• Home
  • »
  • News
  • »
  • entertainment
  • »
  • Deepika Padukone: ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ರಣಬೀರ್​ನ ಮೋಸ ಪತ್ತೆ ಹಚ್ಚಿದ್ದ ದೀಪಿಕಾ, ಆ ಕ್ಷಣ ಹೀಗಿತ್ತು

Deepika Padukone: ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ರಣಬೀರ್​ನ ಮೋಸ ಪತ್ತೆ ಹಚ್ಚಿದ್ದ ದೀಪಿಕಾ, ಆ ಕ್ಷಣ ಹೀಗಿತ್ತು

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಚಿತ್ರ ಗೆಹರಾಯಿಯಾ ಸಖತ್ ಸದ್ದು ಮಾಡುತ್ತಿದೆ. ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ನಟಿಸಿರುವ ಗೆಹರಾಯಿಯಾ ದಾಂಪತ್ಯ ನಡುವಿನ ಮೋಸವನ್ನು ಆಧರಿಸಿದೆ. ಇದೇ ಕಾರಣಕ್ಕೆ ಮಾಜಿ ಗೆಳೆಯ ರಣಬೀರ್ ಕಪೂರ್ ಕುರಿತು ದೀಪಿಕಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಬಾಲಿವುಡ್​ನ (Bollywood) ಫೇಮಸ್ ಲವ್​ಸ್ಟೋರಿಗಳಲ್ಲಿ (Love story) ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣಬೀರ್ ಕಪೂರ್ (Ranbir Kapoor) ಪ್ರೇಮ ಕಥೆ ಇಂದಿಗೂ ಸುದ್ದಿಯಾಗುತ್ತಿರುತ್ತದೆ. ಬಾಲಿವುಡ್​ನ ಈ ಜೋಡಿ ಸಕ್ಸಸ್​ ಸಿನಿಮಾ ಕೊಟ್ಟ ಮೇಲೆ ಪ್ರೀತಿಯಲ್ಲಿ (Love) ಬಿದ್ದರು. ಬಾಲಿವುಡ್​ನ ಈ ಕ್ಯೂಟ್ ಜೋಡಿ ಬ್ರೇಕಪ್ (Breakup) ಎಲ್ಲರಿಗೂ ಆಘಾತವಾಗಿತ್ತು. ಹಾಗೆಯೇ ಈ ಬ್ರೇಕಪ್​ನಿಂದ ದೀಪಿಕಾ ಪಡುಕೋಣೆ ಬಹುವಾಗಿ ಬಾಧಿಸಲ್ಪಟ್ಟಿದ್ದರು. ಮಾನಸಿಕವಾಗಿ ಕುಗ್ಗಿದ್ದ ದೀಪಿಕಾ ಖಿನ್ನತೆಗೊಳಗಾದರು (Depression). ಇದನ್ನು ಬಹಳಷ್ಟು ಸಲ ನಟಿ ಸ್ವತಃ ಹೇಳಿಕೊಂಡಿದ್ದಾರೆ. ದೀಪಿಕಾ ಪ್ರೀತಿಯಲ್ಲಿ ಕಂಡ ನೋವು ಇದು. ಆಮೇಲೆ ರಣವೀರ್​ ಜೊತೆ ಲವ್ ಆಗಿ ಅವರು ಮದುವೆಯಾಗಿ ಈ ಜಾಲಿಯಾಗಿರೋದು ಎಲ್ಲರಿಗೂ ಗೊತ್ತು. ಆದರೆ ಈಗ ಗೆಹರಾಯಿಯಾ ಸಿನಿಮಾ ಸುದ್ದಿಯಾಗುತ್ತಿದ್ದಂತೆ ದೀಪಿಕಾ ಅವರ ಹಳೆಯ ಪ್ರೇಮ ಕಥೆ ಮತ್ತೆ ಸುದ್ದಿಯಲ್ಲಿದೆ. ದೀಪಿಕಾ ಅಭಿಮಾನಿಗಳಿಗೆ ಹೆಚ್ಚು ಆಪ್ತವಾಗಿದ್ದ ಅವರ ಪ್ರೇಮ ಕಥೆ ವಿಶಾದವಾಗಿ ಕೊನೆಗೊಂಡಿತ್ತು.


ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಚಿತ್ರ ಗೆಹರಾಯಿಯಾ ಸಖತ್ ಸದ್ದು ಮಾಡುತ್ತಿದೆ. ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ನಟಿಸಿರುವ ಗೆಹರಾಯಿಯಾ ದಾಂಪತ್ಯ ನಡುವಿನ ಮೋಸವನ್ನು ಆಧರಿಸಿದೆ. ಇದೇ ಕಾರಣಕ್ಕೆ ಮಾಜಿ ಗೆಳೆಯ ರಣಬೀರ್ ಕಪೂರ್ ಕುರಿತು ದೀಪಿಕಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.


ರಣಬೀರ್​ನನ್ನು ವಿಶ್ವಾಸ ದ್ರೋಹಿ ಎಂದಿದ್ದ ಡಿಪ್ಪಿ


ವರ್ವ್ ನಿಯತಕಾಲಿಕದ ಸಂದರ್ಶನದಲ್ಲಿ, ದೀಪಿಕಾ ರಣಬೀರ್ ಜೊತೆಗಿನ ತನ್ನ ವಿಫಲ ಸಂಬಂಧ ಮತ್ತು ಅವರ ಬ್ರೇಕಪ್ ದಾಂಪತ್ಯದ ಮೋದ ಹೇಗೆ ಮುಖ್ಯವಾಗಿತು ಎನ್ನುವುದನ್ನು ಹೇಳಿದ್ದಾರೆ. ರಣಬೀರ್ ಕಪೂರ್ ತನಗೆ ಮೋಸ ಮಾಡಿದರು ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ವರ್ವ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, 2010 ರಲ್ಲಿ, ದೀಪಿಕಾ ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದರು. ರಣಬೀರ್ ವಿಶ್ವಾಸದ್ರೋಹಿ ಎಂದು ಬಹಿರಂಗಪಡಿಸಿದ್ದರು.


ದೀಪಿಕಾಳನ್ನು ಫ್ಲರ್ಟ್ ಎಂದಿದ್ದ ರಣಬೀರ್


ಬಾಲಿವುಡ್ ನಟಿ ದೀಪಿಕಾ ಹಾಗೂ ರಣಬೀರ್ ಕಪೂರ್ ಅಭಿನಯಿಸಿದ ಸಿನಿಮಾ ತಮಾಷಾದ ಪ್ರಮೋಷನ್ ಸಂದರ್ಭ ರಣಬೀರ್ ದೀಪಿಕಾ ಕುರಿತು ಮಾತನಾಡಿದ್ದರು. ದೀಪಿಕಾ ಫ್ಲರ್ಟ್​, ಆದರೆ ಆಕೆ ತಾನು ಫ್ಲರ್ಟ್ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಅವಳು ತುಂಬಾ ಕೆಲಸ ಮಾಡುತ್ತಿದ್ದಾಳೆ. ತನ್ನನ್ನು ತಾನೇ ಸುಟ್ಟುಹಾಕಬಾರದು. ಅವಳು ಹೆಚ್ಚು ರಜಾದಿನಗಳು ಮತ್ತು ವಿರಾಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದರು.


ಇದನ್ನೂ ಓದಿ: Gehraiyaan Movie: ದೀಪಿಕಾ ಸಿನಿಮಾ ಕೆಟ್ಟದಾಗಿದೆ ಎಂದ ಕಂಗನಾ, ಮೈ ತೋರಿಸಿದ್ರೂ ಸಿನಿಮಾ ಬಚಾವಾಗ್ಲಿಲ್ಲ ಎಂದ ಕ್ವೀನ್


ಬೋಲ್ಡ್ ಪಾತ್ರದಲ್ಲಿ ದೀಪಿಕಾ


ದೀಪಿಕಾ ಪಡುಕೋಣೆ ಮದುವೆ ಬಳಿಕ ಬೋಲ್ಡ್(Bold)​ ಅವತಾರಾದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಹೌದು, ಅವರ ಹೊಸ ಸಿನಿಮಾ ‘ಗೆಹರಾಯಿಯಾ’(Gehraiyaan) ಸಿನಿಮಾದಲ್ಲಿ ಸಖತ್​ ಹಾಟ್ ಆಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಹ ನಟನೊಂದಿಗೆ ಕಿಸ್ಸಿಂಗ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಎಲ್ಲೆಡೆ ವೈರಲ್ ಆಗಿತ್ತು. ನಟಿ ಅದೆಷ್ಟೋ ವರ್ಷಗಳ ನಂತರ ಹೀಗೆ ಸಿನಿಮಾದಲ್ಲಿ  ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: Gehraiyaan: ಡಿಪ್ಪಿ ಜೊತೆ ಕಿಸ್​ ಸೀನ್​ ಕಂಡು ಸಿದ್ದಾರ್ಥ್ ಚಿಕ್ಕಪ್ಪ ಕೇಳಿದ್ದೇನು ಅಂತ ಗೊತ್ತಾದ್ರೆ ಸಖತ್​ ನಗ್ತೀರಾ!


ಈ ಸಿನಿಮಾ ಅಷ್ಟಾಗಿ ಹಿಟ್ ಆಗಿಲ್ಲ. ಸಿನಿಮಾ ಭಾರತದ ಜನರ ಮನಸ್ಥಿತಿಗೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ ಎನ್ನುವುದೇ ಸಿನಿಮಾ ನೋಡಿದ ಬಹಳಷ್ಟು ಜನರ ಪ್ರತಿಕ್ರಿಯೆ.

Published by:Divya D
First published: