Anushka Sharma: ನಟಿ ಅನುಷ್ಕಾ ಶರ್ಮಾ ನಟ ಶಾಹಿದ್​ಗೆ 'ಶಟ್ ಅಪ್' ಅಂದಿದ್ರಂತೆ, ಕಾರಣ ಇದಂತೆ ನೋಡಿ

Bollywood Gossip: ಸಿನಿಮಾ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ವಿಷಯಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲು ಬಾಲಿವುಡ್​ನಲ್ಲಿ ಹೊಸ ಹೊಸ ಗಾಸಿಪ್​ಗಳ ಹಾವಳಿಯೇ ಸೃಷ್ಠಿ ಆಗುತ್ತಲೇ ಇರುತ್ತವೆ. ಇಂತದ್ದೇ ಗಾಸಿಪ್​ಗೆ ಸಾಕ್ಷಿ ಆಗಿರುವುದು ಅನುಷ್ಕಾ ಶರ್ಮ. ಅರೆ! ಏನಿದು ಹೊಸ ವಿಷ್ಯ ಅನ್ಕೊಂಡ್ರಾ. ಓದಿ ಈ ಸ್ಟೋರಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೀಭಸಿನಿಮಾ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ವಿಷಯಗಳು ಹುಟ್ಟುತ್ತಲೇ ಇರುತ್ತವೆ. ಗಾಸಿಪ್​ಗಳ ಲಿಸ್ಟ್​ಗಳನ್ನು ಕೇಳೋದೇ ಬೇಡ. ಹೀಗಾಗಿ ಏನೇ ಮಾತನಾಡಬೇಕಾದ್ರೂ ಜೋಕೆಯಿಂದ ಮಾತನೋಡೋದು ಒಳ್ಳೆದು. ಇದೀಗ ಇಂತದ್ದೇ ಗಾಸಿಪ್​ಗೆ ಸಾಕ್ಷಿಯಾಗಿದ್ದಾರೆ. ಬಾಲಿವುಡ್ (Bollywood ) ನಲ್ಲಿ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ನಟ ಶಾಹಿದ್ ಕಪೂರ್ (Shahid Kapoor) ತಮ್ಮ ನಟನಾ ಕೌಶಲ್ಯಗಳಿಂದ ಒಂದು ರೀತಿಯ ಹವಾ ಸೃಷ್ಟಿಸಿಕೊಂಡ ನಟ ಮತ್ತು ನಟಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಇಬ್ಬರು ನಟರು ತಮ್ಮ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಅನೇಕ ಸ್ಮರಣೀಯ ಚಿತ್ರಗಳನ್ನು ನೀಡಿದ ಅತ್ಯಂತ ಪ್ರೀತಿ ಪಾತ್ರರಾದ ಮತ್ತು ತಮ್ಮದೇ ಆದ ವಿಶಿಷ್ಟವಾದ ಅಭಿಮಾನಿಗಳನ್ನು ಹೊಂದಿರುವಂತಹ ಪ್ರಸಿದ್ಧ ತಾರೆಗಳು ಅಂತ ಹೇಳಬಹುದು.

‘ಬದ್ಮಾಶ್ ಕಂಪನಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ರು ಶಾಹಿದ್ ಮತ್ತು ಅನುಷ್ಕಾ

ಇಂತಹ ಇಬ್ಬರು ನಟರನ್ನು ಒಟ್ಟಿಗೆ ಒಂದೇ ಸಿನೆಮಾದಲ್ಲಿ ಅಭಿಮಾನಿಗಳು ನೋಡಿದ್ದು ಎಂದರೆ ಅದು 2010 ರಲ್ಲಿ ಬಿಡುಗಡೆಯಾದ ‘ಬದ್ಮಾಶ್ ಕಂಪನಿ’ ಚಿತ್ರದಲ್ಲಿ. ಈ ಚಿತ್ರದಲ್ಲಿ ಈ ಇಬ್ಬರು ನಟರ ಜೊತೆಯಲ್ಲಿ ವೀರ್ ದಾಸ್ ಮತ್ತು ಮೈಯಾಂಗ್ ಚಾಂಗ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಏನು ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅಭಿಮಾನಿಗಳು ಅನುಷ್ಕಾ ಮತ್ತು ಶಾಹಿದ್ ಅವರ ಜೋಡಿಯನ್ನು ಮತ್ತು ಅವರಿಬ್ಬರ ಮಧ್ಯೆ ಇರುವ ಆ ಕೆಮಿಸ್ಟ್ರಿಯನ್ನು ತುಂಬಾನೇ ಇಷ್ಟಪಟ್ಟರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಚಿತ್ರದಲ್ಲಿ ಶಾಹಿದ್ ಮತ್ತು ಅನುಷ್ಕಾ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಬಣ್ಣದ ಹೂಗಳ ಸೀರೆಯಲ್ಲಿ ಜಾನ್ವಿ! ಸೌಂದರ್ಯದಲ್ಲಿ ಕಮ್ಮಿ ಇಲ್ಲ ಶ್ರೀದೇವಿ ಮಗಳು

ಈ ಚಿತ್ರದ ತಾರಾಬಳಗವು ಆಗ ಚಲನಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡಿತ್ತು ಮತ್ತು ಅನೇಕ ಸಂದರ್ಶನಗಳಲ್ಲಿ ಶಾಹಿದ್ ಮತ್ತು ಅನುಷ್ಕಾ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಒಂದು ಸಂದರ್ಶನದಲ್ಲಿ ಈ ಇಬ್ಬರ ಮಧ್ಯೆ ಸ್ವಲ್ಪ ಮಾತಿನ ಚಕಮಕಿ ನಡೆದು ಸಣ್ಣದಾಗಿ ಜಗಳ ಸಹ ಆಗಿತ್ತಂತೆ ಅಂತ ತಿಳಿದು ಬಂದಿದೆ.

ಶಾಹಿದ್ ಮತ್ತು ಅನುಷ್ಕಾ ಜಗಳವಾಡಿದ್ರಂತೆ!

ಒಂದು ಸಂದರ್ಶನದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಚಿಕ್ಕದಾಗಿ ಜಗಳ ಆಡಿದ್ದರು ಅಂತ ಈಗ ಗೊತ್ತಾಗಿದೆ ನೋಡಿ. ಶಾಹಿದ್ ಮತ್ತು ಅನುಷ್ಕಾ ಸ್ವಲ್ಪ ಮಾತಿನ ಚಕಮಕಿಗೆ ಇಳಿದರು, ಅದನ್ನು ನಟಿ ಸರಿಯಾಗಿ ಸ್ವೀಕರಿಸಲಿಲ್ಲ. ಹೌದು, ಶಾಹಿದ್ ತನ್ನೊಂದಿಗೆ ಕೆಲಸ ಮಾಡುವ ಬಗ್ಗೆ ಕೆಲವು ಅಸಹ್ಯಕರ ಹೇಳಿಕೆಗಳನ್ನು ನೀಡಿದರು ಅಂತ ಹೇಳಿ, ನಂತರ ಅನುಷ್ಕಾ 'ಶಟ್ ಅಪ್’ (ಬಾಯಿ ಮುಚ್ಚುವಂತೆ) ಅಂತ ಹೇಳಿದ್ದರಂತೆ.

ಹೊಸ ನಟರೊಂದಿಗೆ ಕೆಲಸ ಮಾಡುವ ಬಗ್ಗೆ ಶಾಹಿದ್ ಕಪೂರ್ ಅವರನ್ನು ಕೇಳಿದಾಗ "ನೀವು ಹೊಸ ನಟರೊಂದಿಗೆ ಕೆಲಸ ಮಾಡುವಾಗ ಅದು ತುಂಬಾ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವರು ಇರುವ ಝೋನ್ ಅನ್ನು ಪ್ರವೇಶಿಸಲು ನಿಮಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದು ಹೇಳಿದ್ದರು.

ಇದನ್ನೂ ಓದಿ: ಕರಣ್ ಜೋಹರ್ ರಿಲೇಶನ್‌ಶಿಪ್‌ನಲ್ಲಿದ್ರಾ? ವರುಣ್ ಧವನ್ ಪ್ರಶ್ನೆಗೆ ನಟ ಹೇಳಿದ್ದು ಹೀಗೆ

ಅವರ ಪಕ್ಕದಲ್ಲಿಯೇ ಕುಳಿತಿದ್ದ ಅನುಷ್ಕಾ ಈ ಸಂಭಾಷಣೆಯ ಮಧ್ಯೆ ಪ್ರವೇಶಿಸಿ "ಅವರು ಯಾರು, ನಿರ್ದಿಷ್ಟವಾಗಿ ಹೇಳಿ" ಎಂದು ಹೇಳಿದರು, ಅದಕ್ಕೆ ಶಾಹಿದ್ "ನೀವೆಲ್ಲಿ 50 ಚಲನಚಿತ್ರಗಳನ್ನು ಮಾಡಿದ್ದೀರಿ" ಅಂತ ಹೇಳಿದರು.

ಇಷ್ಟಕ್ಕೆ ಸುಮ್ಮನಿರದೆ ನಟ ಅನುಷ್ಕಾಗೆ "ನೀವೇಕೆ ಇಬ್ಬರು ಮಾತಾಡುವಾಗ ಮಧ್ಯೆ ಬಾಯಿ ಹಾಕುತ್ತಿದ್ದೀರಿ?ನಾನು ನಿಮ್ಮ ಬಗ್ಗೆ ಏನು ಮಾತಾಡಿಲ್ಲ, ನಾನು ಚಾಂಗ್ ನೊಂದಿಗೆ ಮಾತಾಡುತ್ತಿದ್ದೇನೆ" ಅಂತ ಹೇಳಿದಾಗ ಜಗಳ ಇನ್ನೂ ಜೋರಾಯಿತು.

ಶಾಹಿದ್ ಈ ಮಾತನ್ನು ಹೇಳಿದ ಕೂಡಲೇ, ಸಂಭಾಷಣೆಯುದ್ದಕ್ಕೂ ಶಾಂತವಾಗಿರಲು ಪ್ರಯತ್ನಿಸಿದ ಅನುಷ್ಕಾ, ತನ್ನ ತಾಳ್ಮೆಯನ್ನು ಕಳೆದುಕೊಂಡು ಶಾಹಿದ್ ಗೆ 'ಶಟ್ ಅಪ್' ಎಂದು ಹೇಳಿಯೇ ಬಿಟ್ಟರು. ನಂತರ ಕಪೂರ್ ಸಂದರ್ಶಕರನ್ನು ಇಬ್ಬರು ತಾರೆಗಳ ನಡುವೆ ವಿಷಯಗಳು ಸ್ವಲ್ಪ ಒರಟಾಗಿದ್ದರಿಂದ ಮತ್ತೆ ಆ ಭಾಗವನ್ನು ಚಿತ್ರೀಕರಿಸಲು ಕೇಳಿದರು.
First published: