ಎಲ್ಲಿ ನೋಡಿದರೂ ಈಗ ಪವಿತ್ರ ಲೋಕೇಶ್ (Pavitra Lokesh) ಅವರು ಮದುವೆ (Marriage) ಆಗಿದ್ದಾರೆ ಎಂಬ ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ನಟಿ ಪವಿತ್ರ ಲೋಕೇಶ್ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು (Super Star Mahesh Babu) ಅವರ ಅಣ್ಣನ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನರೇಶ್ (Naresh) ಹಾಗೂ ಪವಿತ್ರ ಲೋಕೇಶ್ ಇಬ್ಬರು ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿ ಅಲ್ಲಿ ಸ್ವಾಮಿಜಿಯೊಬ್ಬರ ಆರ್ಶಿವಾದ ಕೂಡ ಪಡೆದುಕೊಂಡು ಬಂದಿದ್ದಾರಂತೆ. ಇದೇನಪ್ಪಾ? ಸುಚೇಂದ್ರ ಪ್ರಸಾದ್ (Suchendra Prasad) ಅವರ ಜೊತೆ ಖುಷಿ ಖುಷಿಯಾಗಿಯೇ ಇದ್ದ ಪವಿತ್ರ ಲೋಕೇಶ್ ಏಕಾಏಕಿ ಮತ್ತೊಂದು ಮದುವೆಯಾಗಿದ್ದಾರೆ ಎಂದು ನಂಬಲು ಅಭಿಮಾನಿಗಳಿಗೆ ಕಷ್ಟವಾಗಿದೆ. 64 ನೇ ವರ್ಷದ ನರೇಶ್ ಜೊತೆ 43 ವರ್ಷದ ಪವಿತ್ರ ಲೋಕೇಶ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರಂತೆ. ಹಾಗಿದ್ದರೆ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದಾದರೂ ಯಾಕೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.
ಸುಚೇಂದ್ರ ಪ್ರಸಾದ್-ಪವಿತ್ರ ಲೋಕೇಶ್ ನಡುವೆ ಬಿರುಕು ಮೂಡಿದ್ಯಾಕೆ?
ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಪವಿತ್ರ ಲೋಕೇಶ್ ನಿರ್ವಹಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್ ವಿವಾಹವಾಗಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಿದೆ. ಅಪ್ಪಟ ಕನ್ನಡದ ನಟ ಸುಚೇಂದ್ರ ಪ್ರಸಾದ್. ಸ್ಪಷ್ಟವಾಗಿ ಕನ್ನಡ ಮಾತನಾಡಿ ನಟಿಸುವವರು ಯಾರಾದರೂ ಇದ್ದಾರೆ ಅಂದರೆ ಅದು ಸುಚೇಂದ್ರ ಪ್ರಸಾದ್. ಅಪ್ಪಟ ಕನ್ನಡ ಆರಾಧಕರು. ಸಿನಿಮಾಗಳಲ್ಲಿ ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಕನ್ನಡ ಅಂದರೆ ಅವರಿಗೆ ಗೌರವ. ಬೇರೆ ಯಾವ ಭಾಷೆಯನ್ನು ಸುಚೇಂದ್ರ ಪ್ರಸಾದ್ ಬಳಸಲ್ಲ.
ಸುಚೇಂದ್ರ ಪ್ರಸಾದ್-ಪವಿತ್ರ ಅವರಿಗೆ ಇಬ್ಬರು ಮಕ್ಕಳು!
2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಧೈರ್ಯ ಮತ್ತು ದೃಢ ನಿರ್ಧಾರದಿಂದ ಬರುವಂಥ ಎಲ್ಲಾ ಕಷ್ಟಗಳನ್ನು ಎದುರಿಸಿ ಛಲದಿಂದ ಗುರಿಯತ್ತ ಹೆಜ್ಜೆ ಇಡಬೇಕು ಆಗ ಮಾತ್ರ ಗೆಲುವು ನಿಶ್ಚಿತ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ್ದ ಪವಿತ್ರ ಲೋಕೇಶ್ ಗಂಡ ಮತ್ತು ಮಕ್ಕಳ ಜೊತೆಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ ಅಂತಲೇ ಎಲ್ಲರೂ ತಿಳಿದುಕೊಂಡಿದ್ದರು.
ಇದನ್ನೂ ಓದಿ: Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ
ಸುಚೇಂದ್ರ ಪ್ರಸಾದ್ ಅವರ ಕೋಪಾನೇ ಕಾರಣನಾ?
ಹೌದು, ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಂತೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪಾನೆ ಕಾರಣನಾ? ಎಂಬ ಪ್ರಶ್ನೆ ಮೂಡಿದೆ. ಇದ್ದಕಿದ್ದ ಹಾಗೇ ಇದೀಗ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇಬ್ಬರು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಟ್ಟರೆ. ಈ ವಿಚಾರಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಹೇಶ್ ಬಾಬು ಸಹೋದರನನ್ನು ಮದುವೆಯಾಗಿದ್ದರಂತೆ ಪವಿತ್ರಾ ಲೋಕೇಶ್
ನರೇಶ್ ಅವರ ಒಟ್ಟು ಆಸ್ತಿ 6000 ಕೋಟಿಯಂತೆ!
ಹೌದು, ನರೇಶ್ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಮೊದಲ ಅಪ್ಪ ಕೂಡ ಸಾಕಷ್ಟು ಹಣ ಮಾಡಿದ್ದರು. ಎರಡನೇ ಅಪ್ಪ ಕೂಡ ಸೂಪರ್ ಸ್ಟಾರ್. ಇನ್ನೇನು ಕೇಳಬೇಕಾ? ಹುಟ್ಟಿದಾಗಿನಿಂದಲೂ ಗೋಲ್ಡನ್ ಸ್ಪೂನ್ ಇಟ್ಟುಕೊಂಡೇ ಬಂದವರು. ನರೇಶ್ ಒಟ್ಟು ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್ ಇದೀಗ 43 ವರ್ಷದ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿದ್ದಾರಂತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ