Akshaye Khanna: ಬೋಳುತಲೆ ಇದ್ದರೇನಾಯ್ತು? ನಟ ಅಕ್ಷಯ್ ಖನ್ನಾ ಹೀಗಂತಾರೆ

ಅಕ್ಷಯ್ ಖನ್ನಾ ಅವರ ಅಭಿಮಾನಿ ನೀವು ಆಗಿದ್ದರೆ ಇವರಿಗೆ ಚಿಕ್ಕ ವಯಸ್ಸಿನವರಿದ್ದಾಗಲೇ ಕೂದಲು ಹೋಗಿರುವುದರ ಬಗ್ಗೆ ನಿಮಗೆ ತಿಳಿದಿರುತ್ತದೆ. ಹೀಗೆ ಹಿಂದೊಮ್ಮೆ ಹಳೆಯ ಸಂದರ್ಶನವೊಂದರಲ್ಲಿ, ಅಕ್ಷಯ್ ತನ್ನ ನೋಟದ ಬಗ್ಗೆ ಮತ್ತು ತನ್ನ ಬೋಳು ತಲೆಯ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಇಲ್ಲಿದೆ ನೋಡಿ

ಅಕ್ಷಯ್ ಖನ್ನಾ

ಅಕ್ಷಯ್ ಖನ್ನಾ

  • Share this:
ನೀವು 1997ರಲ್ಲಿ ಬಿಡುಗಡೆಯಾದಂತಹ ಹಿಂದಿ ಚಲಚಿತ್ರ (Hindi Cinema) ‘ಬಾರ್ಡರ್’ ಅನ್ನು ನೋಡಿದ್ದರೆ, ಅದರಲ್ಲಿ ನಟಿ ಪೂಜಾ ಭಟ್ (Pooja Bhat) ಅವರ ಪ್ರಿಯತಮನಾಗಿ ಮತ್ತು ಭಾರತೀಯ ಸೈನ್ಯದ ಯುವ ಅಧಿಕಾರಿಯಾಗಿ ನಟಿಸಿದ್ದ ಸ್ಪುರದ್ರೂಪಿ ನಟ ಅಕ್ಷಯ್ ಖನ್ನಾ (Akshaye Khanna) ಅವರ ನಟನೆ ನಿಮಗೆ ಇನ್ನೂ ನೆನಪಿರುತ್ತದೆ. ಹೌದು ನಾವು ಅದೇ 25 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅಕ್ಷಯ್ ಖನ್ನಾ ಅವರ ಬಗ್ಗೆ ಮಾತಾಡುತ್ತಿದ್ದೇವೆ. ಈಗೇಕೆ ಈ ನಟನ ಬಗ್ಗೆ ಮಾತು ಅಂತೀರಾ. ಈ ನಟನ ಅಭಿಮಾನಿ ನೀವು ಆಗಿದ್ದರೆ ಇವರಿಗೆ ಚಿಕ್ಕ ವಯಸ್ಸಿನವರಿದ್ದಾಗಲೇ ಕೂದಲು ಹೋಗಿರುವುದರ (Hair Fall) ಬಗ್ಗೆ ನಿಮಗೆ ತಿಳಿದಿರುತ್ತದೆ. ಹೀಗೆ ಹಿಂದೊಮ್ಮೆ ಹಳೆಯ ಸಂದರ್ಶನವೊಂದರಲ್ಲಿ, ಅಕ್ಷಯ್ ತನ್ನ ನೋಟದ ಬಗ್ಗೆ ಮತ್ತು ತನ್ನ ಬೋಳು ತಲೆಯ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಇಲ್ಲಿದೆ ನೋಡಿ

ಬೋಳು ತಲೆಯ ಬಗ್ಗೆ ಮಾತನಾಡಿದ ಅಕ್ಷಯ್
“ಬೇರೆಯವರಿಗೆ ಹೋಲಿಸಿ ನೋಡಿದಾಗ ನನಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ನನ್ನ ಕೂದಲು ಉದುರಲು ಶುರುವಾಯಿತು” ಎಂದು ಅವರು ಆ ಹಳೆಯ ಸಂದರ್ಶನದಲ್ಲಿ ಹೇಳಿದ್ದರು. ನಟ ಅಕ್ಷಯ್ ಕೊನೆಯದಾಗಿ ಝೀ 5 ಚಿತ್ರ ಸ್ಟೇಟ್ ಆಫ್ ಸೀಜ್: ಟೆಂಪಲ್ ಅಟ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದರು.

ಅಕ್ಷಯ್ ಅವರ ಹೆಸರುವಾಸಿ ಸಿನೆಮಾಗಳು
25 ವರ್ಷಗಳ ವೃತ್ತಿಜೀವನದಲ್ಲಿ, ಅಕ್ಷಯ್ ಬಾರ್ಡರ್ (1997), ತಾಲ್ (1999), ದಿಲ್ ಚಾಹ್ತಾ ಹೈ (2001), ಹಮ್ರಾಜ್ (2002), ಹಂಗಾಮಾ (2003), ಹಲ್ಚಲ್ (2004), ಗಾಂಧಿ ಮೈ ಫಾದರ್ (2007), ರೇಸ್ (2008), ಮಾಮ್ (2017), ಸೆಕ್ಷನ್ 375 (2020) ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಪಿಯಾನೋ ನುಡಿಸುವ ವ್ಯಕ್ತಿಯು ತನ್ನ ಬೆರಳುಗಳನ್ನು ಕಳೆದು ಕೊಂಡಂತೆ!
2020 ರಲ್ಲಿ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, ಅಕ್ಷಯ್ ತನ್ನ ನೋಟ ಮತ್ತು ಕೂದಲಿನ ಬಗ್ಗೆ ಮಾತನಾಡುತ್ತಾ "ಚಿಕ್ಕ ವಯಸ್ಸಿನಲ್ಲಿಯೇ ನಾನು ನನ್ನ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ, ನನಗೆ ಇದು ಒಬ್ಬ ಪಿಯಾನೋ ನುಡಿಸುವ ವ್ಯಕ್ತಿಯು ತನ್ನ ಬೆರಳುಗಳನ್ನು ಕಳೆದು ಕೊಂಡಂತೆ ಅನ್ನಿಸುತ್ತಿತ್ತು. ಆ ದಿನಗಳಲ್ಲಿ, ನೀವು ಅದನ್ನು ಒಪ್ಪಿಕೊಳ್ಳುವುದಕ್ಕೂ ಮುಂಚೆ ಅದು ನಿಮ್ಮನ್ನು ತುಂಬಾನೇ ಕಾಡುತ್ತಾ ಇರುತ್ತದೆ. ನೀವು ಕ್ರೀಡಾಪಟುವಾಗಿದ್ದು, ನಿಮಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅಂದುಕೊಳ್ಳಿರಿ, ನನ್ನ ಪರಿಸ್ಥಿತಿಯು ಇದೇ ರೀತಿಯಲ್ಲಿತ್ತು, ಇದರಿಂದಾಗಿ ವೃತ್ತಿಜೀವನದ ಒಂದು ಅಥವಾ ಎರಡು ವರ್ಷಗಳನ್ನು ಕಳೆದುಕೊಂಡಿರಬಹುದು" ಎಂದು ಅವರು ಹೇಳಿದರು.

‘ಕಾಫಿ ವಿತ್ ಕರಣ್’ ಶೋ ನಲ್ಲಿ ಅಕ್ಷಯ್ ಖನ್ನಾ
ನಟ ಅಕ್ಷಯ್ ಈ ವಿಷಯದ ಬಗ್ಗೆ ಮಾತನಾಡುತ್ತಿರುವುದು ಇದೇನು ಮೊದಲನೇ ಬಾರಿ ಅಲ್ಲ ಬಿಡಿ. ಈ ಹಿಂದೆಯೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋ ನಲ್ಲಿ ರ್‍ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ, ಅಕ್ಷಯ್ ಅವರನ್ನು ಬಾಲಿವುಡ್ ನಲ್ಲಿ ಕೆಟ್ಟ ಕೇಶ ವಿನ್ಯಾಸವನ್ನು ಹೊಂದಿರುವವರು ಯಾರು ಎಂದು ಕೇಳಿದಾಗ ತಮ್ಮ ಹೆಸರನ್ನೇ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: Nayanthara Honeymoon: ಹನಿಮೂನ್​ನಲ್ಲಿ ನಯನತಾರಾ-ವಿಘ್ನೇಶ್​ ರೊಮ್ಯಾನ್ಸ್​! ವಿದೇಶಕ್ಕೆ ಹೋದ್ರೂ ಪಾಪ ಫ್ಯಾನ್ಸ್​ ಕಾಟ ತಪ್ಪಲಿಲ್ವಂತೆ

ಈ ಬಗ್ಗೆ ಕರಣ್ ಅವರು ಅಕ್ಷಯ್ ಅವರನ್ನು ಕೇಳಿದಾಗ ಅಕ್ಷಯ್ ನಗುತ್ತಾ "ಕೆಲವರಿಗೆ ಬೆನ್ನು ನೋವುಗಳಿವೆ, ಕೆಲವರಿಗೆ ಕಣ್ಣು ನೋವು ಇವೆ, ಕೆಲವರಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ, ಶ್ರವಣ ಸಾಧನಗಳು ಬೇಕು. ಇದು ಜೀವನದ ಒಂದು ಭಾಗ. ನಾನು ಅದನ್ನು ಹೇಗೆ ನೋಡುತ್ತೇನೆ, ಕೆಲವರು ನಾನು ಸಂಪೂರ್ಣವಾಗಿ ದಡ್ಡ ಎಂದು ಭಾವಿಸಬಹುದು. ನನಗೆ ಇದು ತುಂಬಾನೇ ದೊಡ್ಡ ವಿಷಯ ಅಂತ ಅನ್ನಿಸುವುದಿಲ್ಲ, ಇದು ನನಗೆ ತೀರಾ ಚಿಕ್ಕ ವಿಷಯ” ಎಂದು ನಟ ಹೇಳಿದ್ದರು.

ಇದನ್ನೂ ಓದಿ: Virat Kohli: ಸ್ಯಾಂಡಲ್​ವುಡ್​ಗೆ ಕಾಲಿಟ್ರಾ ಕಿಂಗ್​ ಕೊಹ್ಲಿ? ಕನ್ನಡ ಸಿನಿಮಾದ ಪೋಸ್ಟರ್​ ಸಿಕ್ಕಾಪಟ್ಟೆ ವೈರಲ್

ದೃಶ್ಯಂ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ
ಅಕ್ಷಯ್ ಪ್ರಸ್ತುತ ದೃಶ್ಯಂ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ ಮತ್ತು ಟಬು ಮತ್ತು ಅಜಯ್ ದೇವಗನ್ ಅವರ 2015 ರ ಕ್ರೈಮ್ ಥ್ರಿಲ್ಲರ್ ದೃಶ್ಯಂ ಚಿತ್ರದ ಮುಂದುವರಿದ ಭಾಗವಾಗಿದೆ.
Published by:Ashwini Prabhu
First published: