ಬಾಲಿವುಡ್ ನ ನಟ ಅಕ್ಷಯ್ ಕುಮಾರ್ (Akshay Kumar) ಅಂತ ಹೆಸರು ಕೇಳಿದರೆ ಸಾಕು ಅವರ ನಟನೆ, ಸರಳತೆ ಮತ್ತು ಅವರ ಒಂದು ಸುಂದರ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ. ಇತ್ತೀಚೆಗೆ ಇವರು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ (Karan Johar)ಅವರು ನಡೆಸಿಕೊಡುವಂತಹ ‘ಕಾಫಿ ವಿತ್ ಕರಣ್’ ನ ಸೀಸನ್ 7 ರಲ್ಲಿ (Koffee With Karan Season 7) ಅತಿಥಿಯಾಗಿ ಬಂದಿದ್ದು, ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ‘ಕಾಫಿ ವಿತ್ ಕರಣ್’ ಸೀಸನ್ 7 ರಲ್ಲಿ ನಿರ್ಮಾಪಕ ಕರಣ್ ಜೋಹರ್ ಅವರ ಇತ್ತೀಚಿನ ಅತಿಥಿಯಾಗಿದ್ದ ಅಕ್ಷಯ್ ಕುಮಾರ್ ರ್‍ಯಾಪಿಡ್ ಫೈರ್ ಸುತ್ತಿನಲ್ಲಿ ವಿಜಯಶಾಲಿ ಆದರು.
ಈ ಶೋ ನಲ್ಲಿ ಅನುಭವಿಯಾಗಿರುವ ಅಕ್ಷಯ್ ಅವರೊಂದಿಗೆ ತೆಲುಗು ನಟಿ ಸಮಂತಾ ರುತ್ ಪ್ರಭು ಕೂಡ ಇದ್ದರು. ಸೂಪರ್-ಮೋಜಿನ ರ್‍ಯಾಪಿಡ್ ಫೈರ್ ಸುತ್ತಿನಲ್ಲಿ, ನಟ ಅಕ್ಷಯ್ ಕುಮಾರ್ ಅವರನ್ನು ನವವಿವಾಹಿತ ಬಾಲಿವುಡ್ ನಟ ಮತ್ತು ನಟಿಯರಿಗೆ ಏನಾದರೂ ಮದುವೆಯ ಸಲಹೆ ನೀಡುವಂತೆ ಕೇಳಲಾಯಿತು.
ಸಂತೋಷವಾಗಿರುವ ಹೆಂಡತಿ ಒಂದು ಸಂತೋಷದ ಜೀವನಕ್ಕೆ ಸಮಾನ
ಆಗ ಇತ್ತೀಚೆಗೆ ಮದುವೆಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರಿಗೆ ಸಲಹೆ ನೀಡುತ್ತಾ ಅಕ್ಷಯ್ ಅವರು "ನೆನಪಿಡಿ, ಸಂತೋಷವಾಗಿರುವ ಹೆಂಡತಿ ಒಂದು ಸಂತೋಷದ ಜೀವನಕ್ಕೆ ಸಮಾನ" ಎಂದು ಹೇಳಿದರು.
ಇದನ್ನೂ ಓದಿ: Korean Web Series: ಕೊರಿಯನ್ ವೆಬ್ ಸಿರೀಸ್ಗಳಲ್ಲಿ ಏನಿರುತ್ತೆ? ಹುಚ್ಚೆದ್ದು ನೋಡೋದೇಕೆ?
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಗೆ ಸಲಹೆ
ನಂತರ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಗೆ ಏನಾದರೊಂದು ಬುದ್ಧಿವಂತಿಕೆಯ ಕೆಲವು ಸಲಹೆಗಳನ್ನು ನೀಡಿ ಅಂತ ಹೇಳಿದಾಗ, ಅನೇಕ ಯೋಜನೆಗಳಲ್ಲಿ ಕತ್ರಿನಾ ಅವರೊಂದಿಗೆ ನಟಿಸಿದ ಅಕ್ಷಯ್ "ನಾನು ಕತ್ರಿನಾಳನ್ನು ತುಂಬಾ ಚೆನ್ನಾಗಿ ಬಲ್ಲೆ, ಆದ್ದರಿಂದ ಕತ್ರಿನಾ ಅವನ ಕಿವಿಯನ್ನು ತಿನ್ನಬೇಡಿ, ನಿಧಾನವಾಗಿ ನುಂಗಿಬಿಡಿ." ಹಾಗೆಯೇ ವಿಕ್ಕಿಗೆ, ಅಕ್ಷಯ್ ಅವರ ಸಂದೇಶ "ಅವಳಿಗೆ ಮನೆಯಲ್ಲಿಯೇ ಜಿಮ್ ಮಾಡಿ ಕೊಡಿ, ಆಗ ಆಕೆಯನ್ನು ಮನೆಯಲ್ಲಿಯೇ ನೀವು ಜಾಸ್ತಿ ನೋಡಬಹುದು" ಎಂದು ಹೇಳಿದ್ದಾರೆ.
ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಇಬ್ಬರು ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಇಬ್ಬರು ವಿವಾಹವಾದರು. ಅವರು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಭವ್ಯವಾದ ಮದುವೆ ಸಮಾರಂಭವನ್ನು ಆಯೋಜಿಸಿದ್ದರು. ಮದುವೆಗೆ ಅವರಿಬ್ಬರ ಕುಟುಂಬ ಸದಸ್ಯರು ಮತ್ತು ಚಲನಚಿತ್ರೋದ್ಯಮದ ಕೆಲವೇ ಕೆಲವು ಆಪ್ತ ಸ್ನೇಹಿತರನ್ನಷ್ಟೇ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: Celebrities: ಸಿನಿಮಾಗಾಗಿ ಬೆತ್ತಲೆಯಾದ ನಟ - ನಟಿಯರಿವರು, ಫೇಮ್ಗಾಗಿ ಹೀಗೆಲ್ಲಾ ಮಾಡ್ಬೋದಾ?
ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಮನೆ ‘ವಾಸ್ತು’ ವಿನಲ್ಲಿ ಕುಟುಂಬ ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರದಲ್ಲಿ ಅವರು ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಹ ಇದ್ದಾರೆ. ನಟಿ ಆಲಿಯಾ ಭಟ್ ಕಳೆದ ತಿಂಗಳು ತನ್ನ ಗರ್ಭಧಾರಣೆಯನ್ನು ಘೋಷಿಸಿದರು.
ತಾರಾ ಜೋಡಿಗಳಲ್ಲಿ ತುಂಬಾನೇ ಸೀನಿಯರ್ ಜೋಡಿ
ನಟ ಅಕ್ಷಯ್ ಎಷ್ಟಾದರೂ ಈ ತಾರಾ ಜೋಡಿಗಳಲ್ಲಿ ತುಂಬಾನೇ ಸೀನಿಯರ್ ಅಲ್ಲವೇ? ಹೌದು.. ನಟಿ ಟ್ವಿಂಕಲ್ ಖನ್ನಾ ಅವರನ್ನು ಅಕ್ಷಯ್ ಮದುವೆಯಾಗಿ ಬರೋಬ್ಬರಿ 21 ವರ್ಷಗಳೇ ಕಳೆದಿವೆ. ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಇಬ್ಬರು ‘ಇಂಟರ್ನ್ಯಾಷನಲ್ ಖಿಲಾಡಿ’ ಮತ್ತು ‘ಜುಲ್ಮಿ’ ಯಂತಹ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ದಂಪತಿಗಳಿಗೆ 19 ವರ್ಷದ ಆರವ್ ಮತ್ತು 9 ವರ್ಷದ ನಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಟ್ವಿಂಕಲ್ ಖನ್ನಾ ಅವರು ಈಗ ಹೆಚ್ಚು ಮಾರಾಟವಾದ ಪುಸ್ತಕದ ಲೇಖಕಿಯಾಗಿದ್ದು, ಇಷ್ಟೇ ಅಲ್ಲದೆ ಚಲನಚಿತ್ರಗಳ ನಿರ್ಮಾಪಕರಾಗಿದ್ದಾರೆ. ಇದೆಲ್ಲದರ ಜೊತೆಗೆ ಅವರು ಡಿಜಿಟಲ್ ಕಂಟೆಂಟ್ ಕಂಪನಿಯೊಂದನ್ನು ಸಹ ನಡೆಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ