Weekend Planner: ಥಿಯೇಟರ್​ನಲ್ಲೂ-ಒಟಿಟಿಯಲ್ಲೂ ಸ್ಟಾರ್​ಗಳ ಸಿನಿಮಾ ರಿಲೀಸ್​! ಈ ವಾರ ಸಿನಿರಸಿಕರಿಗೆ ರಸದೌತಣ

ಸೂಪರ್​ ಸ್ಟಾರ್​(Super Star)ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ. ಜೊತೆಗೆ ಸ್ಟಾರ್​ಗಳ ಸಿನಿಮಾ(Star Movies) ಒಟಿಟಿ(OTT)ಯಲ್ಲಿ ಈ ವಾರ ರಿಲೀಸ್ ಆಗತ್ತಿದೆ ಇದರ ಮಧ್ಯೆ ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ.

RRR, ವಲಿಮೈ, ಭೀಮ್ಲಾ ನಾಯಕ್​

RRR, ವಲಿಮೈ, ಭೀಮ್ಲಾ ನಾಯಕ್​

  • Share this:
ಕೊರೋನಾ(Corona) ಮೂರನೇ ಅಲೆಯ ಲಾಕ್ ಅನ್ ಲಾಕ್ ಆಗ್ತಿದಂತೆ ಗಾಂಧಿನಗರದಲ್ಲಿ ಸಿನಿಮಾ ಮುಂಗಾರು ಶುರುವಾಗ್ತಿದೆ. ಚಿತ್ರಮಂದಿರ(Theaters)ಗಳಿಗೆ ಹೌಸ್​​ಫುಲ್ (Houseful)​ ಗ್ರೀನ್ ಸಿಗ್ನಲ್ ಸಿಗ್ತಿದಂತೆ. ಸಾಲು ಸಾಲು ಸ್ಟಾರ್​​ಗಳ ಸಿನಿಮಾ ರಿಲೀಸ್ ಆಗುತ್ತಿದೆ. ಸೂಪರ್​ ಸ್ಟಾರ್​(Super Star)ಗಳ ಸಿನಿಮಾ ಜೊತೆಗೆ ಹೊಸಬರ ಹಲವು ಸಿನಿಮಾಗಳು ತೆರೆಗೆ ಬರುತ್ತಿದೆ. ಜೊತೆಗೆ ಸ್ಟಾರ್​ಗಳ ಸಿನಿಮಾ(Star Movies) ಒಟಿಟಿ(OTT)ಯಲ್ಲಿ ಈ ವಾರ ರಿಲೀಸ್ ಆಗತ್ತಿದೆ ಇದರ ಮಧ್ಯೆ ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ. ಹಾಗೇ ನೀವು ಈ ವಾರ(Weekend) ಒಂದೊಳ್ಳೆ ಸಿನಿಮಾ ನೋಡಿ ಎಂಜಾಯ್​ ಮಾಡಬೇಕು ಅಂದುಕೊಂಡಿದ್ದರೇ, ಈ ಕೆಳಗಿರುವ ಸಿನಿಮಾಗಳಲ್ಲಿ ನಿಮಗೆ ನೋಡಬೇಕು ಅನ್ನಿಸುವ ಸಿನಿಮಾವನ್ನು ನೋಡಿ ನಿಮ್ಮ ವೀಕೆಂಡ್ ಎಂಜಾಯ್​ ಮಾಡಿ. 

ಆರ್​ಆರ್​ಆರ್​ ಗ್ರ್ಯಾಂಡ್ ರಿಲೀಸ್​​!

ಇಡೀ ಭಾರತೀಯ ಚಿತ್ರರಂಗವೇ ಕಾದು ಕುಳಿತಿದ್ದ ಸಿನಿಮಾ ಆರ್​ಆರ್​ಆರ್​ ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ರಾಜಮೌಳಿ (Rajamouli) ನಿರ್ದೇಶನದ ಈ ಚಿತ್ರದಲ್ಲಿ ರಾಮ್​ ಚರಣ್ (Ram Charan)​ ಮತ್ತು ಜ್ಯೂ. ಎನ್​ಟಿಆರ್(Jr.NTR)​  ಅಭಿನಯಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್(Alia Bhat)​ ಅಭಿನಯಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಆರ್​ಆರ್​ಆರ್​​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ ಅಂತಿದ್ದಾರೆ ಸಿನಿಮಾ ನೋಡಿರುವ ಅಭಿಮಾನಿಗಳು.ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಂಡಿದೆ. ಕೇವಲ 2ಡಿ ಅಷ್ಟೇ ಅಲ್ಲದೇ 3ಡಿಯಲ್ಲೂ ಈ ಸಿನಿಮಾ ರಿಲೀಸ್​ ಆಗಿದೆ.

ಭೀಮ್ಲಾ ನಾಯಕ್​ ( ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​)

ಟಾಲಿವುಡ್‌ನ (Tollywood) ಬಹು ನಿರೀಕ್ಷಿತ ಸಿನಿಮಾ (Cinema), ತೆಲುಗಿನ (Telugu) ಪವರ್ ಸ್ಟಾರ್ (Power Star) ಎಂದೇ ಖ್ಯಾತಿಯಾದ ಪವನ್ ಕಲ್ಯಾಣ್ (Pawan Kalyan) ಅವರು ನಟಿಸಿರುವ 'ಭೀಮ್ಲಾ ನಾಯಕ್' (Bheemla Nayak) ಚಿತ್ರವು ಫೆಬ್ರವರಿ 25 ರಂದು ರಿಲೀಸ್ ಆಗಿತ್ತು. ಮಾರ್ಚ್​ 24ರಿಂದ ಈ ಸಿನಿಮಾ ಡಿಸ್ನಿ ಹಾಟ್​ ಸ್ಟಾರ್​ ನಲ್ಲಿ ಲಭ್ಯವಿದೆ. ಕೇವಲ 30 ದಿನಗಳ ಅಂತರದಲ್ಲಿ ಪವನ್​ ಕಲ್ಯಾಣ್​ ಸಿನಿಮಾ ಒಟಿಟಿಗೆ ಬಂದಿದೆ. ಭೀಮ್ಲಾ ನಾಯಕ್ ಚಿತ್ರವು ಒಟ್ಟಿನಲ್ಲಿ ನಟ ಪವನ ಕಲ್ಯಾಣ್ ಎಷ್ಟು ದೊಡ್ಡ ನಟ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅವರ ಟ್ರೇಡ್ ಮಾರ್ಕ್ ಚೇಷ್ಟೆಗಳು ಈ ಚಿತ್ರದಲ್ಲಿ ನೀವು ನೋಡಬಹುದು ಮತ್ತು ಅವರ ಸರಳ ನೃತ್ಯ ಹೆಜ್ಜೆಗಳು ಅಭಿಮಾನಿಗಳ ಮನಸೆಳೆಯುವಂತೆ ಇವೆ.

ಇದನ್ನೂ ಓದಿ: ಕರ್ನಾಟಕದಲ್ಲಿ RRRಗೆ ತೊಂದ್ರೆ ಕೊಟ್ರೆ, KGF 2 ಬರ್ತಿದೆ ಹುಷಾರ್​! ಕನ್ನಡಿಗರಿಗೆ ಜ್ಯೂ. NTR, ರಾಮ್​ಚರಣ್​ ಫ್ಯಾನ್ಸ್​ ಧಮ್ಕಿ

ವಲಿಮೈ ( ಜೀ 5)

ತಲಾ ಅಜಿತ್(Ajith Kumar) ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ‘ವಲಿಮೈ’ ಸಿನಿಮಾ ZEE5 ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ. ಇದೇ ಶುಭ ಶುಕ್ರವಾರದಂದು ಪ್ರತಿಷ್ಠಿತ ZEE5 ಒಟಿಟಿಯಲ್ಲಿ ‘ವಲಿಮೈ’ ರಿಲೀಸ್ ಆಗಿದೆ. ಕಳೆದ ಫೆಬ್ರವರಿ 25ರಂದು ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಿದ್ದ ‘ವಲಿಮೈ’ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುವ ಮೂಲಕ ಕೋಟಿ ಕೋಟಿ ಹಣ ಬಾಚಿತ್ತು. ಅಜಿತ್ ಆಕ್ಷನ್ ಬೈಕ್ ಸ್ಟಂಟ್ ಕಂಡು ಫ್ಯಾನ್ಸ್ ಥ್ರಿಲ್ಲ್ ಆಗಿದ್ದರು. ಇದೀಗ ZEE5 ಒಟಿಟಿಯಲ್ಲಿ ಮಾರ್ಚ್ 25ರಿಂದ ‘ವಲಿಮೈ’ ಪ್ರೀಮಿಯರ್ ಆಗ್ತಿದೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ `ಜಾಲಿ ಓ ಜಿಮ್ಖಾನಾ’ ಸಾಂಗ್​! ಬೀಸ್ಟ್​​​ ಪೆಪ್ಪಿ ಟ್ರ್ಯಾಕ್​ಗೆ ದಳಪತಿ ಫ್ಯಾನ್ಸ್​ ಖುಷ್​​

ನೆಟ್​ಫ್ಲಿಕ್ಸ್​ ಹಾಗೂ ಡಿಸ್ನಿ ಹಾಟ್​ ಸ್ಟಾರ್​ನಲ್ಲಿ 83!

ಇನ್ನೂ ಈಗಾಗಲೇ ನೆಟ್​ಫ್ಲಿಕ್ಸ್​ ಹಾಗೂ ಡಿಸ್ನಿ ಹಾಟ್​ ಸ್ಟಾರ್​ನಲ್ಲಿ ರಣವೀರ್ ಸಿಂಗ್​ ಅಭಿನಯದ 83 ಸಿನಿಮಾ ಲಭ್ಯವಿದೆ. ಹೀಗಾಗಿ ಈ ವಾರ ಸ್ಟಾರ್​ಗಳ ಸಿನಿಮಾ ನೋಡಿ ಎಂಜಾಯ್​ ಮಾಡಬೇಕು ಅಂದುಕೊಂಡಿದ್ದವರಿಗೆ ರಸದೌತಣ ಸಿಕ್ಕಂತೆ ಆಗಿದೆ.
Published by:Vasudeva M
First published: