• Home
  • »
  • News
  • »
  • entertainment
  • »
  • Divorce: ಮದುವೆಯಾದ 6 ವರ್ಷದ ನಂತರ ಡಿವೋರ್ಸ್ ಪಡೆದ ಸನಾ! ಗಂಡ ಹೆಂಡತಿ ಮನಸ್ತಾಪಕ್ಕೆ ಕಾರಣ ಏನು?

Divorce: ಮದುವೆಯಾದ 6 ವರ್ಷದ ನಂತರ ಡಿವೋರ್ಸ್ ಪಡೆದ ಸನಾ! ಗಂಡ ಹೆಂಡತಿ ಮನಸ್ತಾಪಕ್ಕೆ ಕಾರಣ ಏನು?

ಸನಾ ಅಮಿನ್, ಎಜಾಜ್ ಶೇಖ್

ಸನಾ ಅಮಿನ್, ಎಜಾಜ್ ಶೇಖ್

Divorce: ನಟಿ ಸನಾ ತನ್ನ ಆರು ವರ್ಷಗಳ ದಾಂಪತ್ಯ ಜೀವನದ ನಂತರ ತಮ್ಮ ಪತಿ ಮತ್ತು ಟಿವಿ ನಿರ್ದೇಶಕ ಐಜಾಜ್ ಶೇಖ್ ಅವರಿಂದ ಬೇರ್ಪಟ್ಟಿದ್ದೇನೆ ಎಂದು ಘೋಷಿಸಿದ್ದಾರೆ.

  • Share this:

ನೀವು ಹೆಚ್ಚಾಗಿ ಹಿಂದಿ ಧಾರವಾಹಿಗಳನ್ನು (Serials) ನೋಡುತ್ತಿದ್ದರೆ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಸಿಂಘಂ ಚಿತ್ರ ನೋಡಿದ್ದರೆ, ಅದರಲ್ಲಿ ಅಂಜಲಿ ಭೋಸ್ಲೆ ಪಾತ್ರದಲ್ಲಿ ಅಭಿನಯಿಸಿದ್ದ (Act) ನಟಿ ಸನಾ ಅಮೀನ್ ಶೇಖ್ (Amin Sheikh) ಮುಖ ನಿಮಗೆ ನೆನಪಿಗೆ ಬರುತ್ತದೆ ಅಂತ ಹೇಳಬಹುದು. ಹೌದು ಈ ನಟಿ ‘ಕ್ಯಾ ಮಸ್ತ್ ಹೈ ಲೈಫ್’ ಧಾರವಾಹಿಯಲ್ಲಿ ರಿತು ಷಾ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಇದುವರೆಗೂ 30ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ, ಮತ್ತು ಅತ್ಯಂತ ಜನಪ್ರಿಯ (Popular) ಟಿವಿ ತಾರೆಗಳಲ್ಲಿ ಇವರು ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇಷ್ಟೇ ಅಲ್ಲದೆ ಈ ನಟಿ ಜೀತ್ ಜಾಯೇಂಗೆ ಹಮ್, ಗುಸ್ತಾಕ್ ದಿಲ್, ಮಿಲಿಯನ್ ಡಾಲರ್ ಗರ್ಲ್, ಭೂತು ಸೀಸನ್ 1, ಕೃಷ್ಣದಾಸಿ ಮತ್ತು ಪರ್ಫೆಕ್ಟ್ ಪತಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಸಿಂಘಂ ಅಷ್ಟೇ ಅಲ್ಲದೆ ಟೇಬಲ್ ನಂ.21, ಐಲ್ಯಾಂಡ್ ಸಿಟಿ ಮತ್ತು ಬಾಂಫಾಡ್ ನಂತಹ ಸಿನೆಮಾಗಳಲ್ಲಿ ಪೋಷಕ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ.


ಪತಿಯಿಂದ ದೂರವಾದ ನಟಿ ಸನಾ


ಅರೇ ಈಗೇಕೆ ಈ ನಟಿಯ ಬಗ್ಗೆ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬೇಕಲ್ಲವೇ? ಈ ಕಿರುತೆರೆ ನಟಿ ಸನಾ ತನ್ನ ಆರು ವರ್ಷಗಳ ದಾಂಪತ್ಯ ಜೀವನದ ನಂತರ ತಮ್ಮ ಪತಿ ಮತ್ತು ಟಿವಿ ನಿರ್ದೇಶಕ ಐಜಾಜ್ ಶೇಖ್ ಅವರಿಂದ ಬೇರ್ಪಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. ಅವರ ವಿಚ್ಛೇದನವು ಸೆಪ್ಟೆಂಬರ್ 13 ರಂದು ನಡೆಯಿತು.


ಈಗ, ಇತ್ತೀಚಿನ ಸಂವಾದದಲ್ಲಿ ಸನಾ ತಮ್ಮ ವಿವಾಹ ಮತ್ತು ವಿಚ್ಛೇದನಕ್ಕೆ ಕಾರಣವನ್ನು ತೆರೆದಿಟ್ಟಿದ್ದಾರೆ, ಅವರು ಬಿಡುವಿಲ್ಲದ ಜೀವನವನ್ನು ನಡೆಸುವುದು, ಅಂತಿಮವಾಗಿ ಅವರು ಮದುವೆಯ ನಂತರ ಒಟ್ಟಿಗೆ ಸೇರಿದಾಗ, ಅವರು ಒಂದೇ ರೀತಿಯ ಹಿನ್ನೆಲೆಯಿಂದ ಬಂದವರಲ್ಲ ಮತ್ತು ವೈವಾಹಿಕ ಜೀವನದಿಂದ ಸಂಪೂರ್ಣವಾಗಿ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಅವರು ಅರಿತುಕೊಂಡರು ಎಂದು ಹೇಳಿದರು.


ವಿಚ್ಛೇದನಕ್ಕೆ ಏನು ಕಾರಣ ಅಂತ ವಿವರವಾಗಿ ಹೇಳಿದ ನಟಿ


"ನಮ್ಮಿಬ್ಬರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನಾವಿಬ್ಬರೂ ಒಟ್ಟಿಗೆ ಸಮಯ ಕಳೆಯಲು ಆಗುತ್ತಿಲ್ಲ. ನಿಜ ಹೇಳಬೇಕೆಂದರೆ, ನನ್ನ ಮದುವೆಯಾದ ಮರುದಿನವೇ ನನ್ನ 'ಕೃಷ್ಣದಾಸಿ' ಧಾರಾವಾಹಿಯ ಚಿತ್ರೀಕರಣಕ್ಕೆ ಹೋಗಿದ್ದೆ ಮತ್ತು ಐಜಾಜ್ ಅವರು ಸಹ ತಮ್ಮ ನಿರ್ದೇಶನದ ಕೆಲಸದಲ್ಲಿ ಬ್ಯುಸಿ ಆಗಿದ್ದರು.ನಾವು ಕೆಲಸದಿಂದ ಬಿಡುವು ಪಡೆದಾಗ, ನಾವು ವಿಭಿನ್ನ ಹಿನ್ನೆಲೆಯಿಂದ ಬಂದಿದ್ದೇವೆ ಮತ್ತು ನಮ್ಮ ವಿವಾಹದಿಂದ ವಿಭಿನ್ನ ವಿಷಯಗಳನ್ನು ನಾವು ಬಯಸುತ್ತೇವೆ ಎಂದು ನಾವು ಅರಿತುಕೊಂಡೆವು.


ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಳಪೆ ಜಗಳ, ಮೈಕ್ ತೆಗೆದು ನಡೆದ ರೂಪೇಶ್ ರಾಜಣ್ಣ


ದುರದೃಷ್ಟವಶಾತ್, ನಮ್ಮ ಪ್ರೀತಿಸುವ ಸಮಯದಲ್ಲಿ ಅಥವಾ ಮದುವೆಯ ಆರಂಭಿಕ ತಿಂಗಳುಗಳಲ್ಲಿ ಅದರ ಬಗ್ಗೆ ಮಾತನಾಡಲು ನಮಗೆ ಯಾವುದೇ ರೀತಿಯ ಅವಕಾಶಗಳು ಸಿಗಲಿಲ್ಲ. ನಮ್ಮಲ್ಲಿ ಹೊಂದಾಣಿಕೆಯ ಸಮಸ್ಯೆಗಳು ತುಂಬಾನೇ ಇದ್ದವು" ಅಂತ ಹೇಳಿಕೊಂಡಿದ್ದಾರೆ. ಅವರು ಈ ವಿವಾಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು ಎಂದು ನಟಿ ಹೇಳಿದರು. ಅವರು ಒಟ್ಟಿಗೆ ಇದ್ದ ಆರು ವರ್ಷಗಳನ್ನು ರಾಜಿ ಮಾಡಿಕೊಂಡರು ಎಂದು ಬಹಿರಂಗಪಡಿಸಿದರು. ಆದಾಗ್ಯೂ, ವಿಷಯಗಳು ಸುಧಾರಿಸಲಿಲ್ಲ.


“ಇಬ್ಬರು ವ್ಯಕ್ತಿಗಳು ಮನೆಯಲ್ಲಿ ಸಂತೋಷದಿಂದ ವಾಸಿಸದಿದ್ದಾಗ, ದೂರವಾಗುವುದು ಉತ್ತಮ ಅಂತ ಅನ್ನಿಸಿತು. ನಮ್ಮ ವೈವಾಹಿಕ ಜೀವನವನ್ನು ಉಳಿಸಲು ನನಗೆ ಇನ್ನೂ ಯಾವುದೇ ಮಾರ್ಗವಿಲ್ಲ ಎಂದು ಅನ್ನಿಸಿದಾಗ ನಾವು ಬೇರ್ಪಡುವ ಅಗತ್ಯವಿದೆ ಎಂದು ನಾನು ಭಾವಿಸಿದೆ” ಎಂದು ಹೇಳಿದರು.


ಇದನ್ನೂ ಓದಿ: ನವರಾತ್ರಿ 5ನೇ ದಿನ, ಹಸಿರು ಬಣ್ಣದಲ್ಲಿ ಬಾಲಿವುಡ್ ತಾರೆಯರ ಕಣ್ಮನ ಸೆಳೆಯುವ ನೋಟ


ಇತ್ತೀಚಿನ ದಿನಗಳಲ್ಲಿ, ಸನಾ ಅವರು ಒಟಿಟಿಯಲ್ಲಿ ಕೆಲಸ ಮಾಡಲು ಬಯಸಿ, ಹನ್ಸಾಲ್ ಮೆಹ್ತಾ ಅವರ ವೆಬ್ ಶೋ ನ ಭಾಗವಾಗಿದ್ದಾರೆ ಎಂದು ಹೇಳಿದರು. ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, ಅವರು ತಮ್ಮ ಯೋಜನೆಯ ಚಿತ್ರೀಕರಣವನ್ನು ಮುಗಿಸಿದ ನಂತರ ಯೋಚನೆ ಮಾಡುವುದಾಗಿ ಹೇಳಿದರು.

First published: