• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Lata Mangeshkar: ವಜ್ರ-ಮುತ್ತುಗಳೆಂದರೆ ಲತಾಜೀಗೆ ಪಂಚಪ್ರಾಣ.. ಅವರ ಬಳಿ ಇದ್ದ ಒಡವೆಗಳೆಲ್ಲಾ ಏನಾಯ್ತು?

Lata Mangeshkar: ವಜ್ರ-ಮುತ್ತುಗಳೆಂದರೆ ಲತಾಜೀಗೆ ಪಂಚಪ್ರಾಣ.. ಅವರ ಬಳಿ ಇದ್ದ ಒಡವೆಗಳೆಲ್ಲಾ ಏನಾಯ್ತು?

ಲತಾ ಮಂಗೇಶ್ಕರ್​

ಲತಾ ಮಂಗೇಶ್ಕರ್​

ಲತಾ ಮಂಗೇಶ್ಕರ್ ತುಂಬಾ ಇಷ್ಟವಪಡುವ ವಿಚಾರಗಳಲ್ಲಿ ವಜ್ರ(Diamond) ಹಾಗೂ ಮುತ್ತುಗಳೂ(Pearls) ಇವೆ. ಮಹಿಳೆಯರಿಗೆ ಒಡವೆ, ವಸ್ತ್ರದ ಕುರಿತು ಅಪಾರ ಆಸಕ್ತಿ ಇರುವುದು ಸಾಮಾನ್ಯ.

  • Share this:

ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೋಟಿ ಕೋಟಿ ಜನರ ಮನಸನ್ನು ಗೆದ್ದ ಗಾನಕೋಗಿಲೆ ಲತಾ ಮಂಗೇಶ್ಕರ್(Lata Mangeshkar) ಇನ್ನು ನೆನಪು ಮಾತ್ರ. ಅವರು ಹಾಡಾಗಿ ಅವರ ಅಭಿಮಾನಿಗಳ ಜೊತೆ ಬದುಕಲಿದ್ದಾರೆ. ಭಾನುವಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಖ್ಯಾತ ಗಾಯಕಿ(Singer) ತಮ್ಮ ಸುಮಧುರ ಕಂಠ, ಅದ್ಭುತ ಹಾಡುಗಳ ಮೂಲಕ ವಿಶ್ವಾದ್ಯಂತ ಹೆಸರು ಮಾಡಿದ್ದರು. ಚಿತ್ರರಂಗದ ಜೊತೆಗೆ ಮುಖ್ಯವಾಗಿ ಬಾಲಿವುಡ್(Bollywood) ಜೊತೆಗೆ ವಿಶೇಷ ಸಂಬಂಧ ಹೊಂದಿದ್ದ ಲತಾ ಅವರ ಹಾಡುಗಳು ಸಿನಿರಂಗದಲ್ಲಿ ರಾರಾಜಿಸಿವೆ. ಅದೆಷ್ಟೂ ಸಿನಮಾಗಳಿಗೆ ಜೀವ ತುಂಬಿದೆ. ತಂದೆಯ ಸಾವಿನ ನಂತರ ಕುಟುಂಬ ನಿರ್ವಹಣೆಗಾಗಿ ಹಾಡಲಾರಂಭಿಸಿದ ಅವರು ದೇಶವೇ ಮೆಚ್ಚುವ ಅದ್ಭುತ ಗಾಯಕಿಯಾಗಿ ಬೆಳೆದರು. ಸಂಗೀತವನ್ನು ಪ್ರೀತಿಸುವ ಲತಾ ಅವರಿಗೆ ಕ್ರಿಕೆಟ್‌(Cricket) ಕುರಿತು ಇಷ್ಟವಿತ್ತು. ಹಾಗೆಯೇ ಅವರ ಇನ್ನೊಂದು ನೆಚ್ಚಿನ ವಿಷಯವಿದೆ. ಅದೇನು ಗೊತ್ತಾ?


ವಜ್ರಾ, ಮುತ್ತುಗಳು ಅಂದರೆ ಲತಾ ಮಂಗೇಶ್ಕರ್​ಗೆ ಇಷ್ಟ!


ಹೌದು. ಲತಾ ಮಂಗೇಶ್ಕರ್ ತುಂಬಾ ಇಷ್ಟವಪಡುವ ವಿಚಾರಗಳಲ್ಲಿ ವಜ್ರ(Diamond) ಹಾಗೂ ಮುತ್ತುಗಳೂ(Pearls) ಇವೆ. ಮಹಿಳೆಯರಿಗೆ ಒಡವೆ, ವಸ್ತ್ರದ ಕುರಿತು ಅಪಾರ ಆಸಕ್ತಿ ಇರುವುದು ಸಾಮಾನ್ಯ. ಇದು ಭಾರತ ಎಂದಲ್ಲ, ಪ್ರಪಂಚದಾದ್ಯಂತ ಹೆಣ್ಮಕ್ಕಳು ಇರುವುದು ಹೀಗೆಯೇ. ಇನ್ನು ಭಾರತದ ಮಹಿಳೆಯರು ಪುರಾತನ ಕಾಲದಿಂದಲೂ ಅದ್ಭುತವಾಗಿ ಆಭರಣ ಸಂಗ್ರಹ, ರೇಶಿಮೆ ಉಡುಪುಗಳು ಸಂಗ್ರಹವನ್ನು ಹೊಂದಿದ್ದರು. ಇಂದಿಗೂ ಅದು ಹಾಗೆಯೇ. ಲತಾ ಮಂಗೇಶ್ಕರ್ ಅವರೂ ಆಭರಣ ಪ್ರಿಯರು, ಹಾಗೆಂದು ಮಣಭಾರದ ಚಿನ್ನ ತುಂಬಿಸಿ, ಒಡವೆ ಹೇರಿ ಅವರು ಕಾಣಿಸಿಕೊಂಡಿದ್ದಿಲ್ಲ. ಆದರೆ ವಜ್ರ ಹಾಗೂ ಮುತ್ತುಗಳೆಂದರೆ ಅವರಿಗೆ ವಿಶೇಷ ಪ್ರೀತಿ ಇದೆ.


ನೆಚ್ಚಿನ ಒಡವೆಗಳಿಗೆ ವಿಶೇಷ ಲಾಕರ್


ಲತಾ ಮಂಗೇಶ್ಕರ್ ಅವರಿಗೆ ವಜ್ರ ಹಾಗೂ ಮುತ್ತಿನ ಆಭರಣಗಳ(Jewelry) ಬಗ್ಗೆ ವಿಶೇಷ ಆಸಕ್ತಿ ಇತ್ತು. ಪೆಡ್ಡರ್ ರೋಡ್ ಅಪಾರ್ಟ್‌ಮೆಂಟ್‌ನಲ್ಲಿದ್ದ ಲತಾ ಅವರ ಅಪಾರ್ಟ್‌ಮೆಂಟ್‌ನಲ್ಲಿದ್ದ ಲಾಕ್‌ನಲ್ಲಿ ಅವರ ಎಲ್ಲ ಫೇವರೇಟ್ ಆಭರಣಗಳಿದ್ದವು.
ಲತಾ ಅವರ ಎಲ್ಲ ನೆಚ್ಚಿನ ಆಭರಣಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಸಂಗ್ರಹಿಸಲಾಗುತ್ತದೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಲತಾ ದೀದಿ ಅವರು ತಮ್ಮ ಕಿವಿಯೋಲೆಗಳ ಬಗ್ಗೆ ಅತ್ಯಂತ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದರು.


ಇದನ್ನೂ ಓದಿ: ಮೊದಲ ವಿಶ್ವಕಪ್ ಗೆದ್ದ ಭಾರತದ ಕ್ರಿಕೆಟ್ ತಂಡಕ್ಕೆ ಹಣ ಹೊಂದಿಸಿದ್ದು ಲತಾ ಮಂಗೇಶ್ಕರ್!


ಅದರಲ್ಲೂ ಸಾಲಿಟೈರರ್ಸ್(Solitaire) ಅವರ ನೆಚ್ಚಿನದಾಗಿತ್ತು. ಅವರ ನೆಚ್ಚಿನ ಬಿಳಿ ಸೀರೆಗಳೊಂದಿಗೆ ಅವರು ಯಾವಾಗಲೂ ತಮ್ಮ ಹೊಳೆಯುವ ವಜ್ರದ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಿದ್ದರು. ಅವರ ಲುಕ್ ಬಗ್ಗೆ ಅವರು ಸ್ಪಷ್ಟತೆ ಹೊಂದಿದ್ದರು. ಹೊರಗೆ ಜನರ ಮುಂದೆ ಕಾಣಿಸಿಕೊಂಡಾಗ ಹೀಗೆ ಕಾಣಬೇಕೆಂದು ಪ್ರತ್ಯೇಕವಾಗಿ ಬಯಸುತ್ತಿದ್ದರು. ಅವರ ಸೀರೆ ಹಾಗೂ ವಜ್ರದ ಕಿವಿಯೋಲೆಗಳನ್ನು ಧರಿಸಿದರೆ ದೇವತೆಯಂತೆ ಕಾಣುತ್ತಿದ್ದರು.


ಜ್ಯುವೆಲ್ಲರಿ ವಿನ್ಯಾಸಕಿಯಾಗಿದ್ದರು ಲತಾ ಮಂಗೇಶ್ಕರ್​


2005 ರಲ್ಲಿ ತಮ್ಮ ರಚನಾತ್ಮಕ ಪ್ರತಿಭೆಯನ್ನು ಬಳಸಿದ ಲತಾ ಮಂಗೇಶ್ಕರ್(Lata Mangeshkar) ಅವರು ವಜ್ರವನ್ನು ರಫ್ತು ಮಾಡುವ ಅಡೊರ ಎಂಬ ಕಂಪನಿಗೆ ಡಿಸೈನ್ ಮಾಡಿಕೊಟ್ಟಿದ್ದರು. ವಜ್ರದ ಆಭರಣ(Diamond) ಖರೀದಿಸಲು ಹೋಗಿದ್ದ ಸಂದರ್ಭ ಲತಾ ಮಂಗೇಶ್ಕರ್ ಹಾಗೂ ಅಡೊರಾ ನಿರ್ದೇಶಕರು ಒರಸ್ಪರ ಭೇಟಿಯಾಗಿದ್ದರು. ಅಲ್ಲಿಂದ ಈ ಟೈ ಅಪ್ ಬೆಳೆಯಿತು. ಲತಾ ಅವರ ಲೈನ್‌ನಲ್ಲಿರುವ ವಜ್ರದ ಆಭರಣಗಳು ವಿಶೇಷ ವಿನ್ಯಾಸದ ಸಿಗ್ನೇಚರ್ ಡಿಸೈನ್‌ಗಳಾಗಿವೆ.


ಇದನ್ನು ಓದಿ: ಚಂದನವನದಲ್ಲೂ ಹಾಡಿತ್ತು ‘ಗಾನ ಕೋಗಿಲೆ‘! ಕನ್ನಡಿಗರೆದೆಯಲ್ಲಿ 'ಬೆಳಕು' ಮೂಡಿಸಿದ್ದ ಲತಾ


ಅವರ ವಿನ್ಯಾಸದ ವಜ್ರದ ಆಭರಣಗಳ ಸಂಗ್ರಹವನ್ನು ಸ್ವರಾಂಜಲಿ ಎಂದು ಕರೆಯಲಾಗಿದೆ. ಅವುಗಳನ್ನು ಐದನ್ನು ಕ್ರಿಸ್ಟೀಸ್ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಸುಮಾರು 7,83,903 ಸಂಗ್ರಹವಾಗಿತ್ತು. ಅದನ್ನು ಲತಾ ಮಂಗೇಶ್ಕರ್ ಅವರು 2005 ಕಾಶ್ಮೀರ ಭೂಕಂಪ ಪರಿಹಾರಕ್ಕೆ ನೀಡಿದ್ದರು.


(ವರದಿ- ದಿವ್ಯಾ ಡಿ)

First published: