ಹಿಂದಿಗೆ ಹೊರಟಿದ್ದ ಕಿರಿಕ್ ಪಾರ್ಟಿ ಸಿನಿಮಾ ಕಥೆ ಏನಾಯ್ತು?; ನಾಯಕ-ನಾಯಕಿಯಿಂದಲೇ ಕಿರಿಕ್!

‘ಕಿರಿಕ್​ ಪಾರ್ಟಿ’ ಹಿಂದಿ ರಿಮೇಕ್​ ಹಕ್ಕನ್ನು ಬಾಲಿವುಡ್​ನ ನಿರ್ಮಾಪಕರೊಬ್ಬರು ಖರೀದಿ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಹಾಗೂ ಜಾಕ್ಲಿನ್​ ಫರ್ನಾಂಡಿಸ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

Rajesh Duggumane | news18-kannada
Updated:November 7, 2019, 3:41 PM IST
ಹಿಂದಿಗೆ ಹೊರಟಿದ್ದ ಕಿರಿಕ್ ಪಾರ್ಟಿ ಸಿನಿಮಾ ಕಥೆ ಏನಾಯ್ತು?; ನಾಯಕ-ನಾಯಕಿಯಿಂದಲೇ ಕಿರಿಕ್!
2016ರಲ್ಲಿ ಬಿಡುಗಡೆಯಾಗಿದ್ದ ಕಿರಿಕ್​ ಪಾರ್ಟಿ ಚಿತ್ರದಲ್ಲಿ ಹೇ.... ಹೂ ಆರ್​ ಯೂ ಎಂಬ ಹಾಡಿತ್ತು. ಈ ಹಾಡು ರವಿಚಂದ್ರನ್​ ನಟನೆಯ ಶಾಂತಿ ಕ್ರಾಂತಿ ಚಿತ್ರಕ್ಕೆ ಬಳಸಿದ್ದ ಮಧ್ಯರಾತ್ರಿಲಿ ಹಾಡಿನ ಮ್ಯೂಸಿಕ್​ ಟ್ರ್ಯಾಕ್​ ಅನ್ನು ನಕಲು ಮಾಡಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆ ಚಿತ್ರ ತಂಡದ ಮೇಲೆ ಆಪಾದನೆ ಹೊರಿಸಿತ್ತು.
  • Share this:
ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಕಿರಿಕ್​ ಪಾರ್ಟಿ’ ಸಿನಿಮಾ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. 150 ದಿನ ಆಚರಿಸಿಕೊಂಡಿದ್ದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕೋಟಿ ಕೋಟಿ ಬಾಚಿತ್ತು. ಈ ಸಿನಿಮಾ ಹಿಂದಿಗೆ ರಿಮೇಕ್​ ಆಗಲಿದೆ ಎನ್ನುವ ವಿಚಾರ ಅಧಿಕೃತವಾಗಿತ್ತಾದರೂ, ನಂತರ ಯಾವುದೇ ಅಪ್ಡೇಟ್​ ಬಂದಿರಲಿಲ್ಲ. ಅಷ್ಟಕ್ಕೂ ಈ ಸಿನಿಮಾ ಹಿಂದಿಗೆ ರಿಮೇಕ್​ ಆಗಲಿದೆಯೇ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಕಿರಿಕ್​ ಪಾರ್ಟಿ’ ಹಿಂದಿ ರಿಮೇಕ್​ ಹಕ್ಕನ್ನು ಬಾಲಿವುಡ್​ನ ನಿರ್ಮಾಪಕರೊಬ್ಬರು ಖರೀದಿ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಹಾಗೂ ಜಾಕ್ಲಿನ್​ ಫರ್ನಾಂಡಿಸ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಕೆಲ ವಿಚಾರದಲ್ಲಿ ಹೊಂದಾಣಿಕೆ ಆಗದ ಕಾರಣ ಇಬ್ಬರೂ ಸಿನಿಮಾದಿಂದಲೇ ಹೊರ ನಡೆದಿದ್ದಾರಂತೆ.

ಇನ್ನು, ಸಿನಿಮಾ ಸೆಟ್ಟೇರುವುದೇ ಅನುಮಾನ ಎನ್ನುವ ಮಾತೂ ಕೇಳಿ ಬಂದಿದೆ. ಇದಕ್ಕೆ ಕಾರಣ ನಿರ್ಮಾಪಕರು. ‘ಕಿರಿಕ್​ ಪಾರ್ಟಿ’ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತಾದರೂ ತಮಿಳಿಗೆ ರಿಮೇಕ್​ ಆದಾಗ ಈ ಚಿತ್ರ ಮಕಾಡೆ ಮಲಗಿತ್ತು. ಕಾಲಿವುಡ್​ ಪ್ರೇಕ್ಷಕರು ಈ ಸಿನಿಮಾವನ್ನು ಒಪ್ಪಿಕೊಳ್ಳಲೇ ಇಲ್ಲ. ಈ ಭಯ ಬಾಲಿವುಡ್​ ನಿರ್ಮಾಪಕರನ್ನು ಕಾಡುತ್ತಿದೆಯಂತೆ.

ಇದನ್ನೂ ಓದಿ: ಕನ್ನಡ ಬಲು ಕಷ್ಟ, ಸತ್ಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ!; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸದ್ಯದ ಮಟ್ಟಿಗೆ ಸಿನಿಮಾ ಸೆಟ್ಟೇರುವುದು ಅನುಮಾನ. ನಿರ್ಮಾಪಕರು ನಾಯಕ, ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಹೀಗಾಗಿ ಸಿನಿಮಾ ಸೆಟ್ಟೇರುವುದು ಕೊಂಚ ತಡವಾಗಬಹುದು ಎನ್ನುವುದು ಮೂಲಗಳ ಮಾಹಿತಿ. ರಕ್ಷಿತ್​ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ರಿಶಬ್​ ಶೆಟ್ಟಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಕಾಲೇಜು​ ಅಂಗಳದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿತ್ತು.

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading