ತೆಲುಗಿನ ಖ್ಯಾತ ನಟ ತಾರಕ ರತ್ನ (Taraka Ratna) ಅವರು ಹೃದಯಾಘಾತದಿಂದ ಬೆಂಗಳೂರಿನ (Bengaluru) ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂದಮೂರಿ ತಾರಕ ರತ್ನ ತೆಲುಗು ಇಂಡಸ್ಟ್ರಿಯಲ್ಲಿ ಕ್ರೇಜ್ ಇರುವಂತಹ ನಟ. ನಂದಮೂರಿ ತಾರಕ ರತ್ನ ತೆಲುಗು ಚಿತ್ರರಂಗದಲ್ಲಿ (Tollywood) ಕೆಲಸ ಮಾಡುತ್ತಿರುವ ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ಒಕಾಟೊ ನಂಬರ್ ಕುರ್ರಾಡು ಸಿನಿಮಾದ (Cinema) ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಅವರು ಹೀರೋ (Hero) ಆಗಿ ಮಿಂಚಿದ್ದರು. ಖಳನಾಯಕನ (Villain) ಪಾತ್ರಗಳನ್ನು ಮಾಡಿ ಮಿಂಚುವ ಮೊದಲು ಅವರು ಹಲವಾರು ಚಲನಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದರು.
ಆದರೆ ಇವರಿಗೂ ಜೂನಿಯರ್ ಎನ್ಟಿಆರ್ಗೂ ಇರುವ ಸಂಬಂಧವೇನು? ಇವರಿಬ್ಬರೂ ಸಂಬಂಧಿಗಳಾ? ಇವರಿಬ್ಬರ ನಡುವಿನ ನಂಟೇನು? ಫ್ಯಾಮಿಲಿ ಫ್ರೆಂಡ್ಸಾ? ಇಲ್ಲಿದೆ ವಿವರ.
ರಕ್ತ ಸಂಬಂಧ - ಅಣ್ಣ ತಮ್ಮಂದಿರು
ಜೂನಿಯರ್ ಎನ್‌ಟಿಆರ್ ಅವರ ತಂದೆಯ ಅಣ್ಣನ ಮಗ ತಾರಕ ರತ್ನ. ಅಂದರೆ ಜೂನಿಯರ್ ಎನ್‌ಟಿಆರ್ ಅವರ ದೊಡ್ಡಪ್ಪನ ಮಗ ತಾರಕ ರತ್ನ. ಇವರಿಬ್ಬರೂ ರಕ್ತ ಸಂಬಂಧಿಗಳು. ಸಂಬಂಧದಲ್ಲಿ ನೋಡಿದರೆ ತಾರಕ ರತ್ನ ಅವರು ಜೂನಿಯರ್ ಎನ್‌ಟಿಆರ್ ಅವರ ಅಣ್ಣ.
ಬಾಲಯ್ಯ ಅವರು ತಾರಕ ರತ್ನಗೆ ಏನಾಗಬೇಕು?
ಇದೀಗ ತಾರಕ ರತ್ನ ಅವರು ತಮ್ಮ ಚಿಕ್ಕಪ್ಪ ಬಾಲಯ್ಯ ಪರ ಪ್ರಚಾರ ಮಾಡುತ್ತಿದ್ದರು. ಬಾಲಯ್ಯ ಪರವಾಗಿ ಚುನಾವಣೆ ಪ್ರಚಾರ ಮಾಡುವಾಗಲೇ ತಾರಕ ರತ್ನ ಅವರಿಗೆ ಹೃದಯಾಘಾತವಾಗಿದೆ.
ಇದನ್ನೂ ಓದಿ: Nandamuri Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್, 40 ಕಾರಿನಲ್ಲಿ ಬಂದ್ರು ಕುಟುಂಬಸ್ಥರು
ನಂದಮೂರಿ ಕುಟುಂಬದಿಂದ ಮತ್ತೊಬ್ಬ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆಂಧ್ರಪ್ರದೇಶದಿಂದ ಸ್ಪರ್ಧಿಸುವುದಾಗಿ ತೆಲುಗು ನಟ ನಂದಮೂರಿ ತಾರಕ ರತ್ನ ಹೇಳಿದ್ದರು. ನಂದಮೂರಿ ತಾರಕ ರತ್ನ ಅವರು ದಿವಂಗತ ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮರಾವ್-ಎನ್‌ಟಿಆರ್ ಪ್ರತಿಮೆಯನ್ನು ಗುಂಟೂರು ಜಿಲ್ಲೆಯ ಪೆಡನಂದಿಪಾಡುವಿನ ಪಾಲಪರ್ರುದಲ್ಲಿ ಉದ್ಘಾಟಿಸಿದ್ದರು.
ತಾವು ಸದಾ ಜನರಿಗಾಗಿ ಹೋರಾಡುತ್ತೇವೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ನೇರ ರಾಜಕೀಯಕ್ಕೆ ಬರುವುದಾಗಿ ಅವರು ತಿಳಿಸಿದ್ದರು. ತಾರಕ ರತ್ನ ಅವರು ಆಂಧ್ರಪ್ರದೇಶದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದು, ನಂದಮೂರಿ ಕುಟುಂಬದ ಸದಸ್ಯರು ಯಾವುದೇ ಸ್ಥಾನವನ್ನು ಪಡೆಯಲು ಬಯಸುವುದಿಲ್ಲ ಎಂದು ಹೇಳಿದರು.
ಅವರು ಹೇಳಿದರು, “ನಾನು ನನ್ನ ಚಿಕ್ಕಪ್ಪನನ್ನು ನಂಬುತ್ತೇನೆ ಮತ್ತು ಅವನನ್ನು ಅನುಸರಿಸುತ್ತೇನೆ. ಪ್ರಸ್ತುತ ಎಪಿ ಬಿಕ್ಕಟ್ಟಿನಲ್ಲಿದೆ. ಇದರಿಂದ ಹೊರಬರಲು ತೆಲುಗು ದೇಶಂ ಪಕ್ಷ- ಟಿಡಿಪಿ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಅದೇ ಗುರಿಗಾಗಿ ಕೆಲಸ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಜನರು ಟಿಡಿಪಿಯನ್ನು ಬೆಂಬಲಿಸಬೇಕು.
ಸಮಯ ಬಂದಾಗ ಜೂನಿಯರ್ ಎನ್‌ಟಿಆರ್ ಟಿಡಿಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ನಂದಮೂರಿ ತಾರಕ ರತ್ನ ಹೇಳಿದ್ದರು. ತಾರಕ ರತ್ನ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದಾಗ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಆದರೆ ಈಗ ಅವರಿಗೆ ಹೃದಯಾಘಾತವಾಗಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ.
ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ಸೋದರ ಸಂಬಂಧಿಯೂ ಆಗಿರುವ ನಟ ನಂದಮೂರಿ ತಾರಕ ರತ್ನ ಅವರು ಶುಕ್ರವಾರ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ರಾಜಕೀಯ ಪಾದಯಾತ್ರೆಯ ವೇಳೆ ಕುಸಿದುಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿದ್ದು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ