• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Deepika Padukone: ರಣವೀರ್ ಜೊತೆಗಿನ ದಾಂಪತ್ಯದ ಬಗ್ಗೆ ದೀಪಿಕಾ ಹೇಳಿದ್ದೇನು? ನಟಿ ಪ್ರಕಾರ ಸಂಸಾರಕ್ಕೆ ಯಾವುದು ಮುಖ್ಯವಂತೆ?

Deepika Padukone: ರಣವೀರ್ ಜೊತೆಗಿನ ದಾಂಪತ್ಯದ ಬಗ್ಗೆ ದೀಪಿಕಾ ಹೇಳಿದ್ದೇನು? ನಟಿ ಪ್ರಕಾರ ಸಂಸಾರಕ್ಕೆ ಯಾವುದು ಮುಖ್ಯವಂತೆ?

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್ ಅವರೊಂದಿಗಿನ ತಮ್ಮ ವೈವಾಹಿಕ ಜೀವನದ ಬಗ್ಗೆ ಅಭಿಮಾನಿಗಳ ಮುಂದೆ ಈಗ ತೆರೆದಿಟ್ಟಿದ್ದಾರೆ ನೋಡಿ. ಹಲವು ವರ್ಷಗಳ ಡೇಟಿಂಗ್ ನಂತರ ನಟಿ ದೀಪಿಕಾ ಮತ್ತು ನಟ ರಣವೀರ್ ಇಬ್ಬರು ನವೆಂಬರ್ 2018 ರಲ್ಲಿ ವಿವಾಹವಾದರು.

  • Share this:

ನಮ್ಮಲ್ಲಿರುವ ಬಹುತೇಕ ಚಲನಚಿತ್ರೋದ್ಯಮದಲ್ಲಿ (Cinema) ಸ್ಟಾರ್ ದಂಪತಿಗಳು (Star Couple) ಇರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಎಲ್ಲಾ ಭಾಷೆಗಳಿಗೆ ಹೋಲಿಸಿದರೆ, ಬಾಲಿವುಡ್ ನಲ್ಲಿ ಇರುವ ಸ್ಟಾರ್ ದಂಪತಿಗಳು ಸ್ವಲ್ಪ ಜಾಸ್ತಿಯೇ ಸುದ್ದಿಯಲ್ಲಿರುತ್ತಾರೆ. ಹೌದು.. ಬಾಲಿವುಡ್​​ನಲ್ಲಿ (Bollywood) ಸ್ಟಾರ್ ದಂಪತಿಗಳು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಾರೆ. ಈ ಸ್ಟಾರ್ ಜೋಡಿಗಳ ಅಭಿಮಾನಿಗಳು ಸಹ ಸದಾ ತಮ್ಮ ನೆಚ್ಚಿನ ನಟ ಮತ್ತು ನಟಿ (Actor and Actress) ಮದುವೆಯಾದ ನಂತರ ಹೇಗೆ ಸಂಸಾರ ನಡೆಸಿದ್ದಾರೆ ಮತ್ತು ಸ್ಟಾರ್ ದಂಪತಿಗಳಲ್ಲಿ ಏನಾದರೂ ಜಗಳಗಳು, ಕಿರಿಕ್ ಗಳು ಆಗುತ್ತಿರುತ್ತವೆಯೇ ಅಂತೆಲ್ಲಾ ತಿಳಿದುಕೊಳ್ಳಲು ತುಂಬಾನೇ ಉತ್ಸುಕರಾಗಿರುತ್ತಾರೆ. ಹೀಗೆ ಇಲ್ಲೊಂದು ಬಾಲಿವುಡ್ ನಲ್ಲಿರುವ ಸ್ಟಾರ್ ಜೋಡಿ ಯಾವ ವಿಷಯಕ್ಕೆ ಸುದ್ದಿಯಲ್ಲಿದೆ ಅಂತ ನೀವೇ ನೋಡಿ.


ಬಾಲಿವುಡ್ ನ ಈ ಸ್ಟಾರ್ ಜೋಡಿಯ ವೈವಾಹಿಕ ಜೀವನ ಹೇಗಿದೆ ಗೊತ್ತೇ?


ನಟಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್ ಅವರೊಂದಿಗಿನ ತಮ್ಮ ವೈವಾಹಿಕ ಜೀವನದ ಬಗ್ಗೆ ಅಭಿಮಾನಿಗಳ ಮುಂದೆ ಈಗ ತೆರೆದಿಟ್ಟಿದ್ದಾರೆ ನೋಡಿ. ಹಲವು ವರ್ಷಗಳ ಡೇಟಿಂಗ್ ನಂತರ ನಟಿ ದೀಪಿಕಾ ಮತ್ತು ನಟ ರಣವೀರ್ ಇಬ್ಬರು ನವೆಂಬರ್ 2018 ರಲ್ಲಿ ವಿವಾಹವಾದರು.


ರಣವೀರ್ ಅವರೊಂದಿಗಿನ ತಮ್ಮ ಮದುವೆಯ ಬಗ್ಗೆ ಮಾತನಾಡಿದ ದೀಪಿಕಾ, ಎಲ್ಲರಂತೆ ಯಶಸ್ವಿ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ತಾಳ್ಮೆ ಇರುವುದು ತುಂಬಾನೇ ಮುಖ್ಯವಾಗುತ್ತದೆ ಎಂದು ಹೇಳಿದರು. ಟೈಮ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ದೀಪಿಕಾ ಅವರು ರಣವೀರ್ ಅವರ ಜೊತೆ ತುಂಬಾನೇ ಖುಷಿಯಾಗಿರುವುದಾಗಿ ಹೇಳಿಕೊಂಡರು.


ಇದನ್ನೂ ಓದಿ: 25 ಕೋಟಿ ದಂಡ ಕಟ್ಟಿದ್ರಾ ಪೃಥ್ವಿರಾಜ್ ಸುಕುಮಾರನ್? ನಟ-ನಿರ್ಮಾಪಕ ಹೇಳಿದ್ದೇನು?


ವೈವಾಹಿಕ ಜೀವನದ ಬಗ್ಗೆ ಏನ್ ಹೇಳ್ತಾರೆ ನಟಿ ದೀಪಿಕಾ?


"ನಾವು ಚಲನಚಿತ್ರಗಳಿಂದ ಅಥವಾ ನಮ್ಮ ಸುತ್ತಮುತ್ತಲೂ ಇರುವಂತಹ ಗಂಡ-ಹೆಂಡತಿಯ ಸಂಬಂಧಗಳು ಮತ್ತು ಮದುವೆ ಜೀವನಗಳನ್ನು ನೋಡಿ ಪ್ರಭಾವಿತರಾಗಿ ಬೆಳೆಯುತ್ತೇವೆ.


ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುತ್ತಿರುವ ಪ್ರಯಾಣವು ಬೇರೊಬ್ಬರ ಪ್ರಯಾಣಕ್ಕಿಂತ ತುಂಬಾ ಭಿನ್ನವಾಗಿರುತ್ತದೆ ಎಂದು ನೀವು ಎಷ್ಟು ಬೇಗ ಒಪ್ಪಿಕೊಳ್ಳುತ್ತೀರೋ, ಅದು ನಿಮ್ಮ ವೈವಾಹಿಕ ಜೀವನಕ್ಕೆ ಅಷ್ಟೇ ಉತ್ತಮವಾಗಿರುತ್ತದೆ" ಎಂದು ದೀಪಿಕಾ ಹೇಳಿದ್ದಾರೆ. ಮುಂದುವರೆಯುತ್ತ ದೀಪಿಕಾ ಅವರು ತನ್ನ ಹೆತ್ತವರೊಂದಿಗೆ ಮಾತ್ರವಲ್ಲದೇ, ಆ ಇಡೀ ಪೀಳಿಗೆಯ ಬಗ್ಗೆ ಒಂದು ವಿಷಯವನ್ನು ತುಂಬಾನೇ ಯೋಚಿಸುತ್ತೇನೆ ಅಂತ ಹೇಳಿದರು.


ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ


"ತಾಳ್ಮೆಯು ಬಹುಶಃ ಇಂದು ಎಲ್ಲಾ ದಂಪತಿಗಳಿಗೆ ಬೇಕಾಗಿರುವ ಮುಖ್ಯವಾದ ಅಂಶವಾಗಿದೆ. ಇದನ್ನು ನಾನು ಹೇಳಿದರೆ, ನಿಮಗೆ ನಾನು ಒಬ್ಬ ಲವ್ ಗುರು ರೀತಿಯಲ್ಲಿ ಅಂತ ಅನ್ನಿಸಬಹುದು.


ಆದರೆ ಈ ತಾಳ್ಮೆಯ ಕೊರತೆ ವೈವಾಹಿಕ ಜೀವನದಲ್ಲಿ ತುಂಬಾನೇ ಕಡಿಮೆಯಾಗಿದೆ. ರಣವೀರ್ ಮತ್ತು ನಾನು ನಮ್ಮ ಹೆತ್ತವರಿಂದ ಮಾತ್ರವಲ್ಲದೇ, ಹಿಂದಿನ ತಲೆಮಾರಿನಿಂದ ನಾವೆಲ್ಲರೂ ಕಲಿಯಬಹುದಾದ ವಿಷಯ ಇದು. ಇನ್ನೂ ಅನೇಕ ವಿಷಯಗಳಿವೆ, ಆದರೆ ತಾಳ್ಮೆ ತುಂಬಾನೇ ಮುಖ್ಯವಾದ ವಿಷಯವಾಗಿದೆ" ಅಂತ ದೀಪಿಕಾ ಹೇಳಿದರು.
ಮದುವೆಯಾದ ನಂತರ ನಟಿಯರ ವೃತ್ತಿಜೀವನ ಕೊನೆಗೊಳ್ಳುವುದರ ಬಗ್ಗೆ ದೀಪಿಕಾ ಹೇಳಿದ್ದೇನು?


ಈ ಸಂದರ್ಶನದಲ್ಲಿ, ಪಠಾಣ್ ಚಿತ್ರದ ನಟಿಗೆ ಈ ಹಿಂದೆ ಮಹಿಳಾ ನಟಿಯ ವೃತ್ತಿಜೀವನವು ಮದುವೆಯಾದ ಅಥವಾ ತಾಯಂದಿರಾದ ಕೂಡಲೇ ಕೊನೆಗೊಳ್ಳುವ ವಿಷಯದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಯಿತು.


ಅದಕ್ಕೆ ನಟಿ “ಇನ್ನು ಮುಂದೆ ಅದು ಹಾಗೆ ಆಗಲ್ಲ ಬಿಡಿ. ನಾನು ಎಂದಿಗೂ ಆ ಅನುಭವವನ್ನು ಹೊಂದಿಲ್ಲ, ಏಕೆಂದರೆ ರಣವೀರ್ ಯಾವಾಗಲೂ ನನ್ನನ್ನು, ನನ್ನ ಕನಸುಗಳನ್ನು ಮತ್ತು ನನ್ನ ಮಹತ್ವಾಕಾಂಕ್ಷೆಗಳಿಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ” ಅಂತ ನಟಿ ಹೇಳಿದರು. ದೀಪಿಕಾ ಮತ್ತು ರಣವೀರ್ ಇಬ್ಬರು ಈ ಹಿಂದೆ ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

First published: