ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Actress Priyanka Chopra) ಅವರು ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದಾರೆ. ವಿಶ್ವಾದ್ಯಂತ ಸ್ಟಾರ್ ಪಟ್ಟವಿರುವ ಸೆಲೆಬ್ರಿಟಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಕೂಡಾ ಒಬ್ಬರು. ಬಾಲಿವುಡ್ (Bollywood)ನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಈಗ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಹಳೆಯ ಜೀವನದ ಒಂದಷ್ಟು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದಲ್ಲಿ ಹುಡುಗರಿಂದ ತಾವು ಅನುಭವಿಸಿದ ಕಾಟದ ಬಗ್ಗೆ ಈಗ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ (Interview) ಅವರು ನೆನಪಿನ ಪುಟ ತೆರೆದಿದ್ದಾರೆ.
ಎರಡು ವರ್ಷ ಅಮೆರಿಕದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ಬಳಿಕ 16ನೇ ವಯಸ್ಸಿನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ವಾಪಸ್ಸು ಬಂದಿದ್ದರು. ಆಗ ಅವರನ್ನು ಹುಡುಗರು ಹಿಂಬಾಲಿಸುತ್ತಿದ್ದರು. ಅದರಿಂದ ಅವರ ತಂದೆ ಅಶೋಕ್ ಚೋಪ್ರಾಗೆ ಕಿರಿಕಿರಿ ಆಗಿತ್ತು.
ಒಂದು ದಿನ ಹಿಂಬಾಲಿಸಿಕೊಂಡು ಬಂದ ಹುಡುಗರ ಪೈಕಿ ಓರ್ವನಂತೂ ಪ್ರಿಯಾಂಕಾ ಚೋಪ್ರಾ ಮನೆಯ ಬಾಲ್ಕನಿವರೆಗೂ ಕಾಲಿಟ್ಟಿದ್ದ. ಆತನನ್ನು ನೋಡಿ ಪ್ರಿಯಾಂಕಾ ಕಿರುಚಿಕೊಂಡಿದ್ದರು. ಬಳಿಕ ಅಶೋಕ್ ಚೋಪ್ರಾ ಅವರು ಮನೆಯ ಕಿಟಕಿಗೆ ಸರಳು ಹಾಕಿಸಿದ್ದರು.
ಈ ಹಿಂದೆ ʼದಿ ಹೊವಾರ್ಡ್ ಸ್ಟರ್ನ್ ಶೋʼ ನಲ್ಲಿ ಪ್ರಿಯಾಂಕ ಚೋಪ್ರಾ ಅವರು ಕಾಣಿಸಿಕೊಂಡಾಗ ಅವರ ತಂದೆ ಅಶೋಕ್ ಚೋಪ್ರಾ ಅವರು ಮನೆಯ ಕಿಟಕಿಗಳನ್ನು ಭದ್ರಪಡಿಸಿದ್ದು ಮಾತ್ರವಲ್ಲದೇ ಪ್ರಿಯಾಂಕಾಗೆ ಕೆಲವು ನಿಯಮಗಳನ್ನೂ ಹೇರಿದರು.
ವಿದೇಶಿ ಹುಡುಗಿಯರ ತರಹ ಬಟ್ಟೆ ಧರಿಸಬಾರದು ಎಂದು ಹೇಳುವುದರ ಜೊತೆಗೆ, ಭಾರತೀಯ ಹುಡುಗಿ ತರಹ ಡ್ರೆಸ್ ಮಾಡಿಕೊಳ್ಳಬೇಕು ಎಂದು ಕೂಡ ತಾಕೀತು ಮಾಡಿದ್ದರು.
ಪ್ರಿಯಾಂಕ ಆಗ ಎಲ್ಲೇ ಹೋದರೂ ಏಕಾಂಗಿ ಆಗಿ ಹೋಗಲು ಅನುಮತಿ ಇರಲಿಲ್ಲ. ತಮ್ಮ ತಂದೆ ನೇಮಿಸಿದ ಕಾರ್ ಡ್ರೈವರ್ ಎಲ್ಲ ಕಡೆ ಪ್ರಿಯಾಂಕಾ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಎಲ್ಲ ಘಟನೆಗಳನ್ನು ಪ್ರಿಯಾಂಕಾ ಈಗ ಟುಡೇ ಶೋ ನಲ್ಲಿ ನೆನಪಿಸಿಕೊಂಡಿದ್ದಾರೆ.
ಪ್ರಿಯಾಂಕ ತನ್ನ ಮಾತನ್ನು ಮುಂದುವರಿಸುತ್ತಾ, “ನಾನು ಚಿಕ್ಕ ವಯಸ್ಸಿನಲ್ಲಿಯೇ ಅಮೇರಿಕಾಕ್ಕೆ ಹೋಗಿದ್ದರಿಂದ ನನ್ನ ತಂದೆಗೆ ನನ್ನ ಮೇಲೆ ವಿಪರೀತ ವ್ಯಾಮೋಹ ಬೆಳೆದಿತ್ತು. ಅವರು ಈ ರೀತಿ ಮಾಡುವುದು ಆಗ ನನಗೆ ತುಂಬಾ ಕಸಿವಿಸಿ ಉಂಟು ಮಾಡುತ್ತಿತ್ತು. ನನ್ನ ಎಲ್ಲ ಜೀನ್ಸ್ ಪ್ಯಾಂಟ್‌ಗಳನ್ನು ಸಹ ಅವರು ತೆಗೆದುಕೊಂಡಿದ್ದರು.
ಕೇವಲ ಇಂಡಿಯನ್ ಡ್ರೆಸ್ ಧರಿಸುವಂತೆ ಮತ್ತೆ ಮತ್ತೆ ಹೇಳುತ್ತಿದ್ದರು. ಈ ಎಲ್ಲ ಕಾರಣಕ್ಕೆ ನನಗೆ ನನ್ನ ತಂದೆ ಮೇಲೆ ಆಗ ಸ್ವಲ್ಪ ಬೇಸರವಿತ್ತು. ಆದರೆ ಈಗ ಅದನ್ನೆಲ್ಲ ನೆನಪಿಸಿಕೊಂಡರೆ ಒಬ್ಬ ತಂದೆ ಆಗಿ ಅವರು ಸರಿಯಾಗಿಯೇ ಮಾಡಿದ್ದಾರೆ ಎಂದೆನಿಸುತ್ತದೆ” ಎನ್ನುತ್ತಾರೆ.
ಪ್ರಿಯಾಂಕ ಅವರು “ನಾನು ಅಮೇರಿಕಾದಿಂದ ವಾಪಸ್ ಭಾರತಕ್ಕೆ ಬಂದಾಗ, ತುಂಬಾ ಏನು ಕೆಲಸ ಮಾಡದೇ ಸುಮ್ಮನೆ ಕಾಲಹರಣ ಮಾಡುವ ಸೋಮಾರಿ ಹುಡುಗಿ ಆಗಿದ್ದೆ. ಅದರಿಂದ ಹೇಗೆ ನಾನು ಹೊರಬಂದೆ ಎಂದು ನನಗೆ ಈಗಲೂ ಗೊತ್ತಿಲ್ಲ. ಆದರೆ ಆ ಸಮಯದಲ್ಲಿ ನನಗೆ ಬಹಳ ಅಹಂಕಾರವಂತೂ ಬಂದಿತ್ತು” ಎಂದಿದ್ದಾರೆ.
ಟುಡೇ ಶೋ ನಲ್ಲಿ ಪ್ರಿಯಾಂಕ ಚೋಪ್ರಾ
ಟುಡೇ ಶೋನಲ್ಲಿ ಹೊಡಾ ಕೋಟ್ಬ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಪ್ರಿಯಾಂಕಾ ಅವರು “ನಾನು ಅಮೇರಿಕಾಕ್ಕೆ ಹೋದಾಗ ಹೇಗೆ ಅಲ್ಲಿ ಸಾಕಷ್ಟು ಸಂಕಟವನ್ನು ಅನುಭವಿಸಿದ್ದೇನೆ.
ತಾನು ಮೊದಲ ಬಾರಿ ಶಿಕ್ಷಣಕ್ಕಾಗಿ ಅಮೆರಿಕಾಗೆ ಬಂದಾಗ ಯಾವ ರೀತಿಯ ಅನುಭವವಾಯಿತು ಎನ್ನುವುದನ್ನು ನಟಿ ರಿವೀಲ್ ಮಾಡಿದ್ದಾರೆ. ನಟಿ ವಾಶ್ರೂಮ್ನಲ್ಲಿ ಊಟ ಮಾಡುತ್ತಿದ್ದರು ಎನ್ನುವುದನ್ನು ಸಹ ರಿವೀಲ್ ಮಾಡಿದ್ದಾರೆ.
ನಾನು ಬಾತ್ರೂಮ್ನಲ್ಲಿ ಊಟ ಮಾಡುತ್ತಿದ್ದೆ. ನಾನು ಅಷ್ಟು ನರ್ವಸ್ ಆಗಿದ್ದೆ. ಕೆಫೆಟೇರಿಯಾಗೆ ಹೋಗುವುದು ಹೇಗೆಂದು ನನಗೆ ತಿಳಿದಿರಲಿಲ್ಲ. ವೆಂಡಿಂಗ್ ಮೆಷಿನ್ನಿಂದ ಡೋರ್ಟಿಯಸ್ ತಿನ್ನುತ್ತಿದ್ದೆ. ಬೇಗನೆ ಬಾತ್ರೂಮ್ಗೆ ಹೋಗಿ ತಿಂದು ಬರುತ್ತಿದ್ದೆ. ನಂತರ ಕ್ಲಾಸ್ಗೆ ಹೋಗುತ್ತಿದ್ದೆ ಎಂದಿದ್ದಾರೆ.
ಹಾಲಿವುಡ್‌ನಲ್ಲಿ ಫುಲ್ ಬ್ಯುಸಿ ಇರೋ ಹಾಲಿವುಡ್ ಬೆಡಗಿ ಪಿಗ್ಗಿ
ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಬಾಲಿವುಡ್ನ ಯಾವುದೇ ಸಿನಿಮಾವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಹಾಲಿವುಡ್ ಪ್ರಾಜೆಕ್ಟ್ಗಳ ಕಡೆಗೆ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಇದನ್ನೂ ಓದಿ: Salman Khan: ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್ ಪೋಸ್
ಪ್ರಿಯಾಂಕಾ ಚೋಪ್ರಾ ನಟಿಸಿದ ‘ಸಿಟಾಡೆಲ್’ ವೆಬ್ ಸಿರೀಸ್ ಏಪ್ರಿಲ್ 28ರಂದು ಬಿಡುಗಡೆ ಆಯಿತು. ಈ ಸಿರೀಸ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ನಟಿ ಸದ್ಯ ಪತಿ ನಿಕ್ ಹಾಗೂ ಮಗಳು ಮಾಲ್ತಿ ಜೊತೆ ಲಾಸ್ ಏಂಜಲೀಸ್ನಲ್ಲಿ ನೆಲೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ