Weekend Planner: ಈ ವಾರ ಸಿನಿರಸಿಕರಿಗೆ ಹಬ್ಬ.. ಯಾವುದನ್ನು ನೋಡೋದು? ಯಾವುದನ್ನು ಬಿಡೋದು?

ಈ ವಾರವೂ ಕೂಡ ಚಿತ್ರಮಂದಿರಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳು ರಿಲೀಸ್​ ಆಗಿದೆ. ಸೂಪರ್​ ಸ್ಟಾರ್​ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ. ಇದರ ಮಧ್ಯೆ ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ.

ಸಾಲು ಸಾಲು ಸಿನಿಮಾಗಳು ರಿಲೀಸ್

ಸಾಲು ಸಾಲು ಸಿನಿಮಾಗಳು ರಿಲೀಸ್

  • Share this:
ಕೊರೋನಾ(Corona) ಮೂರನೇ ಅಲೆಯ ಲಾಕ್ ಅನ್ ಲಾಕ್ ಆಗ್ತಿದಂತೆ ಗಾಂಧಿನಗರದಲ್ಲಿ ಸಿನಿಮಾ ಮುಂಗಾರು ಶುರುವಾಗ್ತಿದೆ. ಚಿತ್ರಮಂದಿರ(Theaters)ಗಳಿಗೆ ಹೌಸ್​​ಫುಲ್ (Houseful)​ ಗ್ರೀನ್ ಸಿಗ್ನಲ್ ಸಿಗ್ತಿದಂತೆ ಕಳೆದ ವಾರ ಬರೋಬರಿ 6 ಸಿನಿಮಾ(7 Movies)ಗಳು ಬೆಳ್ಳಿತೆರೆ ಮೇಲೆ ರಾರಾಜಿಸಿದ್ದವು. ಈ ವಾರವೂ ಕೂಡ ಚಿತ್ರಮಂದಿರಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳು ರಿಲೀಸ್​ ಆಗಿದೆ. ಸೂಪರ್​ ಸ್ಟಾರ್​(Super Star)ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ. ಇದರ ಮಧ್ಯೆ ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ. ಹಾಗೇ ನೀವು ಈ ವಾರ(Weekend) ಒಂದೊಳ್ಳೆ ಸಿನಿಮಾ ನೋಡಿ ಎಂಜಾಯ್​ ಮಾಡಬೇಕು ಅಂದುಕೊಂಡಿದ್ದರೇ, ಈ ಕೆಳಗಿರುವ ಸಿನಿಮಾಗಳಲ್ಲಿ ನಿಮಗೆ ನೋಡಬೇಕು ಅನ್ನಿಸುವ ಸಿನಿಮಾವನ್ನು ನೋಡಿ ನಿಮ್ಮ ವೀಕೆಂಡ್ ಎಂಜಾಯ್​ ಮಾಡಿ. 

1. ಏಕ್​ ಲವ್​ ಯಾ

‘ಜೋಗಿ’ ಪ್ರೇಮ್​ (Jogi Prem) ನಿರ್ದೇಶನದ ಸಿನಿಮಾಗಳ ಫ್ಲೇವರ್​ ಬೇರೆಯದ್ದೇ ರೀತಿಯಲ್ಲಿರುತ್ತದೆ. ಫೆಬ್ರವರಿ 24 ಅವರ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ (Ek Love Ya Movie) ರಿಲೀಸ್​ ಆಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಜೋಗಿ ಪ್ರೇಮ್​ ಆ್ಯಕ್ಷನ್​ ಕಟ್​ ಹೇಳಿದ ಈ ಚಿತ್ರಕ್ಕೆ, ಅವರ ಪತ್ನಿ, ನಟಿ ರಕ್ಷಿತಾ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ರಕ್ಷಿತಾ ಅವರ ತಮ್ಮ ರಾಣ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಚಿತಾ ರಾಮ್​, ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಟ್ರೇಲರ್​ ಹಾಗೂ ಸಾಂಗ್​ಗಳು ಸಾಕಷ್ಟು ವೀಕ್ಷಣೆ ಕಂಡಿವೆ.

2. ‘ಗಂಗೂಬಾಯಿ ಕಾಥಿಯಾವಾಡಿ’

ಇನ್ನೂ ಬಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ಫೆಬ್ರವರಿ 25ರಂದು ತೆರೆಕಾಣುತ್ತಿದೆ ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.

3. ವಲಿಮೈ 

ಕಾಲಿವುಡ್​ ನಟ ಅಜಿತ್​ (Ajith Kumar) ಅಭಿನಯದ ‘ವಲಿಮೈ’ ಸಿನಿಮಾ ಫೆ.24ಕ್ಕೆ ಬಿಡುಗಡೆ ಆಗಿದೆ. ಈ ಚಿತ್ರಕ್ಕಾಗಿ ಅಜಿತ್​ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದರು. ಟ್ರೇಲರ್​ ಮೂಲಕ ಈ ಸಿನಿಮಾ ನಿರೀಕ್ಷೆ ಸೃಷ್ಟಿಸಿತ್ತು. ಕರ್ನಾಟಕದಲ್ಲಿಯೂ ಅಜಿತ್​ ಸಿನಿಮಾಗೆ ಒಂದು ಪ್ರೇಕ್ಷಕ ವರ್ಗವಿದೆ. ಹಾಗಾಗಿ ಕರುನಾಡಿನಲ್ಲಿ ‘ವಲಿಮೈ’ (Valimai Movie) ಸಿನಿಮಾ ಬಿಡುಗಡೆಗೊಂದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದನ್ನೂ ಓದಿ: `ಗಂಗೂಬಾಯಿ ಕಾಥಿಯಾವಾಡಿ’ಗೆ ಬಿಗ್​ ರಿಲೀಫ್​, ಸಿನಿಮಾ ರಿಲೀಸ್ ಮಾಡಿ ಎಂದ ಸುಪ್ರೀಂ ಕೋರ್ಟ್!

4. ಓಲ್ಡ್​ ಮಾಂಕ್​ 

ಶ್ರೀನಿ ನಟಿಸಿ ನಿರ್ದೇಶನ ಮಾಡಿರುವ 'ಓಲ್ಡ್‌ಮಾಂಕ್' ಚಿತ್ರ ಇದೇ ಫೆ.25ರಂದು ತೆರೆಗೆ ಬರುತ್ತಿದೆ. ಚಿತ್ರದ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸಿನಿಮಾ ಗಮನ ಸೆಳೆಯುತ್ತಿರುವುದಕ್ಕೆ ಕಾರಣ ಚಿತ್ರದ ಪ್ರಚಾರದ ತಂತ್ರಗಳು.ಹಿರಿಯ ನಿರ್ದೇಶಕ, ನಟ ಎಸ್. ನಾರಾಯಣ್ (S Narayanm) ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿಹಿಕಹಿ ಚಂದ್ರು (SihiKahi Chandru) ಅವರದ್ದೂ ಸಹ ಕತೆಗೆ ಪೂರಕವಾದ ಪಾತ್ರ. ಇವರಿಬ್ಬರ ಜತೆಗೆ ಅಶೋಕ್ ಹೆಗಡೆ (Ashok Hegade) ಅವರ ಕ್ಯಾರೆಕ್ಟರ್ ಹೇಗಿರುತ್ತದೆ ಎಂಬುದು ಮತ್ತೊಂದು ಕುತೂಹಲ.

5. ಭೀಮ್ಲಾ ನಾಯಕ್​

'ಭೀಮ್ಲಾ ನಾಯಕ್' ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೇವಲ ಪವನ್ ಸಿನಿಮಾ ಎಂದು ಪ್ರಚಾರ ಮಾಡಲಾಗಿದೆ. ಆದರೆ ರಿಲೀಸ್ ಹತ್ತಿರವಾಗುತ್ತಿದ್ದಂತೆ ಪೋಸ್ಟರ್‌ಗಳಲ್ಲಿ ರಾಣಾ ಅವರನ್ನೂ ತೋರಿಸಲಾಗುತ್ತಿದೆ. ಈ ಚಿತ್ರಕ್ಕೆ ಸಾಗರ್‌.ಕೆ. ಚಂದ್ರಾ ನಿರ್ದೇಶನ ಮಾಡುತ್ತಿದ್ದು, ಸಿತಾರಾ ಎಂಟರ್ಟೈನ್‌ಮೆಂಟ್‌ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದೆ. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಪವನ್‌ ಕಲ್ಯಾಣ್‌ ನಟಿಸಿದ್ದು, ನಿತ್ಯಾ ಮೆನನ್‌, ಸಂಯುಕ್ತಾ ಮೆನನ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಂದು ಕಣ್ಣೀರು.. ಇಂದು ಮತ್ತೆ ಕೈಯಲ್ಲಿ ಎಣ್ಣೆ ಬಾಟ್ಲು, ಲಿಪ್​ ಲಾಕ್​ ಸೀನ್​! ಎಲ್ಲ ಡವ್ವು ಎಂದ ಫ್ಯಾನ್ಸ್​

ಇನ್ನೂ ಈ ಸ್ಟಾರ್​ ಸಿನಿಮಾಗಳ ಜೊತೆಗೆ ಕನ್ನಡದಲ್ಲಿ ಹೊಸಬರ ಮನಸಾಗಿದೆ, ಬ್ಲಾಂಕ್​, ನನ್​ ಜೊತೆ ಪೂಜಾ ಲಕ್ಷ್ಮೀ, ಸ್ಟೆಬಿಲಿಟಿ ಹೆಸರಿನ ಸಿನಿಮಾಗಳು ತೆರೆಗೆ ಬರತ್ತಿದೆ.ಹೀಗಾಗಿ ಈ ವಾರ ಸಿನಿರಸಿಕರಿಗೆ ಹಬ್ಬ ಎಂದರೆ ತಪ್ಪಾಗುವುದಿಲ್ಲ. ಈ ವೀಕೆಂಡ್​ ಒಂದೊಳ್ಳೆ ಸಿನಿಮಾ ನೋಡುತ್ತಾ ಕಾಲ ಕಳೆಯಬೇಕು ಅಂದುಕೊಂಡರೆ, ಈ ಸಿನಿಮಾಗಳಲ್ಲಿ ನಿಮಗೆ ಯಾವ್ದು ಬೇಕೋ ಆಯ್ಕೆ ಮಾಡಿಕೊಳ್ಳಿ
Published by:Vasudeva M
First published: