Prem Chopra: ಕೊನೆಗೂ ಮೌನ ಮುರಿದ ಪ್ರೇಮ್ ಚೋಪ್ರಾ! ಸಾವಿನ ವದಂತಿ ಕುರಿತು ಏನಂದ್ರು ನಟ?

ಇತ್ತೀಚೆಗೆ ಹಿಂದಿ ಚಿತ್ರರಂಗದ ಹಿರಿಯ ನಟ ಹಾಗೂ ಪ್ರತಿಭಾವಂತ ಕಲಾಕಾರರಾಗಿರುವ ಪ್ರೇಮ್ ಚೋಪ್ರಾ ಅವರು ತೀರಿಹೋದ ಬಗ್ಗೆ ಗಾಳಿಸುದ್ದಿಯು ಇಂಟರ್ನೆಟ್ ನಾದ್ಯಂತ ಗೋಚರಿಸುತ್ತಿದ್ದವು. ಇದರಿಂದ ಹಲವು ಅಭಿಮಾನಿಗಳು ಈ ಸುದ್ದಿ ತಿಳಿದು ಆತಂಕ ಪಡುವಂತಾಗಿತ್ತೆಂದರೆ ಸುಳ್ಳಾಗಲಿಕ್ಕಿಲ್ಲ. ಆದರೆ, ಈ ಸುದ್ದಿ ಪ್ರೇಮ್ ಚೋಪ್ರಾ ಅವರ ಕಿವಿಗೆ ಬೀಳುತ್ತಲೇ ಅವರು ಹೊರಬಂದು ಈ ಗಾಳಿ ಸುದ್ದಿಗೆ ಗುದ್ದು ನೀಡಿದ್ದಾರೆ.

ಪ್ರೇಮ್ ಚೋಪ್ರಾ

ಪ್ರೇಮ್ ಚೋಪ್ರಾ

  • Share this:
ಇತ್ತೀಚೆಗೆ ಹಿಂದಿ ಚಿತ್ರರಂಗದ ಹಿರಿಯ ನಟ (Veteran Film Actor) ಹಾಗೂ ಪ್ರತಿಭಾವಂತ ಕಲಾಕಾರರಾಗಿರುವ ಪ್ರೇಮ್ ಚೋಪ್ರಾ (Prem Chopra) ಅವರು ತೀರಿಹೋದ ಬಗ್ಗೆ ಗಾಳಿಸುದ್ದಿಯು ಇಂಟರ್ನೆಟ್ ನಾದ್ಯಂತ (Internet) ಗೋಚರಿಸುತ್ತಿದ್ದವು. ಇದರಿಂದ ಹಲವು ಅಭಿಮಾನಿಗಳು ಈ ಸುದ್ದಿ ತಿಳಿದು ಆತಂಕ ಪಡುವಂತಾಗಿತ್ತೆಂದರೆ ಸುಳ್ಳಾಗಲಿಕ್ಕಿಲ್ಲ. ಆದರೆ, ಈ ಸುದ್ದಿ ಪ್ರೇಮ್ ಚೋಪ್ರಾ ಅವರ ಕಿವಿಗೆ ಬೀಳುತ್ತಲೇ ಅವರು ಹೊರಬಂದು ಈ ಗಾಳಿ ಸುದ್ದಿಗೆ ಗುದ್ದು ನೀಡಿದ್ದಾರೆ ಹಾಗೂ ತಾವು ಆರೋಗ್ಯವಾಗಿದ್ದು (Healthy) ಈ ಸಂದರ್ಭದಲ್ಲಿ ಅಭಿಮಾನಿಗಳು (Fans) ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಕಿವಿಮಾತನ್ನೂ ಸಹ ಹೇಳಿದ್ದಾರೆ.

ತನ್ನ ಸಾವಿನ ವದಂತಿಗಳ ಬಗ್ಗೆ ನಟ ಪ್ರೇಮ್ ಚೋಪ್ರಾ ಏನು ಹೇಳಿದ್ರು
ಇದಕ್ಕೂ ಮುಂಚೆ ಪ್ರೇಮ್ ಚೋಪ್ರಾ ತೀರಿಹೋದರು ಎಂಬ ಗಾಳಿ ಸುದ್ದಿ ಹರಿದಾಡಿದಾಗ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಆಘಾತಕ್ಕೊಳಗಾದರು. ತದನಂತರ ಹಿರಿಯ ಕಲಾವಿದನಿಗೆ ಈ ವಿಚಾರ ತಿಳಿದು ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತ ತಾವು ಚೆನ್ನಾಗಿರುವುದಾಗಿ ಹೇಳಿದ್ದು ಯಾರೂ ಯಾವುದೇ ರೀತಿಯ ಆತಂಕ ಪಡಬಾರದೆಂದು ವಿನಂತಿಸಿಕೊಂಡಿದ್ದಾರೆ.

ಈ ಗಾಳಿಸುದ್ದಿಯ ಬಗ್ಗೆ ಅವರು, "ಇದೊಂದು ಮಾನಸಿಕ ವಿಕೃತ ಸ್ಥಿತಿಯಲ್ಲದೆ ಇನ್ನೇನು..ಯಾರೋ ವಿಕೃತ ಮನಸ್ಸಿನವರು ನನ್ನ ಸಾವಿನ ಸುದ್ದಿ ಎಲ್ಲೆಡೆ ಹಬ್ಬಿಸಿ ಅದರಿಂದ ವಿಕೃತ ಆನಂದ ಪಡೆಯುತ್ತಿದ್ದಾರೆ, ಆದರೆ ಯಾರೂ ಚಿಂತಿಸಬೇಡಿ, ಇಗೋ ನಾನು ಇಲ್ಲಿರುವೆ ಹಾಗೂ ನಿಮ್ಮೊಂದಿಗೆ ಹೃದಯ ಪೂರ್ವಕ ಮಾತನಾಡುತ್ತಿರುವೆ" ಎಂದು ಹೇಳಿದ್ದಾರೆ.

ಗಾಳಿ ಸುದ್ದಿ ಹಬ್ಬಿಸುವಂತಹ ಚಾಳಿಗೆ ಬೇಸರ ವ್ಯಕ್ತಪಡಿಸಿದ ನಟ 
ಇದೇ ಸಂದರ್ಭದಲ್ಲಿ ಕೆಲವರು ಈ ರೀತಿಯ ಗಾಳಿ ಸುದ್ದಿಗಳನ್ನು ಹಬ್ಬಿಸುವಂತಹ ಚಾಳಿಗೆ ಬೇಸರ ವ್ಯಕ್ತಪಡಿಸಿದ ಅವರು ತಮಗೆ ತಾವು ಸತ್ತಿರುವ ಸುದ್ದಿ ಬಗ್ಗೆ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಕರೆ ಮಾಡಿದಾಗ ತಿಳಿಯಿತೆಂದಿದ್ದಾರೆ. ಅವರು ಈ ಸಂದರ್ಭದಲ್ಲಿ ನನ್ನ ಸತ್ತ ಸುದ್ದಿ ಹರಡುತ್ತಿದ್ದಂತೆಯೇ ನನ್ನ ಮಿತ್ರನಾದ ರಾಕೇಶ್ ರೋಷನ್ ಕರೆ ಮಾಡಿ ವಿಚಾರಿಸಿದರು, ನನ್ನ ಇನ್ನೊಬ್ಬ ಮಿತ್ರ ಹಾಗೂ ಟ್ರೇಡ್ ವಿಶ್ಲೇಷಕರಾಗಿರುವ ಅಮೋದ್ ಮೆಹ್ರಾ ಸಹ ನನಗೆ ಕರೆ ಮಾಡಿ ವಿಚಾರಿಸಿದರು.

ಇದು ನಿಜಕ್ಕೂ ಕೆಟ್ಟ ಸಂಗತಿ, ಅದು ಯಾರೆ ಇರಲಿ ಈ ರೀತಿಯ ಸುದ್ದಿ ಹಬ್ಬಿಸುವಂತಹ ನಡೆ ನಿಲ್ಲಬೇಕು. ಇದರಿಂದ ಸಾಕಷ್ಟು ಮಾನಸಿಕ ಆಘಾತವಾಗುತ್ತದೆ. ನನ್ನ ಪರಮ ಮಿತ್ರನಾದ ಜಿತೇಂದ್ರ ಅವರ ಬಗ್ಗೆಯೂ ಸಹ ಈ ರೀತಿಯ ಸುದ್ದಿ ಹಬ್ಬಿತ್ತು. ಇದು ಸುಮಾರು ನಾಲ್ಕು ತಿಂಗಳ ಹಿಂದೆ ನಡೆದಿತ್ತು ಎಂದು ಪ್ರೇಮ್ ಚೋಪ್ರಾ ತಮ್ಮ ಬೇಸರ ತೋಡಿಕೊಂಡರು.

60ರ ದಶಕದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ
ಪ್ರೇಮ್ ಚೋಪ್ರಾ ಹಿಂದಿ ಚಿತ್ರರಂಗದ ಹಿರಿಯ ಕಲಾವಿದರಲ್ಲೊಬ್ಬರಾಗಿದ್ದು ಖಳ ನಟನಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದ್ದಾರೆ. 60ರ ದಶಕದಲ್ಲಿ ಚಿತ್ರರಂಗಕ್ಕೆ ನಟನೆಯ ಹವ್ಯಾಸದಿಂದ ಕಾಲಿಟ್ಟ ಚೋಪ್ರಾ ತಮ್ಮ ಆರಂಭಿಕ ದಿನಗಳಲ್ಲಿ ಪಂಜಾಬ್ ಭಾಷೆಯಲ್ಲಿ ಹಿಟ್ ಚಿತ್ರವೊಂದರ ನಾಯಕನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ತದನಂತರ ಅವರು ಅಲ್ಲೊಂದು ಇಲ್ಲೊಂದು ಎಂಬಂತೆ ಒದಗಿ ಬಂದ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಪ್ರೇಮ್ ಚೋಪ್ರಾ ಅವರು ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯೊಂದಿಗೆ ಪೂರ್ಣಾವಧಿಯ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:  Tollywood Strike: ಸಲಾರ್ ಸಿನಿಮಾ ಶೂಟಿಂಗ್ ನಿಲ್ಲುತ್ತಾ? ಏನಿದು ಟಾಲಿವುಡ್​ನ ಬ್ರೇಕಿಂಗ್ ನ್ಯೂಸ್?

ಪ್ರೇಮ್ ಚೋಪ್ರಾ ಅವರ ಕೊನೆಯ ಸಿನೆಮಾ
1967ರಲ್ಲಿ ಬಿಡುಗಡೆಯಾದ ತಿಸರಿ ಮಂಜಿಲ್ ಹಾಗೂ ಉಪಕಾರ್ ಚಿತ್ರಗಳು ಪ್ರೇಮ್ ಚೋಪ್ರಾ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ತಳ ಊರುವಂತೆ ಅಡಿಪಾಯ ಹಾಕಿದವು. ತದನಂತರ ಟೈಮ್ಸ್ ತೊರೆದ ಪ್ರೇಮ್ ಚೋಪ್ರಾ ಪೂರ್ಣಾವಧಿ ನಟನೆಯ ವೃತ್ತಿಯನ್ನು ಆಯ್ದುಕೊಂಡರು.

ತಮ್ಮ ವಿಶಿಷ್ಟ ನಡೆ ಹಾಗೂ ಡೈಲಾಗ್ ಡೆಲಿವರಿಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಚೋಪ್ರಾ ತಮ್ಮ ಖಳನ ಪಾತ್ರಕ್ಕಾಗಿಯೇ ಅತಿ ಹೆಚ್ಚು ಮನ್ನಣೆಗಳಿಸಿದರು. ಸುಮಾರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದಿರುವ ಪ್ರೇಮ್ ಚೋಪ್ರಾ ವಯಸ್ಸಾದರೂ ನಟನೆಗೆ ಬೇಡ ಎನ್ನಲಿಲ್ಲ. ಕೊನೆಯ ಬಾರಿಗೆ ಅವರು 2021 ರಲ್ಲಿ ಬಿಡುಗಡೆಯಾಗಿದ್ದ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Emergency Movie: ಕಂಗನಾ ಸಿನಿಮಾಗೆ ಹೊಸ ನಟ ಸೇರ್ಪಡೆ, ವಾಜಪೇಯಿ ಪಾತ್ರ ರಿವೀಲ್ ಮಾಡಿದ ನಟಿ

ವಿಶೇಷವೆಂದರೆ ಪ್ರೇಮ್ ಚೋಪ್ರಾ ಯಾವಾಗಲೂ ಖಳನ ಪಾತ್ರದಲ್ಲಿ ಮಿಂಚಿದ್ದಾರಾದರೂ ಮನೋಜ್ ಕುಮಾರ್ ಅವರು ಪ್ರಸ್ತುತಪಡಿಸಿದ್ದ ಶಹೀದ್ ಎಂಬ ಚಿತ್ರದಲ್ಲಿ ಅವರು ದೇಶಭಕ್ತ ಸುಖದೇವ್ ಅವರ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿ ಗಮನ ಸೆಳೆದಿದ್ದರು. ಈ ಚಿತ್ರ 1965 ರಲ್ಲಿ ಬಿಡುಗಡೆಯಾಗಿತ್ತು.
Published by:Ashwini Prabhu
First published: