Weekend Planner: ಒಂದೇ ದಿನ 8 ಕನ್ನಡ ಸಿನಿಮಾ ರಿಲೀಸ್​.. ಜೊತೆಗೆ ಮತ್ತೆ ಥಿಯೇಟರ್​ಗೆ ಬಂದ ಬ್ಯಾಟ್​ಮ್ಯಾನ್​!

ಚಿತ್ರಮಂದಿರ(Theaters)ಗಳಿಗೆ ಹೌಸ್​​ಫುಲ್ (Houseful)​ ಗ್ರೀನ್ ಸಿಗ್ನಲ್ ಸಿಗ್ತಿದಂತೆ ಕಳೆದ ವಾರ ಬರೋಬರಿ 8 ಸಿನಿಮಾ(8 Movies)ಗಳು ಬೆಳ್ಳಿತೆರೆ ಮೇಲೆ ರಾರಾಜಿಸಿದ್ದವು. ಈ ವಾರವೂ ಕೂಡ ಚಿತ್ರಮಂದಿರಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳು ರಿಲೀಸ್​ ಆಗಿದೆ. ಸೂಪರ್​ ಸ್ಟಾರ್​(Super Star)ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ.

9 ಸಿನಿಮಾಗಳು ರಿಲೀಸ್​

9 ಸಿನಿಮಾಗಳು ರಿಲೀಸ್​

  • Share this:
ಕೊರೋನಾ(Corona) ಮೂರನೇ ಅಲೆಯ ಲಾಕ್ ಅನ್ ಲಾಕ್ ಆಗ್ತಿದಂತೆ ಗಾಂಧಿನಗರದಲ್ಲಿ ಸಿನಿಮಾ ಮುಂಗಾರು ಶುರುವಾಗ್ತಿದೆ. ಚಿತ್ರಮಂದಿರ(Theaters)ಗಳಿಗೆ ಹೌಸ್​​ಫುಲ್ (Houseful)​ ಗ್ರೀನ್ ಸಿಗ್ನಲ್ ಸಿಗ್ತಿದಂತೆ ಕಳೆದ ವಾರ ಬರೋಬರಿ 8 ಸಿನಿಮಾ(8 Movies)ಗಳು ಬೆಳ್ಳಿತೆರೆ ಮೇಲೆ ರಾರಾಜಿಸಿದ್ದವು. ಈ ವಾರವೂ ಕೂಡ ಚಿತ್ರಮಂದಿರಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳು ರಿಲೀಸ್​ ಆಗಿದೆ. ಸೂಪರ್​ ಸ್ಟಾರ್​(Super Star)ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ. ಇದರ ಮಧ್ಯೆ ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ. ಹಾಗೇ ನೀವು ಈ ವಾರ(Weekend) ಒಂದೊಳ್ಳೆ ಸಿನಿಮಾ ನೋಡಿ ಎಂಜಾಯ್​ ಮಾಡಬೇಕು ಅಂದುಕೊಂಡಿದ್ದರೇ, ಈ ಕೆಳಗಿರುವ ಸಿನಿಮಾಗಳಲ್ಲಿ ನಿಮಗೆ ನೋಡಬೇಕು ಅನ್ನಿಸುವ ಸಿನಿಮಾವನ್ನು ನೋಡಿ ನಿಮ್ಮ ವೀಕೆಂಡ್ ಎಂಜಾಯ್​ ಮಾಡಿ. 

1. ‘ಯೆಲ್ಲೋ ಬೋರ್ಡ್’ 

ಯುವ ನಟ ಪ್ರದೀಪ್ ಬೋಗಾದಿ ನಟನೆಯ 'ಯೆಲ್ಲೋ ಬೋರ್ಡ್' ಈ ವಾರ ತೆರೆಗೆ ಬಂದಿದೆ. ಸಿನಿಮಾವು ಕಾರ್ಮಿಕರ ಕಷ್ಟ, ಘನತೆ, ಅವರ ಮೇಲಾಗುತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಲಿದೆ. ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಾಡೊಂದನ್ನು ಹಾಡಿದ್ದಾರೆ.

2. ‘ಸೋಲ್ಡ್​’

ಈಗಾಗಲೇ ಜನಪ್ರಿಯತೆ ಗಳಿಸಿರುವ ದಾನಿಶ್ ಸೇಠ್‌ರ ಹೊಸ ಸಿನಿಮಾ 'ಸೋಲ್ಡ್' ಇಂದು ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ದಾನಿಶ್‌ರ ಎರಡನೇ ಸಿನಿಮಾ ಇದು. ಸಿನಿಮಾವು ಕ್ರೈಂ ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದಾನಿಶ್ ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ.

3. ‘ಬೆಟ್ಟದ ದಾರಿ’

'ಬೆಟ್ಟದ ದಾರಿ'. ಬರಪೀಡಿತ ಊರೊಂದರಲ್ಲಿ ನೀರು ಸಿಗದೆ ಜನ ಪರದಾಡುತ್ತಿರುವಾಗ ಆ ಊರಿನ ಮಕ್ಕಳು ಚಾಣಾಕ್ಷತನದಿಂದ ಊರಿಗೆ ನೀರು ಬರುವಂತೆ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಮಾ ಚಂದ್ರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

4. ‘ಮೋಕ್ಷ’

ಪ್ರೀತಿ, ಸೇಡಿನ ಕತೆ ಹೊಂದಿರುವ 'ಮೋಕ್ಷ' ಸಿನಿಮಾ ಇಂದು ಬಿಡುಗಡೆ ಆಗಿದೆ. ಮುಖವಾಡ ಧರಿಸಿದ ಸೈಕೋಪಾತ್ ಕಿಲ್ಲರ್ ಹಾಗೂ ನಾಯಕನ ನಡುವೆ ನಡೆವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಮರ್ಥ ನಾಯಕ್ ಬರೆದು ನಿರ್ದೇಶನ ಮಾಡಿದ್ದಾರೆ.

5. ‘ಅಘೋರ’

ಒಂದು ದಿನದಲ್ಲಿ ನಡೆಯುವ ಕತೆಯನ್ನು 'ಅಘೋರ' ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟ ಅವಿನಾಶ್ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಥ್ರಿಲ್ಲರ್ ಅಂಶಗಳನ್ನು ಹೊಂದಿದ್ದು, ಸಿನಿಮಾದಲ್ಲಿ ಐದು ಪ್ರಮುಖ ಪಾತ್ರಗಳು ಇದೆ.

ಇದನ್ನೂ ಓದಿ: ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು, ಇಂದು ಜನಾರ್ದನ ​ರೆಡ್ಡಿ ಮಗನ ಸಿನಿಮಾ ಟೀಸರ್​ ರಿಲೀಸ್​!

6. ‘ಮೈಸೂರು’

‘ಮೈಸೂರು’ ಹೆಸರಿನ ಕನ್ನಡ ಸಿನಿಮಾ ಇಂದು ಬಿಡುಗಡೆ ಆಗಿದೆ. ಕಿರುತೆರೆಯಲ್ಲಿ ಹಲವು ವರ್ಷ ಕೆಲಸ ಮಾಡಿರುವ ವಾಸುದೇವ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣವೂ ಸಹ ಅವರೇ ಮಾಡಿದ್ದಾರೆ. ಮೈಸೂರಿನ ನಾಯಕಿಗೆ ಪರರಾಜ್ಯದ ನಾಯಕ ಜೊತೆಯಾಗುತ್ತಾನೆ. ಆದರೆ ಅನಿವಾರ್ಯ ಕಾರಣಗಳಿಂದ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗಿ ಮರಣದಂಡನೆ ಆಗುತ್ತದೆ. ಇದೆ ಈ ಸಿನಿಮಾ ಕಥೆ

7. ‘ಕನ್ನೇರಿ’

ನೈಜ ಘಟನೆಯನ್ನು ಆಧರಿಸಿದ ಸಿನಿಮಾ ‘ಕನ್ನೇರಿ’ ಇದೇ ದಿನ ಬಿಡುಗಡೆ ಆಗಿದೆ. ಈ ಹಿಂದೆ ‘ಮೂಕಹಕ್ಕಿ’ ಸಿನಿಮಾ ನಿರ್ದೇಶನ ಮಾಡಿದ್ದ ನೀನಾಸಂ ಮಂಜು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.  ಸಿನಿಮಾದಲ್ಲಿ ಸುಧಾರಾಣಿ, ತಬಲಾ ನಾಣಿ ಇತರ ಕಲಾವಿದರು ಇದ್ದಾರೆ.

ಇದನ್ನೂ ಓದಿ: ಚಿತ್ರೋತ್ಸವಕ್ಕೆ ಹೋಗೋಕೆ ಆಗ್ತಿಲ್ವಾ, ಡೋಂಟ್ ವರಿ ಮನೆಯಿಂದಲೇ ಅವಾರ್ಡ್ ಸಿನಿಮಾ ನೋಡಿ!

8. ‘ಲೀಸ’

ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮಾ 'ಲೀಸ' ಇಂದು ತೆರೆಗೆ ಬಂದಿದೆ. ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಕಲ್ಯಾಣ ಕರ್ನಾಟಕ ಭಾಗದ ಜನರೇ ಸೇರಿ ಮಾಡಿರುವುದು ವಿಶೇಷ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದೆ.

9. ಬ್ಯಾಟ್​ಮ್ಯಾನ್

ಹೌದು, ಹಾಲಿವುಡ್​ನ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಬ್ಯಾಟ್​ಮ್ಯಾನ್​ ಮಾರ್ಚ್​ 3ರಂದು ರಿಲೀಸ್ ಆಗಿದೆ. ಈ ಹಿಂದೆ ಬಂದಿರುವ ಬ್ಯಾಟ್​ಮ್ಯಾನ್​ ಸಿನಿಮಾಗಳಿಗಿಂತ ಈ ಸಿನಿಮಾ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಸೋ ಈ ವೀಕೆಂಡ್​ ಕೂಡ ಸಿನಿರಸಿಕರಿಗೆ ಭರ್ಜರಿ ಹಬ್ಬದೂಟ ಸಿಕ್ಕಂತೆ ಆಗಿದೆ. ಈ ಸಿನಿಮಾಗಳಲ್ಲಿ ನಿಮಗೆ ಯಾವುದು ನೋಡಬೇಕೆಂದು ಅನ್ನಿಸುತ್ತೋ ನೋಡಿ ಎಂಜಾಯ್​ ಮಾಡಿ.​
Published by:Vasudeva M
First published: