• Home
  • »
  • News
  • »
  • entertainment
  • »
  • BBC 14: ಕೋಪಗೊಂಡ ಮೊಮ್ಮಗಳ ಮುನಿಸು ಶಮನಕ್ಕೆ ಬಿಗ್​ ಬಿ ಕೊಡ್ತಾರಂತೆ ಈ ಗಿಫ್ಟ್​​

BBC 14: ಕೋಪಗೊಂಡ ಮೊಮ್ಮಗಳ ಮುನಿಸು ಶಮನಕ್ಕೆ ಬಿಗ್​ ಬಿ ಕೊಡ್ತಾರಂತೆ ಈ ಗಿಫ್ಟ್​​

ಅಮಿತಾಬ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್

ಅಮಿತಾಬ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್

ಮನುಷ್ಯನಿಗೆ ತಾನು ನೀಡಿದ ಅಸಲು ಹಣಕ್ಕಿಂತಲೂ, ಅದರಿಂದ ಬರುವ ಬಡ್ಡಿ ಹಣದ ಮೇಲೆ ಸ್ವಲ್ಪ ಪ್ರೀತಿ ಹೆಚ್ಚು ಅನ್ನುವಂತೆ, ತಮ್ಮ ಮಕ್ಕಳಿಗಿಂತ ತಮ್ಮ ಮೊಮ್ಮಕ್ಕಳ ಮೇಲೆ ಪ್ರೀತಿ ಜಾಸ್ತಿಯೇ ಇರುತ್ತದೆ. ಪ್ರತಿಯೊಬ್ಬರಿಗೂ ಅವರ ಮೊಮ್ಮಕ್ಕಳನ್ನ ಕಂಡರೆ ತುಂಬಾ ಪ್ರೀತಿ ಮತ್ತು ಅಕ್ಕರೆ ಇದ್ದೇ ಇರುತ್ತದೆ. ತಾತ ಹೊರಗಡೆ ಜಗತ್ತಿಗೆ ಎಷ್ಟೇ ದೊಡ್ಡ ಜನಪ್ರಿಯ ವ್ಯಕ್ತಿಯಾಗಿದ್ದರೂ ಸಹ ಮನೆಯಲ್ಲಿ ಮೊಮ್ಮಕ್ಕಳ ಮುಂದೆ ಮತ್ತು ಮೊಮ್ಮಕ್ಕಳ ಕೋಪಕ್ಕೆ ಮಣಿಯಲೇಬೇಕು ಮತ್ತು ಅವರಿಗೆ ಸಮಾಧಾನ ಪಡಿಸಲು ನಾನಾ ಮಾರ್ಗಗಳನ್ನು ಪ್ರಯತ್ನಿಸಬೇಕಾಗುತ್ತದೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಈ ಪೋಷಕರಿಗೆ (Parents) ತಮ್ಮ ಮಕ್ಕಳಿಗಿಂತಲೂ ತಮ್ಮ ಮೊಮ್ಮಕ್ಕಳ ಮೇಲೆ ಪ್ರೀತಿ ಜಾಸ್ತಿ ಇರುತ್ತದೆ. ಹೌದು.. ಮನುಷ್ಯನಿಗೆ ತಾನು ನೀಡಿದ ಅಸಲು ಹಣಕ್ಕಿಂತಲೂ (Money), ಅದರಿಂದ ಬರುವ ಬಡ್ಡಿ ಹಣದ ಮೇಲೆ ಸ್ವಲ್ಪ ಪ್ರೀತಿ ಹೆಚ್ಚು ಅನ್ನುವಂತೆ, ತಮ್ಮ ಮಕ್ಕಳಿಗಿಂತ ತಮ್ಮ ಮೊಮ್ಮಕ್ಕಳ (Grand children) ಮೇಲೆ ಪ್ರೀತಿ ಜಾಸ್ತಿಯೇ ಇರುತ್ತದೆ. ಪ್ರತಿಯೊಬ್ಬರಿಗೂ ಅವರ ಮೊಮ್ಮಕ್ಕಳನ್ನ ಕಂಡರೆ ತುಂಬಾ ಪ್ರೀತಿ ಮತ್ತು ಅಕ್ಕರೆ ಇದ್ದೇ ಇರುತ್ತದೆ. ತಾತ ಹೊರಗಡೆ ಜಗತ್ತಿಗೆ ಎಷ್ಟೇ ದೊಡ್ಡ ಜನಪ್ರಿಯ ವ್ಯಕ್ತಿಯಾಗಿದ್ದರೂ ಸಹ ಮನೆಯಲ್ಲಿ ಮೊಮ್ಮಕ್ಕಳ ಮುಂದೆ ಮತ್ತು ಮೊಮ್ಮಕ್ಕಳ ಕೋಪಕ್ಕೆ (Anger) ಮಣಿಯಲೇಬೇಕು ಮತ್ತು ಅವರಿಗೆ ಸಮಾಧಾನ ಪಡಿಸಲು ನಾನಾ ಮಾರ್ಗಗಳನ್ನು ಪ್ರಯತ್ನಿಸಬೇಕಾಗುತ್ತದೆ.


ಬಾಲಿವುಡ್ ನಲ್ಲಿ ಬಿಗ್ ಬಿ ಅಂತಾನೆ ಖ್ಯಾತಿ ಪಡೆದಿರುವ ಅಮಿತಾಬ್​​ ಬಚ್ಚನ್ ಅವರ ಮನೆಯಲ್ಲೂ ಸಹ ಕ್ಯೂಟ್ ಆದ ಮೊಮ್ಮಗಳು ಇದ್ದಾಳೆ. ಆಕೆ ಅಮಿತಾಭ್ ಅವರ ಮಗ ಅಭಿಷೇಕ್ ಮತ್ತು ಐಶ್ವರ್ಯ ಅವರ ಮಗಳು ಆರಾಧ್ಯ.


ಕೆಬಿಸಿಯಲ್ಲಿ ಬಿಗ್ ಬಿ ಅವರಿಗೆ ಮೊಮ್ಮಗಳು ಆರಾಧ್ಯ ಅವರ ಬಗ್ಗೆ ಕೇಳಿದ ಸ್ಪರ್ಧಿ
ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ ಗೇಮ್ ಶೋ ನ 14ನೇ ಸೀಸನ್ ನ ಸಂಚಿಕೆಯೊಂದರಲ್ಲಿ ಆಟವಾಡಲು ಹಾಟ್ ಸೀಟ್ ಗೆ ಬಂದಂತಹ ಸ್ಪರ್ಧಿಯೊಬ್ಬರು ಅಮಿತಾಬ್ ಅವರಿಗೆ ಅವರ ಮೊಮ್ಮಗಳು ಆರಾಧ್ಯ ಬಗ್ಗೆ ಕೇಳಿದ್ದಾರೆ ನೋಡಿ.


ಕೆಬಿಸಿ ಗೇಮ್ ಶೋ ಆಡಲು ಬಂದ ಸ್ಪರ್ಧಿ ವೈಷ್ಣವಿ ಯಾರು?
ಕೆಬಿಸಿಯ ಇತ್ತೀಚಿನ ಸಂಚಿಕೆಯಲ್ಲಿ, ನಾವು ಕೆಬಿಸಿಯ ಈ ಸೀಸನ್ ನ ಅತ್ಯಂತ ಕಿರಿಯ ಸ್ಪರ್ಧಿ ವೈಷ್ಣವಿ ಕುಮಾರಿಯನ್ನು ನೋಡಿದ್ದೇವು. ಅವರು ಕಂಟೆಂಟ್ ರೈಟರ್ ಆಗಿ ಮೂರು ತಿಂಗಳಿನಿಂದ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: Samantha: ಸದ್ಗುರು ಮಾತಿನಿಂದ ಮನಸ್ಸು ಬದಲಾಯಿಸಿದ ಸಮಂತಾ, ಡೈವೋರ್ಸ್​ ಪಡೆದ ಒಂದೇ ವರ್ಷದಲ್ಲೇ ಮರು ಮದುವೆ?


ವೈಷ್ಣವಿ ಅವರು ಕೊರಿಯನ್ ನಾಟಕ ಮತ್ತು ಜಪಾನೀಸ್ ಮಂಗಾ ಬಗ್ಗೆ ಬರೆಯುತ್ತಾರೆ. ಅವಳು ಒಂದೊಮ್ಮೆ ವರದಿಗಾರ್ತಿ ಸಹ ಆಗಿದ್ದಳಂತೆ ಮತ್ತು ಅವಳು ಎಂದಿಗೂ ಯಾವೊಬ್ಬ ಸೆಲೆಬ್ರಿಟಿಯನ್ನು ಸಂದರ್ಶನ ಮಾಡಿಲ್ಲವಂತೆ. ಆಕೆ ಅಮಿತಾಭ್ ಬಚ್ಚನ್ ಅವರನ್ನು ಸಂದರ್ಶಿಸಲು ಬಯಸುತ್ತೇನೆ ಎಂದು ಶೋ ದಲ್ಲಿ ಹೇಳಿಕೊಂಡರು.


ಬಿಗ್ ಬಿ ಮೊಮ್ಮಗಳು ಆರಾಧ್ಯ ಬಗ್ಗೆ ಪ್ರಶ್ನೆ ಕೇಳಿದ ವೈಷ್ಣವಿ
ಆಗ ಆಕೆ ಅಮಿತಾಬ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾಳೆ. ವೈಷ್ಣವಿ, ಬಿಗ್ ಬಿ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಬಗ್ಗೆ ಪ್ರಶ್ನೆಯೊಂದನ್ನು ಕೇಳುತ್ತಾಳೆ. ಅವಳೊಂದಿಗೆ ಸಮಯ ಕಳೆಯಲು ನಿಮಗೆ ಹೇಗೆ ಸಮಯ ಸಿಗುತ್ತದೆ ಎಂದು ಅಮಿತಾಭ್ ಅವರನ್ನು ಕೇಳಿದರು.


ಬಿಗ್ ಬಿ ನೀಡಿದ ಉತ್ತರ..
ಆ ಪ್ರಶ್ನೆಗೆ ಬಿಗ್ ಬಿ ಅವರು ತಮ್ಮ ಮೊಮ್ಮಗಳೊಂದಿಗೆ ಆಟವಾಡಲು ಅವರಿಗೆ ಹೆಚ್ಚು ಸಮಯ ಸಿಗುವುದಿಲ್ಲ ಅಂತ ಹೇಳಿದರು. "ಅವಳು ಬೆಳಗ್ಗೆ ಶಾಲೆಗೆ ಹೊರಡುತ್ತಾಳೆ.  ಆ ಸಮಯದಲ್ಲಿ ನಾನು ನನ್ನ ಚಿತ್ರೀಕರಣಕ್ಕೆ ಹೊರಡುತ್ತೇನೆ. ಅವಳು ಮಧ್ಯಾಹ್ನ ಶಾಲೆಯಿಂದ ಹಿಂದಿರುಗಿದಾಗ, ಅವಳ ತಾಯಿ ಐಶ್ವರ್ಯ ಆಕೆಗೆ ಹೊಂವರ್ಕ್ ಮಾಡಿಸುತ್ತಾರೆ.


ಇದನ್ನೂ ಓದಿ:  Koffee with Karan 7: ಡ್ರಗ್ಸ್​ ಕೇಸ್​ನಲ್ಲಿ ಬಂಧಿಯಾಗಿದ್ದ ಆರ್ಯನ್ ಬಗ್ಗೆ ತಾಯಿ ಗೌರಿ ಖಾನ್ ಏನ್ ಹೇಳಿದ್ರು ಗೊತ್ತಾ?


ಸಂಜೆ ಹೊತ್ತಿನಲ್ಲಿ ನಾನು ತುಂಬಾ ತಡವಾಗಿ ಮನೆಗೆ ಮರಳುತ್ತೇನೆ. ನಾವು ಕೆಲವೊಮ್ಮೆ ಫೇಸ್ಟೈಮ್ ಮೂಲಕ ಸಂಪರ್ಕದಲ್ಲಿರುತ್ತೇವೆ. ಕೆಲವೊಮ್ಮೆ ಅವಳು ನನ್ನ ಮೇಲೆ ಕೋಪಗೊಳ್ಳುತ್ತಾಳೆ. ಆಗ ನಾನು ಅವಳ ನೆಚ್ಚಿನ ಗುಲಾಬಿ ಬಣ್ಣದ ಹೇರ್ ಬ್ಯಾಂಡ್ ಗಳು ಮತ್ತು ಕ್ಲಿಪ್ ಗಳನ್ನು ಉಡುಗೊರೆಯಾಗಿ ನೀಡುತ್ತೇನೆ ಮತ್ತು ಅದನ್ನು ನೋಡಿ ಆಕೆ ಖುಷಿ ಪಡುತ್ತಾಳೆ" ಎಂದು ಅಮಿತಾಬ್ ಅವರು ಶೋ ನಲ್ಲಿ ಹೇಳಿದರು.

Published by:Ashwini Prabhu
First published: