Rashmika Mandanna: 'ವಾಟ್ಟೇ ಬ್ಯೂಟಿ...' ಹಾಡಿಗಾಗಿ ರಶ್ಮಿಕಾ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಗೊತ್ತಾ..? ಇಲ್ಲಿದೆ ವಿಡಿಯೋ..!

Rashmika Mandanna: 'ಕಿರಿಕ್ ಪಾರ್ಟಿ' ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, 'ಚಲೋ' ಅಂತ ಟಾಲಿವುಡ್​ ಹಾಗೂ ಕಾಲಿವುಡ್​ನತ್ತ ಮುಖ ಮಾಡಿದ ರಶ್ಮಿಕಾ ಈಗ ಸ್ಟಾರ್​ ನಟಿ. ಅಭಿನಯದ ಜೊತೆಗೆ ಡಾನ್ಸ್​ ಅನ್ನೂ ಕಲಿಯುತ್ತಾ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ. ಅವರ ಅಭಿನಯದ 'ಭೀಷ್ಮಾ' ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

'ಭೀಷ್' ಸಿನಿಮಾದ ಪೋಸ್ಟರ್​ನಲ್ಲಿ ರಶ್ಮಿಕಾ ಹಾಗೂ ನಿತಿನ್​

'ಭೀಷ್' ಸಿನಿಮಾದ ಪೋಸ್ಟರ್​ನಲ್ಲಿ ರಶ್ಮಿಕಾ ಹಾಗೂ ನಿತಿನ್​

  • Share this:
ರಶ್ಮಿಕಾ ಗೆ ಈಗ ತಮಿಳಿನಲ್ಲಿ ಮತ್ತೋರ್ವ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಈಗಾಗಲೇ ಕಾರ್ತಿ ಜೊತೆ 'ಸುಲ್ತಾನ್​' ಸಿನಿಮಾದಲ್ಲಿ ನಟಿಸುತ್ತಿರುವ ಅವರಿಗೆ ಸೂರ್ಯ ಜೊತೆ ನಟಿಸುವ ಆಫರ್​ ಅರಸಿ ಬಂದಿದೆಯಂತೆ.

'ಕಿರಿಕ್ ಪಾರ್ಟಿ' ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, 'ಚಲೋ' ಅಂತ ಟಾಲಿವುಡ್​ ಹಾಗೂ ಕಾಲಿವುಡ್​ನತ್ತ ಮುಖ ಮಾಡಿದ ರಶ್ಮಿಕಾ ಈಗ ಸ್ಟಾರ್​ ನಟಿ. ಅಭಿನಯದ ಜೊತೆಗೆ ಡಾನ್ಸ್​ ಅನ್ನೂ ಕಲಿಯುತ್ತಾ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ. ಅವರ ಅಭಿನಯದ 'ಭೀಷ್ಮಾ' ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಹೌದು, ನಾಯಕ ನಿತಿನ್​ ಜೊತೆ ಅಭಿನಯಿಸುತ್ತಿರುವ 'ಭೀಷ್ಮಾ' ಚಿತ್ರದ ಹಾಡಿನ ಪ್ರೊಮೊ ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಅದರ ಲಿರಿಕಲ್ ವಿಡಿಯೋ ಈಗ ರಿಲೀಸ್​ ಆಗಿದೆ.ಇಂತಹ ರಶ್ಮಿಕಾ ಬಗ್ಗೆ ಸಾಮಾನ್ಯವಾಗಿ ಒಂದು ಅಸಮಧಾನವಿತ್ತು. ಅವರಿಗೆ ಸರಿಯಾಗಿ ಡಾನ್ಸ್​ ಮಾಡೋಕೆ ಬರೋಲ್ಲ ಅಂತ. ಆದರೆ ಈಗ ಅದು 'ಭೀಷ್ಮಾ'ದ 'ವಾಟ್ಟೇ ಬ್ಯೂಟಿ...' ಹಾಡಿನಿಂದ ದೂರಾಗಿದೆ. ಪಕ್ಕಾ ಮಾಸ್​ ಹಾಡಿನಲ್ಲಿ ಕ್ಲಾಸ್​ ಆಗಿ ಕುಣಿದಿದ್ದಾರೆ. ಈ ಹಾಡಿಗೆ ಲಕ್ಷಗಟ್ಟಲೆ ವೀಕ್ಷಣೆ ಸಿಗುತ್ತಿದೆ.

ಇದನ್ನೂ ಓದಿ: ಒಂದು ಸಿನಿಮಾಗೆ ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ದಕ್ಷಿಣ ಭಾರತದ ಈ ಸ್ಟಾರ್​ ನಟ..!

ಈ ಹಾಡಿಗಾಗಿ ರಶ್ಮಿಕಾ ಹೇಗೆಲ್ಲ ಅಭ್ಯಾಸ ಮಾಡಿದ್ದಾರೆ ಎಂದೂ ಈ ಲಿರಿಕಲ್​ ವಿಡಿಯೋದಲ್ಲಿ ತೋರಿಸಲಾಗಿದೆ. ಇದರಲ್ಲಿ ಯೋಗಾಸನದ ಸ್ಟೆಪ್ ಸೇರಿದಂತೆ ಥರವೇವಾರಿ ಸ್ಟೈಲ್‍ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ ರಶ್ಮಿಕಾ.

ವೆಂಕಿ ಕುಡುಮುಲ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಇದೇ ಗುರುವಾರ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿದೆ ಚಿತ್ರತಂಡ. ಎಲ್ಲ ಅಂದುಕೊಂಡಂತಾದರೆ ಇದೇ ತಿಂಗಳ 21ರಂದು 'ಭೀಷ್ಮಾ' ತೆರೆಗಪ್ಪಳಿಸಲಿದ್ದಾನೆ.

ಜೇಮ್ಸ್​ ಸಿನಿಮಾದಲ್ಲಿ ಪುನೀತ್ ನಾಯಕಿಯಾಗಲಿದ್ದಾರಂತೆ ಈ ಕನ್ನಡತಿ..!


 

First published: