Koffee with Karan 7 ಶೋಗೆ ಬರುವ ಗೆಸ್ಟ್ ಗಳಿಗೆ ಕೊಡುವ ಗಿಫ್ಟ್ ಹ್ಯಾಂಪರ್ ನಲ್ಲಿ ಏನಿರುತ್ತೆ? ಕೇಳಿದ್ರೆ ಶಾಕ್​ ಆಗ್ತಿರಾ!

‘ಕಾಫಿ ವಿತ್ ಕರಣ್ 7’ ಶೋ ನಲ್ಲಿ ಗಿಫ್ಟ್ ಹ್ಯಾಂಪರ್ ಗಾಗಿ ತಾರೆಯರು ಇಷ್ಟೊಂದು ಪೈಪೋಟಿ ಮಾಡುವುದೇಕೆ ಅಂತ ನೀವು ತಿಳಿದುಕೊಳ್ಳಬೇಕು ಎಂದರೆ ಆ ವಿಶೇಷವಾದ ಹ್ಯಾಂಪರ್ ನಲ್ಲಿ ಏನೆಲ್ಲಾ ಇದೆ ಅಂತ ಕೇಳಿದರೆ ನಿಮಗೆ ಅರ್ಥವಾಗುತ್ತದೆ. ನಾವು ಅಂತಿಮವಾಗಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡಿದ್ದೇವೆ. ಏನೆಲ್ಲಾ ಇರುತ್ತೆ ನೋಡಿ

ಕಾಫಿ ವಿತ್ ಕರಣ್ 7

ಕಾಫಿ ವಿತ್ ಕರಣ್ 7

  • Share this:
ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಲ್ಲಿ (Popular producer of Bollywood) ಒಬ್ಬರಾದ ಕರಣ್ ಜೋಹರ್ (Karan Johar) ಅವರು ನಡೆಸಿ ಕೊಡುವ ಸೂಪರ್ ಹಿಟ್ ಚಾಟ್ ಶೋ ‘ಕಾಫಿ ವಿತ್ ಕರಣ್’ (Koffee with Karan) ಎಂದರೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಈಗಂತೂ ಸಿನಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಈ ಶೋ ಅನ್ನು ತುಂಬಾನೇ ಫಾಲೋ ಮಾಡುತ್ತಾರೆ ಅಂತ ಹೇಳಿದ್ರೆ ಸುಳ್ಳಲ್ಲ. ಈ ಶೋ ಸೀಸನ್ ಶುರುವಾಗುವ ಮುಂಚೆಯೇ ಸೀಸನ್ ನಲ್ಲಿ ಬರುವಂತಹ ಅತಿಥಿಗಳ (Guests) ಪಟ್ಟಿಯ ಬಗ್ಗೆ ಏನಾದರೂ ಸಣ್ಣದಾದ ಮಾಹಿತಿ ಏನಾದರೂ ಸಿಗುತ್ತಾ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹುಡುಕಾಡಲು ಶುರು ಮಾಡಿರುತ್ತಾರೆ.

ಕಾಫಿ ವಿತ್ ಕರಣ್’ ಸೀಸನ್ 7 ರಲ್ಲಿ ಇಲ್ಲಿಯವರೆಗೆ ಯಾರ‍್ಯಾರು ಬಂದಿದ್ರು 
ಈಗಾಗಲೇ ‘ಕಾಫಿ ವಿತ್ ಕರಣ್’ ಸೀಸನ್ 7 ಜುಲೈ 7, 2022 ರಂದು ಪ್ರಥಮ ಪ್ರದರ್ಶನ ಕಂಡಿತು ಮತ್ತು ಆ ಶೋ ನಲ್ಲಿ ಮೊದಲ ಎಪಿಸೋಡ್ ನಲ್ಲಿ ಬಂದ ಅತಿಥಿಗಳೆಂದರೆ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್, ಏಕೆಂದರೆ ಇವರಿಬ್ಬರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಎರಡನೇ ಎಪಿಸೋಡ್ ನಲ್ಲಿ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮೂರನೇ ಎಪಿಸೋಡ್ ಪ್ರಸಾರವಾಯಿತು. ಅದರಲ್ಲಿ ತೆಲುಗು ನಟಿ ಸಮಂತಾ ರುತ್ ಪ್ರಭು ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂದಿದ್ದರು. ಹೀಗೆ ಈ ಶೋ ನ ಸೀಸನ್ 7 ಭರ್ಜರಿ ಆರಂಭ ಪಡೆದುಕೊಂಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ರ‍್ಯಾಪಿಡ್ ಫೈರ್  ಸುತ್ತುಗಳನ್ನು ಗೆದ್ದಾಗ ನೀಡುವ ಹ್ಯಾಂಪರ್ ನಲ್ಲಿ ಏನಿರುತ್ತೆ
ಈ ಶೋ ಬರೀ ತನ್ನ ಹಾಸ್ಯಕ್ಕೆ ಮತ್ತು ಸೆಲೆಬ್ರಿಟಿಗಳ ಜೊತೆಗೆ ಸ್ವಲ್ಪ ಸಮಯ ಕಳೆಯಲು ಮತ್ತು ಅವರೊಂದಿಗೆ ಕೆಲವು ಆಸಕ್ತಿಕರವಾದ ಮಾತುಗಳನ್ನಾಡಲು ಅಷ್ಟೇ ಸೀಮಿತ ಅಂತ ಅಂದುಕೊಳ್ಳಬೇಡಿ. ಆಗಾಗ್ಗೆ ನೆಟ್ಟಿಗರಿಗೆ ಈ ಶೋ ನಲ್ಲಿ ಬಂದಂತಹ ಸಿನಿ ತಾರೆಗಳು ಈ ​ರ‍್ಯಾಪಿಡ್ ಫೈರ್  ಸುತ್ತುಗಳನ್ನು ಗೆದ್ದಾಗ ನೀಡುವ ಹ್ಯಾಂಪರ್ ನಲ್ಲಿ ಏನೆಲ್ಲಾ ಇರುತ್ತೆ ಅಂತ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಸಹ ಇರುತ್ತದೆ.

ಇದನ್ನೂ ಓದಿ: Samantha: ಯಾರ ಬಳಿಯೂ ಇರದ ಕಾರ್ ಈಕೆ ಹತ್ರ ಇದೆ! ಈ ದುಡ್ಡಲ್ಲಿ ದೊಡ್ಡ ಬಂಗಲೆ ಕಟ್ಬಹುದಿತ್ತು

ಶೋ ನಲ್ಲಿ ಈ ಗಿಫ್ಟ್ ಹ್ಯಾಂಪರ್ ಗಾಗಿ ತಾರೆಯರು ಇಷ್ಟೊಂದು ಪೈಪೋಟಿ ಮಾಡುವುದೇಕೆ ಅಂತ ನೀವು ತಿಳಿದುಕೊಳ್ಳಬೇಕು ಎಂದರೆ ಆ ವಿಶೇಷವಾದ ಹ್ಯಾಂಪರ್ ನಲ್ಲಿ ಏನೆಲ್ಲಾ ಇದೆ ಅಂತ ಕೇಳಿದರೆ ನಿಮಗೆ ಅರ್ಥವಾಗುತ್ತದೆ. ನಾವು ಅಂತಿಮವಾಗಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡಿದ್ದೇವೆ. ಡಯಟ್ ಸಬ್ಯಾ ಪ್ರಕಾರ, ಈ ಋತುವಿನಲ್ಲಿ ಕಾಫಿ ಹ್ಯಾಂಪರ್ ನಲ್ಲಿ ತ್ಯಾನಿ ಜ್ಯುವೆಲ್ಲರಿ, ಐಫೋನ್, ಐಪ್ಯಾಡ್, ಸ್ಪೀಕರ್, ಕಾಫಿ ಮಶೀನ್, ಜೋ ಮಲೋನ್ ಮೇಣದ ಬತ್ತಿಗಳಿವೆ.

ಇನ್ನು ಯಾರ‍್ಯಾರು ಬರಲಿದ್ದಾರೆ 
‘ಕಾಫಿ ವಿತ್ ಕರಣ್’ ಶೋ ನಲ್ಲಿ ನೀಡುವ ಈ ಗಿಫ್ಟ್ ಹ್ಯಾಂಪರ್ ಇಷ್ಟೊಂದು ಫ್ಯಾನ್ಸಿ ಆಗಿರುತ್ತದೆ ಎಂದು ಬಹುಶಃ ಯಾರೊಬ್ಬರು ನಿರೀಕ್ಷಿಸಿರುವುದಿಲ್ಲ. ‘ಕಾಫಿ ವಿತ್ ಕರಣ್’ ನ ಸೀಸನ್ 7 ರಲ್ಲಿ ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ಶಾಹಿದ್ ಕಪೂರ್, ಕೃತಿ ಸನೋನ್, ಟೈಗರ್ ಶ್ರಾಫ್ ಮತ್ತು ಅಮೀರ್ ಖಾನ್ ಅವರಂತಹ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಲ್ಲದೆ, ಗೌರಿ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಹೀಪ್ ಕಪೂರ್ ಮತ್ತು ಭಾವನಾ ಪಾಂಡೆ ಅವರೊಂದಿಗೆ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಆದಾಗ್ಯೂ, ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಇದನ್ನೂ ಓದಿ:  Beauty Tips: ಕಿಯಾರಾ ಅಡ್ವಾಣಿಯ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ? ಇಲ್ಲಿದೆ ನೋಡಿ

ಅರ್ಜುನ್ ಕಪೂರ್ ಮತ್ತು ಸೋನಮ್ ಕಪೂರ್ ಕೂಡ ಕರಣ್ ಜೋಹರ್ ಅವರ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂದು ಮಾಧ್ಯಮವೊಂದು ವಿಶೇಷವಾಗಿ ವರದಿ ಮಾಡಿತ್ತು. ವರದಿಯಂತೆಯೇ ಒಂದು ಎಪಿಸೋಡ್ ನಲ್ಲಿ ಅರ್ಜುನ್ ಕಪೂರ್ ಮತ್ತು ಸೋನಮ್ ಇಬ್ಬರು ಕಾಣಿಸಿಕೊಂಡರು.
Published by:Ashwini Prabhu
First published: