• Home
 • »
 • News
 • »
 • entertainment
 • »
 • Genelia D'Souza: ಕ್ಯೂಟ್ ನಟಿ ಜೆನಿಲಿಯಾಗೆ ವಯಸ್ಸೇ ಆಗಲ್ವಾ? ಫಿಟ್ನೆಸ್ ಫ್ರೀಕ್ ಇವರು

Genelia D'Souza: ಕ್ಯೂಟ್ ನಟಿ ಜೆನಿಲಿಯಾಗೆ ವಯಸ್ಸೇ ಆಗಲ್ವಾ? ಫಿಟ್ನೆಸ್ ಫ್ರೀಕ್ ಇವರು

ನಟಿ ಜೆನಿಲಿಯಾ ಕ್ಯೂಟ್. ಅವರು ಇಬ್ಬರು ಮಕ್ಕಳ ತಾಯಿ. ಆದರೆ ಅವರ ಲುಕ್ ನೋಡಿದರೆ ಇದನ್ನು ನಂಬೋದು ಕಷ್ಟ. ಇವರ ಫಿಟ್ನೆಸ್ ಸೀಕ್ರೆಟ್ ಗೊತ್ತಾ?

ನಟಿ ಜೆನಿಲಿಯಾ ಕ್ಯೂಟ್. ಅವರು ಇಬ್ಬರು ಮಕ್ಕಳ ತಾಯಿ. ಆದರೆ ಅವರ ಲುಕ್ ನೋಡಿದರೆ ಇದನ್ನು ನಂಬೋದು ಕಷ್ಟ. ಇವರ ಫಿಟ್ನೆಸ್ ಸೀಕ್ರೆಟ್ ಗೊತ್ತಾ?

ನಟಿ ಜೆನಿಲಿಯಾ ಕ್ಯೂಟ್. ಅವರು ಇಬ್ಬರು ಮಕ್ಕಳ ತಾಯಿ. ಆದರೆ ಅವರ ಲುಕ್ ನೋಡಿದರೆ ಇದನ್ನು ನಂಬೋದು ಕಷ್ಟ. ಇವರ ಫಿಟ್ನೆಸ್ ಸೀಕ್ರೆಟ್ ಗೊತ್ತಾ?

 • Share this:

  ಈ ನಟ ನಟಿಯರು (Actress) ನೋಡೋದಕ್ಕೆ ಸುಂದರವಾಗಿರ್ತಾರೆ. ಹೊಳೆಯುವ ತ್ವಚೆ, ಬೊಜ್ಜಿಲ್ಲದ ಸಣ್ಣನೆಯ ದೇಹ, ಮಿನುಗುವ ಕೂದಲು ಹೀಗೆ ಫಳ ಫಳ ಹೊಳೆಯುತ್ತಿರುತ್ತಾರೆ. ಆದ್ರೆ ಅವರ ಈ ಸೌಂದರ್ಯ (Beauty) ಕೂತು ತಿನ್ನೋದ್ರಿಂದ ಬರೋದಿಲ್ಲ. ಇದಕ್ಕಾಗಿ ಅವರೂ ಕಷ್ಟ ಪಡ್ತಾರೆ. ಸಾಕಷ್ಟು ವ್ಯಾಯಾಮ ಮಾಡ್ತಾರೆ. ಹಿತ ಮಿತವಾಗಿ ತಿಂತಾರೆ. ಅಂದಾಗ ಮಾತ್ರ ಇಂಥ ಸೌಂದರ್ಯ ಪಡೆಯೋಕೆ ಸಾಧ್ಯವಾಗುತ್ತೆ. ಇನ್ನು ನಟಿ ಜೆನಿಲಿಯಾ (Genelia D'Souza) ಎವರ್‌ ಗ್ರೀನ್‌ ಬ್ಯೂಟಿ. ಹಿಂದಿ ತೆಲುಗು, ತಮಿಳು ಭಾಷೆಯಗಳಲ್ಲಿ ಅಭಿನಯಿಸಿರೋ ಈ ನಟಿಗೆ 35 ವರ್ಷ. ಇಬ್ಬರು ಮಕ್ಕಳ ತಾಯಾಗಿದ್ದರೂ ಇನ್ನೂ ಪುಟ್ಟ ಹುಡುಗಿಯಂತೆ ಕಾಣುವ ಜೆನಿಲಿಯಾ ಫಿಟ್ನೆಸ್‌ಗೆ ಬಹಳಷ್ಟು ಮಹತ್ವ ಕೊಡ್ತಾರೆ. ಇದೀಗ ತಮ್ಮ ಫಿಟ್‌ ನೆಸ್‌ (Fitness) ಜರ್ನಿಯಿಂದ ಜೆನಿಲಿಯಾ ದೇಶ್‌ ಮುಖ್‌ ಬಹಳಷ್ಟು ಜನರಿಗೆ ಸ್ಪೂರ್ತಿಯಾಗ್ತಾರೆ.


  ಅಂದಹಾಗೆ ಜೆನಿಲಿಯಾ ಯಾವಾಗಲೂ ಫಿಟ್‌ ನೆಟ್‌ ಪ್ರಿಯಯಾಗಿದ್ದಾರೆ. ಅವರು ತಮ್ಮ ಫಿಟ್‌ ನೆಸ್‌ ತರಬೇತುದಾರ ಡಾನ್‌ ಮೈಲ್ಸ್‌ ನೊಂದಿಗಿನ ಫಿಟ್ನೆಸ್ ಪ್ರಯಾಣ ಆರಂಭಿಸಿದಾಗಿನ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆರೋಗ್ಯಕರವಾಗಿ, ಫಿಟ್‌ ಆಗಿರುವ ದೇಹವನ್ನು ಹೊಂದುವ ಉದ್ದೇಶದ #GoGeneGo ಸರಣಿಯ ಭಾಗವಾಗಿ ನೋಟ್‌ ಒಂದನ್ನು ಬರೆದಿದ್ದಾರೆ.  ಜೆನಿಲಿಯಾ ಪ್ರಕಾರ, "ಫಿಟ್ನೆಸ್ ಕೇವಲ ಗ್ಲಾಮರ್‌ ಕೊಡುತ್ತದೆ ಎಂದಲ್ಲ. ಇದು ಪ್ರಯಾಣದ ಮೊದಲು, ಪ್ರಯಾಣದ ಸಮಯದಲ್ಲಿ ಮತ್ತು ಪ್ರಯಾಣದ ನಂತರ ಒಬ್ಬ ವ್ಯಕ್ತಿಯು ಅನುಭವಿಸುವ ಎಲ್ಲಾ ಭಾವನೆಯಾಗಿದೆ. ಫೇಲ್‌ ಅಥವಾ ಫ್ಲೈ... ನಾನಂತೂ ಈ ಪ್ರಯಾಣವನ್ನು ತೆಗೆದುಕೊಂಡಿದ್ದೇನೆ ಎಂದಿರುವ ವಿಡಿಯೋ ಹಂಚಿಕೊಂಡಿದ್ದಾರೆ.


  ಫಿಟ್ನೆಸ್ ಜರ್ನಿ

  ಇನ್ನು ಈ ನಟಿ ತನ್ನ ಹುರುಪಿನ ವರ್ಕೌಟ್‌ ಗಳಿಂದ ಅಗಾಧವಾದ ಶಕ್ತಿ ಪ್ರದರ್ಶಿಸುತ್ತಾ, ತನಗಿರುವ ಮಿತಿಗಳನ್ನು ಮೀರಿ ಹೇಗೆ ವರ್ಕೌಟ್‌ ಮಾಡುತ್ತಿದ್ದೇನೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಾರೆ. ಇನ್ನು ಮುಂಬೈ ಬಿಟ್ಟು ದೆಹಲಿಗೆ ಪ್ರಯಾಣಿಸಬೇಕಾಗಿರುವುದರಿಂದ ನಾಲ್ಕನೇ ವಾರ ಎಷ್ಟು ಕಠಿಣವಾದದ್ದು ಎಂಬುದನ್ನು ವಿವರಿಸಿದ್ದಾರೆ.


  ಇದನ್ನೂ ಓದಿ: Bollywood Star Kids: ಬಹುಕೋಟಿ ಬೆಲೆಯ ಲಕ್ಷುರಿ ಬಂಗಲೆಯಲ್ಲಿ ವಾಸಿಸುತ್ತಾರೆ ಬಾಲಿವುಡ್ ಸ್ಟಾರ್ ಕಿಡ್ಸ್

  ಇನ್ನೂ ಶೂಟಿಂಗ್‌ ಗಾಗಿ ಊರಿನಿಂದ ಹೊರಗೆ ಹೋಗಬೇಕಾದರೆ ಅಲ್ಲಿ ಹೊಸ ಜಿಮ್‌ ನಲ್ಲಿ ವರ್ಕೌಟ್‌ ಮಾಡಬೇಕಾಗುತ್ತದೆ. ನನ್ನ ಕುಟುಂಬ ನನ್ನ ಜೊತೆ ಇರೋದಿಲ್ಲ. ಶೂಟಿಂಗ್‌ ನಲ್ಲಿ ಬ್ಯುಸಿ ಇರುತ್ತೇನೆ. ಇದು ನನ್ನಿಂದಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೂ ಮನಸ್ಸಿದ್ದಲ್ಲಿ ಮಾರ್ಗವಿದೆ ಅನ್ನೋ ಹಾಗೆ ನಾನು ಪ್ರಯತ್ನಿಸುತ್ತಲೇ ಇರುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದರು.


  ಎಕ್ಸ್‌ ಸೈಸ್‌ ಮಾಡೋವಾಗ ಪತಿಯ ಸಹಾಯ

  ಇನ್ನು ದೆಹಲಿಯಲ್ಲಿನ 5 ನೇ ವಾರದಲ್ಲಿ ವರ್ಕೌಟ್‌ ನಲ್ಲಿ ನಿರತರಾಗಿದ್ದ ಜೆನಿಲಿಯಾಗೊಂದು ಸರ್‌ ಪ್ರೈಸ್‌ ಕಾದಿತ್ತು. ಪತಿ ರಿತೇಶ್‌ ದೇಶಮುಖ್‌ ಮಕ್ಕಳೊಂದಿಗೆ ರಾಜಧಾನಿಗೆ ಬಂದಿದ್ದರು. ಎಕ್ಸ್‌ ಸೈಸ್‌ ಮಾಡೋವಾಗ ತಮಗೆ ಪತಿ ರಿತೇಶ್‌ ಸಹಾಯ ಮಾಡ್ತಾ ಇರೋ ವಿಡಿಯೋವನ್ನು ಕೂಡ ಅವರು ಇನ್‌ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ನೆಟ್ಟಿಗರಿಗೆ ಈ ಮೂಲಕ ಫಿಟ್‌ ನೆಸ್‌ ಗುರಿ ನೀಡಿದ್ದಾರೆ.


  ಇದನ್ನೂ ಓದಿ: Dia Mirza: ನಟಿಯರ ಸ್ನಾನದ ವಿಡಿಯೋ ಲೀಕ್! ಹೋಟೆಲ್​​ಗೆ ಹೋದಾಗ ನಟಿ ದಿಯಾ ಏನ್ಮಾಡ್ತಾರೆ?

  ಆರಂಭದಲ್ಲಿ ಅನಿಶ್ಚಿತತೆ, ವಿಶ್ವಾಸವಿಲ್ಲದ ಮತ್ತು ಸರಿಯಾಗಿ ಗೊತ್ತಿಲ್ಲದ ಪ್ರಯಾಣದಲ್ಲಿ ಸಾಗಿದ್ದ ಜೆನಿಲಿಯಾ ಫಿಟ್‌ ನೆಸ್‌ ಜರ್ನಿಯಲ್ಲಿ ಇದೀಗ 6 ವಾರಗಳು ಮುಗಿದಿವೆ. ಇದು ಒಂದು ದೊಡ್ಡ ಪ್ರಯಾಣವಾಗಿತ್ತು ಎಂದಿರುವ ಜೆನಿಲಿಯಾ, 59.4 ಕೆಜಿಯಿಂದ 55.1 ಕೆಜಿಗೆ ಇಳಿದಿದ್ದಾಗಿ ತಿಳಿಸಿದ್ದಾರೆ. ನಾನು ಬಹಳಷ್ಟು ಅನುಮಾನ, ಬಹಳಷ್ಟು ಅಭದ್ರತೆಯೊಂದಿಗೆ ಪ್ರಾರಂಭಿಸಿದೆ. ಆದರೆ ಇಂದು ಗುರಿಯನ್ನು ತಲುಪವುದರ ಹೊರತಾಗಿ ನಾನು ಹೆಚ್ಚು ಆತ್ಮವಿಶ್ವಾಸ, ಶಿಸ್ತು ಮತ್ತು ವ್ಯಕ್ತಿಯಾಗಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.


  ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಜೆನಿಲಿಯಾ ಹಲವರಿಗೆ ಸ್ಪೂರ್ತಿಯಾಗಿದ್ದಂತೂ ಹೌದು. ಒಟ್ಟಾರೆ, ವರ್ಕೌಟ್‌ ಮಾಡೋದು, ವ್ಯಾಯಾಮ, ಯೋಗ ಮಾಡೋದು ಬರೀ ಶರೀರಕ್ಕಲ್ಲ, ಮನಸ್ಸಿಗೂ ಶಕ್ತಿ ತುಂಬುತ್ತದೆ ಎಂಬುದು ಸಾಬೀತಾಗಿದೆ.


  Story Link :


  Sujatha Gaonkar


  Key words:

  Published by:Divya D
  First published: