ಕೂಡು ಕುಟುಂಬದ (Joint Family) ಹಾಗೂ ತಮ್ಮ ಕುಟುಂಬದ ಸದಸ್ಯರ ಮಧ್ಯದ ಅನ್ಯೋನ್ಯತೆಯನ್ನು ಕೇಂದ್ರವಾಗಿಸಿಕೊಂಡು ಹೊಸದಾಗಿ ಆರಂಭವಾದ ಧಾರವಾಹಿ 'ಜೇನುಗೂಡು' (Jenu goodu) . ಜೇನುಗೂಡು ಧಾರವಾಹಿಯಲ್ಲಿ ಇದೀಗ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಕುಟುಂಬದ ಎಲ್ಲಾ ಸದಸ್ಯರು ಮದುವೆಯ ತಯಾರಿಯಲ್ಲಿ (Marriage Preparation) ಬ್ಯುಸಿಯಾಗಿ ಬಿಟ್ಟಿದ್ದಾರೆ. ದಿಯಾ (Diya ಹಾಗೂ ಶಶಾಂಕ್ (Shashank) ಪರಸ್ಪರ ಎಷ್ಟೇ ಜಗಳವಾಡಿದರೂ ಮನದ ಮೂಲೆಯಲ್ಲಿ ಇವರಿಬ್ಬರಿಗೂ ಪ್ರೀತಿಯ ಭಾವನೆ ಎನ್ನುವುದಂತು ಸತ್ಯ. ಜಗಳದ ಜೊತೆಜೊತೆಗೆ ಇವರಿಬ್ಬರ ಮಧ್ಯೆ ಪ್ರೀತಿಯ ಭಾವನೆ ಅಡಗಿದೆ, ಅದೇ ರೀತಿ ಒಬ್ಬರಿಗೊಬ್ಬರು ಕೇರ್ ಮಾಡಲು ಶುರು ಮಾಡಿದ್ದಾರೆ.
ಪರಸ್ಪರ ಇಷ್ಟವಿಲ್ಲದೆ ನಡೆಯುತ್ತಿರುವ ಈ ಮದುವೆಯು ಒಂದು ಅಗ್ರಿಮೆಂಟ್ ಮೂಲಕವೇ ನಡೆದಿದೆ. ಆದರೆ ಮುಂದೊಂದು ದಿನ ಚೆನ್ನಾಗಿ ಜೀವನ ನಡೆಸುತ್ತಾರೆ ಎಂಬ ಭರವಸೆ ಹುಟ್ಟಿಕೊಂಡಿತ್ತು.
ಆದರೆ ಅದ್ಯಾಕೋ ಜೇನುಗೂಡಿನ ಮನೆಯಲ್ಲಿ ಹುಟ್ಟಿಕೊಂಡ ಒಂದು ಸಮಸ್ಯೆಯಿಂದ ಮದುವೆ ಅರ್ಧದಲ್ಲಿ ನಿಲ್ಲುವ ಲಕ್ಷಣಗಳು ಕಾಣಿಸುತ್ತಿದೆ. ಕುಟುಂಬದ ಎಲ್ಲಾ ಸದಸ್ಯರನ್ನು ನಕ್ಕು ನಗಿಸುತ್ತಿದ್ದ ಹಾಗೂ ದಿಯಾ ಶಶಾಂಕ್ ನಡುವೆ ಪ್ರೀತಿ ಚಿಗುರುವಂತೆ ಮಾಡಿದ್ದ ಶಶಾಂಕನ ಚಿಕ್ಕಪ್ಪ ಕುಕ್ಕಿ ಯ ಮುಖದಲ್ಲಿ ನಗು ಮಾಯವಾಗಿದೆ. ನಗಿಸುವ ವನ ಮುಖದಲ್ಲಿ ನಗುವೇ ಮಾಯವಾಗಿ ದಾರಿ ಕಾಣದ ಹಾಗೆ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆ ನಡು ಕೋಟೆ ಮನೆಯ ಸಂಭ್ರಮವನ್ನು ಕಿತ್ತುಕೊಂಡಿದೆ.
ಕುಕ್ಕಿಗೆ ಈ ಸಮಸ್ಯೆಯಿಂದ ಪಾರಾಗಲು ನಡುಕೋಟೆ ಮನೆಯವರು ಸಾಥ್ ನೀಡುತ್ತಾರ? ಸಣ್ಣ ಮೊತ್ತವೇ ನಲ್ಲ ಕುಕ್ಕಿ ನಿರ್ಲಕ್ಷದಿಂದ ಒಂದಲ್ಲ ಎರಡಲ್ಲ 57 ಲಕ್ಷ ಹಣ ಕಳುವಾಗಿದೆ. ಅದು ಕುಕ್ಕಿಯ ಸುಪರ್ದಿಯಲ್ಲಿದ್ದ ಗ್ರಾಹಕರ ಹಣ. ಇತ್ತ ಬ್ಯಾಂಕ್ ಮ್ಯಾನೇಜರ್ ಕೈನಲ್ಲೂ ಏನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅದೃಷ್ಟಕ್ಕೆ ಬ್ಯಾಂಕ್ ಮೆನೇಜರ್ ಗೆ ಕುಕ್ಕಿಯ ಮೇಲೆ ಅಪಾರವಾದ ನಂಬಿಕೆ ಇದೆ. ಹೀಗಾಗಿ ಸಮಸ್ಯೆ ಹೇಳಿದಾಗ ಬ್ಯಾಂಕಿಗೆ ಎರಡು ದಿನ ರಜೆ ಘೋಷಣೆ ಕೂಡ ಮಾಡಿದ್ದಾರೆ ಬ್ಯಾಂಕ್ ಮ್ಯಾನೇಜರ್. ಇದರ ಜೊತೆಗೆ ಮ್ಯಾನೇಜರ್ ಗೆ ಹಣ ಕಳವು ಮಾಡಿದವರ ಬಗ್ಗೆ ಅನುಮಾನವೂ ಮೂಡಿದೆ. ಆದರೆ ಕುಕ್ಕಿ ಧೈರ್ಯ ಮಾಡಿ ನಿಜವಾದ ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡಬೇಕಿದೆ.
ತಪ್ಪೇ ಮಾಡದ ಕುಕ್ಕಿ ಬೇರೆಯವರಿಗೆ ಕೆಡುಕನ್ನು ಬಯಸದೆ ನ್ಯಾಯವಾಗಿ ಬದುಕುತ್ತಿರುವ ಕುಟುಂಬದ ಹಿನ್ನೆಲೆ ಇರುವ ಕಾರಣ ಕುಕ್ಕಿ ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೆದರುತ್ತಿದ್ದಾನೆ. ಈ ಅತಿಯಾದ ಭಯವೇ ಕುಕ್ಕಿಗೆ ಮುಳುವಾಗುತ್ತಾ ಎಂಬುದೇ ಮನೆಯವರ ಆತಂಕ.
ದಿಯಾ ಶಶಾಂಕ್ ವಿಚಾರದಲ್ಲಿ ಪ್ರೇಕ್ಷಕರ ಊಹೆ ಶಶಾಂಕ್ಗೆ ಮನೆ ಮಂದಿ ಎಂದರೆ ಪಂಚಪ್ರಾಣ. ಅದಕ್ಕಾಗಿಯೇ ಅಮೆರಿಕದಲ್ಲಿ ಕೆಲಸದ ಆಫರ್ ಸಿಕ್ಕಿದರೂ ಕೂಡ ಮನೆ ಮಂದಿಯನ್ನು ಬಿಟ್ಟು ಹೋಗುವುದಕ್ಕೆ ಸಾಧ್ಯವಾಗದೆ ಅದನ್ನು ಕ್ಯಾನ್ಸಲ್ ಮಾಡಿಕೊಂಡು ಮನೆ ಮಂದಿಯ ಜೊತೆಗೆ ಉಳಿದು ಬಿಟ್ಟಿದ್ದಾನೆ. ಈಗ ಮನೆಯ ಮಗನಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಮೊದಲು ಅದನ್ನು ಬಗೆಹರಿಸುವ ಬದಲು ತನ್ನ ಸುಖ ನೋಡಿಕೊಳ್ಳುವ ಸ್ವಾರ್ಥಿಯಂತು ಆಗಿರಲ್ಲ. ಹೀಗಾಗಿಯೇ ಸದ್ಯಕ್ಕೆ ಮದುವೆ ಬೇಡ, ಆ ಬಳಿಕ ನೋಡೋಣವೆಂದು ದಿಯಾ ತಂದೆ ಶ್ರೀಧರ್ಗೆ ಹೇಳಲು ಹೊರಟಿದ್ದಾನೆ. ಕಡೆಗೂ ದಿಯಾ ತಂದೆಗೆ ಶಶಾಂಕ್ ಅಪ್ಪ ವಿಚಾರ ತಿಳಿಸಿದ್ದಾರೆ. ಆದರೆ ಕಾರಣ ಏನು ಎಂಬುದು ಇನ್ನು ತಿಳಿಸಿಲ್ಲ.
ಈ ವಿಚಾರ ತಿಳಿದ ದಿಯಾ ತುಂಬಾ ಬೇಸರವಾಗಿದ್ದು ದಿಯಾ ತಂದೆ ಶ್ರೀಧರ್ಗೆ ಒಂದು ಕ್ಷಣ ದಿಗಿಲು ಬಡಿದಂತಾಗಿದೆ. ಆದರೆ ವಿಚಾರ ತಿಳಿದರೆ ಖಂಡಿತಾ ಅವರ ಸಹಾಯಕ್ಕೆ ನಿಲ್ಲುತ್ತಾರೆ. ಈ ಸಮಸ್ಯೆಯನ್ನು ಹೇಳುತ್ತಾರಾ ಇಲ್ಲವಾ ಎಂಬುದೇ ಅನುಮಾನ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ