• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Aishwarya Rai: ಮಗಳು ಆರಾಧ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳಿಗೆ ಏನಂದ್ರು ಐಶ್ವರ್ಯಾ ರೈ?

Aishwarya Rai: ಮಗಳು ಆರಾಧ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳಿಗೆ ಏನಂದ್ರು ಐಶ್ವರ್ಯಾ ರೈ?

ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್​

ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್​

ಮುಂಬೈನಲ್ಲಿ ನಡೆದ ಪೊನ್ನಿಯಿನ್ ಸೆಲ್ವನ್ 2 ಪತ್ರಿಕಾಗೋಷ್ಠಿಯಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಮಗಳು ಆರಾಧ್ಯ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಸುತ್ತುತ್ತಿರುವ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

  • Share this:

ಇತ್ತೀಚೆಗೆ ಬಾಲಿವುಡ್ ನಟರಾದ (Bollywood Actor) ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ (Aaradhya Bachachan) ಅವರ ಆರೋಗ್ಯ ಅಥವಾ ದೈಹಿಕ ಸ್ಥಿತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಆನ್​ಲೈನ್​ ಪ್ಲಾಟ್​​ಫಾರ್ಮ್​ಗಳಲ್ಲಿ ಹಂಚಿಕೊಳ್ಳದಂತೆ ಯೂಟ್ಯೂಬ್ ಚಾನೆಲ್​ಗಳನ್ನು (Youtube Channel) ನಡೆಸುತ್ತಿರುವ ಒಂಬತ್ತು ಸಂಸ್ಥೆಗಳನ್ನು ದೆಹಲಿ ಹೈಕೋರ್ಟ್ ಸಂಪೂರ್ಣವಾಗಿ ನಿರ್ಬಂಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ.


ಆಪಾದಿತ ವಿಡಿಯೋಗಳನ್ನು ಅಪ್​ಲೋಡ್​ ಮಾಡಿದ ಒಂಬತ್ತು ಸಂಸ್ಥೆಗಳ ವಿರುದ್ಧ ಮಧ್ಯಂತರ ಪರಿಹಾರ ಕೋರಿ ಆರಾಧ್ಯ ಬಚ್ಚನ್ ಮತ್ತು ಅವರ ತಂದೆ ಅಭಿಷೇಕ್ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿ ಸಿ ಹರಿಶಂಕರ್ ಅವರ ಏಕಸದಸ್ಯ ಪೀಠವು "ಯುಆರ್‌ಎಲ್ ಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಪ್ರಸಾರ ಮಾಡದಂತೆ 1-9 ಪ್ರತಿವಾದಿಗಳನ್ನು ತಕ್ಷಣವೇ ನಿರ್ಬಂಧಿಸಲಾಗಿದೆ" ಎಂಬ ಆದೇಶವನ್ನು ಹೊರಡಿಸಿತ್ತು.


ಮಗಳು ಆರಾಧ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸಿದ್ರು ಐಶ್ವರ್ಯಾ


ಈಗ ತಾಯಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರ ಸುಳ್ಳು ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ನೋಡಿ. ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ಐಶ್ವರ್ಯಾ ರೈ ಅವರು ಮಾಧ್ಯಮಗಳು ನಕಲಿ ಸುದ್ದಿಗಳನ್ನು ಗುರುತಿಸಿ ಕುಟುಂಬವನ್ನು ಬೆಂಬಲಿಸುವುದನ್ನು ನೋಡಿ ತುಂಬಾನೇ ಸಂತೋಷವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?


"ಮಾಧ್ಯಮದ ಸದಸ್ಯರುಗಳು ಮಾತ್ರ ಇಂತಹದನ್ನು ಗುರುತಿಸಿರುವುದು ತುಂಬಾ ಒಳ್ಳೆಯದಾಯ್ತು. ಆದ್ದರಿಂದ ನೀವು ನಿಸ್ಸಂಶಯವಾಗಿ ಅದನ್ನೆಲ್ಲಾ ಪ್ರಸಾರ ಮಾಡಲು ಹೋಗುವುದಿಲ್ಲ, ನೀವು ಅದನ್ನು ಪ್ರೋತ್ಸಾಹಿಸಲು ಹೋಗುವುದಿಲ್ಲ ಅಂತ ನಮಗೆ ತುಂಬಾನೇ ಭರವಸೆಯನ್ನು ನೀಡುತ್ತದೆ ಮತ್ತು ಸಂವೇದನಾರಹಿತ ಮತ್ತು ಅನಗತ್ಯವಾದ ಸುಳ್ಳು ಬರವಣಿಗೆ ಅಥವಾ ಅನಗತ್ಯ ಬರವಣಿಗೆಯ ನಕಾರಾತ್ಮಕ ಪರಿಣಾಮವನ್ನು ನೀವು ಬುದ್ಧಿವಂತಿಕೆಯಿಂದ ಗುರುತಿಸಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲಕ್ಕಾಗಿ ಮತ್ತು ಇಂತಹ ಸುಳ್ಳು ಸುದ್ದಿಗಳನ್ನು ಗುರುತಿಸಿದ್ದಕ್ಕೆ ನಿಮ್ಮ ಬುದ್ಧಿವಂತಿಕೆಗೆ ತುಂಬಾ ಧನ್ಯವಾದಗಳು" ಎಂದು ಐಶ್ವರ್ಯಾ ಹೇಳಿದರು.


ದೆಹಲಿ ಹೈಕೋರ್ಟ್ ಗೂಗಲ್ ಮತ್ತು ಯೂಟ್ಯೂಬ್ ಗೆ ಏನಂತ ನಿರ್ದೇಶನ ನೀಡಿತ್ತು? 


ಕಳೆದ ವಾರವಷ್ಟೆ, ದೆಹಲಿ ಹೈಕೋರ್ಟ್ ಆರಾಧ್ಯ ಬಚ್ಚನ್ ಬಗ್ಗೆ ಗೌಪ್ಯತೆಯನ್ನು ಉಲ್ಲಂಘಿಸುವ ವೀಡಿಯೋಗಳನ್ನು ಅಪ್ಲೋಡ್ ಮಾಡದಂತೆ ಮತ್ತು 'ಗೌಪ್ಯತೆಯನ್ನು ಉಲ್ಲಂಘಿಸುವ ಮತ್ತು ಸುಳ್ಳು ಸುದ್ದಿ ನೀಡುವ ಯಾವುದೇ ವಿಷಯವನ್ನು' ಅಪ್ಲೋಡ್ ಮಾಡದಂತೆ ಉಲ್ಲಂಘಿಸುವವರು ಮತ್ತು ಅಪ್ಲೋಡ್ ಮಾಡುವವರ ವಿರುದ್ಧ ತಡೆಯಾಜ್ಞೆ ನೀಡಿತು. ಉಲ್ಲಂಘನೆ ಮಾಡುವವರ ಫೋನ್ ನಂಬರ್ ಮತ್ತು ಇ-ಮೇಲ್ ವಿಳಾಸಗಳು ಸೇರಿದಂತೆ ವಿವರಗಳನ್ನು ನೀಡುವಂತೆ ನ್ಯಾಯಾಲಯವು ಗೂಗಲ್ ಮತ್ತು ಯೂಟ್ಯೂಬ್ ಗೆ ನಿರ್ದೇಶನ ನೀಡಿತ್ತು.


ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್​


"ಪ್ರತಿ ಮಗುವನ್ನು ಗೌರವದಿಂದ ಕಾಣಬೇಕು, ಅದು ಸೆಲೆಬ್ರಿಟಿಯ ಮಗುವಾಗಿರಲಿ ಅಥವಾ ಸಾಮಾನ್ಯರ ಮಗುವಾಗಿರಲಿ" ಎಂದು ನ್ಯಾಯಮೂರ್ತಿ ಸಿ ಹರಿಶಂಕರ್ ಹೇಳಿದ್ದಾರೆ.


ಐಶ್ವರ್ಯಾ ನಟಿಸಿರುವ 'ಪೊನ್ನಿಯಿನ್ ಸೆಲ್ವನ್ 2' ಚಿತ್ರ


ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ಐಶ್ವರ್ಯಾ ರೈ ಅವರು ಶೀಘ್ರದಲ್ಲಿಯೇ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಕಲ್ಕಿ ಕೃಷ್ಣಮೂರ್ತಿಯವರ ವ್ಯಾಪಕವಾಗಿ ಮೆಚ್ಚುಗೆ ಪಡೆದ ಕಾದಂಬರಿ ಪೊನ್ನಿಯಿನ್ ಸೆಲ್ವನ್ (ದಿ ಸನ್ ಆಫ್ ಪೊನ್ನಿ) ಅನ್ನು ಆಧರಿಸಿದೆ ಮತ್ತು ವಿಕ್ರಮ್, ತ್ರಿಷಾ, ಕಾರ್ತಿ ಮತ್ತು ಜಯಂ ರವಿ ಅವರಂತಹ ತಾರಾಗಣವನ್ನು ಹೊಂದಿದೆ.




ಇದಲ್ಲದೆ, ಶೋಭಿತಾ ಧುಲಿಪಾಲ ಮತ್ತು ಐಶ್ವರ್ಯಾ ಲಕ್ಷ್ಮಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ.ಆರ್.ರೆಹಮಾನ್, ಶ್ರೀಕರ್ ಪ್ರಸಾದ್ ಮತ್ತು ರವಿ ವರ್ಮನ್ ಅವರು ಕ್ರಮವಾಗಿ ಸಂಗೀತ, ಸಂಕಲನ ಮತ್ತು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಮುಂದಿನ ಭಾಗವು ಏಪ್ರಿಲ್ 28 ಎಂದರೆ ನಾಳೆ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

First published: