ನೆಟ್‍ಫ್ಲಿಕ್ಸ್, ಅಮೆಜಾನ್ ಪ್ರೈಮ್ ಇದೆಯಾ? ಹಾಗಿದ್ದರೆ, ದಿಲೀಪ್ ಕುಮಾರ್ ಅವರ ಈ ಸಿನಿಮಾಗಳನ್ನು ತಪ್ಪದೇ ನೋಡಿ

Dilip Kumar Movies: ದೇಶ ಕಂಡ ಅತ್ಯದ್ಭುತ ನಟ ದಿಲೀಪ್ ಕುಮಾರ್ ಜುಲೈ 7ರ ಬುಧವಾರ ಬೆಳಿಗ್ಗೆ, ತಮ್ಮ 98ನೇ ವಯಸ್ಸಿನಲ್ಲಿ ತೀರಿಕೊಂಡರು. ಹಿಂದಿ ಸಿನೆಮಾದ ಸುವರ್ಣ ಯುಗವನ್ನು ಆಳಿದ ಅವರು, ಮೊಗಲ್ ಎ ಆಜಮ್ ಮತ್ತು ದೇವದಾಸ್ ಸೇರಿದಂತೆ ಅನೇಕ ಅಪೂರ್ವ ಚಿತ್ರಗಳನ್ನು ನೀಡಿದ್ದಾರೆ.

Dilip Kumar

Dilip Kumar

  • Share this:

ಬಾಲಿವುಡ್‍ನ ಮೊದಲ ಸೂಪರ್‌ಸ್ಟಾರ್ ದಿಲೀಪ್ ಕುಮಾರ್ ಜುಲೈ7 ರಂದು ನಿಧನರಾದರು. ಅವರು ನಟಿಸಿದ ಅದ್ಭುತ ಚಿತ್ರಗಳ ಪಟ್ಟಿ ಬಹಳ ದೊಡ್ಡದಿದೆ. ನೀವು ನೆಟ್‍ಫ್ಲಿಕ್ಸ್ , ಅಮೇಜಾನ್ ಪ್ರೈಮ್, ಜೀ5 ಗಳಲ್ಲಿ ನೋಡಬಹುದಾದ ದಿಲೀಪ್ ಕುಮಾರ್ ಸಿನಿಮಾಗಳ ಪಟ್ಟಿ ಇಲ್ಲಿದೆ.


ದಿಲೀಪ್ ಕುಮಾರ್ ಅವರ ನಿಧನದೊಂದಿಗೆ, ಬಾಲಿವುಡ್‍ನ ಒಂದು ಯುಗ ಮುಗಿದಂತಾಗಿದೆ. ದೇಶ ಕಂಡ ಅತ್ಯದ್ಭುತ ನಟ ದಿಲೀಪ್ ಕುಮಾರ್ ಜುಲೈ 7ರ ಬುಧವಾರ ಬೆಳಿಗ್ಗೆ, ತಮ್ಮ 98ನೇ ವಯಸ್ಸಿನಲ್ಲಿ ತೀರಿಕೊಂಡರು. ಹಿಂದಿ ಸಿನೆಮಾದ ಸುವರ್ಣ ಯುಗವನ್ನು ಆಳಿದ ಅವರು, ಮೊಗಲ್ ಎ ಆಜಮ್ ಮತ್ತು ದೇವದಾಸ್ ಸೇರಿದಂತೆ ಅನೇಕ ಅಪೂರ್ವ ಚಿತ್ರಗಳನ್ನು ನೀಡಿದ್ದಾರೆ. ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಅವರು, ಸಿನಿಮಾ ರಂಗಕ್ಕೆ ಒಂದು ರೂಪ ಕೊಡುವುದರಲ್ಲಿ ಸಹಾಯ ಮಾಡಿದ್ದಾರೆ.


ಓಟಿಟಿ ಫ್ಲಾಟ್‍ಫಾರಂನಲ್ಲಿರುವ ದಿಲೀಪ್ ಕುಮಾರ್ ಅಭಿನಯದ ಸಿನಿಮಾಗಳ ಪಟ್ಟಿ ನಿಮಗಾಗಿ ಇಲ್ಲಿದೆ:


ಅಮೇಜಾನ್ ಪ್ರೈಮ್ ವಿಡಿಯೋ


ಪೈಗಾಮ್


ರಾಮ್ ಮತ್ತು ರತನ್ ಎಂಬ ಇಬ್ಬರು ಸಹೋದರರ ಕಥೆಯುಳ್ಳ ಈ ಹಾಸ್ಯ ಚಿತ್ರ 1959ರಲ್ಲಿ ತೆರೆ ಕಂಡಿತ್ತು. ಆರಂಭದಲ್ಲಿ ಒಬ್ಬರನ್ನೊಬ್ಬರು ವಿರೋಧಿಸುವ ಮತ್ತು ಬಳಿಕ ಜಂಟಿಯಾಗಿ ಹೋರಾಡುವ ಕಥೆಯನ್ನು ಇದು ಹೊಂದಿದೆ.


ನಯಾ ದೌರ್


ಇದೊಂದು ಪ್ರಣಯದ ಕಥೆಯುಳ್ಳ ಚಿತ್ರ. ಇದರಲ್ಲಿ ವ್ಯಕ್ತಿಯೊಬ್ಬ ಶೀಘ್ರ ಲಾಭ ಪಡೆಯಲು ಬಸ್ ಸೇವೆ ಆರಂಭಿಸುವ , ಸ್ಥಳೀಯ ರೈತರ ಮತ್ತು ಕೆಲಸಗಾರರ ನೆಮ್ಮದಿ ಹಾಗೂ ಜೀವನಕ್ಕೆ ತೊಂದರೆ ಉಂಟು ಮಾಡುವ ಕಥೆ ಇದೆ.


ಮಶಾಲ್


ಯಶ್ ಚೋಪ್ರಾ ಅವರ ನಿರ್ದೇಶನ ಮತ್ತು ನಿರ್ಮಾಣದ ಈ ಸಿನಿಮಾ , ತನ್ನ ಮಶಾಲ್ ಎಂಬ ಪತ್ರಿಕೆಯ ಮೂಲಕ ಸಮಾಜದ ಕೊಳಕನ್ನು ಬಹಿರಂಗಪಡಿಸುವ ಪಡಿಸುವ ವಿನೋದ್ ಕುಮಾರ್ ಎಂಬ ಪ್ರಾಮಾಣಿಕ ವ್ಯಕ್ತಿಯ ಕಥೆಯನ್ನು ಒಳಗೊಂಡಿದೆ.


ದೇವ್‍ದಾಸ್


1955ರಲ್ಲಿ ತೆರೆಕಂಡ ಈ ಚಿತ್ರಕ್ಕೆ ವಿಶೇಷ ಪರಿಚಯದ ಅಗತ್ಯವೇ ಇಲ್ಲ. ಶರತ್‍ಚಂದ್ರ ಚಟ್ಟೋಪಧ್ಯಾಯರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ದೇವದಾಸ್ ಮತ್ತು ಪಾರೋಳ ಬಾಲ್ಯದ ಸ್ನೇಹ ಪ್ರೇಮವಾಗಿ ಬದಲಾಗುವ ಕಥೆ ಇದೆ. ಪಾರೋ ಒಬ್ಬ ಶ್ರೀಮಂತನನ್ನು ಮದುವೆ ಆಗುತ್ತಾಳೆ ಮತ್ತು ದೇವದಾಸ್ ಒಬ್ಬ ಕುಡುಕನಾಗಿ ಬದಲಾಗುತ್ತಾನೆ.


ದುನಿಯಾ


ರಮೇಶ್ ತಲ್ವಾರ್ ನಿರ್ದೇಶನದ ದುನಿಯಾ ಒಂದು ಆ್ಯಕ್ಷನ್ ಚಿತ್ರ. ಮೋಹನ್ ಎಂಬ ಪ್ರಮಾಣಿಕ ವ್ಯಕ್ತಿ ತನ್ನ ಮಾಲೀಕನ ಕೊಲೆಯ ಸುಳ್ಳು ಆರೋಪ ಹೊತ್ತು ಜೈಲಿಗೆ ಹೋಗುವುದು, ಶಿಕ್ಷೆ ಮುಗಿಸಿ ಹೊರ ಬಂದ ಬಳಿಕ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಸೇಡು ತೀರಿಸಿಕೊಳ್ಳುವುದು ಈ ಸಿನಿಮಾದ ಕಥೆ.


ದಾಸ್ತಾನ್


ದಾಸ್ತಾನ್ 1972ನಲ್ಲಿ ತೆರೆಕಂಡ ಥ್ರಿಲ್ಲರ್ ಸಿನಿಮಾ. ಅದರಲ್ಲಿ ಗೌರವಾನ್ವಿತ ನ್ಯಾಯಾಧೀಶರೊಬ್ಬರನ್ನು ತಪ್ಪಿಸಿಕೊಂಡಿರುವ ಕೊಲೆಗಾರನೆಂದು ಭಾವಿಸಲಾಗುತ್ತದೆ. ಆಗ ಅವನು ಆ ರಹಸ್ಯವನ್ನು ಭೇಧಿಸಿ, ತನ್ನ ನಿರಪರಾಧಿತನವನ್ನು ಸಾಬೀತುಪಡಿಸುವ ಕಥೆ ಇದೆ.


ಸಂಘರ್ಷ್


ಈ ಸಿನಿಮಾದಲ್ಲಿ ಸಮಾಜದಲ್ಲಿ ಗಣ್ಯ ವ್ಯಕ್ತಿಯಂತೆ ತೋರಿಸಿಕೊಳ್ಳುವ ಅಪರಾಧಿಯೊಬ್ಬ, ತನ್ನ ಮೊಮ್ಮಗನ್ನು ಮಗನಿಂದ ಕಿತ್ತುಕೊಂಡು, ತನ್ನ ದಾರಿಯಲ್ಲಿ ನಡೆಯುವಂತೆ ಬೆಳೆಸುವ ಕಥೆ ಇದೆ.


ಮಜ್‍ದೂರ್


ತನ್ನ ಮಾಲೀಕನ ಜೊತೆ ಜಗಳ ಮಾಡಿಕೊಂಡ ಬಳಿಕ, ಸ್ವಂತ ವ್ಯಾಪಾರ ಆರಂಭಿಸುವ ಕಥೆ ಇದೆ.


ನೆಟ್‍ಫ್ಲಿಕ್ಸ್


ಕಿಲಾ


1998ರಲ್ಲಿ ತೆರೆ ಕಂಡ ಕಿಲಾ ಹಿರಿತೆರೆಯಲ್ಲಿ ದಿಲೀಪ್ ಕುಮಾರ್ ಅವರ ಕೊನೆಯ ಚಿತ್ರ. ಒಂದು ಕೊಲೆ ತನಿಖೆಯ ಸುತ್ತ ಸುತ್ತುವ ಈ ಸಿನಿಮಾ ಕಥೆಯಲ್ಲಿ, ವ್ಯಕ್ತಿ ತನ್ನ ಸಹೋದರನ ಕೊಲೆಯಲ್ಲಿ , ಆತನ ನಾದಿನಿ ಮತ್ತು ಸೋದರಳಿಯ ಆರೋಪಿಗಳು ಎಂಬುದನ್ನು ಕಂಡು ಹಿಡಿಯುತ್ತಾನೆ.
ನೆಟ್‍ಫ್ಲಿಕ್ಸ್‍ನಲ್ಲಿ ದುನಿಯಾ ಸಿನಿಮಾ ಕೂಡ ಲಭ್ಯ ಇದೆ.


ಜೀ5


ಜೀ5ನ ಚಂದಾದಾರರು ನೀವಾಗಿದ್ದರೆ, ಮುಘಲ್ ಎ ಆಜಮ್, ಶಕ್ತಿ, ಸೌದಾಗರ್, ವಿಧಾತ, ಕರ್ಮ, ಮಧುಮತಿ, ದೇವ್‍ದಾಸ್, ಕ್ರಾಂತಿ,ಬೇರಂಗ್, ಆಜಾದ್ ಮತ್ತು ದಾಗ್ ಸಿನಿಮಾಗಳನ್ನು ನೋಡಬಹುದು.


ಎಂಎಕ್ಸ್ ಪ್ಲೇಯರ್


ಎಮ್‍ಎಕ್ಸ್ ಪ್ಲೇಯರ್‍ನಲ್ಲಿ, ಸಂಗ್‍ದಿಲ್, ದೇವ್‍ದಾಸ್, ಅಮರ್, ಆರ್‍ಜೂ, ನಯಾದೌರ್, ಆಜಾದ್, ಸಂಘರ್ಷ್, ಆನ್, ಮೇಲಾ,ಅಂದಾಜ್, ಮಧುಮತಿಯಾ ಮತ್ತು ಯಹೂದಿ ಸಿನಿಮಾಗಳಿವೆ.
ಇರೋಸ್ ನೌ ನಲ್ಲಿ , ದಿಲೀಪ್ ಕುಮಾರ್ ಅಭಿನಯದ ಆನ್,ದಾಗ್, ಅಂದಾಜ್, ರಾಮ್ ಔರ್ ಶಾಮ್, ಯಹೂದಿ, ಅನೋಕಾ ಮಿಲನ್, ಅಮರ್, ಆರ್‍ಜೂ, ಧರಮ್ ಅಧಿಕಾರಿ ಮತ್ತು ಇಜ್ಜತ್‍ದಾರ್ ಸಿನಿಮಾಗಳಿವೆ.


ಸೋನಿ ಲಿವ್


ಸೋನಿ ಲಿವ್‍ನಲ್ಲಿ ಸದ್ಯಕ್ಕೆ, ದಿಲೀಪ್ ಕುಮಾರ್ ಅವರ, ನಯಾದೌರ್, ರಾಮ್ ಔರ್ ಶಾಮ್, ಇಜ್ಜತ್‍ದಾರ್ ಮತ್ತು ಕೋಶಿಶ್ ಸಿನಿಮಾಗಳು ಪ್ರಸಾರವಾಗುತ್ತಿವೆ.
ದಿಲೀಪ್ ಕುಮಾರ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯ ಮೂಲಕ ಸದಾ ಸ್ಮರಣೀಯರಾಗಿರುತ್ತಾರೆ.ಅವರಿಗೆ 1991ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


First published: