ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಕರ್ನಾಟಕ ಕಂಡ ಅದ್ಭುತ ನಟ. ಸ್ಯಾಂಡಲ್ವುಡ್ನಲ್ಲಿ ಬಾಕ್ಸ್ ಅಫೀಸ್ ಸುಲ್ತಾನ್ ಎಂದೇ ಬ್ರಾಂಡ್ ಆಗಿರುವ ನಟ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ- ವಿದೇಶಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಡಿ ಬಾಸ್ಗೆ ಅಭಿಮಾನಿಗಳಿದ್ದಾರೆ. ಚಿತ್ರರಂಗಕ್ಕೆ ಕಾಲಿಡುತ್ತಿರುವ ಯುವ ಪ್ರತಿಭಾವಂತ ಕಲಾವಿದರಿಗೆ ದರ್ಶನ್ ತಮ್ಮ ಕೈಯಿಂದ ಆದಷ್ಟು ಸಹಾಯ ಮಾಡುತ್ತಾರೆ. ಕೇವಲ ಸಿನಿಮಾ ಮಾತ್ರ ಅಲ್ಲ ಸಾಮಾಜಿಕ ಕೆಲಸದಿಂದಲೂ ದಾಸ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ದರ್ಶನ್ ಬಗ್ಗೆ ಬಾಲಿವುಡ್ನ ಖ್ಯಾತ ನಟಿಯೊಬ್ಬರು ಮನಬಿಚ್ಚಿ ಮಾತನಾಡಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಸದ್ಯ ಸಾಕಷ್ಟು ಹೆಸರು ಮಾಡಿರುವ ನಟಿ ಊರ್ವಶಿ ರೌಟೇಲಾ ಅವರು ದರ್ಶನ್ ನಟನೆಯ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಕೇಳಿದಾಗ ಊರ್ವಶಿ ಐರಾವತ ಚಿತ್ರದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
Shruti Hassan: ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ನಟಿ ಶ್ರುತಿ ಹಾಸನ್..!
ಬಾಲಿವುಡ್‌ನಲ್ಲಿ ಮೊದಲ ಸಿನಿಮಾ ಮಾಡಿ ಬಳಿಕ ಕನ್ನಡದಲ್ಲಿ ನೀವು ನಟಿಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಊರ್ವಶಿ, 'ನಾನು ಸ್ಯಾಂಡಲ್ವುಡ್ನಲ್ಲಿ ಐರಾವತ ಸಿನಿಮಾ ಒಪ್ಪಿಕೊಳ್ಳುವ ಮುನ್ನ ಕರ್ನಾಟಕದ ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸುತ್ತಿದ್ದೇನೆ ಎಂಬ ಅರಿವು ಇರಲಿಲ್ಲ. ಸಿನಿಮಾ ಶೂಟಿಂಗ್ ಆಗುತ್ತಿರುವ ಸಂದರ್ಭ ಸೂಪರ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ, ಫ್ಯಾನ್ಸ್ ಕ್ರೇಜ್ ನೋಡಿ ನಿಜಕ್ಕೂ ನಾನು ಅಚ್ಚರಿಗೊಂಡಿದ್ದೆ. ಇಂತಹ ಫ್ಯಾನ್ಸ್ ಸಂಪಾದನೆ ಮಾಡಿರುವ ನಟನ ಜೊತೆ ನಟಿಸಿದ್ದು ನನಗೆ ಹೆಮ್ಮೆಯ ವಿಷಯ' ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡುತ್ತಿದ್ದು, ವೈರಲ್ ಆಗುತ್ತಿದೆ.
Sandalwood Actress Shanthamma: ಕನ್ನಡದ ಹಿರಿಯ ಪೋಷಕ ನಟಿ ಶಾಂತಮ್ಮ ನಿಧನ
ಇಷ್ಟೇ ಅಲ್ಲದೆ ಈ ಹಿಂದೆ ಐರಾವತ ಸಿನಿನಾದ ಸುದ್ದಿಗೋಷ್ಠಿಯಲ್ಲೂ ಬಾಲಿವುಡ್ ಬೆಡಗಿ ದರ್ಶನ್ ಬಗ್ಗೆ ಇನ್ನಷ್ಟು ಮೆಚ್ಚುಗೆಯ ಮಾತನ್ನಾಡಿದ್ದರು. 'ದರ್ಶನ್ ಜೊತೆ ಕೆಲಸ ಮಾಡಿದ್ದಕ್ಕೆ ತುಂಬ ಖುಷಿಯಾಗುತ್ತಿದೆ, ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು. 'ಐರಾವತ' ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಸಂದೇಶ್ ನಾಗರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದರು. 2015ರಲ್ಲಿ ಈ ಚಿತ್ರ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.
ವಿಡಿಯೋ ಕೃಪೆ: Sandalwood Central
ದರ್ಶನ್ ಮುಂದಿನ ಸಿನಿಮಾ ವಿಷಯಕ್ಕೆ ಬಂದರೆ ‘ರಾಬರ್ಟ್’ ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ರೆಡಿಯಾಗಿದೆ. ಆದರೆ ಕೊರೊನಾದಿಂದ ಸದ್ಯಕ್ಕೆ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾದಗಿನಿಂದ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‍ನಲ್ಲಿ ಡಿ ಬಾಸ್ ಕಾಲಕಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ