• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Narayana Murthy: ಆಲಿಯಾ ಭಟ್ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಮೆಚ್ಚುಗೆ! ನಟಿ ಬಗ್ಗೆ ಸಾಫ್ಟ್‌ವೇರ್ ದಿಗ್ಗಜ ಹೇಳಿದ್ದೇನು?

Narayana Murthy: ಆಲಿಯಾ ಭಟ್ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಮೆಚ್ಚುಗೆ! ನಟಿ ಬಗ್ಗೆ ಸಾಫ್ಟ್‌ವೇರ್ ದಿಗ್ಗಜ ಹೇಳಿದ್ದೇನು?

ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರು, ಅಹ್ಮದಾಬಾದ್​​ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ನ 58ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಹೋಗಿದ್ದರು. ಅಲ್ಲಿ ಅವರು ಈ ಸಂಸ್ಥೆಯಲ್ಲಿ ಚಿತ್ರೀಕರಿಸಿದ ’2 ಸ್ಟೇಟ್ಸ್’ ಎಂಬ ಹಿಂದಿ ಚಲನಚಿತ್ರದ ಬಗ್ಗೆ ಹೇಳಿದ್ದಾರೆ

ಮುಂದೆ ಓದಿ ...
  • Share this:

ಇನ್ಫೋಸಿಸ್ ಸ್ಥಾಪಕ (Infosys Founder) ಎನ್ ಆರ್ ನಾರಾಯಣ ಮೂರ್ತಿ (N R Narayana Murthy) ಅವರು ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಭಾರತದ ಅತ್ಯಂತ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಇತ್ತೀಚೆಗೆ ಅವರು ಅಹ್ಮದಾಬಾದ್ ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM-A) 58ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಹೋಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಾರಾಯಣ ಮೂರ್ತಿ ಅವರು ತಮ್ಮ ಭಾಷಣವನ್ನು ಆರಂಭಿಸಿ ಅದರಲ್ಲಿ ಈ ಸಂಸ್ಥೆಯಲ್ಲಿ ಚಿತ್ರೀಕರಿಸಿದ ’2 ಸ್ಟೇಟ್ಸ್’ (2 States) ಎಂಬ ಹಿಂದಿ ಚಲನಚಿತ್ರದ (Hindi Movie) ಬಗ್ಗೆ ಮಾತನಾಡಿದರು.


ಹಿಂದಿ ಭಾಷೆಯ ಈ ರೊಮ್ಯಾಂಟಿಕ್ ಕಾಮಿಡಿ-ಡ್ರಾಮಾ ಚಿತ್ರದಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.


‘2 ಸ್ಟೇಟ್ಸ್’ ಹಿಂದಿ ಚಿತ್ರವನ್ನು ಐಐಎಂ ಅಹ್ಮದಾಬಾದ್ ಕ್ಯಾಂಪಸ್ ನಲ್ಲಿ ಚಿತ್ರೀಕರಿಸಿದ್ದರಂತೆ


ನಾರಾಯಣ ಮೂರ್ತಿ ಅವರು ಈ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವಾಗ ಅವರು ನಟಿ ಅಲಿಯಾ ಭಟ್ ಮತ್ತು ನಟ ಅರ್ಜುನ್ ಕಪೂರ್ ಅಭಿನಯದ 2 ಸ್ಟೇಟ್ಸ್ ಹಿಂದಿ ಚಲನಚಿತ್ರವನ್ನು ಇದೇ ಅಹ್ಮದಾಬಾದ್ ನ ಐಐಎಂ ಪ್ರತಿಷ್ಠಿತ ಸಂಸ್ಥೆಯ ಕ್ಯಾಂಪಸ್​ನಲ್ಲಿಯೇ ಚಿತ್ರೀಕರಿಸಿದ್ದು ಎಂದು ಹೇಳಿದರು.


ಇದನ್ನೂ ಓದಿ: ಶಾಲಾ ಬಾಲಕರನ್ನು ಹಲವು ತಿಂಗಳಿಂದ ಲೈಂಗಿಕ ಕೃತ್ಯಕ್ಕೆ ಬಳಸಿದ 6 ಶಿಕ್ಷಕಿಯರ ಬಂಧನ!


ಐಐಎಂ ಅಹ್ಮದಾಬಾದ್ ನ ಕ್ಯಾಂಪಸ್​ನಲ್ಲಿರುವ ಹಸಿರು ಮರಗಳು ಮತ್ತು ಉತ್ತಮವಾದ ಕಟ್ಟಡವನ್ನು ಹೊಂದಿದ್ದ ಸಂಸ್ಥೆಯನ್ನು ಶ್ಲಾಘಿಸಿದ ನಾರಾಯಣ ಮೂರ್ತಿ ಅವರು ‘2 ಸ್ಟೇಟ್ಸ್’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆ ಸಮಯವನ್ನು ನೆನಪಿಸಿಕೊಂಡರು.


ಆ ಚಿತ್ರದ ನಟ ಅರ್ಜುನ್, ನಟಿ ಆಲಿಯಾ ಬಗ್ಗೆ ಏನ್ ಹೇಳಿದ್ರು ನಾರಾಯಣ ಮೂರ್ತಿ?


"ಈ ಕ್ಯಾಂಪಸ್ ನ ಅದ್ಭುತ ದೃಶ್ಯವನ್ನು ನಾನು ಕೊನೆಯ ಬಾರಿಗೆ ನೋಡಿದ್ದು ಆ 2-ಸ್ಟೇಟ್ಸ್ ಚಿತ್ರದಲ್ಲಿಯೇ. ನಿಮ್ಮಲ್ಲಿ ಅನೇಕರು ಆ ಚಿತ್ರವನ್ನು ನೋಡಿರುತ್ತೀರಿ ಮತ್ತು ಈ ಕ್ಯಾಂಪಸ್ ನಲ್ಲಿ ಬೇಕಾದಷ್ಟೂ ಸಮಯವನ್ನು ಕಳೆದಿರುತ್ತೀರಿ.


2023 ರ ಬ್ಯಾಚ್ ನ ವಿದ್ಯಾರ್ಥಿಗಳು ನಟಿ ಆಲಿಯಾ ಭಟ್ ಮತ್ತು ನಟ ಅರ್ಜುನ್ ಕಪೂರ್ ಅವರಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಮೂರ್ತಿ ಹೇಳಿದರು. ಈ 58ನೇ ಘಟಿಕೋತ್ಸವ ಸಮಾರಂಭವನ್ನು ಲೂಯಿಸ್ ಖಾನ್ ಪ್ಲಾಜಾದಲ್ಲಿ ನಡೆಸಲಾಯಿತು. ಇದು 1974 ರಿಂದ ಅನುಸರಿಸಲಾಗುತ್ತಿರುವ ಸಂಪ್ರದಾಯವಾಗಿದೆ.


ನಾರಾಯಣ ಮೂರ್ತಿ


ಮೂರ್ತಿ ಅವರು 2002 ರಿಂದ 2007 ರವರೆಗೆ ಐಐಎಂ ಅಹ್ಮದಾಬಾದ್ ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಐಐಎಂ ಅಹ್ಮದಾಬಾದ್ ನೊಂದಿಗಿನ ಅವರ ಒಡನಾಟವು ಇದಕ್ಕೂ ಮೊದಲೇ ಇದೆ. ಇನ್ಫೋಸಿಸ್ ಅನ್ನು ಸ್ಥಾಪಿಸುವ ಮೊದಲು, ಅವರು ಈ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ ಸಹ ಕೆಲಸ ಮಾಡಿದ್ದರು.


ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ನಾರಾಯಣ ಮೂರ್ತಿ ಏನೆಲ್ಲಾ ಹೇಳಿದ್ರು?


ಈ ಸಂಸ್ಥೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಾರಾಯಣ ಮೂರ್ತಿ ಅವರು "ನಮ್ಮ ದೇಶ ಮತ್ತು ಜಗತ್ತನ್ನು ಸಾಮರ್ಥ್ಯ ಮತ್ತು ಮೌಲ್ಯಗಳೊಂದಿಗೆ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಕೆಲಸದ ಜವಾಬ್ದಾರಿ ಕೆಲಸವನ್ನು ಹೊರಲು ನೀವು ಈಗ ಸಿದ್ಧರಿದ್ದೀರಿ.


ನಿಮ್ಮ ಶಿಕ್ಷಕರಿಂದ ನೀವು ಪಡೆದ ಜ್ಞಾನ, ಬುದ್ಧಿವಂತಿಕೆ, ಬರವಣಿಗೆಯ ಕೌಶಲ್ಯಗಳು, ವಿಶ್ಲೇಷಣಾತ್ಮಕ ಚಿಂತನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ನಿಮ್ಮ ಜೀವನಕ್ಕೆ ತುಂಬಾನೇ ಸಹಾಯವಾಗುತ್ತವೆ” ಅಂತ ಹೇಳಿದರು.




"ಧೈರ್ಯ, ತ್ಯಾಗ, ಭರವಸೆ, ವಿಶ್ವಾಸ, ನಾವೀನ್ಯತೆ, ಕಠಿಣ ಪರಿಶ್ರಮ, ಸತ್ಯ, ಪಾರದರ್ಶಕತೆ, ಶಿಸ್ತು, ಉತ್ತಮ ಮೌಲ್ಯಗಳನ್ನು ಹೊಂದಿರುವ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು.


ನೀವು ಅಧಿಕಾರದಲ್ಲಿರುವಾಗ ಮತ್ತು ಸಂಪತ್ತನ್ನು ಹೊಂದಿರುವಾಗ ನೀವು ಹೇಗೆ ವರ್ತಿಸುತ್ತೀರಿ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಅಂತಹ ಕ್ಷಣಗಳಲ್ಲಿ, ನೀವು ಇತರರಿಗೆ ತೋರಿಸುವ ಸೌಜನ್ಯ ಮತ್ತು ನಮ್ರತೆಯು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ" ಎಂದು ಮೂರ್ತಿ ಅವರು ಹೇಳಿದರು.

top videos
    First published: