ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಇಬ್ಬರು 1985 ರಲ್ಲಿ ವಿವಾಹವಾದರು ಮತ್ತು ವೈವಾಹಿಕ ಜೀವನದಲ್ಲಿ ಎಲ್ಲಾ ರೀತಿಯ ಏಳು-ಬೀಳುಗಳಲ್ಲಿ ಇವರಿಬ್ಬರು ಜೊತೆಗಿದ್ದರು. ಈಗ ಹೊಸ ಸಂದರ್ಶನದಲ್ಲಿ, ನಟ ಅನುಪಮ್ ಅವರು ತಮಗೂ ಮತ್ತು ತಮ್ಮ ಪತ್ನಿ ಕಿರಣ್‌ಗೂ ಮದುವೆಗೂ ಮುಂಚೆ ಯಾವುದೇ ಸಂಬಂಧವಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು, ನಟಿ ಕಿರಣ್ ಖೇರ್ ತನ್ನ ಮೊದಲ ಪತಿಯೊಂದಿಗೆ ಬೇರ್ಪಟ್ಟ ನಂತರವೇ ಇವರಿಬ್ಬರು ಮದುವೆಯಾಗಿದ್ದಂತೆ.


ಇದನ್ನೂ ಓದಿ: ಬಾಲ್ಯದಲ್ಲೇ ನಟಿಯಾಗುವ ಕಳೆಯಿತ್ತು ಅನುಷ್ಕಾ ಶರ್ಮಾಗೆ, ಕ್ಯೂಟ್ ಫೋಟೋಸ್ ನೋಡಿ!


ಅನುಪಮ್ ಖೇರ್ ಅವರು ಕಿರಣ್ ಖೇರ್ ಅವರನ್ನು ಮೊದಲ ಬಾರಿ ಭೇಟಿಯಾದಾಗ ಕಿರಣ್ ದೊಡ್ಡ ಸ್ಟಾರ್ ಆಗಿದ್ದರಂತೆ ಎಂದು ಅವರು ಬಹಿರಂಗಪಡಿಸಿದ್ದಾರೆ.


ನಟ ಅನುಪಮ್ ಮತ್ತು ನಟಿ ಕಿರಣ್ ಇಬ್ಬರು ಮದುವೆಯಾದದ್ದು ಹೇಗೆ ನೋಡಿ


ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ನಟ ಅನುಪಮ್ ಖೇರ್ ತಮ್ಮ ಪ್ರೇಮಕಥೆಯನ್ನು ಬಿಚ್ಚಿಟ್ಟರು. "ಕಿರಣ್ ಆಗಲೇ ದೊಡ್ಡ ಸ್ಟಾರ್ ಆಗಿದ್ದಳು. ಆಕೆ ಚಿತ್ರಗಳಲ್ಲಿ ಮತ್ತು ಥಿಯೇಟರ್ (ನಾಟಕ/ರಂಗಭೂಮಿ) ಗಳಲ್ಲಿ ಸಹ ಅಭಿನಯಿಸುತ್ತಿದ್ದಳು. ಆಕೆ ಎಂ.ಎ ಸ್ನಾತಕೋತ್ತರ ಪದವಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದವರು. ನಾನು ಅವಳನ್ನು ಮೊದಲ ಬಾರಿಗೆ ಚಂಡೀಘಡ್ ದಲ್ಲಿ ಭೇಟಿಯಾದೆ" ಅಂತ ಅನುಪಮ್ ಹೇಳಿದರು.


ಅನುಪಮ್​ ಖೇರ್​ ಮತ್ತು ಕಿರಣ್​ ಖೇರ್​


"ಆಕೆಗೆ ಆವಾಗ ಸಿಕಂದರ್ ಖೇರ್ ಅವರ ಜೊತೆ ಮದುವೆಯಾಗಿತ್ತು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವು ಮತ್ತು ನಾವು ಒಟ್ಟಿಗೆ ಚಿತ್ರಗಳನ್ನು ಸಹ ಮಾಡಿದ್ದೇವು. ನಂತರ, ಅಕೆಯ ಮೊದಲನೇ ಮದುವೆಯಲ್ಲಿ ಸಮಸ್ಯೆ ಆಗಿದ್ದರಿಂದ, ಆಕೆ ಮೊದಲ ಗಂಡನಿಂದ ಬೇರ್ಪಟ್ಟಳು. ಅದರ ನಂತರವಷ್ಟೆ ನಾವಿಬ್ಬರೂ ಮದುವೆಯಾದೆವು ಮತ್ತು ನಂತರ ವಿಷಯಗಳು ಬದಲಾಗಲು ಪ್ರಾರಂಭಿಸಿದವು. ಆದರೆ ನಾವು ಇವತ್ತಿಗೂ ಉತ್ತಮ ಸ್ನೇಹಿತರಾಗಿ ಉಳಿದಿದ್ದೇವೆ” ಅಂತ ನಟ ಹೇಳಿದರು.


ಈ ವಿಚಾರಕ್ಕೆ ಭಯ ಪಡ್ತಾರಂತೆ ಅನುಪಮ್


ಅನುಪಮ್ ಖೇರ್ ಅವರು ಹೆಚ್ಚು ಭಯಪಡುವ ವಿಷಯಗಳ ಬಗ್ಗೆಯೂ ಸಹ ಮಾತನಾಡಿದರು. "ನನಗೆ ಈ ಸ್ಮರಣೆಯನ್ನು ಕಳೆದುಕೊಳ್ಳುವ ಭಯ ತುಂಬಾನೇ ಜಾಸ್ತಿ ಇದೆ. ವ್ಯಕ್ತಿಗೆ ಸ್ಮರಣೆ ಇಲ್ಲದಿದ್ದರೆ, ಅವರಲ್ಲಿ ಇನ್ನೇನು ಉಳಿದಿರುತ್ತದೆ. ದಿಲೀಪ್ ಕುಮಾರ್ ಅವರು ತಮ್ಮ ನೆನಪಿನಶಕ್ತಿಯನ್ನು ಕಳೆದುಕೊಂಡಿದ್ದರು. ಅವರು ತುಂಬಾನೇ ಅದ್ಭುತ ವ್ಯಕ್ತಿ, ಅದ್ಭುತ ಕಥೆಗಾರ, ಅನೇಕ ವಿಷಯಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ವ್ಯಕ್ತಿಗೆ ಹಾಗಾಗಿತ್ತು” ಅಂತ ಅನುಪಮ್ ಹೇಳಿದರು.
"ನನಗೆ ಕೆಲಸವಿಲ್ಲದಿದ್ದಾಗ, ನಾನು ಅದ್ಭುತ ನಟ ಎಂದು ನನಗೆ ತಿಳಿದಿತ್ತು. ಈ ಆತ್ಮವಿಶ್ವಾಸವು ಶಿಕ್ಷಣದಿಂದ ಬರುತ್ತದೆ. ನಾನು ಚೆನ್ನಾಗಿ ಓದಿದ ವ್ಯಕ್ತಿ. ನಾನು ನಟನಾ ಶಾಲೆಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ಅದ್ಭುತ ನಟ ಎಂದು ನನಗೆ ಯಾವಾಗಲೂ ತಿಳಿದಿತ್ತು. ನನ್ನ ಬಳಿ 14,000 ಪುಸ್ತಕಗಳ ಸಂಗ್ರಹವಿದೆ. ನೀವು ಜ್ಞಾನವನ್ನು ಸಂಪಾದಿಸಿದರೆ, ನೀವು ಯಾವುದೇ ರೀತಿಯ ವೈಫಲ್ಯಗಳಿಗೆ ಹೆದರುವುದಿಲ್ಲ" ಎಂದು ಅವರು ಹೇಳಿದರು.


Story link: Anupam Kher says he had ‘no connection’ with Kirron Kher: She was a star already, I was a simple village boy - India Today


Srinivas Reddy

First published: