Gandhada Gudi: ಗಂಧದಗುಡಿಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? ತಪ್ಪೇ ಮಾಡದೇ ಹಿಂಸೆ ಅನುಭವಿಸಿದ್ಯಾಕೆ ದಾದಾ?

ಅಣ್ಣಾವ್ರು ಹಾಗೂ ವಿಷ್ಣುದಾದ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಹೊರಗಡೆ ಅವರ ಅಭಿಮಾನಿಗಳು ಮಾತ್ರ ಒಬ್ಬರ ಮೇಲೆ ಒಬ್ಬರು ಆಕ್ರೋಶ ಹೊರಹಾಕುತ್ತಿದ್ದರು. ಇಂದಿಗೂ ಅಂದು ನಿಜವಾಗಲೂ ಅಣ್ಣಾವ್ರ ದೇಹ ಹೊಕ್ಕ ಗುಂಡು ಹಾರಿಸಿದ್ದು ಅಂತ ಯಾರಿಗೂ ಗೊತ್ತಿಲ್ಲ.

ರಾಜ್​, ವಿಷ್ಣು

ರಾಜ್​, ವಿಷ್ಣು

  • Share this:
ಡಾ.ರಾಜ್​ಕುಮಾರ್ (Dr Rajkumar)​ ಹಾಗೂ ಡಾ. ವಿಷ್ಣುವರ್ಧನ್ (Dr Vishnuvardhan)​ ಇಬ್ಬರೂ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ಇಬ್ಬರು ಒಟ್ಟಾಗಿ ಕೇವಲ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಇವರನ್ನು ಬದ್ಧ ವೈರಿಗಳಂತೆ ಅವರ ಅಭಿಮಾನಿಗಳು (Fans) ಬಿಂಬಿಸುವುದಕ್ಕೆ ಶುರು ಮಾಡಿದ್ದರು. ಕನ್ನಡ ಚಿತ್ರರಂಗ (Sandalwood) ದ ದೊಡ್ಡ ದುರಂತ ಅಂತ ಥಟ್​ ಅಂತ ತಲೆಗೆ ಬರುವುದೇ ಗಂಧದ ಗುಡಿ (Gandhada Gudi) ಶೂಟಿಂಗ್​ ಅವಘಡ. ಈ ಸಿನಿಮಾ ಶೂಟಿಂಗ್​ನಲ್ಲಿ ಡಾ.ರಾಜ್​ಕುಮಾರ್​ ಅವರ ದೇಹಕ್ಕೆ ಗುಂಡು (Bullet) ಹೊಕಿತ್ತು. ಆದರೆ, ಇಂದಿಗೂ ಗುಂಡು ಹೊಡೆದವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಈ ಅಪವಾದ ಬಂದಿದ್ದು ಮಾತ್ರ ವಿಷ್ಣುವರ್ಧನ್​ ಮೇಲೆ. ಯಾಕೆಂದರೆ ಶೂಟಿಂಗ್​ ಸಮಯದಲ್ಲಿ ಡಾ. ರಾಜ್​ಕುಮಾರ್​ ಎದುರು ನಿಂತು ಕೈಯಲ್ಲಿ ಗನ್​ (Gun) ಹಿಡಿದು ನಟಿಸುತ್ತಿದ್ದವರು ವಿಷ್ಣುದಾದ. ಅಣ್ಣಾವ್ರ ಮೇಲೆ ವಿಷ್ಣುವರ್ಧನ್​ ಗುಂಡು ಹಾರಿಸಿದ್ದರು ಅಂತ ಸುದ್ದಿಯಾಯ್ತು.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದೇ ಒಂದು ಚಿತ್ರ ಹಾಗೂ ಒಂದೇ ಒಂದು ದೃಶ್ಯದಿಂದ ಖ್ಯಾತಿ-ಕುಖ್ಯಾತಿಗೆ ಒಳಗಾದ ಏಕೈಕ ನಟ ಅಂದರೆ ಅದು ಡಾ ವಿಷ್ಣುವರ್ಧನ್​ ಮಾತ್ರ. ಅಣ್ಣಾವ್ರು ಹಾಗೂ ವಿಷ್ಣುದಾದ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಹೊರಗಡೆ ಅವರ ಅಭಿಮಾನಿಗಳು ಮಾತ್ರ ಒಬ್ಬರ ಮೇಲೆ ಒಬ್ಬರು ಆಕ್ರೋಶ ಹೊರಹಾಕುತ್ತಿದ್ದರು. ಇಂದಿಗೂ ಅಂದು ನಿಜವಾಗಲೂ ಅಣ್ಣಾವ್ರ ದೇಹ ಹೊಕ್ಕ ಗುಂಡು ಹಾರಿಸಿದ್ದು ಅಂತ ಯಾರಿಗೂ ಗೊತ್ತಿಲ್ಲ. ಅಸಲಿಗೆ ಅಲ್ಲಿ ಅಂದು ನಡೆದಿದ್ದೇನು? ಡಮ್ಮಿ ಗನ್​ನಲ್ಲಿ ರಿಯಲ್​ ಗುಂಡು ತುಂಬಿದವರು ಯಾರು? ಈ ಬಗ್ಗೆ ಇಲ್ಲಿದೆ  ನೋಡಿ ಕಂಪ್ಲೀಟ್ ಮಾಹಿತಿ.

ಗಂಧದ ಗುಡಿ ರಹಸ್ಯ ಇನ್ನೂ ಬಯಲಾಗಿಲ್ಲ!

1972 ರಲ್ಲಿ ಬಿಡುಗಡೆ ಆದ 'ನಾಗರಹಾವು' ಚಿತ್ರದಿಂದ ಕನ್ನಡದ ಆಂಗ್ರಿ ಯಂಗ್ ಮ್ಯಾನ್ ಯಶಸ್ಸಿನ ಉತ್ತುಂಗ ಶಿಖರಕ್ಕೆ ತಲುಪಿದ್ದರು. ಪುಟ್ಟಣ್ಣ ಕಣಗಾಲ್​ ಅವರ ಗರಡಿಯಲ್ಲಿ ಪಳಗಿದ್ದ ವಿಷ್ಣುವರ್ಧನ್​ ಒಂದೇ ಸಿನಿಮಾದಿಂದ ತಾನೆಂಥ ನಟ ಎಂಬುದನ್ನು ಸಾಬೀತು ಮಾಡಿಕೊಂಡಿದ್ದರು. ಆದರೆ, ಮರು ವರ್ಷವೇ ಬಿಡುಗಡೆ ಆದ ಗಂಧದ ಗುಡಿ ಚಿತ್ರದಿಂದ ವಿವಾದಕ್ಕೆ ಒಳಗಾಗಿದ್ದು ಇತಿಹಾಸ. ಇದೊಂದು ಸಿನಿಮಾದಿಂದ ವಿಷ್ಣುವರ್ಧನ್​ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆ ಬರುವಂತಾಯ್ತು. ಇದರಿಂದ ಜೀವನ ಪರ್ಯಂತ ವಿಷ್ಣು ನೋವು ಅನುಭವಿಸಿದ್ದು ಸುಳ್ಳಲ್ಲ.

ಗಂಧದ ಗುಡಿ ಸಿನಿಮಾದ ಪೋಸ್ಟರ್​​


'ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು?

ಅಷ್ಟಕ್ಕೂ, ಅವತ್ತು ಕಾಕನಕೋಟೆಯ ಮಸಾಲೆ ಬೆಟ್ಟದಲ್ಲಿ ಏನಾಯ್ತು ಎಂದು ಡಾ.ರಾಜ್ ಆಗಲಿ ಡಾ.ವಿಷ್ಣು ಆಗಲಿ ಬಹಿರಂಗವಾಗಿ ಬಾಯಿ ಬಿಡಲಿಲ್ಲ. ದಶಕಗಳ ಹಿಂದಿನ ವಿವಾದದ ರಹಸ್ಯ ಇನ್ನೂ ಕೂಡ ಬಯಲಾಗಿಲ್ಲ. ಅಣ್ಣಾವ್ರ 150ನೇ ಸಿನಿಮಾ ಗಂಧದ ಗುಡಿ. ಇತ್ತ ವಿಷ್ಣುವರ್ಧನ್​ ಮೊದಲ ಸಿನಿಮಾದಲ್ಲಿ ಹೀರೋ ಆಗಿದ್ದರು, ಎರಡನೇ ಸಿನಿಮಾಗೇ ವಿಲನ್​ ಆಗಿ ಅಭಿನಯಿಸಲು ಒಪ್ಪಿಕೊಂಡಿದ್ದರು. ಅಣ್ಣಾವ್ರ ಜೊತೆ ನಟಿಸೋದೆ ಭಾಗ್ಯ ಎಂದುಕೊಂಡಿದ್ದ ವಿಷ್ಣುವರ್ಧನ್​ ಈ ಸಿನಿಮಾದಲ್ಲಿ ವಿಲನ್ ಆಗುವುದಕ್ಕೆ ಒಪ್ಪಿಕೊಂಡಿದ್ದರು.

ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​, ನರಸಿಂಹರಾಜು


ಇದನ್ನೂ ಓದಿ: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ

ರಾಜಣ್ಣ ದೇಹ ಹೊಕ್ಕಿತ್ತು ಗುಂಡು!

ಗಂಧದ ಗುಡಿ ಕ್ಲೈಮ್ಯಾಕ್ಸ್​​ ಶೂಟಿಂಗ್​ ನಡೆಯುವ ವೇಳೆ ಅವಘಡವೊಂದು ನಡೆದುಹೋಗಿತ್ತು. ಶೂಟಿಂಗ್​ ನಡೆಯುವ ಸಂದರ್ಭದಲ್ಲಿ ವಿಷ್ಣುವರ್ಧನ್ ಅಲ್ಲಿ ಇರಲಿಲ್ಲ. ಅವರ ಪಾತ್ರದ ಶೂಟಿಂಗ್​ ಮುಗಿಸಿ ಬೆಟ್ಟದ ಕೆಳಗಡೆ ಊಟಕ್ಕೆ ಹೋಗಿದ್ದರಂತೆ. ಬಾಲಣ್ಣ ಅವರು ಅಣ್ಣಾವ್ರಿಗೆ ಬಂದೂಕಿನಿಂದ ಗುಂಡು ಹಾರಿಸುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಇದಕ್ಕಾಗಿ ಕೆಲವು ಡಮ್ಮಿ ಗನ್​ಗಳನ್ನು ಕೂಡ ತರಿಸಲಾಗಿತ್ತು. ಬಾಲಣ್ಣ ಅವರಿಗೆ ಈ ಡಮ್ಮಿ ಗನ್​ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲೇ ಇದ್ದ ಎಂ.ಪಿ.ಶಂಕರ್​ ಅವರು ತಮ್ಮ ಕೈಯಲ್ಲಿದ್ದ ಗನ್​ ಕೊಟ್ಟಿದ್ದರು.

ರಾಜ್​ಕುಮಾರ್, ವಿಷ್ಣುವರ್ಧನ್​


ಬೇಟೆಯಾಡುವ ಅಭ್ಯಾಸ ಹೊಂದಿದ್ದ ಎಂ.ಪಿ.ಶಂಕರ್​! 

ಎಂ.ಪಿ.ಶಂಕರ್​ ಅವರಿಗೆ ಬೇಟೆಯಾಡುವ ಅಭ್ಯಾಸ ಮೊದಲಿನಿಂದ ಇತ್ತು. ಗಂಧದ ಗುಡಿ ಶೂಟಿಂಗ್​ನಲ್ಲೂ ಕೂಡ ಅವರು ಬೇಟೆಗೆ ಹೋಗುತ್ತಿದ್ದರು. ಕ್ಲೈಮ್ಯಾಕ್ಸ್​ ಹಿಂದಿನ ದಿನವೂ ರಾತ್ರಿ ಬೇಟೆಗೆ ಹೋಗಿದ್ದರಂತೆ ಎಂ.ಪಿ.ಶಂಕರ್​. ಮಾರನೇ ದಿನ ಕ್ಲೈಮ್ಯಾಕ್ಸ್ ಶೂಟಿಂಗ್​ ಸಮಯದಲ್ಲಿ ಬಾಲಣ್ಣ ಅವರಿಗೆ ಇದೇ ಗನ್​ ಅನ್ನು ಎಂ.ಪಿ.ಶಂಕರ್​ ಅವರು ಕೊಟ್ಟಿದ್ದರು. ಎಂ.ಪಿ.ಶಂಕರ್​ ಕೂಡ ಈ ಸಿನಿಮಾದ ನಿರ್ಮಾಪಕರು ಕೂಡ. ಕೈಗೆ ಗನ್​ ಕೊಟ್ಟ ಕೂಡಲೇ ಎಂ.ಪಿ,ಶಂಕರ್​ ಅವರನ್ನು ಬಾಲಣ್ಣ ಬುಲೆಟ್​ ಇದ್ಯಾ? ಎಂದು ಕೇಳುತ್ತಾರಂತೆ.

ಬುಲೆಟ್​ ಇಲ್ಲ ಎಂದು ಹೇಳಿದ್ದ ಎಂ.ಪಿ.ಶಂಕರ್​!

ಶಿಕಾರಿ ಮುಗಿದ ಕೂಡಲೇ ಬುಲೆಟ್ ತೆಗೆದು ಬಿಡುತ್ತೇನೆ ಎಂದು ಎಂ.ಪಿ.ಶಂಕರ್​ ಹೇಳಿದ್ದರಂತೆ. ಹೀಗಾಗಿ ಬಾಲಣ್ಣ ಈ ಗನ್ ತೆಗೆದುಕೊಂಡು ಅರ್ಧ ಟ್ರಿಗರ್ ಮಾಡುತ್ತಾರೆ. ಶಾಟ್​ ಕೂಡ ಓಕೆ ಆಗುತ್ತೆ. ಕೂಡಲೇ ಆ ಗನ್​ ಅನ್ನು ಎಂ.ಪಿ.ಶಂಕರ್​ ವಾಪಸ್​ ತೆಗೆದುಕೊಳ್ಳುತ್ತಾರೆ. ಕೆಲವು ಸೆಂಕೆಂಡುಗಳ ಬಳಿಕ ಜೋರಾಗಿ ಶಬ್ಧ ಬರುತ್ತೆ. ಆರು ಅಡಿ ಮಣ್ಣು ಕೊರೆದುಕೊಂಡು ಬುಲೆಟ್​ ಗನ್​ನಿಂದ ಹಾರಿತ್ತು. ಇದನ್ನು ಕಂಡವರು ಶಾಕ್​ಗೆ ಒಳಗಾಗುತ್ತಾರೆ. ಎಂ.ಪಿ.ಶಂಕರ್​ ಅವರು ಹಿಂದಿನ ದಿನ ಶಿಕಾರಿಗೆ ಹೋಗಿ ಬಂದ ಬಳಿಕ ಬುಲೆಟ್​ ತೆಗೆಯುವುದನ್ನು ಮರೆತು ಬಿಡುತ್ತಾರೆ. ಇದು ಅವರ ತಪ್ಪು ಎಂದು ಅವರು ಕೂಡ ಹೇಳುತ್ತಾರಂತೆ.

ರಾಜ್​ಕುಮಾರ್​, ವಿಷ್ಣುವರ್ಧನ್​


\ಇದನ್ನೂ ಓದಿ: ಇವ್ನ ಮುಸುಡಿ ನೋಡಿ ಹೀರೋ ಆಗ್ತಾನಾ! ಅವಮಾನ ಮಾಡಿದವ್ರ ಮುಂದೆಯೇ ಗೆದ್ದು ಬೀಗಿದ್ದ ನಟ ರಘುವೀರ್​

ಎಲ್ಲೂ ಹೇಳ್ಬೇಡಿ ಅಂದಿದ್ಯಾಕೆ ಅಣ್ಣಾವ್ರು?

ಆದರೆ, ಅಲ್ಲಿ ನೆರೆದಿದ್ದವರೆಲ್ಲ ಇದನ್ನು ಕಂಡು ಗಾಬರಿಯಾಗುತ್ತಾರೆ. 2 ನಿಮಿಷದ ಮುಂಚೆ ಈ ಗುಂಡು ಹಾರಿದ್ದರೆ, ರಾಜ್​ಕುಮಾರ್ ಅವರ ಎದೆ ಸೀಳಿಕೊಂಡು ಹೋಗುತ್ತಿತ್ತು ಎಂದು ಹೇಳುತ್ತಾರೆ. ಇದನ್ನು ಕಂಡು ಡಾ.ರಾಜ್​ಕುಮಾರ್​ ಅವರು ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ದೇವರು ದೊಡ್ಡವನು ಏನೂ ಆಗಲಿಲ್ಲ. ಇದನ್ನು ಇಲ್ಲೆ ಬಿಟ್ಟುಬಿಡಿ ಎಂದು ಹೇಳಿದ್ದರಂತೆ. ಆದರೆ ಕೆಲವು ಕುತಂತ್ರಿಗಳು ಇದನ್ನು ಬೇರೆ ರೀತಿಯಲ್ಲಿ ಕಾಡ್ಗಿಚ್ಚು ಹಬ್ಬಿಸಿದ್ದರು. ರಾಜ್​ಕುಮಾರ್​ ಅವರ ಮೇಲಿರುವ ಕೋಪದಿಂದ ವಿಷ್ಣುವಧನ್​ ಗುಂಡು ಹಾರಿಸಿದ್ದಾರೆ ಅಂತ ಸುದ್ದಿ ಹಬ್ಬಿಸುತ್ತಾರೆ.

ಅನ್ಯಾಯವಾಗಿದ್ದು ಮಾತ್ರ ವಿಷ್ಣುವರ್ಧನ್​ ಅವರಿಗೆ?

ಇದಾದ ಬಳಿಕ ವಿಷ್ಣುವರ್ಧನ್ ಅವರನ್ನು ಎಲ್ಲರೂ ಟಾರ್ಗೆಟ್ ಮಾಡಿದರು, ವಿಷ್ಣುವರ್ಧನ್​ ಅವರ ಸಿನಿಮಾಗಳಿಗೆ ಆದ ತೊಂದರೆ ಇನ್ಯಾವ ನಟನಿಗೂ ಆಗುವುದು ಬೇಡ. ಆದರೆ, ಇಬ್ಬರೂ ಕೂಡ ಈ ಬಗ್ಗೆ ಮಾಧ್ಯಮದ ಮುಂದೆ ಬಂದು ಮಾತನಾಡಲಿಲ್ಲ. ಯಾಕೆಂದರೆ ಇಬ್ಬರು ಬಂದು ಮಾತನಾಡಿದ್ದರೆ, ಮತ್ತೊಂದು ರೀತಿ ಪಡೆದುಕೊಳ್ಳುತ್ತಿತ್ತು. ಆದರೆ, ವಿಷ್ಣುವರ್ಧನ್​ ಅವರಿಗೆ ಅಣ್ಣಾವ್ರ ಕಂಡರೆ ಅಷ್ಟೇ ಗೌರವ ಇತ್ತು. ಇತ್ತ ಅಣ್ಣಾವ್ರಿಗೆ  ವಿಷ್ಣುವರ್ಧನ್​ ಕಂಡರೆ ಅಷ್ಟೇ ಪ್ರೀತಿ ಇತ್ತು. ಈ ಘಟನೆಯಿಂದ ಅನ್ಯಾಯವಾಗಿದ್ದು ಮಾತ್ರ ವಿಷ್ಣುವರ್ಧನ್​ ಅವರಿಗೆ. ಕೊನೆ ದಿನಗಳಲ್ಲಿ ಅವರು ಪಟ್ಟ ಪಾಡು ಅವರಿಗೆ ಗೊತ್ತು.
Published by:ವಾಸುದೇವ್ ಎಂ
First published: