Vijay Deverakonda Liger Collection: ಹೇಗಿದೆ ಲೈಗರ್‌ ಚಿತ್ರದ ಮೊದಲ ದಿನದ ಕಲೆಕ್ಷನ್?

ನಟ ವಿಜಯ್ ದೇವರಕೊಂಡ ಅಭಿನಯದ ಬಹುನೀರೀಕ್ಷಿತ ಸಿನಿಮಾ ʼಲೈಗರ್ʼ ಚಿತ್ರ ದೇಶಾದ್ಯಂತ ತೆರೆಕಂಡಿದ್ದು ದೇಶದ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ. ಹಾಗಾದರೆ ಲೈಗರ್‌ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಹೇಗೆ ಸದ್ದು ಮಾಡುತ್ತಿದೆ, ಮೊದಲ ದಿನದ ಕಲೆಕ್ಷನ್‌ ಎಷ್ಟು ಎಂಬ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಲೈಗರ್‌ ಸಿನೆಮಾ

ಲೈಗರ್‌ ಸಿನೆಮಾ

  • Share this:

ನಟ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಬಹುನೀರೀಕ್ಷಿತ ಸಿನಿಮಾ ʼಲೈಗರ್ʼ (Liger) ಚಿತ್ರ ದೇಶಾದ್ಯಂತ ತೆರೆಕಂಡಿದ್ದು ದೇಶದ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ. ಅರ್ಜುನ್‌ ರೆಡ್ಡಿ (Arjun Reddy), ಗೀತಾ ಗೋವಿದಂ ಚಿತ್ರದ ಸಕ್ಸಸ್‌ ನಂತರ ದೊಡ್ಡ ಹಿಟ್‌ ನೀಡಲು ಕಾತುರರಾಗಿದ್ದ ವಿಜಯ್‌ ದೇವರಕೊಂಡ ಲೈಗರ್‌ ಮೂಲಕ ಅದನ್ನು ಎದುರು ನೋಡುತ್ತಿದ್ದಾರೆ. ಹಾಗಾದರೆ ಲೈಗರ್‌ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ (Box Office) ಹೇಗೆ ಸದ್ದು ಮಾಡುತ್ತಿದೆ, ಮೊದಲ ದಿನದ ಕಲೆಕ್ಷನ್‌ (Collection) ಎಷ್ಟು ಎಂಬ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.


ಮೊದಲ ದಿನ 20 ಕೋಟಿ ಬಾಚಿಕೊಂಡ ‌ʼಲೈಗರ್ʼ
ಸದ್ಯ ತೆರೆಕಂಡಿರುವ ಲೈಗರ್‌ ಚಿತ್ರದ ಕುರಿತಾಗಿ ಅಭಿಮಾಮಿಗಳು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿ ವಿಜಯ್ ದೇವರಕೊಂಡ ಅಭಿನಯದ ಚಿತ್ರವು ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 20 ಕೋಟಿ ಗಳಿಸುವ ಮೂಲಕ ದೊಡ್ಡ ಓಪನಿಂಗ್ ಪಡೆದುಕೊಂಡಿದೆ.


ಹೌಸ್ ಫುಲ್ ಪ್ರದರ್ಶನ ಕಂಡಿರುವ ಲೈಗರ್ ಚಿತ್ರ
ಮೊದಲ ದಿನ ದೇಶದಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಂಡಿರುವ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಅಭಿನಯದ ಲೈಗರ್ ಚಿತ್ರ ಮೊದಲ ದಿನವಾದ ಗುರುವಾರದಂದು ಸುಮಾರು 19 ಕೋಟಿ ರೂ. ಗಳಿಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 11 ಕೋಟಿ ರೂಪಾಯಿ ಗಳಿಸಿದರೆ, ತೆಲುಗು ರಾಜ್ಯಗಳಿಂದ 14.50 ಕೋಟಿ ಬಾಚಿಕೊಂಡಿದೆ. ಇನ್ನೂ ಹಿಂದಿ ಚಿತ್ರರಂಗದಲ್ಲಿ ಲೈಗರ್‌ ಸಿನಿಮಾ ಕೇವಲ ಪ್ರಿವ್ಯೂಗಳನ್ನು ಮಾತ್ರ ಹೊಂದಿತ್ತು, ಹೀಗಾಗಿ ಅಲ್ಲಿ ಸುಮಾರು 1.40 ಕೋಟಿಯನ್ನು ಗಳಿಸಿದೆ. ಹಿಂದಿ ಆವೃತ್ತಿಯು ಅಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಲಿದ್ದು, ಪೂರ್ಣ ಪ್ರಮಾಣದ ಕಲೆಕ್ಷನ್‌ ಎಷ್ಟು ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: Vijay Devarakonda: ವಿಜಯ್ ದೇವರಕೊಂಡ ಸಡನ್ ಎಂಗೇಜ್ಮೆಂಟ್, ಅನನ್ಯಾ ಅಲ್ಲ, ರಶ್ಮಿಕಾ ಅಲ್ಲ! ಮತ್ತ್ಯಾರು?

ಮೊದಲ ದಿನದ ಕಲೆಕ್ಷನ್‌ ಚಿತ್ರ ತಂಡಕ್ಕೆ ದೊಡ್ಡ ಮೊತ್ತವಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ತೆಲುಗು ಚಿತ್ರರಂಗದಲ್ಲಿ ಲೈಗರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇನ್ನೂ ಹೈದರಾಬಾದ್ ನಲ್ಲಿ ಮೊದಲ ದಿನವೇ 4 ಕೋಟಿ ರೂ ಗಳಿಸಿದ್ದು, ಅಭಿಮಾನಿಗಳಿಗೆ ವಿಜಯ್‌ ಧನ್ಯವಾದ ತಿಳಿಸಿದ್ದಾರೆ.


ಲೈಗರ್‌ ಸಿನಿಮಾದ ಮೊದಲ ದಿನದ ಕಲೆಕ್ಷನ್ ‌ ಹೀಗಿದೆ.
  • ನಿಜಾಮ್ - ರೂ. 7 ಕೋಟಿ (ರೂ. 3.80 ಕೋಟಿ ಷೇರು)

  • ಸೀಡೆಡ್ - ರೂ. 1.80 ಕೋಟಿ (ರೂ. 1.30 ಕೋಟಿ ಷೇರು)

  • ಆಂಧ್ರ - ರೂ. 5.70 ಕೋಟಿ (ರೂ. 3.85 ಕೋಟಿ ಷೇರು)

  • ಆಂಧ್ರ/ತೆಲಂಗಾಣ - ರೂ. 14.50 ಕೋಟಿ (ರೂ. 8.95 ಕೋಟಿ ಷೇರು)

  • ಕರ್ನಾಟಕ - ರೂ. 1.50 ಕೋಟಿ (ರೂ. 70 ಲಕ್ಷ ಷೇರು)

  • ತಮಿಳುನಾಡು - ರೂ. 1 ಕೋಟಿ (ರೂ. 40 ಲಕ್ಷ ಷೇರು)

  • ಕೇರಳ - ರೂ. 25 ಲಕ್ಷ (ರೂ. 10 ಲಕ್ಷ ಷೇರು)

  • ಭಾರತದ ಉಳಿದೆಡೆ - ರೂ. 1.75 ಕೋಟಿ (ರೂ. 75 ಲಕ್ಷ ಷೇರು)


ಇದನ್ನೂ ಓದಿ:  Liger OTT Release: ಒಟಿಟಿಯಲ್ಲಿ ಬರಲಿದೆ ಲೈಗರ್! ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ

ಒಟ್ಟಾರೆ ಭಾರತದಲ್ಲಿ ಲೈಗರ್‌ ಸಿನಿಮಾವು ಮೊದಲ ದಿನವೇ 20 ಕೋಟಿ ಬಾಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಚಿತ್ರಮಂದಿರದಲ್ಲಿ ಸಿನಿಮಾ ಹೇಗೆ ಓಡುತ್ತದೆ ಮತ್ತು ಎಷ್ಟು ಗಳಿಸುತ್ತದೆ ಎಂದು ಕಾದು ನೋಡಬೇಕು.

ಫೈಟರ್ ಪಾತ್ರದಲ್ಲಿ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ, ರಮ್ಯಾ ಕೃಷ್ಣ, ರೋನಿತ್ ರಾಯ್, ವಿಷು ರೆಡ್ಡಿ ಅಭಿನಯದ ಬಹುನಿರೀಕ್ಷಿತ ಲಿಗರ್‌ ಸಿನಿಮಾ ಆಗಸ್ಟ್ 25ರಂದು ತೆರೆ ಕಂಡಿದೆ. ಪುರಿ ಜಗನ್ನಾಥ್ ನಿರ್ದೇಶನದ, ನಿರ್ಮಾಣದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಫೈಟರ್ ಆಗಿ ಕಾಣಿಸಿಕೊಂಡಿದ್ದು, ಬಿಡುಗಡೆ ಮುನ್ನವೇ ಸಾಕಷ್ಟು ಹೈಪ್‌ ಪಡೆದುಕೊಂಡಿತ್ತು. ಈ ಚಿತ್ರದ ಹಾಡುಗಳು ಸಖತ್ ವೈರಲ್ ಆಗಿದ್ದವು ಮತ್ತು ಚಿತ್ರದ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ನಡೆದಿತ್ತು. ದೇಶಾದ್ಯಂತ ಸಾಕಷ್ಟು ರಿಯಾಲಿಟಿ ಶೋಗಳು, ಸುದ್ದಿಗೋಷ್ಠಿಯಲ್ಲಿ ಲೈಗರ್ ತಂಡ ಸಿನಿಮಾ ಪ್ರಚಾರ ಮಾಡಿತ್ತು.

Published by:Ashwini Prabhu
First published: