ಸದ್ಯ ಎಲ್ಲೆಲ್ಲೂ ಪವರ್ ಸ್ಟಾರ್ (Power Star) ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರದ್ದೇ ಮಾತು. ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ (Last Movie) ಆಗಿರೋದ್ರಿಂದ ಈ ಸಿನಿಮಾ (Cinema) ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ (Fans) ಅಲ್ಲ, ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ. ಇದೇ ಮಾರ್ಚ್ 17ರಿಂದ ಜೇಮ್ಸ್ ಸಿನಿಮಾ ಜಾತ್ರೆ ಶುರುವಾಗಲಿದೆ. ಸಿನಿಮಾವನ್ನು ಅದ್ಧೂರಿಯಾಗಿ ಬರವಾಗಿ ಮಾಡಿಕೊಳ್ಳಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇಂದು ಚಿತ್ರ ತಂಡ ಅಭಿಮಾನಿಗಳಿಗೆ ಬಿಗ್ ಗಿಫ್ಟ್ (Big Gift) ಕೊಟ್ಟಿದ್ದು, ಚಿತ್ರದ ಮತ್ತೊಂದು ಸಾಂಗ್ (Song) ರಿಲೀಸ್ ಮಾಡಲಾಗಿದೆ. ಇನ್ನು ಚಿತ್ರದ ಕುರಿತು ಅಪ್ಡೇಟ್ಸ್ (Updates) ತಿಳಿದುಕೊಳ್ಳಲು ಫ್ಯಾನ್ಸ್ ಕಾತರರಾಗಿದ್ದಾರೆ. ಹಾಗಿದ್ರೆ ಸಿನಿಮಾದಲ್ಲಿ ಅಪ್ಪು ಹೆಸರೇನು? ಅವರ ಪಾತ್ರವೇನು? ಈ ಬಗ್ಗೆ ಎಲ್ಲಿಯೂ ಇಲ್ಲದ ಎಕ್ಸ್ಕ್ಲೂಸಿವ್ (Exclusive) ಮಾಹಿತಿ ನಮ್ಮಲ್ಲಿದೆ ಓದಿ…
ಜೇಮ್ಸ್ ಸಿನಿಮಾದಲ್ಲಿ ಅಪ್ಪು ಪಾತ್ರವೇನು?
ಪುನೀತ್ ಅಭಿನಯದ ಚಿತ್ರಗಳು ಫ್ಯಾಮಿಲಿ ಓರಿಯಂಟೆಡ್ ಆಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾಗಳಲ್ಲಿ ಅವರ ಪಾತ್ರವೂ ಕೂಡ ತೂಕದ್ದಾಗಿರುತ್ತದೆ. ಹೀಗಾಗಿ ಜೇಮ್ಸ್ ಸಿನಿಮಾ ಕೂಡ ಇದರಿಂದ ಹೊರತಾಗಿ ಇರುವುದಿಲ್ಲ.
ಜೇಮ್ಸ್ ಸಿನಿಮಾ ಕುಟುಂಬದವರು ಎಲ್ಲಾ ಕುಳಿತು ನೋಡಬಹುದು ಎನ್ನುವುದರಲ್ಲಿ ಡೌಟೇ ಇಲ್ಲ. ಇನ್ನು ಪುನೀತ್ ಸೈನಿಕರ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಸೈನಿಕರ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗಿದೆ.
ಜೇಮ್ಸ್ ಸಿನಿಮಾದಲ್ಲಿ ಅಪ್ಪು ಪಾತ್ರದ ಹೆಸರೇನು?
ಜೇಮ್ಸ್ ಸಿನಿಮಾದಲ್ಲಿ ಪುನೀತ್ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಹಾಗಿದ್ರೆ ಸಿನಿಮಾದಲ್ಲಿ ಅವರ ಪಾತ್ರದ ಹೆಸರೇನು ಗೊತ್ತಾ? ಯಾರೂ ತಿಳಿಸದ ವಿಚಾರವನ್ನು ನಾವು ರಿವೀಲ್ ಮಾಡುತ್ತಿದ್ದೇವೆ. ಅದೇನಂದರೆ ಸಿನಿಮಾದಲ್ಲಿ ಪುನೀತ್ ಪಾತ್ರದ ಹೆಸರು ಸಂತೋಷ್ ಕುಮಾರ್. ಇದೇ ಹೆಸರಿನ ಟ್ಯಾಗ್ ಹಾಕಿಕೊಂಡು, ಪುನೀತ್ ರಾಜ್ಕುಮಾರ್ ಸೈನಿಕನ ಡ್ರೆಸ್ನಲ್ಲಿ ಮಿಂಚಿದ್ದಾರೆ.
![what is the name of puneet rajkumar in james movie]()
ಜೇಮ್ಸ್ ಚಿತ್ರದಲ್ಲಿ ಪುನೀತ್ ಹೆಸರು ಸಂತೋಷ್ ಕುಮಾರ್
ಇದನ್ನೂ ಓದಿ: Puneeth Rajkumar: ‘ಜೇಮ್ಸ್' ಸಿನಿಮಾದಿಂದ ಮತ್ತೊಂದು ಹಾಡು, "ಸಲಾಮ್ ಸೋಲ್ಜರ್" ಎಂದ ಪವರ್ ಸ್ಟಾರ್
‘
ಜೇಮ್ಸ್’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್
ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಸಾಕಷ್ಟು ಸದ್ದು, ಸುದ್ದಿ ಮಾಡುತ್ತಿದೆ. ಸಿನಿಮಾ ರಿಲೀಸ್ಗೂ ದಿನಗಣನೆ ಆರಂಭವಾಗಿದೆ. ಇದೀಗ ಜೇಮ್ಸ್ ಚಿತ್ರತಂಡ ಮತ್ತೊಂದು ಸಾಂಗ್ ಅನ್ನು ರಿಲೀಸ್ ಮಾಡಿದೆ. ಪಿಆರ್ಕೆ ಆಡಿಯೋದ ಯೂಟ್ಯೂಬ್ ಚಾನೆಲ್ನಲ್ಲಿ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.
“ರಣ ರಣ ರಣ ಕಲಿಯೋ” ಎಂದು ಆರ್ಭಟಿಸಿದ ಪವರ್ ಸ್ಟಾರ್
“ರಣ ರಣ ರಣ ಕಲಿಯೋ” ಎಂದು ಆರಂಭವಾಗುವ ಈ ಲಿರಿಕಲ್ ಸಾಂಗ್ 3 ನಿಮಿಷ 35 ಸೆಕೆಂಡ್ನಷ್ಟಿದೆ. ಸಲಾಂ ಸೋಲ್ಡರ್ ಎಂದಿರುವ ಅಪ್ಪು, ಹಾಡಿನ ತುಂಬಾ ಆರ್ಭಟಿಸಿದ್ದಾರೆ. ಸಾಂಗ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಗಿಟ್ಟಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಮಾರ್ಚ್ 17ರಿಂದ ಜೇಮ್ಸ್ ಜಾತ್ರೆ ಶುರು
ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಈಗಾಗಲೇ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪವರ್ಸ್ಟಾರ್ ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ 5 ಭಾಷೆಗಳಲ್ಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.
ಇದನ್ನೂ ಓದಿ: Puneeth Rajkumar: ನನಸಾಗಲಿದೆ ಅಪ್ಪು ಕಂಡ ಕನಸು! ಶಕ್ತಿಧಾಮದಲ್ಲಿ ಶೀಘ್ರದಲ್ಲಿಯೇ ಶುರುವಾಗಲಿದೆ ಶಾಲೆ
ಪುನೀತ್ ಜೊತೆ ಘಟಾನುಘಟಿಗಳ ಅಭಿನಯ
ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವ್ರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ವಿಶೇಷ ಅಂದ್ರೆ ಶಿವರಾಜ್ ಕುಮಾ್ರ್, ರಾಘವೇಂದ್ರ ರಾಜ್ಕುಮಾರ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶರತ್ ಕುಮಾರ್, ಅನು ಪ್ರಭಾಕರ್, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ