ಕೊನೆಗೂ ಮುತ್ತಿಕ್ಕಿಯೇ ಬಿಟ್ಟರು ಸಲ್ಮಾನ್ ಖಾನ್: ಸಲ್ಲು ಬಗ್ಗೆ ಅರ್ಬಾಜ್ ಖಾನ್ ಏನು ಹೇಳಿದ್ದಾರೆ ಗೊತ್ತಾ?

ಕಿಸ್ಸಿಂಗ್ ದೃಶ್ಯಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಆನ್‍ಸ್ಟ್ರೀನ್‍ನಲ್ಲಿ ಕಿಸ್ಸಿಂಗ್ ದೃಶ್ಯಕ್ಕೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರ ಸಂಗತಿ ಹೊರಹಾಕಿದ್ದಾರೆ. ಇದೀಗ ಆ ಮಾತು ಎಲ್ಲೆಡೆ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ (Photo: Google)

ಸಲ್ಮಾನ್ ಖಾನ್ (Photo: Google)

  • Share this:
1990, 2000 ದಶಕದ ಚಾಕೊಲೇಟ್ ಬಾಯ್, ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ವಿಚಾರದಲ್ಲಿ ಕೊಂಚ ಮಡಿವಂತಿಕೆ ವ್ಯಕ್ತಿ. ಆನ್‍ಸ್ಕ್ರೀನ್‍ನಲ್ಲಿ ನಟಿಮಣಿಯರಿಗೆ ಮುತ್ತಿಕ್ಕಲು ಹಿಂಜರಿಯುತ್ತಾರೆ ಎಂಬುದಕ್ಕೆ ಒಂದು ನಿದರ್ಶನವಿದೆ. ಆರು ವರ್ಷಗಳ ಹಿಂದೆ ಅತಿಯಾ ಶೆಟ್ಟಿ-ಸೂರಜ್ ಪಂಚೋಲಿ ನಟಿಸಿದ ‘ಹೀರೋ’ ಸಿನಿಮಾ ನೋಡಿದ ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯದ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಆದ ಕಾರಣ ಆ ದೃಶ್ಯವನ್ನು ಎಡಿಟ್ ಮಾಡಲಾಗಿತ್ತು. ಕಿಸ್ಸಿಂಗ್ ದೃಶ್ಯ ಇರಲಿಲ್ಲ ಎಂಬ ಕಾರಣಕ್ಕೆ ಒಂದು ದೃಶ್ಯವನ್ನು ಸೇರಿಸಲಾಗಿತ್ತು. ಅದನ್ನು ಅವರು ತಿರಸ್ಕರಿಸಿದ್ದರು. ಮುಖ್ಯವಾಗಿ ನಾನು ಚುಂಬನದ ದೃಶ್ಯಗಳನ್ನು ನಾನು ಒಪ್ಪುವುದಿಲ್ಲ. ಇಂತಹದರಲ್ಲಿ ಸೂರಜ್ ಮತ್ತು ಅತಿಯಾ ಅವರಿಗೆ ಚುಂಬಿಸುವಂತೆ ನಾನು ಹೇಗೆ ಹೇಳಲಿ? ಇನ್ನು ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸಿನಿಮಾದಲ್ಲಿ ಅಸಹ್ಯವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ನಾನು ಚುಂಬನದ ದೃಶ್ಯ ಮಾಡುವುದಿಲ್ಲ ಎಂದು ಹೇಳಿದ್ದರು.

ಹೀಗೆ ಇದೆಲ್ಲವೂ ಚುಂಬನದ ದೃಶ್ಯ ಸಿನಿಮಾದಲ್ಲಿ ಬೇಡ ಎಂದು ಸಲ್ಮಾನ್ ಅವರೇ ಹೇಳುತ್ತಾರೆ ಎಂಬುದಕ್ಕೆ ಸಾಕ್ಷಿ. ಆದರೆ ಇದೀಗ ಬಿಡುಗಡೆಯಾಗಿರುವ ರಾಧೆ ಸಿನಿಮಾದ ಟ್ರೇಲರ್ ಸಲ್ಮಾನ್ ಮನಸ್ಥಿತಿಯೂ ಬದಲಾಯಿತೇ? ಎಂಬ ಸಣ್ಣ ಅನುಮಾನ ಹುಟ್ಟು ಹಾಕಿದೆ.

ಕಿಸ್ಸಿಂಗ್ ದೃಶ್ಯಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಆನ್‍ಸ್ಟ್ರೀನ್‍ನಲ್ಲಿ ಕಿಸ್ಸಿಂಗ್ ದೃಶ್ಯಕ್ಕೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರ ಸಂಗತಿ ಹೊರಹಾಕಿದ್ದಾರೆ. ಇದೀಗ ಆ ಮಾತು ಎಲ್ಲೆಡೆ ವೈರಲ್ ಆಗುತ್ತಿದೆ. ಸಲ್ಮಾನ್‍ಖಾನ್ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಅವರಿಬ್ಬರು ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮ ಶೋದಲ್ಲಿ ಸಲ್ಮಾನ್ ಕುರಿತಾದ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದರು.

ಸೋನಿ ಟಿವಿ ಎಂಟರ್‌ಟೈನ್‌ಮೆಂಟ್‌ ಸಲ್ಮಾನ್ ಕುರಿತಾದ ಒಂದು ಹಳೆಯ ಪ್ರೋಮೋದಲ್ಲಿ ಚುಂಬನ ದೃಶ್ಯದ ಬಗ್ಗೆ ವಿಚಾರಿಸಿದಾಗ ಸಲ್ಮಾನ್ ಖಾನ್, ನಾನು ಆನ್‍ಸ್ಕ್ರೀನ್‍ನಲ್ಲಿ ಯಾವುದೇ ಕಿಸ್ಸಿಂಗ್ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ. ಹಾಗಾಗಿ ಇದು ನನಗೆ ಸಂಬಂಧಿಸಿದ್ದು ಎಂದು ಉತ್ತರಿಸಿದ್ದರು. ಇದಕ್ಕೆ ತಕ್ಷಣವೇ ಉತ್ತರಿಸಿದ ಅರ್ಬಾಜ್ ಖಾನ್, ಆಫ್‍ಸ್ಕ್ರೀನ್‍ನಲ್ಲಿ ಈ ರೀತಿಯಾಗಿ ಎಷ್ಟೋ ಬಾರಿ ಕಿಸ್ ಮಾಡಿದ್ದಾರೆ. ಆದ್ದರಿಂದ ಆನ್‍ಸ್ಕ್ರೀನ್‍ನಲ್ಲಿ ಇದರ ಅವಶ್ಯಕತೆ ಕಾಣಲಿಲ್ಲ ಎಂದು ಉತ್ತರಿಸಿದರು. ಆಗ ಇಡೀ ಟಿವಿ ಶೋದಲ್ಲಿದ್ದವರೆಲ್ಲರೂ ನಗಾಡಿದ್ದರು.

ಸೋನಿ ಟಿವಿ ತನ್ನ ಅಧಿಕೃತ ಖಾತೆಯಲ್ಲಿ ಬಿಡುಗಡೆ ಮಾಡಿರುವ ಈ ಮಾತಿನ ತುಣುಕಿನ ವಿಡಿಯೋವನ್ನು 85 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇನ್ನು, ಈ ಮಾತಿಗೆ ತದ್ವಿರುದ್ಧವಾಗಿ ಪೊಲೀಸ್ ಅಧಿಕಾರಿ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್, ರಾಧೆ ಸಿನಿಮಾದಲ್ಲಿ ಸಹ-ನಟಿ ದಿಶಾ ಪಟಾಣಿ ಅವರಿಗೆ ಮುತ್ತಿಕ್ಕಿದ್ದಾರೆ. ಟ್ರೇಲರ್‌ನ ಮಧ್ಯಭಾಗದಲ್ಲಿ ಈ ದೃಶ್ಯ ಕಾಣಸಿಗುತ್ತದೆ. ಇದರಲ್ಲಿ ವಿಶೇಷವಾಗಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಇದ್ದಾರೆ. ಏನೇ ಆಗಲಿ ಮೂವತ್ತು ವರ್ಷಗಳ ಬಾಲಿವುಡ್ ಸಿನಿ ಪಯಣದಲ್ಲಿ ಸಲ್ಮಾನ್ ಅವರು ಆನ್‍ಸ್ಕ್ರೀನ್‍ನಲ್ಲಿ ಮುತ್ತಿಕ್ಕಿರುವುದು ಮಾತ್ರ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
First published: