Weekend With Ramesh: ವೀಕೆಂಡ್ ವಿತ್ ರಮೇಶ್ ಮತ್ತೆ ಶುರುವಾಗುತ್ತಾ? ಈ ಬಾರಿ ಸಾಧಕರ ಸೀಟಲ್ಲಿ ಕೂರುವವರು ಯಾರು?

ಮತ್ತೆ 'ವೀಕೆಂಡ್ ವಿತ್ ರಮೇಶ್' ಶುರುವಾಗಲಿದ್ಯಂತೆ. ಹೀಗಂತ ಖುದ್ದು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಸುಳಿವು ನೀಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾಗಳದಲ್ಲಿ ವೀಕೆಂಡ್ ವಿತ್ ರಮೇಶ್ ಬಗ್ಗೆ ದಿನಕ್ಕೊಂದು ಸುದ್ದಿ ಓಡಾಡುತ್ತಿದೆ.

ವೀಕೆಂಡ್ ವಿತ್ ರಮೇಶ್

ವೀಕೆಂಡ್ ವಿತ್ ರಮೇಶ್

  • Share this:
ವೀಕೆಂಡ್ ವಿತ್ ರಮೇಶ್.. (Weekend with Ramesh) ಹೀಗೆ ಹೇಳುತ್ತಲೇ ಕನ್ನಡ ಕಿರುತೆರೆಯ (Kannada TV) ಫ್ಯಾಮಿಲಿ ಆಡಿಯನ್ಸ್ (Family Audience) ಕಿವಿ ನೆಟ್ಟಗಾಗುತ್ತದೆ. ಯಾವಾಗ ಶುರುವಾಗುತ್ತದೆ? ಈ ಸಲ ಅತಿಥಿಗಳಾಗಿ (Guest) ಯಾರ್ಯಾರು ಬರ್ತಾರೆ? ಹೀಗಂತ ಸಾವಿರ ಪ್ರಶ್ನೆ ಕೇಳ್ತಾರೆ. ಯಾಕೆಂದ್ರೆ ವೀಕೆಂಡ್ ವಿತ್ ರಮೇಶ್ ಎನ್ನುವುದು ಕರ್ನಾಟಕದ (Karnataka) ಮನೆ ಮಂದಿಯ ಮನಸ್ಸಿನಲ್ಲಿ ಅಚ್ಚಳಿಯದೇ ಕುಳಿತ ಕಾರ್ಯಕ್ರಮ. ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ, ವಾರಾಂತ್ಯದಲ್ಲಿ ಜನರನ್ನು ಹಿಡಿದಿಟ್ಟಿತ್ತು. ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು (Achievers) ಕರೆಸಿ, ಅವರ ಕಷ್ಟ ಸುಖ, ಜೀವನಗಾಥೆ ಬಗ್ಗೆ ನಟ ರಮೇಶ್ ಅರವಿಂದ್ (Ramesh Aravind) ವೀಕ್ಷಕರಿಗೆ ತಿಳಿಸಿಕೊಡುತ್ತಿದ್ದರು. ಇದೀಗ ಮತ್ತೆ ವೀಕೆಂಡ್ ವಿತ್ ರಮೇಶ್ ಶುರುವಾಗಲಿದ್ಯಂತೆ. ಹೀಗಂತ ಖುದ್ದು ಜೀ ಕನ್ನಡದ ಬ್ಯುಸಿನೆಸ್ ಹೆಡ್ (Business Head) ರಾಘವೇಂದ್ರ ಹುಣಸೂರು (Raghavendra Hunsur) ಅವರೇ ಸುಳಿವು ನೀಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ (Social Media) ವೀಕೆಂಡ್ ವಿತ್ ರಮೇಶ್ ಬಗ್ಗೆ ದಿನಕ್ಕೊಂದು ಸುದ್ದಿ ಓಡಾಡುತ್ತಿದೆ.

ಮತ್ತೆ ಶುರುವಾಗುತ್ತಾ ವೀಕೆಂಡ್ ವಿತ್ ರಮೇಶ್?

2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿತ್ ರಮೇಶ್ 4’ ಕಾರ್ಯಕ್ರಮ ಅಂತ್ಯ ಕಂಡಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘ವೀಕೆಂಡ್ ವಿತ್ ರಮೇಶ್’ ಮತ್ತೆ ಯಾವಾಗ ಶುರುವಾಗುತ್ತೆ ಅಂತ ವೀಕ್ಷಕರು ಕೇಳುತ್ತಲೇ ಇದ್ದಾರೆ. ಈಗ ಇದೇ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸುಳಿವು ಕೊಟ್ಟಿದ್ದಾರೆ.ವೀಕೆಂಡ್ ವಿತ್ ರಮೇಶ್ 5 ಯಾವಾಗ?

ಈ ಪ್ರಶ್ನೆಯನ್ನು ವೀಕ್ಷಕರು ಕೇಳುತ್ತಿದ್ದಾರೆ. ಅದರಲ್ಲೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅಭಿಮಾನಿಗಳು ಜೀ ಕನ್ನಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೀಕೆಂಡ್ ವಿತ್ ರಮೇಶ್ 5 ಯಾವಾಗ? ಅಂತ ಪ್ರಶ್ನಿಸುತ್ತಲೇ ಇದ್ದಾರೆ.‘

ಇದನ್ನೂ ಓದಿ: Bigg Boss OTT: ನಾಳೆಯಿಂದಲೇ ಅಸಲಿ ಆಟ ಶುರು! ಬಿಗ್ ಮನೆಗೆ ಇವ್ರೆಲ್ಲ ಹೋಗ್ತಾರಂತೆ!

ಶೀಘ್ರವೇ ಶುರುವಾಗುತ್ತಾ ವೀಕೆಂಡ್ ವಿತ್ ರಮೇಶ್

ಹೀಗಂತ ಹೇಳಲಾಗುತ್ತಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದಲೇ ಒಟಿಟಿಯಲ್ಲೂ ಬಿಗ್ ಬಾಸ್ ಪ್ರಸಾರವಾಗಲಿದೆ. ಹೀಗಾಗಿ  ಜೀ ಕನ್ನಡದ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಬಿಗ್ ಬಾಸ್‌ಗೆ ಪ್ರತಿಸ್ಪರ್ಧಿಯಾಗಿ ಟಿಆರ್‌ಪಿ ರೇಸ್‌ನಲ್ಲಿ ಪೈಪೋಟಿ ಕೊಡಲು ವೀಕೆಂಡ್ ವಿತ್ ರಮೇಶ್ ಪ್ರಾರಂಭಿಸುವ ಸಾಧ್ಯತೆಗಳೂ ಇವೆ.

ವೀಕ್ಷಕರ ನೆಚ್ಚಿನ ಸಾಧಕರು ಯಾರು?

ವೀಕ್ಷಕರು ವೀಕೆಂಡ್ ವಿತ್ ರಮೇಶ್‌ಗೆ ಇವ್ರನ್ನೆಲ್ಲ ಕರೆಸಬೇಕು ಅಂತ ಸಾಧಕರ ದೊಡ್ಡ ಲಿಸ್ಟ್‌ಗಳನ್ನೇ ಇಟ್ಟಿದ್ದಾರೆ. ಈ ಪೈಕಿ ಖ್ಯಾತ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ನಾದ ಬ್ರಹ್ಮ ಹಂಸಲೇಖ, ಖ್ಯಾತ ವೈದ್ಯ ಡಾ.ದೇವಿ ಶೆಟ್ಟಿ, ರಂಗಕರ್ಮಿ, ಹಿರಿಯ ನಟಿ ಅರುಂಧತಿ ಶಂಕರ್‌ ನಾಗ್, ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ, ಮಾಜಿ ಸಿಎಂ, ಹಿರಿಯ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ, ಸಾಹಿತಿ ದೇವನೂರು ಮಹಾದೇವ, ಪದ್ಮಶ್ರೀ ಮಂಜಮ್ಮ ಜೋಗತಿ, ಹರೆಕಳ ಹಾಜಬ್ಬ, ತುಳಸಿ ಗೌಡ, ಸಾಲು ಮರದ ತಿಮ್ಮಕ್ಕ, ಸುಕ್ರಿಗೌಡ ಸೇರಿದಂತೆ ಹಲವು ಸಾಧಕರನ್ನು ಕರೆಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಈ ಬಾರಿ ಹೇಗಿರಲಿದೆ ಬಿಗ್​ ಬಾಸ್​ ಮನೆ? ಕೊನೆಗೂ ರಿವೀಲ್ ಆಯ್ತು Bigg Boss OTT ಹೌಸ್

ಈಗಾಗಲೇ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಮೊದಲ ಸೀಸನ್‌ 2014ರಲ್ಲಿ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ, ಮೂರನೇ ಸೀಸನ್ 2017ರಲ್ಲಿ, 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು. ಇದೀಗ ಐದನೇ ಸೀಸನ್ ಪ್ರಾರಂಭಿಸುವ ಸುಳಿವು ಸಿಕ್ಕಿದೆ.
Published by:Annappa Achari
First published: