Dhanush Divorce: ಆ ಸ್ಟಾರ್​ ನಟಿಯಿಂದಲೇ ಧನುಷ್​ ದಾಂಪತ್ಯದಲ್ಲಿ ಬಿರುಕು​? ನಿಜಕ್ಕೂ ಅಂದು ಸಿನಿಮಾದ ಶೂಟಿಂಗ್​ ವೇಳೆ ಏನಾಗಿತ್ತು?

ಈ ಸುದ್ದಿ ನಿಜವಾಗಿಯೂ ನಟ ಧನುಷ್ ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ಪೋಸ್ಟ್ ನೋಡಿದ ಬಳಿಕ ಅಭಿಮಾನಿಯೊಬ್ಬರು "ಈ ಸುದ್ದಿ ನಿಜಕ್ಕೂ ಹೃದಯ ವಿದ್ರಾವಕ ಮತ್ತು ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ಐಶ್ವರ್ಯಾ, ಧನುಷ್​

ಐಶ್ವರ್ಯಾ, ಧನುಷ್​

  • Share this:
‘ವೈ ದಿಸ್ ಕೊಲವೆರಿ ಡಿ’ಶ್(Why this Kolaveri Di) ಎಂಬ ಹಾಡಿನಿಂದ ತುಂಬಾನೇ ಪ್ರಸಿದ್ದಿಯಾದ ತಮಿಳು ನಟ ಧನುಷ್(Dhanush) ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಇದಲ್ಲದೆ ಇದೀಗ ಹಿಂದಿ(Hindi) ಚಲನಚಿತ್ರೋದ್ಯಮದಲ್ಲಿಯೂ ಸಹ ತುಂಬಾ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ, ನಟ ಧನುಷ್ ಸೋಮವಾರದಂದು ತಮ್ಮ 18 ವರ್ಷಗಳ ವೈವಾಹಿಕ ಸಂಬಂಧವನ್ನು ನಡೆಸಿದ ನಂತರ ತಮ್ಮ ಪತ್ನಿ ಐಶ್ವರ್ಯಾ ಅವರಿಂದ ಬೇರ್ಪಡುವುದಾಗಿ ಬಹಿರಂಗವಾಗಿ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಘೋಷಿಸಿದ್ದಾರೆ. ನಟ ಟ್ವಿಟ್ಟರ್‌(Twitter) ಸೇರಿ ಸಾಮಾಜಿಕ ಮಾಧ್ಯಮಗಳಲ್ಲಿ “ನಾವು ದಂಪತಿಗಳಾಗಿ ಬೇರ್ಪಡಲು ನಿರ್ಧರಿಸಿದ್ದೇವೆ” ಎಂದು ಸುದೀರ್ಘ ಟಿಪ್ಪಣಿ ಹಂಚಿ ಕೊಂಡಿದ್ದಾರೆ. ಹಿರಿಯ ನಟ ರಜನಿಕಾಂತ್(Rajinikanth) ಅವರ ಹಿರಿಯ ಮಗಳು ಐಶ್ವರ್ಯಾ(Aishwarya) ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಶೀರ್ಷಿಕೆಯಲ್ಲಿ "ಯಾವುದೇ ಶೀರ್ಷಿಕೆಯ ಅಗತ್ಯವಿಲ್ಲ... ನಿಮ್ಮ ತಿಳುವಳಿಕೆ ಮಾತ್ರ ನಿಮ್ಮ ಪ್ರೀತಿ ಮಾತ್ರ ಅಗತ್ಯವಿದೆ” ಎಂದು ಬರೆದುಕೊಂಡಿದ್ದಾರೆ.

ಧನುಷ್​ ಡಿವೋರ್ಸ್​ ವಿಚಾರ ಅಭಿಮಾನಿಗಳಿಗೆ ಶಾಕ್​!

ಈ ಸುದ್ದಿ ನಿಜವಾಗಿಯೂ ನಟ ಧನುಷ್ ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ಪೋಸ್ಟ್ ನೋಡಿದ ಬಳಿಕ ಅಭಿಮಾನಿಯೊಬ್ಬರು "ಈ ಸುದ್ದಿ ನಿಜಕ್ಕೂ ಹೃದಯ ವಿದ್ರಾವಕ ಮತ್ತು ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ನವೆಂಬರ್ 18, 2004 ರಂದು ದಕ್ಷಿಣ ಭಾರತದ ಸಾಂಪ್ರದಾಯದಂತೆ ಮದುವೆಯಾದರು ಮತ್ತು ಇಬ್ಬರು ಗಂಡು ಮಕ್ಕಳ ಹೆಮ್ಮೆಯ ಪೋಷಕರು ಸಹ ಇವರಾದರು.

ಶ್ರುತಿ ಹಾಸನ್ ಅವರೊಂದಿಗಿನ ಸಂಬಂಧವೇ ಕಾರಣನಾ?

ನಟಿ ಶ್ರುತಿ ಹಾಸನ್ ಅವರೊಂದಿಗಿನ ವಿವಾಹೇತರ ಸಂಬಂಧದ ಬಗ್ಗೆ ಹೆಚ್ಚಿನರಿಗೆ ತಿಳಿದಿರಲಿಕ್ಕಿಲ್ಲ. ಇದೇ ಧನುಷ್ ಅವರ ಪತ್ನಿ ಐಶ್ವರ್ಯಾ ಅವರೊಂದಿಗೆ ವೈವಾಹಿಕ ಜೀವನವನ್ನು ಬೆಂಕಿಗೆ ಆಹುತಿ ಮಾಡಿದೆ ಎಂದು ವರದಿಯಾಗಿದೆ. 2011ರಲ್ಲಿ, ಧನುಷ್ ಅವರ ಪತ್ನಿ ಐಶ್ವರ್ಯಾ ಅವರು ರೊಮ್ಯಾಂಟಿಕ್ ಥ್ರಿಲ್ಲರ್ ‘3’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದರು. ಇದರಲ್ಲಿ ಅವರು ತಮ್ಮ ಬಾಲ್ಯದ ಸ್ನೇಹಿತೆ ಶ್ರುತಿ ಹಾಸನ್ ಎದುರು ತಮ್ಮ ಪತಿಯನ್ನು ಈ ಚಿತ್ರದಲ್ಲಿ ನಟಿಸಲು ಕೋರಿದರು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ನಟ ಧನುಷ್ ಮತ್ತು ನಟಿ ಶ್ರುತಿ ಪರಸ್ಪರ ಪ್ರಣಯದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳು ಮತ್ತು ಊಹಾಪೋಹಗಳು ಹರಡಿದ್ದವು.

ಇದನ್ನು ಓದಿ: ಧನುಷ್​-ಐಶ್ವರ್ಯಾ ಲವ್​ ಮ್ಯಾಟರ್​ ಗೊತ್ತಾದಾಗ ರಜನಿ ಮಾಡಿದ್ದೇನು? ಅಪ್ಪ ಅಂದ್ರೆ ಆಕಾಶ ಅನ್ನೋದು ಇದಕ್ಕೆ ನೋಡಿ..

ಬಿರುಕು ಮೂಡಲು ಕಾರಣವಾಯ್ತು ಅನೈತಿಕ ಸಂಬಂಧ?

ಆದಾಗ್ಯೂ, ಶ್ರುತಿ ಅವರೊಂದಿಗಿನ ವಿವಾಹೇತರ ಸಂಬಂಧವು ಈಗ ಮುಚ್ಚು ಮರೆ ಮಾಡುವ ಹಂತದಲ್ಲಿಲ್ಲ, ಬಹುತೇಕವಾಗಿ ಚಿತ್ರೋದ್ಯಮದ ಮಂದಿಗೆ ಇದರ ಬಗ್ಗೆ ಗೊತ್ತು ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು ಬಲವಾಗಿ ಹರಿದಾಡಲು ಶುರು ಆದಾಗ ಧನುಷ್ ಮತ್ತು ಐಶ್ವರ್ಯಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಬಿಡಲು ಪ್ರಾರಂಭಿಸಿತು ಎಂದು ಕೆಲವು ದೃಢೀಕರಿಸದ ಮೂಲಗಳು ತಿಳಿಸಿವೆ.

ಇದನ್ನು ಓದಿ: 18 ವರ್ಷ ದಾಂಪತ್ಯ ಅಂತ್ಯಗೊಳಿಸಿದ Dhanush ಮತ್ತು ಐಶ್ವರ್ಯಾ ರಜನಿಕಾಂತ್, ಅಭಿಮಾನಿಗಳಿಗೆ ಆಘಾತ!

ಇದರ ಬಗ್ಗೆ ನಟಿ ಶ್ರುತಿ ಹಾಸನ್‌ಗೆ ಕೇಳಿದಾಗ ಅವರು "ನಾನು ಜನರಿಗೆ ಯಾವುದರ ಬಗ್ಗೆಯೂ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ನನ್ನ ಬಮ್‌ನಲ್ಲಿ ಮೈಕ್ರೋಚಿಪ್ ಹಾಕಿ ನನ್ನನ್ನು ಫಾಲೋ ಮಾಡಿ ಎಂದು ನಾನು ಜನರಿಗೆ ಹೇಳಲು ಹೋಗುವುದಿಲ್ಲ, ಇದರಿಂದ ಅವರು ಸತ್ಯವನ್ನು ತಿಳಿದುಕೊಳ್ಳಬಹುದು. ಧನುಷ್ ನನ್ನ ಅತ್ಯುತ್ತಮ ಸ್ನೇಹಿತ. ಅವರು ಯಾವಾಗಲೂ ನನಗೆ ಕಲಾತ್ಮಕವಾಗಿ ಸಹಾಯ ಮಾಡಿದ್ದಾರೆ. ಜನರು ನಮ್ಮ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಾನು ಅದನ್ನು ಕಸದ ಬುಟ್ಟಿಗೆ ಎಸೆಯುವುದಿಲ್ಲ. ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ಎಂದಿಗೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ" ಎಂದು ಹೇಳಿದ್ದಾರೆ.

ಧನುಷ್​ ನನ್ನ ಬೆಸ್ಟ್​ ಫ್ರೆಂಡ್​ ಎಂದಿದ್ದ ಶ್ರುತಿ ಹಾಸನ್​!

"ಹತ್ತು ಸಾವಿರ ವದಂತಿಗಳಿವೆ ಎಂದು ನನಗೆ ತಿಳಿದಿದೆ. ಧನುಷ್ ಒಬ್ಬ ಪ್ರಮುಖ ಸ್ನೇಹಿತ, ಏಕೆಂದರೆ ನಾನು ‘3’ ಚಿತ್ರದಲ್ಲಿ ಪಾತ್ರ ವಹಿಸಬಹುದೆಂದು ಯಾರೂ ಭಾವಿಸದಿದ್ದಾಗ, ಅವರು ನನ್ನೊಂದಿಗೆ ನಿಂತು ನಾನು ಅದನ್ನು ಮಾಡಬಹುದು ಎಂದು ಹೇಳಿದರು. ಯಾವುದೇ ಕೆಲಸದಲ್ಲಿ ಯಾರಿಗಾದರೂ, ಜನರು ನಿಮ್ಮ ಮೇಲೆ ನಂಬಿಕೆ ಹೊಂದಿರುವುದು ಮುಖ್ಯ. ನಾನು ಅವನಿಗೆ ತುಂಬಾ ಋಣಿಯಾಗಿದ್ದೇನೆ. ಅಲ್ಲದೆ ನಾವು ಚೆನ್ನಾಗಿ ಹೊಂದಿಕೊಳ್ಳುತ್ತೇವೆ. ನಾವು ಇಬ್ಬರು ಮಾತನಾಡಲು ತುಂಬಾ ಇದೆ" ಎಂದು ಹೇಳಿದ್ದಾರೆ
Published by:Vasudeva M
First published: