Koffee with Karan 7: ಡ್ರಗ್ಸ್​ ಕೇಸ್​ನಲ್ಲಿ ಬಂಧಿಯಾಗಿದ್ದ ಆರ್ಯನ್ ಬಗ್ಗೆ ತಾಯಿ ಗೌರಿ ಖಾನ್ ಏನ್ ಹೇಳಿದ್ರು ಗೊತ್ತಾ?

ಕ್ರೂಸ್ ಶಿಪ್ ಡ್ರಗ್ಸ್ ಬಸ್ಟ್ ಪ್ರಕರಣದಲ್ಲಿ ಕಳೆದ ವರ್ಷ ಆರ್ಯನ್ ಖಾನ್ ಅವರನ್ನು ಬಂಧಿಸುವುದರೊಂದಿಗೆ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಜೀವನವು ಇಡೀ ರಾಷ್ಟ್ರದಲ್ಲಿರುವ ಮಂದಿಯ ಬಾಯಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು. ಈ ಬಗ್ಗೆ ಕಾಫಿ ವಿತ್ ಕರಣ್ ಸೀಸನ್ 7 ಶೋ ಗೆ ಬಂದ ಗೌರಿ ಖಾನ್ ಏನು ಹೇಳಿದ್ದಾರೆ ನೋಡಿ

ಆರ್ಯನ್ ಖಾನ್ ಮತ್ತು ಗೌರಿ ಖಾನ್

ಆರ್ಯನ್ ಖಾನ್ ಮತ್ತು ಗೌರಿ ಖಾನ್

  • Share this:
ಸಾಮಾನ್ಯವಾಗಿ ಈ ಬಾಲಿವುಡ್ ನ ನಟ (Bollywood Actor) ಮತ್ತು ನಟಿಯರು ತಮ್ಮ ವೈಯುಕ್ತಿಕ ಜೀವನವನ್ನು ತುಂಬಾನೇ ಖಾಸಗಿಯಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅವರು ತುಂಬಾನೇ ರಹಸ್ಯವಾಗಿರಿಸಿಕೊಂಡ ಸುದ್ದಿಗಳು ಅವರಿಗೆ ಗೊತ್ತಾಗದಂತೆ ಎಲ್ಲಿಂದಲೋ ಸೋರಿಕೆ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮತ್ತು ಸುದ್ದಿ ಮಾಧ್ಯಮಗಳಲ್ಲಿ ಜೋರಾಗಿ ಹರಿದಾಡಲು ಶುರು ಮಾಡಿರುತ್ತವೆ. ಆದರೆ ಕೆಲವೊಂದು ಗಂಭೀರವಾದ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯುವಂತೆ ಸುದ್ದಿಯಾಗುತ್ತವೆ ಮತ್ತು ಇದರಿಂದ ಆ ನಟ (Actor) ಮತ್ತು ನಟಿಯ (Actress) ಒಂದು ವೃತ್ತಿಜೀವನಕ್ಕೂ ಸಹ ಸ್ವಲ್ಪ ಮಟ್ಟಿಗೆ ಕೊಡಲಿ ಪೆಟ್ಟು ಬೀಳುತ್ತದೆ.

ಇಂತಹದೇ ಒಂದು ದೊಡ್ಡ ಸುದ್ದಿ ಬಾಲಿವುಡ್ ನ ಬಾದ್‌ಶಾ ಅಂತಾನೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಅವರ ಮನೆಯಿಂದ ಬಂದಿದೆ. ಇಷ್ಟು ಹೇಳಿದರೆ ಸಾಕು ನಿಮಗೆ, ಕ್ರೂಸ್ ಶಿಪ್ ಡ್ರಗ್ಸ್ ಬಸ್ಟ್ ಪ್ರಕರಣದಲ್ಲಿ ಕಳೆದ ವರ್ಷ ಶಾರುಖ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ಕ್ಷಣಗಳು ಎಲ್ಲರ ಕಣ್ಮುಂದೆ ಬರುತ್ತವೆ.

ಆರ್ಯನ್ ಅವರನ್ನು ಬಂಧಿಸಿದ್ದ ಸಮಯದ ಬಗ್ಗೆ ತಾಯಿ ಗೌರಿ ಹೇಳುವುದೇನು?
ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ತಮ್ಮ ವೈಯಕ್ತಿಕ ಜೀವನವನ್ನು ತುಂಬಾನೇ ರಕ್ಷಿಸಿಟ್ಟುಕೊಳ್ಳಲು ನೋಡುತ್ತಾರೆ. ಅವರ ಜೀವನವು ತುಂಬಾನೇ ಐಷಾರಾಮಿಯಾಗಿದ್ದರೂ ಸಹ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಅವರು ಯಾರೊಂದಿಗೂ ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ.

ಇದನ್ನೂ ಓದಿ: Bollywood Stars: ಮಾಲ್ತಿ, ವಾಯು, ಅಬ್ರಾಂ, ಯುಗ್! ಬಾಲಿವುಡ್ ಸ್ಟಾರ್ ನಟ-ನಟಿಯರ ಮಕ್ಕಳ ಹೆಸರಿಗಿದೆ ವಿಶೇಷ ಅರ್ಥ

ಕ್ರೂಸ್ ಶಿಪ್ ಡ್ರಗ್ಸ್ ಬಸ್ಟ್ ಪ್ರಕರಣದಲ್ಲಿ ಕಳೆದ ವರ್ಷ ಆರ್ಯನ್ ಖಾನ್ ಅವರನ್ನು ಬಂಧಿಸುವುದರೊಂದಿಗೆ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಜೀವನವು ಇಡೀ ರಾಷ್ಟ್ರದಲ್ಲಿರುವ ಮಂದಿಯ ಬಾಯಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು. ಆರ್ಯನ್ ಅವರು ಜಾಮೀನು ಪಡೆಯುವ ಮೊದಲು ಒಂದು ತಿಂಗಳ ಕಾಲ ಜೈಲಿನಲ್ಲಿ ಕಳೆದರು.

‘ಕಾಫಿ ವಿತ್ ಕರಣ್’ ಸೀಸನ್ 7 ಶೋ ಗೆ ಬಂದ ಗೌರಿ ಖಾನ್
ಆರ್ಯನ್ ವಿರುದ್ಧ ಯಾವುದೇ ಪುರಾವೆಗಳು ಕಂಡು ಬರದಿದ್ದರೂ, ಕಾಫಿ ವಿತ್ ಕರಣ್ 7 ರ ಇತ್ತೀಚಿನ ಸಂಚಿಕೆಯಲ್ಲಿ ಗೌರಿ ಖಾನ್ ಹೇಳಿದಂತೆ ಇದು ಅವರ ಜೀವನದಲ್ಲಿ ತುಂಬಾನೇ ಒಂದು ನೋವಿನಿಂದ ಕೂಡಿದಂತಹ ಸಮಯವಾಗಿತ್ತು ಎಂದು ಖುದ್ದು ಗೌರಿಯೇ ಹೇಳಿಕೊಂಡಿದ್ದಾರೆ ನೋಡಿ.

17 ವರ್ಷಗಳ ನಂತರ, ಅವರು ತಮ್ಮ ಉತ್ತಮ ಸ್ನೇಹಿತರಾದ ಮಹೀಪ್ ಕಪೂರ್ ಮತ್ತು ಭಾವನಾ ಪಾಂಡೆ ಅವರೊಂದಿಗೆ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಎಪಿಸೋಡ್ ನಲ್ಲಿ ಅವರು ಆರ್ಯನ್ ಖಾನ್ ಅವರ ಬಂಧನದ ಬಗ್ಗೆ ಮಾತಾಡಿದರು.

ಶೋ ದಲ್ಲಿ ಕರಣ್ ಕೇಳಿದ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ ಗೌರಿ..
"ಇದು ಶಾರುಖ್ ಖಾನ್ ಅವರಿಗೆ ವೃತ್ತಿಪರವಾಗಿ ಮಾತ್ರವಲ್ಲದೇ, ಕುಟುಂಬಕ್ಕೂ ಸಹ ತುಂಬಾ ಕಠಿಣವಾದ ಸಮಯವಾಗಿತ್ತು. ಆದರೆ ನೀವೆಲ್ಲರೂ ಒಗ್ಗಟ್ಟಾಗಿದ್ದೀರಿ ಮತ್ತು ಒಂದು ಕುಟುಂಬವಾಗಿ ಬಲವಾಗಿ ಹೊರಹೊಮ್ಮಿದ್ದೀರಿ. ನಾವು ಒಂದೇ ಕುಟುಂಬದ ಸದಸ್ಯರಿದ್ದಂತೆ ಎಂದು ನಾನು ಭಾವಿಸುತ್ತೇನೆ. ಇದು ಸುಲಭದ ಮಾತಲ್ಲ, ಗೌರಿ, ನೀವು ಹಿಂದೆಂದಿಗಿಂತಲೂ ಬಲಶಾಲಿಯಾಗಿ ಹೊರಹೊಮ್ಮಿದ್ದೀರಿ. ಕುಟುಂಬಗಳು ಈ ರೀತಿಯದ್ದನ್ನು ಅನುಭವಿಸುತ್ತಿರುವಾಗ ನೀವು ಸ್ವತಃ ಕಠಿಣ ಸಮಯಗಳನ್ನು ನಿಭಾಯಿಸುವ ಬಗ್ಗೆ ಏನು ಹೇಳುತ್ತೀರಿ" ಎಂದು ಕರಣ್ ಜೋಹರ್ ಪ್ರಶ್ನಿಸಿದರು.

ಕರಣ್ ಪ್ರಶ್ನೆಗೆ ಉತ್ತರಿಸುತ್ತಾ ಗೌರಿ "ಒಂದು ಕುಟುಂಬವಾಗಿ, ನಾವು ತುಂಬಾನೇ ಮಾನಸಿಕ ವೇದನೆಯನ್ನು ಅನುಭವಿಸಿದ್ದೇವೆ, ತಾಯಿಯಾಗಿ, ಪೋಷಕರಾಗಿ ನಾವು ಆ ಸಮಯದಲ್ಲಿ ಅನುಭವಿಸಿದ್ದಕ್ಕಿಂತ ಕೆಟ್ಟದ್ದು ಯಾವುದೂ ಇರಲಿಕ್ಕಿಲ್ಲ. ಆದರೆ ಇಂದು, ನಾವೆಲ್ಲರೂ ಒಂದು ಕುಟುಂಬವಾಗಿ ನಿಂತಿರುವಾಗ, ನಮಗೆ ಪ್ರತಿಯೊಬ್ಬರ ಬಗ್ಗೆ ಇನ್ನೂ ಅದೇ ಪ್ರೀತಿ ಇದೆ ಎಂದು ಭಾವಿಸುವ ಒಂದು ಮನಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಾನು ಹೇಳಬಲ್ಲೆ” ಎಂದು ಗೌರಿ ಹೇಳಿದರು.

ಇದನ್ನೂ ಓದಿ: Urfi Javed: ವೈಟ್ ಡ್ರೆಸ್​​ಗೆ ಬ್ಲೂ ಲಿಪ್​​ಸ್ಟಿಕ್! ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು

"ನಮ್ಮ ಎಲ್ಲಾ ಸ್ನೇಹಿತರು ಮತ್ತು ನಮಗೆ ಗೊತ್ತಿಲ್ಲದ ಅನೇಕ ಜನರು, ಅನೇಕ ಧೈರ್ಯ ತುಂಬುವ ಸಂದೇಶಗಳು ನಮಗೆ ಕಳುಹಿಸಿದರು ಮತ್ತು ತುಂಬಾ ಪ್ರೀತಿ ನೀಡಿದರು. ನಾವು ತುಂಬಾನೇ ಪುಣ್ಯ ಮಾಡಿದ್ದೇವೆ ಅಂತ ನಾನು ಭಾವಿಸುತ್ತೇನೆ. ಈ ಮೂಲಕ ನಮಗೆ ಅಂತಹ ಕಠಿಣವಾದ ಸಮಯದಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ" ಎಂದು ಗೌರಿ ಉತ್ತರಿಸಿದರು. ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ಗೌರಿ ಖಾನ್ ಪ್ರಸ್ತುತ ‘ಡ್ರೀಮ್ ಹೋಮ್ಸ್’ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
Published by:Ashwini Prabhu
First published: