Bigg Boss OTT: ಸ್ಪೂರ್ತಿ ತುಟಿ ಕೆಂಪಾಗಿದ್ದು ಯಾಕೆ? ಆರ್ಯವರ್ಧನ್​ ಗುರೂಜಿ ಹೇಳಿದ್ದೇನು?

ಬಿಗ್​ ಬಾಸ್​ ರೂಮ್​ನಲ್ಲಿ ಅರ್ಜುನ್​ ರಮೇಶ್​, ಸ್ಪೂರ್ತಿ ಗೌಡ ಆರ್ಯವರ್ಧನ್​ ಗುರೂಜಿ ಮಾತಾಡುತ್ತಿದ್ದ ವೇಳೆ ಕುತೂಹಲಕಾರಿ ಚರ್ಚೆಯೊಂದು ನಡೆದಿದೆ. ಸಂಖ್ಯಾಶಾಸ್ತ್ರ ಹೇಳೋ ಆರ್ಯವರ್ಧನ್ ಗುರೂಜಿ , ಬಿಗ್​ ಬಾಸ್​ ಮನೆಯಲ್ಲಿ ಸೋನುಗೌಡ ಲಿಪ್ಸ್ ಬಗ್ಗೆ ಮಾತಾಡಿದ್ದಾರೆ.

ಆರ್ಯವರ್ಧನ್ ಗುರೂಜಿ, ಸ್ಪೂರ್ತಿ ಮಾತುಕತೆ

ಆರ್ಯವರ್ಧನ್ ಗುರೂಜಿ, ಸ್ಪೂರ್ತಿ ಮಾತುಕತೆ

  • Share this:
OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ (Bigg Boss OTT)  ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ ಕುರಿತ ಚರ್ಚೆಗಳು ಹೆಚ್ಚಾಗಿದೆ. ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಖಾಸಗಿ ಮಾಧ್ಯಮಗಳಲ್ಲಿ ಸಂಖ್ಯಾಶಾಸ್ತ್ರ (Numerology) ಹಾಗೂ ಭವಿಷ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದ ಆರ್ಯವರ್ಧನ್​ ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ.  ಇದೀಗ ಆರ್ಯವರ್ಧನ ಗುರೂಜಿ ಅವರು ಕಿರುತೆರೆ ನಟಿ ಸ್ಪೂರ್ತಿ ಗೌಡ (Spoorthi Gowda) ತುಟಿ ಬಣ್ಣದ ಕುರಿತು ಮಾತಾಡಿದ್ದಾರೆ. 

ಸ್ಫೂರ್ತಿ ತುಟಿ ಕೆಂಪಾಗಿದ್ದು ಯಾಕೆ?

ಬಿಗ್​ ಬಾಸ್​ ರೂಮ್​ನಲ್ಲಿ ಅರ್ಜುನ್​ ರಮೇಶ್​, ಸ್ಪೂರ್ತಿ ಗೌಡ ಆರ್ಯವರ್ಧನ್​ ಗುರೂಜಿ ಮಾತಾಡುತ್ತಿದ್ದ ವೇಳೆ ಕುತೂಹಲಕಾರಿ ಚರ್ಚೆಯೊಂದು ನಡೆದಿದೆ. ಸಂಖ್ಯಾಶಾಸ್ತ್ರ ಹೇಳೋ ಆರ್ಯವರ್ಧನ್ ಗುರೂಜಿ , ಬಿಗ್​ ಬಾಸ್​ ಮನೆಯಲ್ಲಿ ಸೋನುಗೌಡ ಲಿಪ್ಸ್ ಬಗ್ಗೆ ಮಾತಾಡಿದ್ದಾರೆ.ತುಟಿಗೆ ಹೆಚ್ಚಿನ ಲಿಪ್​ಸ್ಟಿಕ್ ಹಾಕಿರ್ತೀಯಾ?

ನಿಲ್ಲ ತುಟಿಗೆ ಯಾವಾಗಲು ಹೆಚ್ಚಿನ ಲಿಪ್​ ಸ್ಟಿಕ್​ ಹಾಕಿರ್ತೀಯಾ ಎಂದು ಆರ್ಯವರ್ಧನ್ ಹೇಳಿದ್ದಾರೆ. ಆರ್ಯವರ್ಧನ್​ ಗುರೂಜಿ ಮಾತಿಗೆ ಸ್ಪೂರ್ತಿಗೌಡ ಜೋರಾಗಿ ನಕ್ಕಿದ್ದಾರೆ. ಹಿಂದಿನ ಕಾಲದಲ್ಲಿ ಕಡ್ಡಿಪುಡಿ, ಎಲೆ ಅಡಿಕೆ ಹಾಕಿಕೊಂಡ್ರೆ ಬಾಯಿ ತುಟಿ ಕೆಂಪಾದ ರೀತಿ ನಿಮ್ಮ ತುಟಿ ಕೂಡ ಕೆಂಪಾಗಿರುತ್ತದೆ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ.ಇದನ್ನೂ ಓದಿ: Bigg Boss OTT: ಬಿಗ್​ ಬಾಸ್ ಮನೆಯಲ್ಲಿ ಬಿಗ್ ಫೈಟ್; ಆರ್ಯವರ್ಧನ್ ಗುರೂಜಿ ಕಿರಿಕ್!

ಸ್ಪೂರ್ತಿಗೌಡ ಕೂದಲಿನ ಬಗ್ಗೆಯೂ ಗುರೂಜಿ ಕಾಮೆಂಟ್​

ಸ್ಫೂರ್ತಿಗೌಡ ಹೇರ್​ ಸ್ಟೈಲ್ ಬಗ್ಗೆಯೂ ಗುರೂಜಿ ಮಾತಾಡಿದ್ದಾರೆ. ನೀನು ಮಾಡ್ರನ್​ ಆಗಿರ್ತಿಯಾ , ಹಳ್ಳಿಯವರು ಕೂದಲು ಕೆದರಿಕೊಂಡಂತೆ ಕೂದಲು ಬಿಟ್ಟುಕೊಂಡು ಇರ್ತೀಯಾ ಎಂದು ಆರ್ಯವರ್ಧನ್ ಹೇಳಿದ್ದಾರೆ.  ಇದಕ್ಕೆ ಪಕ್ಕದಲ್ಲೇ ಇದ್ದ ಅರ್ಜುನ್ ರಮೇಶ್, ಮಾತಿನ ಮಧ್ಯೆ ಪ್ರವೇಶಿಸಿ ಅದು ಕೂದಲು ಕೆದರಿಕೊಂಡಿರುವುದಲ್ಲ ಬದಲಿಗೆ ಕಷ್ಟ ಪಟ್ಟು ಸೆಟ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆರ್ಯವರ್ಧನ್ ಗುರೂಜಿ ಹಾಗೂ ಉದಯ್​ ನಡುವೆ ಫೈಟ್​

ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ ಆಡುತ್ತಿದ್ದ ವೇಳೆ ಉದಯ್​ರನ್ನು ಆರ್ಯವರ್ಧನ್​ ಗುರೂಜಿ ತಳ್ಳಿದ್ರಂತೆ, ಹೀಗಂತ ಉದಯ್​ ಗಲಾಟೆ ತೆಗೆದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನನ್ನ ಯಾಕೆ ತಳ್ಳಿದ್ರಿ ಎಂದು ಉದಯ್ ಪ್ರಶ್ನೆ ಮಾಡಿದ್ರು. ನಾನು ನಿನ್ನನ್ನು ತಳ್ಳಿಲ್ಲ ನಾನು ಗೇಮ್​ ಆಡಿದೆ ಅಷ್ಟೇ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ.

ನನ್ನ ತಾಯಿ ಸಾವಿಗೆ ನಾನೇ ಕಾರಣ

ಇತ್ತೀಚೆಗೆ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ಸ್ಫೂರ್ತಿ ಗೌಡ (Spoorthi Gowda) ಭಾವುಕರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಸ್ಫೂರ್ತಿ ಗೌಡ ಹಂಚಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ಜನ ಮಾತನಾಡುತ್ತಿದ್ದರು ಎಂದು ಹೇಳಿ ನಟಿ ಗದ್ಗದಿತರಾದರು.

ಇದನ್ನೂ ಓದಿ: Bigg Boss OTT: ಮದುವೆಯಾಗಿ ಮಗು ಇದ್ದವನ ಜೊತೆ ರಿಲೇಷನ್​​ಶಿಪ್​ನಲ್ಲಿ ಇದ್ದ ಮಾರಿಮುತ್ತು ಮೊಮ್ಮಗಳು

ನಾನು ನನ್ನ ಮನೆಯಲ್ಲಿ ಪ್ಯಾಂಪರ್ಡ್ ಕಿಡ್. ಕಷ್ಟ ಅನ್ನೋದನ್ನೇ ನಾನು ನೋಡಿರಲಿಲ್ಲ. ಟಿವಿ ಮುಂದೆ ಕೂತುಕೊಂಡು ಊಟ ಮಾಡಿದ್ರೂ, ತಟ್ಟೆಯನ್ನ ತಗೊಂಡು ಹೋಗಿ ಇಡುತ್ತಿರಲಿಲ್ಲ. ಅಷ್ಟು ಚೆನ್ನಾಗಿ ನನ್ನಮ್ಮ ನನ್ನನ್ನ ಸಾಕಿದ್ದರು. ಏಕಾಏಕಿ ನನ್ನ ತಾಯಿ ಹಾಸಿಗೆ ಹಿಡಿದುಬಿಟ್ಟರು. ಅವರಿಗೆ ಥೈರಾಯಿಡ್ ಕ್ಯಾನ್ಸರ್ ಆಗಿತ್ತು. ಬರ್ತಾ ಬರ್ತಾ ಅವರ ಮಾತು ನಿಂತುಹೋಯ್ತು. ನಡೆದಾಡುವುದನ್ನು ನಿಲ್ಲಿಸಿದರು ಎಂದು ಘಟನೆಗಳನ್ನು ಎಳೆ ಎಳೆಯಾಗಿ ನೆನಪಿಸಿಕೊಂಡಿದ್ದಾರೆ ಸ್ಫೂರ್ತಿ ಗೌಡ.
Published by:Pavana HS
First published: