Nagarjuna Akkineni: ಬ್ರಹ್ಮಾಸ್ತ್ರ ಚಿತ್ರದ ಯಶಸ್ಸು, ಲಾಲ್ ಸಿಂಗ್ ಚಡ್ಡಾ ಚಿತ್ರದ ಸೋಲಿನ ಬಗ್ಗೆ ನಾಗಾರ್ಜುನ ಏನ್ ಹೇಳಿದ್ರು?

ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಅವರು ನಟಿಸಿದ ಬ್ರಹ್ಮಾಸ್ತ್ರ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಹಣ ಗಳಿಸುತ್ತಾ ಯಶಸ್ಸು ಪಡೆದರೆ, ಅವರ ಮಗ ಮತ್ತು ನಟ ನಾಗ ಚೈತನ್ಯ ಅಭಿನಯಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಒಳ್ಳೆಯ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದಕ್ಕೆ ನಾಗಾರ್ಜುನ ಅವರು ಏನು ಹೇಳಿದ್ದಾರೆ ನೋಡಿ.

ನಾಗಾರ್ಜುನ ಅಕ್ಕಿನೇನಿ ಮತ್ತು ನಾಗಚೈತನ್ಯ

ನಾಗಾರ್ಜುನ ಅಕ್ಕಿನೇನಿ ಮತ್ತು ನಾಗಚೈತನ್ಯ

  • Share this:
ಈ ವರ್ಷ ತೆಲುಗು ಚಿತ್ರೋದ್ಯಮದ ಒಬ್ಬ ನಾಯಕ ನಟನ ಕುಟುಂಬಕ್ಕೆ ಯಶಸ್ಸಿನ ಸಿಹಿ ಮತ್ತು ಸೋಲಿನ ಕಹಿ ಎರಡು ಸಿಕ್ಕಿದೆ. ಆ ನಟ ಯಾರು ಅಂತ ಬಹುತೇಕರು ಊಹೆ ಮಾಡಿರುತ್ತಾರೆ, ತೆಲುಗು ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಅವರು ನಟಿಸಿದ ಬ್ರಹ್ಮಾಸ್ತ್ರ (Brahmastra film) ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ (Box Office) ಭಾರಿ ಹಣ ಗಳಿಸುತ್ತಾ ಯಶಸ್ಸು ಪಡೆದರೆ, ಅವರ ಮಗ ಮತ್ತು ನಟ ನಾಗ ಚೈತನ್ಯ ಅಭಿನಯಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಒಳ್ಳೆಯ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

ಎರಡೂ ಚಿತ್ರದ ಬಗ್ಗೆ ನಟ ನಾಗಾರ್ಜುನ ಅಕ್ಕಿನೇನಿ ಏನು ಹೇಳಿದ್ದಾರೆ 
ನಾಲ್ಕು ನಟರು ಇರುವಂತಹ ಕುಟುಂಬದಲ್ಲಿ, ಪ್ರತಿ ವರ್ಷ ಸಾಕಷ್ಟು "ಸಿಹಿ ಕಹಿ ಕ್ಷಣಗಳು" ಬರುತ್ತವೆ ಎಂದು ಹಿರಿಯ ನಟ ನಾಗಾರ್ಜುನ ಹೇಳುತ್ತಾರೆ. ನಾಗಾರ್ಜುನ ಒಬ್ಬ ತಂದೆಯಾಗಿ, ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಕೂಡ ಉತ್ತಮವಾಗಿ ಹಣ ಗಳಿಸಿದ್ದರೆ ಚೆನ್ನಾಗಿರುತ್ತಿತ್ತು ಅಂತ ನನಗೆ ಅನ್ನಿಸಿತು ಎಂದು ನಾಗಾರ್ಜುನ ಅವರು ಹೇಳಿದರು.

ಇದನ್ನೂ ಓದಿ:  Krishna Shroff: ಬರೀ ಟೈಗರ್ ಶ್ರಾಫ್ ಅಲ್ಲ, ಅವರ ಸಹೋದರಿ ಕೃಷ್ಣಾ ಸಹ ಫಿಟ್ನೆಸ್ ಫ್ರೀಕ್! ಇವರ ದಿನಚರಿ ಹೇಗಿರುತ್ತೆ ನೋಡಿ

ಬ್ರಹ್ಮಾಸ್ತ್ರ ಚಿತ್ರದ ಯಶಸ್ಸು ಮತ್ತು ಲಾಲ್ ಸಿಂಗ್ ಚಡ್ಡಾ ಅವರ ನೀರಸ ಪ್ರದರ್ಶನದ ಬಗ್ಗೆ ಕುಟುಂಬವು ಹೇಗೆ ಪ್ರತಿಕ್ರಿಯಿಸಿತು ಎಂದು ಕೇಳಿದಾಗ, ತೆಲುಗು ನಟ "ಇದು ಸಿಹಿ ಕಹಿ ಕ್ಷಣವಾಗಿದೆ. ಮಗನ ಚಿತ್ರ ಸಹ ಉತ್ತಮ ಪ್ರದರ್ಶನ ನೀಡಿರಬೇಕಿತ್ತು ಅಂತ ನಾನು ಬಯಸಿದ್ದೆ. ಆದರೆ ಇದು ಸಹ ಒಂದು ಅನುಭವ ಅಷ್ಟೇ" ಎಂದು ಹೇಳಿದರು.

225 ಕೋಟಿಗೂ ಹೆಚ್ಚು ಹಣ ಗಳಿಸಿದ ಸಿನೆಮಾ
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿದ ಬ್ರಹ್ಮಾಸ್ತ್ರವು ಉತ್ತಮ ಆರಂಭವನ್ನು ಪಡೆದುಕೊಂಡಿತು, ಆರಂಭಿಕ ವಾರಾಂತ್ಯದಲ್ಲಿ ವಿಶ್ವದಾದ್ಯಂತದ ಒಟ್ಟು ಗಲ್ಲಾ ಪೆಟ್ಟಿಗೆಯಲ್ಲಿ 225 ಕೋಟಿಗೂ ಹೆಚ್ಚು ಹಣವನ್ನು ಗಳಿಸಿತು. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಬ್ರಹ್ಮಾಸ್ತ್ರ ತೆರೆ ಕಂಡ ದಿನದಂದು ನಾಗಾರ್ಜುನ ಅವರ ಪತ್ನಿ ಅಮಲಾ ಕೂಡ ತಮ್ಮ ತೆಲುಗು ಚಿತ್ರ 'ಓಕೆ ಓಕಾ ಜೀವಿತಮ್' ಮೂಲಕ ಚಲನಚಿತ್ರಗಳಿಗೆ ಮತ್ತೆ ಮರಳಿದರು ಎಂದು ನಟ ಹೇಳಿದರು. "ಅವರು ಬಹಳ ಸಮಯದ ನಂತರ ಒಂದು ಚಲನಚಿತ್ರವನ್ನು ಮಾಡಿದರು. ಆದ್ದರಿಂದ ಈಗ ನಮ್ಮ ಮನೆಯಲ್ಲಿ ಸಂತೋಷವಿದೆ. ನನ್ನ ಕುಟುಂಬದಲ್ಲಿ, ನಾಲ್ಕು ನಟರಿದ್ದಾರೆ ಮತ್ತು ಪ್ರತಿ ವರ್ಷ ನಾವು ಸಿಹಿ ಕಹಿ ಕ್ಷಣಗಳನ್ನು ಹೊಂದಿದ್ದೇವೆ" ಎಂದು 63 ವರ್ಷದ ನಟ ಹೇಳಿದರು.

ಎರಡು  ಸಿನೆಮಾದಲ್ಲಿ ತಂದೆ ಮಗ ನಟನೆ
ತಂದೆ ಮತ್ತು ಮಗ ಇಬ್ಬರೂ ಕ್ರಮವಾಗಿ ಬ್ರಹ್ಮಾಸ್ತ್ರ ಮತ್ತು ಲಾಲ್ ಸಿಂಗ್ ಚಡ್ಡಾದಲ್ಲಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಬ್ರಹ್ಮಾಸ್ತ್ರದಲ್ಲಿ ನಾಗಾರ್ಜುನ 'ನಂದಿ ಅಸ್ತ್ರ'ವನ್ನು ನಿರ್ವಹಿಸುವ ಅನೀಶ್ ಶೆಟ್ಟಿ ಎಂಬ ಕಲಾವಿದನ ಪಾತ್ರವನ್ನು ನಿರ್ವಹಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಲಾಲ್ ಅವರ ಅತ್ಯುತ್ತಮ ಸ್ನೇಹಿತ ಬಾಲರಾಜು ಪಾತ್ರದಲ್ಲಿ ಚೈತನ್ಯ ನಟಿಸಿದ್ದಾರೆ.

"ಚಾಯ್ ಅವರು ಈ ಫಾರೆಸ್ಟ್ ಗಂಪ್ ರೀಮೇಕ್ ಮಾಡುತ್ತಿದ್ದಾರೆಂದು ಹೇಳಿದಾಗ, ಸ್ಟಾರ್ ಅಂತ ಗುರುತಿಸಲ್ಪಡುವುದನ್ನು ನಿರೀಕ್ಷಿಸಬೇಡಿ, ಇದು ನಿಮ್ಮನ್ನು ಒಬ್ಬ ನಟನಾಗಿ ತೋರಿಸುತ್ತದೆ ಎಂದು ನಾನು ಅವರಿಗೆ ಹೇಳಿದ್ದೆ. ಚಾಯ್ ಸಹ ಅದಕ್ಕೆ 'ನಾನು ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ' ಎಂದು ಹೇಳಿದ್ದರು” ಎಂದು ನಾಗಾರ್ಜುನ ಅವರು ನೆನಪಿಸಿಕೊಂಡರು.

ಇದನ್ನೂ ಓದಿ:  Jogi Prem: ಮುಂಬೈಗೆ ಹಾರಿದ ಜೋಗಿ ಪ್ರೇಮ್, ಅರ್ಜುನ್ ಜನ್ಯ; ಇದರ ಹಿಂದಿನ ಸ್ಪೆಷಲ್ ಕಾರಣವೇನು?

"ನಾವೆಲ್ಲರೂ ಒಬ್ಬರಿಗೊಬ್ಬರು ಹುರಿದುಂಬಿಸುತ್ತೇವೆ. ಚಿತ್ರದ ಬಿಡುಗಡೆಯ ದಿನದಂದು ನಾವೆಲ್ಲರೂ ಗೆಟ್ ಟು ಗೆದರ್ ಹೊಂದಿದ್ದೇವೆ. ಏನೇ ಆಗಲಿ, ನಾವು ಜೊತೆಗೆ ಊಟ ಮಾಡುತ್ತೇವೆ ಮತ್ತು ಆ ಚಿತ್ರವನ್ನು ನೋಡುತ್ತೇವೆ. ಪ್ರತಿ ವರ್ಷವೂ ಒಂದು ಸಿಹಿ ಕಹಿ ಕ್ಷಣ ಇದ್ದೇ ಇರುತ್ತದೆ" ಎಂದು ಅವರು ಹೇಳಿದರು.
Published by:Ashwini Prabhu
First published: