ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರವಾದ (Bollywood Movie) ಶಂಶೇರಾ (Shamshera) ಕೊನೆಗೂ ಚಿತ್ರಮಂದಿರಗಳಿಗೆ (Theatre) ಲಗ್ಗೆ ಇಟ್ಟಿದೆ. ಕರಣ್ ಮಲ್ಹೋತ್ರಾ ನಿರ್ದೇಶಿತ ಹಾಗೂ ಯಶ್ ರಾಜ್ ಫಿಲ್ಮ್ಸ್ ಅವರಿಂದ ನಿರ್ಮಿತ ಈ ಅದ್ದೂರಿ ಬಜೆಟ್ಟಿನ ಚಿತ್ರವು ಮುಖ್ಯ ಪಾತ್ರಗಳಲ್ಲಿ ರಣಬೀರ್ ಕಪೂರ್ (Ranbir Kapoor) , ವಾಣಿ ಕಪೂರ್ (Vaani Kapoor) ಹಾಗೂ ಸಂಜಯ ದತ್ (Sanjay Dutt) ಅವರನ್ನು ಒಳಗೊಂಡಿದೆ. ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವು ಒಂದು ಪಿರಿಯಡ್ ಫಿಲ್ಮ್ ಆಗಿದ್ದು ಸಿನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.
ಶಂಶೇರಾ ಮೊದಲ ಅರ್ಧದ ಬಗ್ಗೆ ಅಭಿಮಾನಿಗಳಿಂದ ಟ್ವಿಟ್ಟರ್ ಪ್ರತಿಕ್ರಿಯೆಗಳು
ರಣಬೀರ್ ಕಪೂರ್, ಹಿಂದಿ ಚಿತ್ರರಂಗದ ಒಬ್ಬ ಪ್ರತಿಭಾವಂತ ಸ್ಟಾರ್ ನಟನಾಗಿದ್ದು ತಮ್ಮದೆ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ಶಂಶೇರಾ ಚಿತ್ರ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದರು. ಇದೀಗ ಚಿತ್ರ ಬಿಡುಗಡೆಯಾಗಿದ್ದು ಸಹಸ್ರಾರು ಅವರ ಅಭಿಮಾನಿಗಳು ಚಿತ್ರದ ಮೊದಲ ದಿನ ಪ್ರದರ್ಶನಕ್ಕೆ ತೆರಳಿದ್ದು ಮೊದಲ ಅರ್ಧ ವೀಕ್ಷಿಸಿದ ನಂತರ ತಮ್ಮ ತಮ್ಮ ಸಾಮಾಜಿಕ ಖಾತೆಗಳನ್ನು ಬಳಸಿ ಚಿತ್ರದ ಬಗ್ಗೆ ಅಭಿಪ್ರಾಯಗಳನ್ನು ಹರಿಬಿಡಲು ಪ್ರಾರಂಭಿಸಿದ್ದಾರೆ ಎನ್ನಬಹುದಾಗಿದೆ.
ಸಿನೆಮಾದ ಬಗ್ಗೆ ಟ್ವಿಟ್ಟರ್ ಬಳಕೆದಾರದು ಏನಂದ್ರು
ಚಿತ್ರದ ಮೊದಲ ಅರ್ಧ ವೀಕ್ಷಿಸಿದ ಬಳಿಕ ಟ್ವಿಟ್ಟರ್ ಬಳಕೆದಾರರೊಬ್ಬರು ಈ ರೀತಿ ಟ್ವಿಟ್ ಮಾಡಿದ್ದಾರೆ, "#ShamsheraReview, ಚಿತ್ರದ ಮೊದಲ ಅರ್ಧ ! ಕೆಲವು ದೃಶ್ಯಗಳು ಅದ್ಭುತವಾಗಿವೆ, ಆದರೆ ಚಿತ್ರಕಥೆಯಲ್ಲಿ ಯಾವ ಹೊಸತನವೂ ಇಲ್ಲ! ಮೊದಲಾರ್ಧವನ್ನು ಎಳೆಯಲಾಗಿದೆ, ವಾಣಿ ಕಪೂರ್ ಚಿತ್ರ ಸೋಲಲು ಎಲ್ಲ ರೀತಿಯ ಪ್ರಯತ್ನ ಪಟ್ಟಿದ್ದಾರೆ, ಸಂಜಯ್ ಬಾಬಾ ಅವರ ಪ್ರದರ್ಶನ ಎಂದಿನಂತಿದೆ" ಎಂದು ಬರೆದುಕೊಂಡಿದ್ದಾರೆ.
#ShamsheraReview - First Half !
Few shots are excellent , but nothing new in storyline !
First half stretchy
Vani kapoor busy in destroying film
Sanjay baba ka routine performance
Thik thaak jarha !!!#shamshera
— Surajkumarofficial (@Surajkumarrevi1) July 22, 2022
#Shamshera first half is just average nothing special let's see what the other half has to offer
— Filmiphile (@Filmiphile) July 22, 2022
ಫ್ಲಿಮಿಫೈಲ್ ಎಂಬ ಖಾತೆಯಿಂದ ಇನ್ನೊಬ್ಬ ಬಳಕೆದಾರರು, "ಚಿತ್ರದ ಮೊದಲ ಅರ್ಧವು ಸಾಧಾರಣವಾಗಿದೆ, ಯಾವ ವಿಶೇಷತೆಯೂ ಇಲ್ಲ, ಕೊನೆಯ ಅರ್ಧ ಹೇಗಿದೆ ನೋಡೋಣ" ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಚಿತ್ರವನ್ನು ಪೂರ್ಣವಾಗಿ ವೀಕ್ಷಿಸಿರುವ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, "ಶಂಶೇರಾ ಚೀತ್ರ ನೋಡಿ ಮುಗಿಸಿದೆ, ಚಿತ್ರಕಥೆ ನಿಧಾನವಾಗಿದೆ, ಆದರೆ ಹಿನ್ನೆಲೆ ಸಂಗೀತ, ಛಾಯಾಚಿತ್ರಗ್ರಹಣ, ಮತ್ತು ಆರ್ಕೆ, ಇವೆಲ್ಲ ಸೇರಿ ಚಿತ್ರವನ್ನು ನೋಡಲು ಆಕರ್ಷಿತವನ್ನಾಗಿ ಮಾಡಿವೆ. ಸಾಹಸ ದೃಶ್ಯಗಳು, ಭಾವನಾತ್ಮಕ ಅಂಶಗಳು ಚಿತ್ರದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದಿವೆ. ಆದರೆ ಚಿಂತಿಸಬೇಕಾದ ವಿಷಯ ಎಂದರೆ ಜನರು ಸಾಕಷ್ಟು ಪ್ರಮಾಣದಲ್ಲಿ ಬಂದಿಲ್ಲ, ವಾರಾಂತ್ಯದ ಮೇಲೆ ಇದು ಅವಲಂಬಿತವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ponniyin Selvan: ಈ ಸಿನಿಮಾದಲ್ಲಿ ಮಣಿರತ್ನಂ ಹೇಳಿರುವ ಚೋಳರ ನಿಜವಾದ ಕತೆ ಇದು!
ನಾಲ್ಕನೆಯ ವ್ಯಕ್ತಿಯೊಬ್ಬರು, "ಭಾರತದಲ್ಲಿ ಶಂಷೇರಾ ಚಿತ್ರದ ಬೆಳಗ್ಗೆಯ ಪ್ರದರ್ಶನದಲ್ಲಿ ಭರ್ತಿಯಾದ ಆಸನಗಳು ಕೇವಲ 18%-20% ರಷ್ಟು ಮಾತ್ರ. ಮಧ್ಯಾಹ್ನದ ಪ್ರದರ್ಶನದವರೆಗೆ ಒಳ್ಳೆಯ ನೆಗೆತವನ್ನು ಚಿತ್ರ ಕಾಣಲಿದೆ." ಎಂದು ಅಭಿಪ್ರಾಯ ಹಂಚಿಕೊಂಡಿದ್ದರೆ, ಇನ್ನೊಬ್ಬರು "ಶಂಶೇರಾದಲ್ಲಿರುವ ಸಾಹಸ ದೃಶ್ಯಗಳು ಮಾಸ್ ಆಗಿವೆ" ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಎಷ್ಟಾಗಬಹುದು?
ಡಿಎನ್‍ಎ ವರದಿಯಂತೆ ಸೌತ್ ಟ್ರೇಡ್ ಸಿನೆ ವಿಮರ್ಶಕ ರಮೇಶ್ ಬಾಲಾ ಅವರ ಅನಿಸಿಕೆಯಂತೆ ಶಂಷೇರಾ ಮೊದಲ ದಿನದಂದು ಗಲ್ಲಾ ಪೆಟ್ಟಿಗೆಯಲ್ಲಿ 10-12 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಲಿದೆ. ಈ ಕುರಿತಂತೆ ಅವರು ಹೇಳುತ್ತಾರೆ, "ನಾನು ಈ ಚಿತ್ರ ಮೊದಲ ದಿನದಂದು ಗಲ್ಲಾ ಪೆಟ್ಟಿಗೆಯಲ್ಲಿ 10-12 ಕೋಟಿ ರೂಪಾಯಿಗಳನ್ನು ಗಳಿಸಬಹುದೆಂದು ನಿರೀಕ್ಷಿಸಿದ್ದು ವಾರಾಂತ್ಯಗಳಂದು ಆಸನಗಳು ಭರ್ತಿಯಾದರೆ ಏನಿಲ್ಲವೆಂದರೂ ಚಿತ್ರ 30-35 ಕೋಟಿ ರೂಪಾಯಿಗಳಷ್ಟು ವ್ಯವಹಾರ ಮಾಡಲಿದೆ " ಎಂದು.
ಸಿನೆಮಾದ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು
ಇನ್ನು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಯಿಸುತ್ತ ಜೀ ನ್ಯೂಸ್ ನೊಂದಿಗೆ ಮಾತನಾಡಿದ್ದ ರಣಬೀರ್ ಕಪೂರ್ ಅವರು ಶಂಶೇರಾ ಮೂಲಕ ತಮ್ಮ ಪ್ರೀತಿ-ಪ್ರೇಮಗಳ ಹುಡುಗನೆಂಬ ಪ್ರಭಾವಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ಈ ಬಗ್ಗೆ ಅವರು, "ಒಬ್ಬ ನಟ ಒಂದು ನಿರ್ದಿಷ್ಟ ಪ್ರಭಾವದಲ್ಲಿ ಬಿಂಬಿತನಾಗುವುದು ಬಲು ಅಪಾಯಕಾರಿ, ನಾನು ಇದರಿಂದ ಹೊರಬರಬೇಕಾಗಿದೆ" ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು.
ಮುಂದುವರೆಯುತ್ತ ಅವರು, "ಒಬ್ಬ ನಟನಾದವನು ಎಲ್ಲ ರೀತಿಯ ಪಾತ್ರವರ್ಗಕ್ಕೂ ಒಗ್ಗಿಕೊಳ್ಳಬೇಕು, ಕೇವಲ ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಂಡರೆ ಮುಂದೆ ಪ್ರೇಕ್ಷಕರಲ್ಲದೆ ನೀವೂ ಸಹ ನಿಮ್ಮ ಮೇಲೆ ಬೇಸರಿಸಿಕೊಳ್ಳುವ ಹಾಗಾಗುತ್ತದೆ. ನಮ್ಮ ಮುಂದೆ ಎಷ್ಟೋ ಉದಾಹರಣೆಗಳಿವೆ, ಖಾನ್ ಗಳು, ಅಕ್ಷಯ ಕುಮಾರ್, ಅಜಯ್ ದೇವಗನ್ ಹಾಗೂ ಸಂಜಯ ದತ್. ಈ ಎಲ್ಲ ನಟರು ಏನಿಲ್ಲವೆಂದರೂ 30-40 ವರ್ಷಗಳಿಂದ ಯಶಸ್ವಿಯಾಗಿ ಚಲನಚಿತ್ರ ರಂಗದಲ್ಲಿದ್ದಾರೆ, ಕಾರಣ ಅವರು ಪ್ರತಿ ಬಾರಿ ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮನ್ನು ತಾವು ಮರುಶೋಧಿಸಿಕೊಂಡಿದ್ದಾರೆ" ಎಂದು ಹೇಳಿದ್ದರು.
ಇದನ್ನೂ ಓದಿ: Vikrant Rona: ನಿಮ್ಮ ಭಾಷೆಯಲ್ಲೇ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು! ಕನ್ನಡ ಸಿನಿಮಾರಂಗದಲ್ಲಿ ಇದು ಮೊದಲ ಪ್ರಯತ್ನ
ಒಟ್ಟಿನಲ್ಲಿ ರಣಬೀರ್ ಕಪೂರ್ ಸಹ ತಮ್ಮನ್ನು ತಾವು ಹಲವು ವೈವಿಧ್ಯಮಯ ಪಾತ್ರವರ್ಗದಲ್ಲಿ ನೋಡಿಕೊಳ್ಳಲು ಉತ್ಸುಕರಾಗಿದ್ದು ಶಂಷೇರಾ ಮೂಲಕ ಹೊಸ ಬಗೆಯ ಪಾತ್ರವರ್ಗದ ಪರೀಕ್ಷೆಗೆ ಇಳಿದಿದ್ದಾರೆನ್ನಬಹುದು. ಇನ್ನು ವಾರಾಂತ್ಯಗಳು ಬಾಕಿ ಇದ್ದು ಮುಂದಿನ ದಿನಗಳಲ್ಲಿ ಚಿತ್ರಾಭಿಮಾನಿಗಳು ರಣಬೀರ್ ಅವರನ್ನು ಹಾಗೂ ಶಂಷೇರಾ ಚಿತ್ರವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದರ ಮೇಲೆ ಚಿತ್ರದ ಯಶಸ್ಸು ಅವಲಂಬಿತವಾಗಿದ್ದು ಅಲ್ಲಿಯವರೆಗೆ ಕಾದು ನೋಡದೆ ಬೇರೆ ಏನು ಗತಿಯಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ